Covid-19 ಮಾರಿಯನ್ನು ಮೊದಲೇ ಸೂಚಿಸಿದ್ದ 'ಚೀನಾದ ನಾಸ್ಟ್ರಾಡಾಮಸ್'!

2019ರಿಂದಲೇ ನಾಲ್ಕಾರು ವರ್ಷ ಇಡೀ ಜಗತ್ತಿಗೆ ಮಹಾಮಾರಿಯೊಂದು ಆವರಿಸಿಕೊಳ್ಳಲಿದೆ ಎಂದು ಭವಿಷ್ಯ ಹೇಳಿದ್ದನೇ ಚೀನಾದ ನಾಸ್ಟ್ರಾಡಾಮಸ್ ಎಂದು ಕರೆಸಿಕೊಳ್ಳುವ ಈ ಭವಿಷ್ಯವಾದಿ?
 

Did Chinese Nostradamus predict Covid pandemic

ಚೀನೀ (Chinese) ಸಂಸ್ಕೃತಿಯಲ್ಲಿ ಕೂಡ ನಮ್ಮ ಥರವೇ ಭವಿಷ್ಯ (Horoscope) ಹೇಳುವಿಕೆ ಜನಪ್ರಿಯ. ಅಲ್ಲಿನ ಕೆಲವರು ತಮ್ಮ ಭವಿಷ್ಯವನ್ನು ಊಹಿಸಲು ಇಂದಿನ ಭವಿಷ್ಯ ಹೇಳುವವರ ಕಡೆಗೆ ನೋಡುತ್ತಿದ್ದರೆ, ಇತರರು 'ಚೀನಾದ ನಾಸ್ಟ್ರಾಡಾಮಸ್' (Nostradamus) ಅನ್ನು ನೋಡುತ್ತಾರೆ- ಈತನ ಹೆಸರು ಲಿಯು ಬೋವೆನ್ (Liu Bowen). ಇವನೊಬ್ಬ ಐತಿಹಾಸಿಕ ವ್ಯಕ್ತಿ.

ಇವನು ಚೀನಾದಲ್ಲಿ ಯುವಾನ್ (Yuvan) ಮತ್ತು ಮಿಂಗ್ (Ming) ರಾಜವಂಶದ (Dynasty) ಅವಧಿಯಲ್ಲಿ ಮಿಲಿಟರಿ ತಂತ್ರಜ್ಞ, ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದಾರೆ. 1 ಜುಲೈ 1311 ರಂದು ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಜನಿಸಿದ. ಆರಂಭಿಕ ಜೀವನದಲ್ಲಿ, ಲಿಯು ಬೋವೆನ್ ವಿದ್ವಾಂಸನಾಗಿದ್ದ. ಅವನತಿ ಹೊಂದಿದ್ದ ಯುವಾನ್ ರಾಜವಂಶವನ್ನು ಬೀಳದಂತೆ ತಡೆಯಲು ತೀವ್ರವಾಗಿ ಶ್ರಮಿಸಿದರು. ಈ ಪುರಾತನ ಬುದ್ಧಿವಂತ ವ್ಯಕ್ತಿಯ ಕೆಲವೇ ಚಿತ್ರಣಗಳು ಉಳಿದಿವೆ,
ಲಿಯು ಬೋವೆನ್ ಆರಂಭಿಕ ಜೀವನದಲ್ಲಿ ಯುವಾನ್ ರಾಜವಂಶಕ್ಕೆ ಸೇವೆ ಸಲ್ಲಿಸಿದರು, ಆದರೆ ಅವರು ಸರ್ಕಾರ ಮತ್ತು ಅದರ ಭ್ರಷ್ಟಾಚಾರದಿಂದ ಭ್ರಮನಿರಸನಗೊಂಡರು, ಯುವಾನ್ ವಿರೋಧಿ ಬಂಡಾಯಗಾರ ಝು ಯುವಾನ್ಜಾಂಗ್ ಜೊತೆ ಸೇರಿದರು. ಅವರಿಗೆ ಉತ್ತಮ ಮಿಲಿಟರಿ ತಂತ್ರಗಳೊಂದಿಗೆ ಸಹಾಯ ಮಾಡಿದರು ಮತ್ತು ಝು ಅವರು ಮಿಂಗ್ ರಾಜವಂಶದ ಚಕ್ರವರ್ತಿ ಆಗಲು ಸಹಾಯ ಮಾಡಿದರು, ಮಿಂಗ್ ಚಕ್ರವರ್ತಿಗೆ ಸೇವೆ ಸಲ್ಲಿಸಿದ ಸಮಯದಲ್ಲಿ ಲಿಯು ಬೋವೆನ್ ಭವಿಷ್ಯ ಉಡಿಯುವ ಪ್ರವಾದಿಯ ಪಠ್ಯವನ್ನು ಪ್ರಕಟಿಸಿದರು.

Yogi Aditynath ಈ ದೇಶದ ಲೀಡರ್‌ ಆಗ್ತಾರಾ? ಫಲಜ್ಯೋತಿಷ್ಯ ಹೀಗೆ ಹೇಳುತ್ತೆ..

ಇದನ್ನು 'ದೋಸೆ ಹಾಡು' (ಪ್ಯಾನ್ಕೇಕ್ ಸಾಂಗ್) (Pancake song) ಎಂದೂ ಕರೆಯಲಾಗುತ್ತದೆ. 'ಪ್ಯಾನ್ಕೇಕ್ ಸಾಂಗ್' ಅನ್ನು ಚೀನೀ ಸಂಸ್ಕೃತಿಯಲ್ಲಿ ಪ್ರವಾದಿಯ ಪಠ್ಯವಾಗಿ ಹೆಚ್ಚು ಪರಿಗಣಿಸಲಾಗಿದೆ! ಇದು ಚೀನೀ ಐತಿಹಾಸಿಕ ಸಾಹಿತ್ಯದಲ್ಲಿ 11 ಪ್ರಮುಖ ಭವಿಷ್ಯವಾಣಿಗಳ ಸಂಗ್ರಹದ ಭಾಗವಾಗಿದೆ. 'ಪ್ಯಾನ್‌ಕೇಕ್ ಸಾಂಗ್' ಅನ್ನು ಹೇಗೆ ರೂಪಿಸಲಾಯಿತು? ಚಕ್ರವರ್ತಿ ಹಾಂಗ್ವು ಜೊತೆಗೆ ಮಧ್ಯಾಹ್ನದ ಸಮಯದಲ್ಲಿ ಲಿಯು ಬೋವೆನ್ ಸ್ಥಳದಲ್ಲೇ ಈ ಹಾಡನ್ನು ರಚಿಸಿದರು. ಲಿಯು ಬೋವೆನ್ ಅವರ ಭವಿಷ್ಯಜ್ಞಾನದ ಕೌಶಲ್ಯಗಳನ್ನು ಪರೀಕ್ಷಿಸಲು, ಚಕ್ರವರ್ತಿ ತನ್ನ ತಿಂಡಿಯನ್ನು ಮರೆಮಾಡಿದನು. ನಂತರ ಅವನು ಏನು ತಿನ್ನುತ್ತಿದ್ದನೆಂದು ಊಹಿಸಲು ಕೇಳಿದನು. ಚಕ್ರವರ್ತಿ ದೋಸೆ ತಿನ್ನುತ್ತಿದ್ದಾನೆ ಎಂದು ಲಿಯು ಬೋವೆನ್ ಸರಿಯಾಗಿ ಊಹಿಸಿದರು. 

ನಂತರ ಚಕ್ರವರ್ತಿಯು ಲಿಯು ಬೋವೆನ್‌ಗೆ ಭವಿಷ್ಯದ ಬಗ್ಗೆ ಪ್ರಶ್ನೆಗಳ ಸುರಿಮಳೆ ಕರೆದನು. ಲಿಯು ಬೋವೆನ್ ಚಕ್ರವರ್ತಿಯ ಪ್ರಶ್ನೆಗಳಿಗೆ ಭವಿಷ್ಯವಾಣಿಗಳಿಂದ ತುಂಬಿದ ನಿಗೂಢ ಕಾವ್ಯಾತ್ಮಕ ಹಾಡಿನಲ್ಲಿ ಪ್ರತಿಕ್ರಿಯಿಸುವ ಮೂಲಕ ತನ್ನ ಪ್ರವಾದಿಯ ಸಾಮರ್ಥ್ಯಗಳನ್ನು ಪ್ರದರ್ಶಿಸಿದನು. 

'ಪ್ಯಾನ್‌ಕೇಕ್ ಸಾಂಗ್' 1911ರವರೆಗಿನ ಚೀನಾದಲ್ಲಿನ ಹಲವಾರು ಐತಿಹಾಸಿಕ ಘಟನೆಗಳನ್ನು ನಿಖರವಾಗಿ ಊಹಿಸಿದೆ. ಮಿಂಗ್ ರಾಜವಂಶದ ಉತ್ತರಾಧಿಕಾರಿಗಳ ನಡುವಿನ ಆಂತರಿಕ ಕಲಹವನ್ನು ಅವನು ಊಹಿಸಿದ್ದನು. ಅವರು 'ತುಮು ಬಿಕ್ಕಟ್ಟು'ದಲ್ಲಿ ಮಂಗೋಲ್ ಆಕ್ರಮಣಕಾರರಿಂದ ರಾಜವಂಶದ ಪತನದ ಭವಿಷ್ಯ ನುಡಿದರು, ಹಾಗೆಯೇ ಮಿಂಗ್ ಆಳ್ವಿಕೆಯಲ್ಲಿ ವಿಶ್ವದ ಅತಿದೊಡ್ಡ ವಿಶ್ವಕೋಶವನ್ನು ರಚಿಸಿದ ಮಹಾನ್ ಚೀನೀ ಪರಿಶೋಧಕ ಝೆಂಗ್ ಹೇ ಮತ್ತು ಸನ್ಯಾಸಿ ಯಾವೋ ಗುವಾಂಗ್ಕ್ಸಿಯಾವೋ ಅವರ ಉದಯವನ್ನೂ ಸಹ ಅವರು ಭವಿಷ್ಯ ನುಡಿದರು. ಹಾಗೆಯೇ ಮಿಂಗ್ ರಾಜವಂಶವು ಕುತಂತ್ರದ ವೀ ಝಾಂಗ್ಕ್ಸಿಯಾನ್ ಕೈಯಲ್ಲಿ ಹೇಗೆ ಬೀಳುತ್ತದೆ ಮತ್ತು ಮಂಚು ಆಕ್ರಮಣಕಾರರು ಉತ್ತರಾಧಿಕಾರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು. ಚೀನೀ ಇತಿಹಾಸದಲ್ಲಿ ನಂತರದ ಯುಗಗಳಲ್ಲಿ, ಅಫೀಮು ಯುದ್ಧ, ಸಿನೋ-ಜಪಾನೀಸ್ ಯುದ್ಧ ಮತ್ತು 1911ರ ಕ್ರಾಂತಿಯೊಂದಿಗೆ ಚೀನಾದಲ್ಲಿ ಸಾಮ್ರಾಜ್ಯಶಾಹಿ ಆಳ್ವಿಕೆಯ ಅಂತ್ಯವನ್ನು ಭವಿಷ್ಯ ನುಡಿದರು. 

Mythology: ಶ್ರೀಕೃಷ್ಣನಿಗೆ ಎಷ್ಟು ಶಾಪಗಳಿದ್ದವು ನಿಮಗೆ ಗೊತ್ತೆ?

ಕೋವಿಡ್‌ (Covid 19) ಊಹಿಸಿದ್ದರೇ?
ಚೀನೀ ಸಂಸ್ಕೃತಿಯಲ್ಲಿ ದೋಸೆಯ ಹಾಡನ್ನು ಪ್ರವಾದಿಯ ಪಠ್ಯವೆಂದು ಪರಿಗಣಿಸಲಾಗಿದ್ದರೂ, ಅದರಲ್ಲಿ ನಮ್ಮ ಕಾಲದ ಭವಿಷ್ಯವಿಲ್ಲ. ಆದರೂ ಅವರು ನಮ್ಮ ಕಾಲಕ್ಕೆ ನುಡಿದ ಭವಿಷ್ಯಗಳು ಅವರ ಇನ್ನೊಂದು ಪಠ್ಯದಲ್ಲಿವೆ. ಬೈಶಾನ್ ಪರ್ವತದ ಮೇಲೆ ಅವರು ಬರೆದ ಒಂದು ಶಾಸನದಲ್ಲಿ "ಹತ್ತು ಚಿಂತೆಗಳು'' ಎಂಭ ಅವರ ಕವಿತೆ ಸಿಕ್ಕಿದೆ. ಅದರಲ್ಲಿ ಸಾಂಕ್ರಾಮಿಕ ರೋಗವನ್ನು ಮುನ್ಸೂಚಿಸಿದ್ದಾರೆ. "ಹಂದಿ ಮತ್ತು ಇಲಿ ವರ್ಷಗಳ 10 ಭಯಾನಕ ಚಿಂತೆಗಳು" ಎಂದು ಅದರಲ್ಲಿ ಉಲ್ಲೇಖಿತವಾಗಿದೆ. ಈ ಮುನ್ಸೂಚನೆಯು ಕೋವಿಡ್ -19 ವೈರಸ್‌ನ ಮೂಲದೊಂದಿಗೆ ಹೊಂದಿಕೆಯಾಗುತ್ತದೆ, ಇದು 2019 ಮತ್ತು 2020ರಲ್ಲಿ ಕ್ರಮವಾಗಿ ಚೀನಾ ವರ್ಷಗಳ ಪ್ರಕಾರ ಹಂದಿ (Pig) ಮತ್ತು ಇಲಿ (Rat) ಗಳ ವರ್ಷಗಳಾಗಿವೆ. 

Mirror of Mayabazar: ಶ್ರೀಕೃಷ್ಣನಿಗೆ ಕನ್ನಡಿಯಲ್ಲಿ ಕಂಡದ್ದೇನು?

ಹತ್ತು ಚಿಂತೆಗಳ ಪ್ರಕಾರ, ಲಿಯು ಬೋವೆನ್ ಅವರು ಸಾಂಕ್ರಾಮಿಕ ರೋಗದ ಅಂತ್ಯವನ್ನೂ ಊಹಿಸಿದ್ದಾರೆ ಎಂದು ನಂಬಲಾಗಿದೆ. "ಈ ಎಲ್ಲವೂ ಡ್ರ್ಯಾಗನ್ (Dragon) ಮತ್ತು ಹಾವಿನ (Snake) ವರ್ಷಗಳಲ್ಲಿ ಹಾದುಹೋಗುತ್ತದೆ" ಎಂದು ಕವಿತೆಯಲ್ಲಿ ಒಂದು ಸಾಲು ಇದೆ. ಚೀನೀ ರಾಶಿಚಕ್ರ ಕ್ರಮವನ್ನು ಅನುಸರಿಸಿದರೆ ಇದರರ್ಥ ಕೊರೋನಾವೈರಸ್ ಸಾಂಕ್ರಾಮಿಕ 2024 ಮತ್ತು 2025 ವರ್ಷಗಳವರೆಗೆ ಮುಗಿಯುವುದಿಲ್ಲ. ಇವುಗಳು ಕ್ರಮವಾಗಿ ಡ್ರ್ಯಾಗನ್ ಮತ್ತು ಹಾವಿನ ವರ್ಷಗಳು. ಲಿಯು ಬೋವೆನ್ ಅವರ ಭವಿಷ್ಯವಾಣಿಯು 2022 ನಾವು ವೈರಸ್‌ಗೆ ಸಿಲುಕಿರುವ ಇನ್ನೊಂದು ವರ್ಷ ಎಂದು ಸೂಚಿಸುತ್ತದೆ. ಇನ್ನೂ ಮೂರು ವರ್ಷಗಳು ನಾವು ಈ ಸಾಂಕ್ರಾಮಿಕದ ಜೊತೆಗೆ ಬಳಲಬೇಕಿದೆ. 

 

Latest Videos
Follow Us:
Download App:
  • android
  • ios