ಗೊಂಬೆಗಳ ಮೇಲೆ ಕೋಳಿ ಎಸೆದಾಗ ಅದನ್ನು ಹಿಡಿಯಲು ನಾ ಮುಂದು ತಾ ಮುಂದು ಮುಗಿಬಿಳುತ್ತಾರೆ, ಒಬ್ಬರ ಕೈಗೆ ಸಿಕ್ಕರೆ ಕೋಳಿ ಉಳಿದಿತ್ತು, ಅದೇ ಕೋಳಿ ಇಬ್ಬರ ಅಥವಾ ಮೂವರ ನಡುವೆ ಸಿಕ್ಕಾಗ ಕೋಳಿಯ ದೇಹ ಚಿದ್ರ ಚಿದ್ರವಾಗುತ್ತದೆ, ಈ ದೃಶ್ಯ ನೋಡುಗರಿಗೆ ನೋವನ್ನು ಉಂಟುಮಾಡುತ್ತದೆ. ಭಕ್ತಾದಿಗಳು ಹರಕೆ ತೀರಿಸಿ ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ.

ಚಿತ್ತಾಪುರ(ಜು.13): ಸಾವಿರಾರು ಜನಸಾಗರ ಮದ್ಯೆ ಪಟ್ಟಣದ ಮರಗಮ್ಮ ದೇವಿಯ ಜಾತ್ರಾ ಮಹೋತ್ಸವ ಬಹಳ ಅದ್ಧೂರಿಯಾಗಿ ಜರುಗಿತು. ಜಾತ್ರೆಯಲ್ಲಿ ಎಲ್ಲಾ ಜಾತಿ ಜನಾಂಗದವರು ಭಕ್ತಿಯಿಂದ ಭಾಗವಹಿಸಿ ದೇವಿಯ ಗೊಂಬೆಗಳ ಮೇಲೆ ಕೋಳಿ ಎಸೆಯುವ ಮೂಲಕ ತಮ್ಮ ಹರಕೆ ಮುಟ್ಟಿಸುವುದು ಇಲ್ಲಿನ ವಿಶಿಷ್ಟ.

Add Asianetnews Kannada as a Preferred SourcegooglePreferred

ಸಾಯಂಕಾಲ 6ಕ್ಕೆ ಮರಗಮ್ಮ ದೇವಿಯ ಗೊಂಬೆಗಳ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ, ತಮ್ಮ ಮನದಾಳದ ಬೇಡಿಕೆಗಳನ್ನು ಈಡೇರಿಕೆಗಾಗಿ ಇಲ್ಲಿಯ ಭಕ್ತರು ಕೋಳಿ ಕೊಡುವ ಹರಕೆ ಮಾಡಿಕೊಳ್ಳುತ್ತಾರೆ.

ದೇವರಾಗಿಬಿಟ್ಟರು ಬಾಲಿವುಡ್ ನಟ-ನಟಿಯರು;ಕೋಟಿಯಲ್ಲಿ ಹಣ ಪಡೆದರೂ ಫ್ಲಾಪ್ ಯಾಕೆ?

ಗೊಂಬೆಗಳ ಮೇಲೆ ಕೋಳಿ ಎಸೆದಾಗ ಅದನ್ನು ಹಿಡಿಯಲು ನಾ ಮುಂದು ತಾ ಮುಂದು ಮುಗಿಬಿಳುತ್ತಾರೆ, ಒಬ್ಬರ ಕೈಗೆ ಸಿಕ್ಕರೆ ಕೋಳಿ ಉಳಿದಿತ್ತು, ಅದೇ ಕೋಳಿ ಇಬ್ಬರ ಅಥವಾ ಮೂವರ ನಡುವೆ ಸಿಕ್ಕಾಗ ಕೋಳಿಯ ದೇಹ ಚಿದ್ರ ಚಿದ್ರವಾಗುತ್ತದೆ, ಈ ದೃಶ್ಯ ನೋಡುಗರಿಗೆ ನೋವನ್ನು ಉಂಟುಮಾಡುತ್ತದೆ. ಭಕ್ತಾದಿಗಳು ಹರಕೆ ತೀರಿಸಿ ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ.

ಪಟ್ಟಣದ ಹೋಳಿಕಟ್ಟಾದ ದೇಶಮುಖ ಹಾಗೂ ರೇಷ್ಮಿ ಮನೆಯಿಂದ ದೇವಿಯ ಗೊಂಬೆಗಳಿಗೆ ಬಟ್ಟೆತರುವುದು, ಮುಕುಂದ ಬಡಿಗೇರ ಮನೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೊಂಬೆಗಳ ಪೂಜೆ ಕಾರ್ಯ ನೆರವೇರಿತ್ತು, ಇಲ್ಲಿ ಮಹಿಳೆಯರು, ಸಾರ್ವಜನಿಕರು ಪೂಜೆ ಸಲ್ಲಿಸುತ್ತಾರೆ. ನಂತರ ಮನೆಯಿಂದ ಪ್ರಾರಂಭವಾದ ಮೆರವಣಿಗೆ ಹನುಮಾನ ಮಂದಿರ ರಸ್ತೆ, ಶಿಶುವಿಹಾರ ಶಾಲೆಯ ರಸ್ತೆ ಮೂಲಕ ದೇವಸ್ಥಾನಕ್ಕೆ ತಲುಪಿತು.

ಮೆರವಣಿಗೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರೂ ಸಹ ಯಾವುದೇ ಜಗಳ, ಅನಾಹುತಗಳು ಆಗದೆ ಇರುವುದು ಮತ್ತೊಂದು ವಿಶೇಷ, ಪಟ್ಟಣದಲ್ಲಿ ಮರಗಮ್ಮ ದೇವಿ ಜಾತ್ರೆಗೆ ಸೇರುವಷ್ಟುಜನ ಮತ್ತೇ ಯಾವ ಜಾತ್ರೆಗೆ ಅಷ್ಟು ಜನ ಸೇರುವುದಿಲ್ಲ ಎಂಬ ಅಭಿಪ್ರಾಯ ಇಲ್ಲಿಯ ಸಾರ್ವಜನಿಕರದ್ದಾಗಿದೆ.