ದತ್ತ ಜಯಂತಿಗೆ ಕ್ಷಣಗಣನೆ: ಭಗವಾಧ್ವಜಗಳಿಂದ ಕೇಸರಿಮಯವಾದ ಚಿಕ್ಕಮಗಳೂರು!
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ.11): ಕಾಫಿ ನಾಡನ್ನ ಕೇಸರಿಮಯಗೊಳಿಸಿ ದತ್ತಜಯಂತಿಗೆ ವಿಎಚ್‌ಪಿ, ಬಜರಂಗದಳ ಸಿದ್ದತೆ ಮಾಡಿಕೊಂಡಿದೆ. ಈ ಬಾರಿ 25 ನೇ ವರ್ಷದ ದತ್ತಜಯಂತಿ ಅದ್ದೂರಿಯಾಗಿ ಅಚರಿಸೋಕೆ ಮುಂದಾಗಿದ್ರೆ ಹೆಜ್ಜೆ ಹೆಜ್ಜೆಗೂ ಖಾಕೀ ಟೀಂ ಭದ್ರತೆ ಒದಗಿಸಿದೆ.ವಿವಾದಿತ ದತ್ತಪೀಠದಲ್ಲಿ ನಾಳೆಯಿಂದ ಮೂರು ದಿನಗಳ ದತ್ತಜಯಂತಿ ಸಂಭ್ರಮ ಮನೆ ಮಾಡಿದೆ.
ವಿಶ್ವ ಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಜಯಂತಿಗೆ 25 ನೇ ವರ್ಷದ ಸಂಭ್ರಮ. ರಾಜ್ಯದ ವಿವಾದಿತ ಕೇಂದ್ರ ಎಂದೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿಗೆ ಸಂಘ ಪರಿವಾರ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ನಗರವೆಲ್ಲ ಕೇಸರಿಕರಣದೊಂದಿಗೆ ಅಲಂಕಾರಗೊಂಡಿದೆ.
ವಾರದಿಂದ ಮಾಲಾಧಾರಣೆ ಮೂಲಕ ಅಚರಣೆಯಾಗ್ತಿರೋ ದತ್ತಜಯಂತಿಯ ಸಂಭ್ರಮ ಇಂದಿನಿಂದ ಶುರುವಾಗ್ತಿದೆ. ಕೇಸರಿ ಪಾಳ್ಯ ಎಷ್ಟು ಸಿದ್ದತೆಯಲ್ಲಿದ್ದಿಯೋ ಅಷ್ಟೆ ಪೊಲೀಸರ ಪಡೆಯೋ ಕಾಫಿ ನಾಡಿನತ್ತ ಅಗಮಿಸಿದೆ.ಅದು ಬರೊಬ್ಬರಿ ನಾಲ್ಕು ಸಾವಿರ ಪೊಲೀಸ್ರು.ಮೂರು ದಿನ ಕಾಫಿ ನಾಡಿ ಬುದಿಮುಚ್ಚಿದ ಕೆಂಡದಂತಿರುತ್ತೇ. ಎಲ್ಲಿ ನೋಡಿದ್ರು ಖಾಕಿ ಪಡೆಯದ್ದೇ ಸದ್ದು. ಹದ್ದಿನ ಕಣ್ಣಿನಂತೆ ಈ ಬಾರಿ ದತ್ತಜಯಂತಿ ನಡೆಸೋಕೆ ಪೊಲೀಸ್ರು ಸಜ್ಜಾಗಿದ್ದಾರೆ. ಹೊರರಾಜ್ಯದ ಆರೆಸೇನಾ ತುಕ್ಕುಡಿ ಸೇರಿದಂತೆ ನಾಲ್ಕು ಸಾವಿರ ಪೊಲೀಸ್ರು ಈ ಬಾರಿ ಭದ್ರತೆಯಲ್ಲಿರ್ತಾರೆ.ಒಂದೇಡೆ ದತ್ತಜಯಂತಿ ಭದ್ರತೆಯಾದ್ರೆ ಮೂರು ದಿನ ಜನ್ರು ಯಾವುದೇ ಅಹಿತರಕ ಘಟನೆಯಾಗದಂತೆ ನಾವು ತಡೆಯುತ್ತೇವೆ ಅನ್ನೋ ಸಂದೇಶವನ್ನೂ ರವಾನಿಸಿದ್ಧಾರೆ.
ದತ್ತ ಜಯಂತಿ ಅಂಗವಾಗಿ ವಿಶ್ವಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರು ಬುಧವಾರ ನಗರದಲ್ಲಿ ಬೃಹತ್ ಬೈಕ್ ಜಾಥಾ ನಡೆಯಿತು.400 ಕ್ಕೂ ಹೆಚ್ಚು ಬೈಕ್ಗಳಲ್ಲಿ ನೂರಾರು ಮಂದಿ ಮಾಲಾಧಾರಿಗಳು ಹಾಗೂ ಸಂಘಟನೆ ಕಾರ್ಯಕರ್ತರು ಕೇಸರಿ ಶಾಲು, ರುಮಾಲು ಧರಿಸಿ ಭಗವಾಧ್ವಜಗಳನ್ನು ಕಟ್ಟಿಕೊಂಡು ದತ್ತಾತ್ರೇಯರು ಹಾಗೂ ಶ್ರೀರಾಮನ ಘೋಷಣೆಗಳನ್ನು ಕೂಗುತ್ತಾ ವಿವಿಧ ಬೀದಿಗಳಲ್ಲಿ ಸಂಚರಿಸಿ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಮೂರು ದಿನಗಳ ದತ್ತ ಜಯಂತಿಯ ಮೊದಲ ಕಾರ್ಯಕ್ರಮ ಅನಸೂಯ ಜಯಂತಿ ಗುರವಾರ ನಡೆಯಲಿದೆ. ನೂರಾರು ಮಹಿಳೆಯರು ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಸಲಿದ್ದಾರೆ. ಬೋಳ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನದ ಆವರಣದಿಂದ ಮೆರವಣಿಗೆ ಆರಂಭವಾಗಲಿದೆ.ಭಜನೆ, ಸಂಕೀರ್ತನೆಯೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್ ಬಳಿಯ ಮಾಜಿ ಡಿ.ಸಿ.ಶ್ರೀಕಂಠಪ್ಪ ವೃತ್ತದ ವರೆಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿಂದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ಅನಸೂಯ ದೇವಿ ಅವರ ಗದ್ದುಗೆಗೆ ನಮಸ್ಕರಿಸಿ, ದತ್ತ ಪಾದುಕೆಗಳ ದರ್ಶನ ಪಡೆದು ಹಿಂತಿರುಗಲಿದ್ದಾರೆ.
ಮೂರು ದಿನಗಳ ದತ್ತ ಜಯಂತಿ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವ ಹಾಗೂ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ಗುರುವಾರ ನಗರಾದ್ಯಂತ ಸಹಸ್ರಾರು ಪೊಲಿಸ್ ಸಿಬ್ಬಂಧಿಗಳು, ಅಧಿಕಾರಿಗಳು ಪಥ ಸಂಚಲನ ನಡೆಸಿದರು. ಸಂಜೆ ರಾಮನ ಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಿಂದ ಪಥ ಸಂಚಲನ ಆರಂಭಗೊಂಡಿತು ಕೆಎಸ್ಆರ್ಪಿ, ಕ್ಯುಆರ್ಟಿ, ಡಿಎಆರ್ ತುಕಡಿಗಳು ಸೇರಿದಂತೆ ಜಿಲ್ಲೆಯ ವಿವಿಧ ಜಿಲ್ಲೆಗಳಿಂದ ಬಂದೋಬಸ್ತ್ ಕಾರ್ಯಕ್ಕೆ ಆಗಮಿಸಿರುವ ಪೊಲಿಸರು ಭಾಗವಹಿಸಿದ್ದರು.
ದತ್ತ ಜಯಂತಿ ಅಂಗವಾಗಿ ಇಡೀ ನಗರ ಬಂಟಿಂಗ್, ಬ್ಯಾನರ್, ಭಗವಾಧ್ವಜಗಳಿಂದ ಕೇಸರಿಮಯವಾಗಿದೆ. ಶ್ರೀರಾ, ಆಚಿಜನೇಯ, ದತ್ತಾತ್ರೇಯರು ಸೇರಿದಂತೆ ಬಿಜೆಪಿ ಮುಖಂಡರುಗಳ ಕಟೌಟ್ಗಳು ಪ್ರಮುಖ ವೃತ್ತಗಳಲ್ಲಿ ರಾರಾಜಿಸುತ್ತಿವೆ.ಹನುಮಂತಪ್ಪ ವೃತ್ತ, ಆಜಾದ್ ವೃತ್ತ ಸೇರಿದಂತೆ ಹಲವೆಡೆಗಳಲ್ಲಿ ಕೇಸರಿ ಬಂಟಿಂಗ್ಗಳ ಜೊತೆಗೆ ಆಕರ್ಷಕವಾದ ವಿದ್ಯುತ್ ದೀಪಗಳು ಝಗಮಗಿಸುತ್ತಿವೆ. ಇಡೀ ನಗರವನ್ನು ಮಧುವಣಗಿತ್ತಿಯಂತೆ ಸಿಂಗರಿಸಲಾಗಿದೆ.