ಧರ್ಮ ಸಾಮರಸ್ಯ ಮೆರೆದ ಸ್ವೀಕರ್ ಖಾದರ್; ನಾಗಾರಾಧನೆಗೆ ಬಂಗಾರದಂತ ಜಮೀನು ದಾನ..!
ಇತ್ತೀಚೆಗೆ ಅನ್ಯ ಧರ್ಮದವರ ಆಚರಣೆ, ಪೂಜೆ ಹಾಗೂ ಆರಾಧನೆಗಳಿಗೆ ಪ್ರೋತ್ಸಾಹ ಕೊಡುವ ಜನರು. ಅದರಲ್ಲೂ ತಮ್ಮ ಜಮೀನಿನಲ್ಲಿ ಇತರೇ ವ್ಯಕ್ತಿಗಳು ಬಂದು ಆರಾಧನೆ ಇತ್ಯಾದಿಗಳನ್ನು ಮಾಡೋದಿದ್ದರೆ ಅದನ್ನು ಯಾರೂ ಬಿಟ್ಟು ಕೊಡಲ್ಲ. ಇದರ ನಡುವೆ ವಿಧಾನಸಭೆಯ ಸ್ವೀಕರ್ ಯು.ಟಿ ಖಾದರ್ ಮಾದರಿಯ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಅನ್ಯ ಧರ್ಮದವರ ಆಚರಣೆ, ಪೂಜೆ ಹಾಗೂ ಆರಾಧನೆಗಳಿಗೆ ಪ್ರೋತ್ಸಾಹ ಕೊಡುವ ಜನರು. ಅದರಲ್ಲೂ ತಮ್ಮ ಜಮೀನಿನಲ್ಲಿ ಇತರೇ ವ್ಯಕ್ತಿಗಳು ಬಂದು ಆರಾಧನೆ ಇತ್ಯಾದಿಗಳನ್ನು ಮಾಡೋದಿದ್ದರೆ ಅದನ್ನು ಯಾರೂ ಬಿಟ್ಟು ಕೊಡಲ್ಲ. ಇದರ ನಡುವೆ ವಿಧಾನಸಭೆಯ ಸ್ವೀಕರ್ ಯು.ಟಿ ಖಾದರ್ ಮಾದರಿಯ ಕೆಲಸ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಸೇರಿದ ಪಿತ್ರಾರ್ಜಿತ ಜಮೀನು ಇದೆ. ಅಲ್ಲಿ ಹಿಂದಿನ ಕಾಲದಲ್ಲಿ ನಾಗನ ಆರಾಧನೆ ನಡೆಯುತ್ತಿತ್ತು. ಕಾಲ ಕ್ರಮೇಣ ಈ ಜಮೀನು ಯು.ಟಿ ಖಾದರ್ ಅಜ್ಜ ಮಹಮ್ಮದ್ ಹಾಜಿಗೆ ಸೇರಿ ಹೋಗಿತ್ತು. ಅದರಲ್ಲಿ ಅಡಕೆ, ತೆಂಗು ಕೃಷಿ ಫಲವತ್ತಾಗಿದೆ. ಆ ಜಮೀನಿನ ಒಂದು ಭಾಗದಲ್ಲಿ ಇಂದಿಗೂ ನಾಗರ ಪಂಚಮಿ ಅದ್ಧೂರಿಯಾಗಿಯೇ ನಡೆಯುತ್ತಿದೆ.
ಹಿಂದಿನ ಹಿರಿಯರ ಕಾಲದಲ್ಲಿ ಖಾದರ್ ಅವರ ಸೊತ್ತು ದಳವಾಯಿ ಕುಟುಂಬದ ಅಧೀನದಲ್ಲಿತ್ತು. ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತ್ತು. ಪಾಲು ಮಾಡುವಾಗ ಪಿತ್ರಾರ್ಜಿತ ಸೊತ್ತಾಗಿ ಖಾದರ್ ಪಾಲಾಯಿತು. ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಲ್ಲಿತ್ತು. ದಳವಾಯಿ ಕುಟುಂಬದ ನಾಗಸಾನಿಧ್ಯ ಮುಸ್ಲಿಂ ಧರ್ಮದವರ ಸ್ಥಳದಲ್ಲಿರುವುದರಿಂದ ಅವರು ಬೇರೆ ಕಡೆ ಆರಾಧನೆ ಮಾಡುತ್ತಿದ್ದರು. ಮೂಲಸ್ಥಾನದ ನಾಗಕಟ್ಟೆಯಲ್ಲಿ ಪೂಜೆಯಾಗದೇ ಇರುವುದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆ ತಲೆದೋರಿತ್ತು.
ಮರಣದ ನಂತರ ಏನಾಗುತ್ತೆ? ಸತ್ತ ವ್ಯಕ್ತಿಯ ಆತ್ಮಕ್ಕೆ ಮುಕ್ತಿ ಹೇಗೆ?
ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಮೂಲ ಜಾಗದಲ್ಲಿ ಪೂಜೆ ನಡೆಯಬೇಕೆಂದು ಕಂಡು ಬಂತಾದರೂ ಅವರಿಗೆ ಆರಾಧನೆಗೆ ತೊಡಕಾಗಿತ್ತು. ಕೊನೆಗೂ ಬೇರೆ ದಾರಿ ಕಾಣದೆ ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಅವರಿಗೆ ಬೇಡಿಕೆ ಇಟ್ಟಿತು. ವಿಷಯ ತಿಳಿದ ಖಾದರ್ ಆ ಪರಿಸರದ 10ಕ್ಕೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟು ಮಾನವೀಯತೆ ಮೆರೆದರು.
ಪ್ರತಿ ವರ್ಷ ಪುಣಚದಲ್ಲಿ ಸಾರ್ವಜನಿಕರು ಸೇರಿ ಅದ್ಧೂರಿಯಾಗಿ ನಾಗರ ಪಂಚಮಿ ಆಚರಿಸುತ್ತಾರೆ. ಈ ದಿನ ದಳವಾಯಿ ಕುಟುಂಬಿಕರೆಲ್ಲಾ ಅಲ್ಲಿ ಬಂದು ಸೇರುತ್ತಾರೆ. ಪೂಜೆ ಪುನಸ್ಕಾರಗಳು ಸಾಂಗವಾಗಿ ನಡೆಯುತ್ತದೆ. ಮುಸ್ಲಿಂರಿಗೆ ಸೇರಿದ 12 ಎಕರೆ ಜಮೀನಿನ ಮಧ್ಯೆ ನಾಗಾರಾಧನೆ ನಡೆಯುವುದು ಧರ್ಮ ಸಾಮರಸ್ಯಕ್ಕೊಂದು ಮಾದರಿ ಎನಿಸುವಂತಾಗಿದೆ.