Asianet Suvarna News Asianet Suvarna News

ಹಂಪಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು

ದಕ್ಷಿಣ ಕಾಶಿ ಹಂಪಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದಾರೆ. ಕೊರೋನಾ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಹಂಪಿಯಲ್ಲಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ಪುನೀತರಾಗಿದ್ದಾರೆ. 

Devotees Visited to Hampi During Makar Sankranti grg
Author
First Published Jan 15, 2023, 12:25 PM IST

ವಿಜಯನಗರ/ಹುನಗುಂದ(ಜ.15):  ನಾಡಿನೆಲ್ಲೆಡೆ ಇಂದು(ಭಾನುವಾರ) ಮಕರ ಸಂಕ್ರಾಂತಿ ಸಂಭ್ರಮಾಚರಣೆ ಮನೆ ಮಾಡಿದೆ. ಹೀಗಾಗಿ ದಕ್ಷಿಣ ಕಾಶಿ ಹಂಪಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದಾರೆ. ಕೊರೋನಾ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಹಂಪಿಯಲ್ಲಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು ಪುನೀತರಾಗಿದ್ದಾರೆ. 

ಪುಣ್ಯ ಸ್ನಾನದ ಬಳಿಕ ಶ್ರೀ ವಿರೂಪಾಕ್ಷನ ದರ್ಶನ ಪಡೆದು ವಿರೂಪಾಕ್ಷನಿಗೆ ವಿಶೇಷ ಪೂಜೆಯನ್ನ ಭಕ್ತರು ಸಲ್ಲಿಸಿದ್ದಾರೆ.  ಕಳೆದ ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣಕ್ಕೆ ಅಷ್ಟೊಂದು ಪ್ರಮಾಣದಲ್ಲಿ ಭಕ್ತರು ಆಗಮಿಸಿರಲಿಲ್ಲ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ನದಿ ಪಾತ್ರದಲ್ಲಿ ಎಚ್ಚರಿಕೆಯಿಂದ ಇರಲು ಪೊಲೀಸರು ಮತ್ತು ಪ್ರವಾಸಿ ಮಿತ್ರರು ಸೂಚಿಸಿದ್ದಾರೆ. 

Makar Sankranti 2023: ಸ್ವರ್ಗದ ಬಾಗಿಲು ತೆರೆದಿರುವ ಪುಣ್ಯಕಾಲ ಉತ್ತರಾಯಣ

ಲಿಂಗಾಯತರು 9 ವಿಧಿಗಳಲ್ಲಿ ಪಾಲ್ಗೊಳ್ಳಿ: ಮಹಾದೇಶ್ವರ ಸ್ವಾಮೀಜಿ

ಹುನಗುಂದ: ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದಲ್ಲಿ ನಡೆದ 36ನೇ ಶರಣ ಮೆಳದ ಕೊನೆಯ ದಿನವಾದ ನಿನ್ನೆ(ಶನಿವಾರ) ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ನಡೆಯಿತು
ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆಯ ನಿಮಿತ್ಯ ಶರಣಮೇಳಕ್ಕೆ ಆಗಮಿಸಿದ ಶರಣ, ಶರಣೆಯರು ನಸುಕಿನನಲ್ಲಿಯೇ ಸ್ನಾನ, ಇಷ್ಟಲಿಂಗಾರ್ಚನೆ, ಬಸವಾರ್ಚನೆ ಪೂರೈಸಿ ಗಣಲಿಂಗದರ್ಶನ ಮತ್ತು ಸ್ಪರ್ಶ, ಧ್ವಜಾರೋಹಣ ಮತ್ತು ಗುರುವಂದನೆ, ಸಮುದಾಯ ಪ್ರಾರ್ಥನೆ, ಕುಸುರೆಳ್ಳು ವಿನಿಮಯ, ವಚನ ಪಠಣ, ಬಸವಣ್ಣನ ಐಕ್ಯ ಮಂಟಪ ದರ್ಶನ, ಪಥ ಸಂಚಲನ, ಮೆರವಣಿಗೆ, ಸಾಮೂಹಿಕ ಇಷ್ಟಲಿಂಗಾರ್ಚನೆ ಎಂಬ ಒಂಬತ್ತು ವಿಧಿಗಳಲ್ಲಿ ಭಾಗವಹಿಸಿದ್ದರು. 
ಮಹಾಮನೆಯ ಮುಂಭಾಗದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಧ್ವಜಾರೋಹಣವನ್ನು ಕೂಡಲಸಂಗಮ ಬಸವ ಧರ್ಮ ಪೀಠದ ಮಾಹಾದೇಶ್ವರ ಸ್ವಾಮೀಜಿ ನೆರವೇರಿಸಿದರು. ಮಾತೆಗಂಗಾದೇವಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಬಸವ ಕುಮಾರ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಬಸವಯೋಗಿ ಸ್ವಾಮೀಜಿ, ಅನಿಮಿಷಾನಂದ ಸ್ವಾಮೀಜಿ, ಮಾತೆ ಬಸವರತ್ನಾ ಹಾಗೂ ಶರಣ ಶರಣೆಯರು ಉಪಸ್ಥಿತರಿದ್ದರು.

Makar Sankranti 2023: ಇಂದಿನ ಪುಣ್ಯಕಾಲವೇನು? ಈ ಅವಧಿಯಲ್ಲಿ ಏನು ಮಾಡಬೇಕು?

ಈ ವೇಳೆ ಮಹಾದೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ತಮ್ಮ 21ನೇ ವಯಸ್ಸಿನಲ್ಲಿ 1155 ಜ.14 ರಂದು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದರು. ಆದರಿಂದ ಜ.14 ಲಿಂಗಾಯತ ಧರ್ಮ ಸಂಸ್ಥಾಪನಾ ದಿನ, ಬಸವಕ್ರಾಂತಿ ದಿನವೆಂದು ಕರೆಯಲಾಗುತ್ತದೆ. ಪುರೋಹಿತಶಾಹಿ, ಗುಡಿಶಾಹಿಯನ್ನು ಪ್ರತಿಭಟಿಸಿ ಜನ ಸಾಮಾನ್ಯರನ್ನು ದೇವಾಲಯದೊಳಗೆ ಕರೆದೊಯ್ದು ಪೂಜೆ ಮಾಡಿಸಿದ ದಿನ. ದೇವಸಾಕ್ಷಾತ್ಕಾರ ಹೊಂದಿ ಇಷ್ಟಲಿಂಗದ ಪರಿಕಲ್ಪನೆ ನೀಡದ ದಿನವಾಗಿದೆ. ಆದ್ದರಿಂದ ಎಲ್ಲ ಲಿಂಗಾಯತರು ಪ್ರತಿ ವರ್ಷ ಜ.14ರಂದು ಕೂಡಲಸಂಗಮಕ್ಕೆ ಬಂದು 9 ವಿಧಿಗಳಲ್ಲಿ ಪಾಲ್ಗೊಳಬೇಕು ಎಂದರು.

ಮಕರ ಸಂಕ್ರಾಂತಿ ಆಚರಣೆ: 

ಶರಣಮೇಳಕ್ಕೆ ಬಂದ ಬಹುತೇಕ ಭಕ್ತರು ಶನಿವಾರ ಬೆಳಗ್ಗೆ ಕೃಷ್ಣಾ, ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಮಕರ ಸಂಕ್ರಾಂತಿ ಆಚರಿಸಿದರು. ನದಿಯ ದಡವು ಪುಣ್ಯಸ್ನಾನಕ್ಕೆ ಬಂದ ಭಕ್ತರಿಂದ ತುಂಬಿತ್ತು.

Follow Us:
Download App:
  • android
  • ios