Asianet Suvarna News Asianet Suvarna News

ಪಾಂಡು ಮಹಾರಾಜ ವಯಾಗ್ರ ಸೇವಿಸಿದ್ದನೇ? ಅದೇ ಆತನ ಸಾವಿಗೆ ಕಾರಣವಾಯ್ತಾ?

ಪಾಂಡು ಮಹಾರಾಜ ಕೊನೆಯ ಬಾರಿಗೆ ತಮ್ಮ ಪತ್ನಿ ಮಾದ್ರಿಯನ್ನು ಕೂಡುವಾಗಲೇ ಸತ್ತದ್ದಕ್ಕೆ ಋಷಿಗಳ ಶಾಪವನ್ನು ಕಾರಣವಾಗಿ ಕೊಡಲಾಗುತ್ತದೆ. ಆದರೆ ನಿಜಕ್ಕೂ ಆತ ಸತ್ತದ್ದು ಹೇಗೆ?

Did Pandu maharaja took Viagra in his last Sex
Author
Bengaluru, First Published Jan 17, 2021, 3:25 PM IST

ಮಹಾಭಾರತದಲ್ಲಿ ಬರುವ ಹಸ್ತಿನಾಪುರದ ರಾಜ, ಪಾಂಡವರ ತಾಯಿ ಕುಂತಿಯ ಗಂಡ ಪಾಂಡು ಮಹಾರಾಜ, ರಾಜ್ಯ ಬಿಟ್ಟು ಹಿಮಾಲಯಕ್ಕೆ ಹೋದದ್ದು ಯಾಕೆ, ಅಲ್ಲಿ ಆತ ಸತ್ತದ್ದು ಯಾಕೆ ಎಂಬೆಲ್ಲದರ ಬಗ್ಗೆ ಹಲವಾರು ಊಹಾಪೋಹಗಳು ಇವೆ.

ಆದರೆ ಒಂದು ಥಿಯರಿ ಬೇರೆಲ್ಲದಕ್ಕಿಂತ ಹೆಚ್ಚು ನಂಬಲರ್ಹ ಅನ್ನಿಸುವಂತೆ ಇದೆ. ಅದೇನು ಅಂದರೆ. ಪಾಂಡು, ಸಾಯುವ ಸಮಯದಲ್ಲಿ, ಮಾದ್ರಿಯನ್ನು ಕೂಡಲು ಹೋದಾಗ ವಯಾಗ್ರದಂಥದೇ ಯಾವುದೋ ಪುಂಸತ್ವ ವೃದ್ಧಿಯಾಗುವ ಔಷಧ ಸೇವಿಸಿದ್ದ ಎಂಬುದು. ಯಾಕೆ, ಹೇಳ್ತೀನಿ ಕೇಳಿ.

ಬಾಲಕೃಷ್ಣ ಮಣ್ಣು ತಿನ್ನುತ್ತಿದ್ದ ಹಿಂದಿನ ಉದ್ದೇಶ ಈ ಕತೆಯಲ್ಲಿದೆ, ಏನದು ಕೇಳೋಣ ಬನ್ನಿ! ...

ಪಾಂಡು ಮಹಾರಾಜನಿಗೆ ಎರಡು ಮದುವೆ ಆಗಿತ್ತು. ಒಬ್ಬಾಕೆ ಕುಂತಿ, ಇನ್ನೊಬ್ಬಳು ಮಾದ್ರಿ. ಇನ್ನೂ ಮಕ್ಕಳು ಆಗಿರಲಿಲ್ಲ. ಯಾಕೆ ಆಗಿರಲಿಲ್ಲವೋ ಗೊತ್ತಿಲ್ಲ. ಬಹುಶಃ ಪಾಂಡುವಿನಲ್ಲೇ ಪುಸಂತ್ವ ಕಡಿಮೆ ಇತ್ತು. ಪಾಂಡುವಿಗೆ ಬೇಟೆಯ ಚಟ ಹೆಚ್ಚು. ಮನೆಯಲ್ಲಿ ಇರುವ ಇಬ್ಬರು ಸುಂದರ ಹೆಂಡತಿಯರನ್ನೂ ಮರೆತು ಕಾಡಿಗೆ ಬೇಟೆ ಆಡೋದಕ್ಕೆ ಹೋಗುತ್ತಿದ್ದ. ಹಾಗೆ ಒಮ್ಮೆ ಹೋದಾಗ, ಅಲ್ಲಿ ಎರಡು ಜಿಂಕೆಗಳು ಪ್ರಣಯ ಕ್ರೀಡೆಯಲ್ಲಿ ನಿರತವಾಗಿರೋದನ್ನು ನೋಡಿದ.

ಸುಲಭವಾಗಿ ಸಿಕ್ಕಿತಲ್ಲಾ ಎಂದು ಬಾಣ ಬಿಟ್ಟ. ಎರಡೂ ಜಿಂಕೆಗಳು ಮಾರಣಾಂತಿಕವಾಗಿ ಗಾಯಗೊಂಡವು. ಆದರೆ ಅವು ನಿಜಕ್ಕೂ ಜಿಂಕೆಗಳಾಗಿರಲಿಲ್ಲ. ಬದಲು ಇಬ್ಬರು ಋಷಿಗಳಾಗಿದ್ದರು. ಅವರೇ ಕಿಂದಮ ಋಷಿಗಳು. ಜಿಂಕೆಯ ರೂಪದಲ್ಲಿ ಸಂಭೋಗಿಸಿದರೆ ಹೇಗಿರುತ್ತದೆ ನೋಡೋಣ ಎಂದು ಆ ರೂಪ ಧರಿಸಿ ಪ್ರಣಯದಲ್ಲಿ ನಿರತರಾಗಿದ್ದರು. ಅವರ ಮೇಲೆ ಪಾಂಡು ಬಾಣ ಪ್ರಯೋಗಿಸಿದ್ದ. ಗಾಯಗೊಂಡ ಕಿಂದಮರು ಮದಲಿನ ರೂಪಕ್ಕೆ ಬಂದು, ವ್ಯಗ್ರರಾಗಿ, ''ನೀನು ಕೂಡ ನಿನ್ನ ಹೆಂಡತಿಯೊಡನೆ ಸಂಭೋಗಿಸಿದರೆ ಕೂಡಲೇ ಸತ್ತು ಹೋಗುವಂತಾಗಲಿ'' ಎಂದು ಶಾಪ ಕೊಟ್ಟು ಸತ್ತು ಹೋಗಿಬಿಟ್ಟರು.

ಈ ಅನಾಹುತದಿಂದ ಪಾಂಡು ದಿಗ್ಮೂಢನಾದ. ಇನ್ನು ಮುಂದೆ ಆತ ಹೆಂಡತಿಯನ್ನು ಮಾತ್ರವಲ್ಲ, ಯಾವುದೇ ಹೆಣ್ಣನ್ನೂ ಕೂಡುವಂತಿರಲಿಲ್ಲ. ಇದು ವೇದವ್ಯಾಸರು ಹೇಳಿದ ಕತೆ. ಬಹುಶಃ ತನ್ನ ನಪುಂಸಕತ್ವವನ್ನು ಮುಚ್ಚಿ ಹಾಕಲು ಪಾಂಡು ಕಟ್ಟಿದ ಕತೆಯೂ ಇರಬಹುದು. ಹಾಗೆಂದು ವ್ಯಾಸರು ಹೇಳುವುದಿಲ್ಲ.

ಮಕರ ರಾಶಿಗೆ ಸೂರ್ಯನ ಪಯಣ, ಈ ರಾಶಿಗಳಿಗೆ ಲಾಭ ...

ಸರಿ, ಇದರಿಂದ ಪಾಂಡುವಿಗೆ ಮಹಾ ಬೇಜಾರಾಯಿತು. ಮಕ್ಕಳಿಲ್ಲ, ರಾಜ್ಯ ಆಳುವ, ಹೆಣ್ಣನ್ನು ಕೂಡುವ ಸುಖವೂ ಇಲ್ಲ ಅಂದಮೇಲೆ ತಾನಿಲ್ಲಿ ಯಾಕಿರಬೇಕು ಎಂದು ಭಾವಿಸಿ ಹಿಮಾಲಯಕ್ಕೆ ಹೋಗಲು ನಿರ್ಧರಿಸಿದ. ಈ ನಿರ್ಧಾರಕ್ಕೆ ಆತನ ಮನ ಒಲಿಸಿದವಳು ಮಾದ್ರಿ. ಮಾದ್ರಿ ಮದ್ರ ದೇಶದವಳು. ಮದ್ರ ದೇಶದ ಜನ ಆಯುರ್ವೇದ, ನಾಟಿ ಔಷಧ, ಮಾಟ ಮಂತ್ರ ಮುಂತಾದ ಅಭಿಚಾರ ಕರ್ಮಗಳಲ್ಲಿ ಪರಿಣತರು. ಮದರ ದೇಶ ಹಿಮಾಲಯಕ್ಕೆ ಸಮೀಪ. ಆಕೆಗೆ ಹಿಮಾಲಯದಲ್ಲಿ ಪುರುಷತ್ವ ವೃದ್ಧಿ ಮಾಡುವ ಮೂಲಿಕೆಗಳು ಇರುವುದು, ಪುರುಷತ್ವ ವೃದ್ಧಿಗೆ ಮದ್ದು ಕೊಡುವ ಋಷಿಗಳು, ವೈದ್ಯರು ಇರುವುದು ಗೊತ್ತಿದ್ದಿರಬಹುದು. ಹೀಗಾಗಿ ಮಾದ್ರಿ, ಕುಂತಿ ಮತ್ತು ಪಾಂಡು ಹಿಮಾಲಯಕ್ಕೆ ಹೋದರು. ಅಲ್ಲಿ ವಾನಪ್ರಸ್ಥವನ್ನು ಕೈಗೊಂಡರು ಎಂದು ಮಹಾಭಾರತದಲ್ಲಿ ವೇದವ್ಯಾಸರು ಬರೆಯುತ್ತಾರೆ. ಆದರೆ ವಾನಪ್ರಸ್ಥ ಕೈಗೊಳ್ಳುವಷ್ಟು ವಯಸ್ಸು ಪಾಂಡುವಿಗೆ ಆಗಿರಲಿಲ್ಲ. ಅಂದರೆ ಆತ ಪುರುಷತ್ವ ವೃದ್ಧಿ ಮಾಡಿಕೊಳ್ಳಲು ಅಲ್ಲಿ ಚಿಕಿತ್ಸೆ ಪಡೆಯುತ್ತ ಇದ್ದಿರಬಹುದು ಎಂಬುದೇ ಸಾಧ್ಯತೆಯಾಗಿ ಕಾಣುತ್ತದೆ.

ಸಂತೋಷ, ನೆಮ್ಮದಿಯಿಂದ ಕೂಡಿರಲು ಈ ವಾಸ್ತು ಟಿಪ್ಸ್ ಪಾಲಿಸಿ ...

ಹೀಗೇ ಕೆಲವು ವರ್ಷ ಕಳೆದವು. ಹೆಣ್ಣಿನ ಸಂಗವಿಲ್ಲದೆ ಪಾಂಡುವಿವ ಮೈ ಕಾದ ಕುಲುಮೆಯಂತೆ ಆಗಿದ್ದಿರಬೇಕು. ಅದೇ ಕಾಲಕ್ಕೆ ವಸಂತಮಾಸವೂ ಬಂತು. ಇಡೀ ಹಿಮಾಲಯ ಅರಳಿ ಜಗಮಗಿಸತೊಡಗಿತು. ಇಡೀ ಪರಿಸರದಲ್ಲಿ ಕಾಮಕಸ್ತೂರಿಯ ಹೂಗಳು ಅರಳಿ ಮನುಷ್ಯರಲ್ಲಿ ಬಯಕೆಯ ಸಾಗರದ ಅಲೆಗಳನ್ನು ಕಡೆಯತೊಡಗಿದವು. ಅಷ್ಟರಲ್ಲಾಗಲೇ ಔಷಧ ಸೇವನೆಯಿಂದ ಪಾಂಡುವಿನಲ್ಲಿ ಪುರುಷತ್ವ ಕೊಂಚವಾದರೂ ವೃದ್ಧಿಯಾದ ಸೂಚನೆಗಳನ್ನು ಕೊಟ್ಟಿರಬಹುದು. ಅದೇ ಕಾಲಕ್ಕೆ ಮಾದ್ರಿ, ಹಿಮಾಲಯದ ಯಾವುದೋ ಕೊಳದಲ್ಲಿ ಮಿಂದು ಒದ್ದೆ ಬಟ್ಟೆಯಲ್ಲಿ ಆಗಮಿಸುವುದನ್ನು ಆತ ನೋಡಿದ. ಕುಂತಿಯ ಗಮನಕ್ಕೆ ಬರದಂತೆ ಆಕೆಯನ್ನು ಸಮೀಪಿಸಿದ ಎಂದು ವ್ಯಾಸರು ಬರೆಯುತ್ತಾರೆ. ಬಹುಶಃ ಕುಂತಿ ಕಟ್ಟುನಿಟ್ಟಾಗಿ ಪಾಂಡುವಿಗೆ ಮದ್ದು ಕೊಟ್ಟು ಪಥ್ಯ ಮಾಡುತ್ತ ಇದ್ದಿರಬಹುದು. ಮಾದ್ರಿ ಹಾಗಲ್ಲ, ಆಕೆ ಇನ್ನೂ ತರುಣಿ. ಆಕೆಯನ್ನು ನೋಡಿ ಪಾಂಡುವಿನ ಪುರುಷತ್ವ ನಿಮಿರಿತು. ಆದರೆ ಸಂಭೋಗಕ್ಕೆ ತಕ್ಕಷ್ಟು ಗಟ್ಟಿತನ ಇರಲಿಲ್ಲ ಅನಿಸುತ್ತದೆ. ಹಾಗಾಗಿ, ಪುರುಷತ್ವ ವೃದ್ಧಿಯ ಔಷಧವನ್ನು ಕೊಂಚ ಹೆಚ್ಚೇ ಪ್ರಮಾಣದಲ್ಲಿ ಸೇವಿಸಿ ಮಾದ್ರಿಯೊಡನೆ ಸೇರಿದ. ಅದೇ ಆತನ ಮರಣಕ್ಕೆ ಕಾರಣವಾಯಿತು.

ಇದು ನಡೆದಿರುವುದು ಸಾದ್ಯ ಎಂಬುದು ಆಧುನಿಕ ವೈದ್ಯರ ಮಾತು ಕೂಡ. ಯಾಕೆಂದರೆ, ಹೃದಯ ಸಮಸ್ಯೆ ಉಳ್ಳವರು ವಹಾಗ್ರ ಸೇವಿಸಿ, ಸಂಭೋಗದ ಸಂದರ್ಭದಲ್ಲಿ ಸತ್ತು ಹೋದ ಉದಾಹರಣೆಗಳು ಇವೆ. ಯಾಕೆಂದರೆ ವಯಾಗ್ರ, ಮನುಷ್ಯನ ರಕ್ತಪರಿಚಲನೆಯನ್ನು ಯರ್ರಾಬಿರ್ರಿ ಮಾಡುತ್ತದೆ. ಹೃದಯಕ್ಕೆ ಅದನ್ನು ನಿಯಂತ್ರಿಸುವುದೇ ಅಸಾಧ್ಯವಾಗಿಬಿಡುತ್ತದೆ. ಲೆಕ್ಕ ಮೀರಿ ಸೇವಿಸಿದರೆ, ಅದೇ ಮೃತ್ಯುವಿಗೆ ಕಾರಣವಾಗುತ್ತದೆ. ಇದು ಕತೆಯೊಳಗಿನ ಕತೆ. ಹಿಮಾಲಯದಲ್ಲಿ ಪುರುಷತ್ವ ವೃದ್ಧಿ ಸಾಮರ್ಥ್ಯವಿರುವ ಮೂಲಿಕೆಗಳು ಇವೆ ಎಂಬುದು ನಮಗೆಲ್ಲ ಗೊತ್ತೆ ಇದೆ.

Follow Us:
Download App:
  • android
  • ios