ಚಿಕ್ಕಮಗಳೂರು: ದತ್ತಜಯಂತಿ ಉತ್ಸವ ಆರಂಭ, ಮಳೆ, ಮಂಜಿಗೆ ತತ್ತರಿಸಿದ ಮಹಿಳಾ ಭಕ್ತರು!

ಅಕ್ಕಪಕ್ಕದವರು ಕಾಣದಂತ ಮಂಜಿಗೆ ದತ್ತಪೀಠಕ್ಕೆ ಆಗಮಿಸಿದ್ದ ಮಹಿಳೆಯರು ತತ್ತರಿಸಿದ್ದಾರೆ. ದತ್ತಜಯಂತಿ ಅಂಗವಾಗಿ ಅನುಸೂಯ ದೇವಿ ದರ್ಶನ ಪಡೆಯಲು ಸಾವಿರಾರು ಮಹಿಳೆಯರು ಆಗಮಿಸಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಮಹಿಳೆಯರು ಬಂದಿದ್ದಾರೆ.

Devotees Faces Problems due to Rain Fog during Datta Jayanti in Chikkamagaluru grg

ಚಿಕ್ಕಮಗಳೂರು(ಡಿ.12): ಮೂರು ದಿನಗಳ ಕಾಲ ನಡೆಯುವ ದತ್ತಜಯಂತಿ ಉತ್ಸವ ಇಂದಿನಿಂದ(ಗುರುವಾರ) ಆರಂಭವಾಗಿದೆ. ಆದರೆ, ದತ್ತಪೀಠದ ಚಳಿ, ಮಳೆ-ಮಂಜಿಗೆ ಮಹಿಳೆಯರು ನಡುಗಿದ್ದಾರೆ. ಹೌದು, ದತ್ತಪೀಠದಲ್ಲಿ ಆವರಿಸಿದ ದಟ್ಟವಾದ ಮಂಜು ಆವರಿಸಿದೆ ಹಾಗೂ ತುಂತುರು ಮಳೆಯಾಗುತ್ತಿದೆ.  ಅಕ್ಕಪಕ್ಕದವರು ಕಾಣದಂತ ಮಂಜಿಗೆ ದತ್ತಪೀಠಕ್ಕೆ ಆಗಮಿಸಿದ್ದ ಮಹಿಳೆಯರು ತತ್ತರಿಸಿದ್ದಾರೆ. ದತ್ತಜಯಂತಿ ಅಂಗವಾಗಿ ಅನುಸೂಯ ದೇವಿ ದರ್ಶನ ಪಡೆಯಲು ಸಾವಿರಾರು ಮಹಿಳೆಯರು ಆಗಮಿಸಿದ್ದಾರೆ. 

ರಾಜ್ಯದ ನಾನಾ ಭಾಗಗಳಿಂದ ಮಹಿಳೆಯರು ಬಂದಿದ್ದಾರೆ. ಪಶ್ಚಿಮ ಘಟ್ಟಗಳ ತಪ್ಪಲಿನ ದತ್ತಪೀಠದ ವಾತಾವರಣಕ್ಕೆ ಮಹಿಳೆಯರು ನಲುಗಿ ಹೋಗಿದ್ದಾರೆ. ಒಬ್ಬರ ಮುಖ ಮತ್ತೊಬ್ಬರು ನೋಡಲಾಗದಷ್ಟು ಮಂಜು ಆವರಿಸಿದೆ. ಬದಲಾದ ವಾತಾವರಣದಲ್ಲಿ ದತ್ತಭಕ್ತರು ಗಢ...ಗಢ ನಡುಗಿದ್ದಾರೆ. ಇಂದಿನಿಂದ ವಿವಾದಿತ ಕೇಂದ್ರವಾದ ದತ್ತಪೀಠದಲ್ಲಿ ದತ್ತಜಯಂತಿ ಆರಂಭವಾಗಿದೆ.  ದತ್ತಜಯಂತಿ ಉತ್ಸವ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ದತ್ತಜಯಂತಿಗೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. 

Chikkamagaluru News: ಸಪ್ತಪದಿ ತುಳಿದ ಪತ್ನಿಗೆ ನರಕ ತೋರಿಸಿದ ಡಾಕ್ಟರ್ ಗಂಡ

ಮುಂದಿನ 24 ಗಂಟೆ ರಾಜ್ಯದ ಈ ಭಾಗಗಳಲ್ಲಿ ಮಳೆ ಅಲರ್ಟ್

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಹಂತ ಹಂತವಾಗಿ ಚಳಿ ತೀವ್ರತೆ ಹೆಚ್ಚಾಗುತ್ತಿದೆ. ಇನ್ನೇನು ಮಳೆ ಕಡಿಮೆ ಆಯ್ತು ಅಂತ ನಿಟ್ಟುಸಿರು ಬಿಡುವಷ್ಟರಲ್ಲಿ ರಾಜ್ಯಕ್ಕೆ ಮಳೆಯ ಸೂಚನೆ ಸಿಕ್ಕಿದೆ. ಇಂದು ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ನಗರದ ಜನತೆಗೆ ಇಬ್ಬನಿ ಮುದ ನೀಡುತ್ತಿದೆ. ಚಳಿ ಜೊತೆ ಇಬ್ಬನಿ ಬೀಳುತ್ತಿರೋದರಿಂದ ತಂಪಾದ ಗಾಳಿ ಸಿಲಿಕಾನ್ ಸಿಟಿಯ ತಾಪಮಾನವನ್ನು ಇಳಿಕೆ ಮಾಡಿದೆ.

ನವೆಂಬರ್ ಕೊನೆ ಮತ್ತು ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡಿನಲ್ಲಿ ಉತ್ತಮ ಮಳೆಯಾಗಿತ್ತು. ಫೆಂಗಲ್ ಚಂಡಮಾರುತದ ಪರಿಣಾಮ ಮಳೆ ಅಧಿಕವಾಗಿತ್ತು. ಹಾಗೆಯೇ ರಾಜ್ಯದ ಉತ್ತರ ಒಳನಾಡಿನ ಭಾಗದಲ್ಲಿಯೂ ಮಳೆಯಾಗಿತ್ತು. ಈ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ತರಕಾರಿ ಬೆಳೆ ಸಂಪೂರ್ಣ ನಾಶವಾಗಿತ್ತು. ಫೆಂಗಲ್ ಚಂಡಮಾರುತ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ತರಕಾರಿ ಬೆಲೆ ಏರಿಕೆಯಾಗಿತ್ತು.

ದತ್ತ ಜಯಂತಿಗೆ ಕ್ಷಣಗಣನೆ: ಭಗವಾಧ್ವಜಗಳಿಂದ ಕೇಸರಿಮಯವಾದ ಚಿಕ್ಕಮಗಳೂರು!

ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಚೆನ್ನೈ ಸೇರಿದಂತೆ ಕರಾವಳಿ ಭಾಗದಲ್ಲಿ ಮಳೆಯ ಅಲರ್ಟ್ ನೀಡಲಾಗಿದೆ. ಹಾಗೆ ಆಂಧ್ರ ಪ್ರದೇಶದ ಕಡಲತೀರದಲ್ಲಿಯೂ ಮಳೆಯಾಗುವ ಸಾಧ್ಯತೆಗಳಿವೆ. 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಉತ್ತಮ ಮಳೆಯಾಗಲಿದೆ  ಎಂದು ಹಮಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಬೆಂಗಳೂರಿನ ಮಲ್ಲೇಶ್ವರಂ, ರಾಜಾಜಿ ನಗರ, ಯಶವಂತಪುರ, ಜಾಲಹಳ್ಳಿ, ಆರ್‌ಟಿ ನಗರ, ಹೆಬ್ಬಾಳ ಸೇರಿದಂತೆ ವಿಧಾನಸೌಧದ ಸುತ್ತಮುತ್ತ ಬೆಳಗ್ಗೆಯಿಂದಲೇ ಇಬ್ಬನಿ ಬೀಳುತ್ತಿದೆ. ಇಂದು ನಗರದಲ್ಲಿ ಶೇ.40ರಷ್ಟು ಮಳೆಯಾಗುವ ಸಾಧ್ಯತೆಗಳಿವೆ.

Latest Videos
Follow Us:
Download App:
  • android
  • ios