ಮರಣದ ನಂತರ ಏನಾಗುತ್ತೆ? ಸತ್ತ ವ್ಯಕ್ತಿಯ ಆತ್ಮಕ್ಕೆ ಮುಕ್ತಿ ಹೇಗೆ?
ಹುಟ್ಟಿದ ಪ್ರತಿಯೊಂದು ಜೀವಿಯೂ ಸಾಯಲೇಬೇಕು. ನಮ್ಮ ದೇಹವಷ್ಟೇ ಸಾಯುತ್ತದೆ, ಆತ್ಮವಲ್ಲ ಎನ್ನುತ್ತಾರೆ. ಪ್ರತಿಯೊಬ್ಬರೂ ಸಾವಿನ ನಂತರ ಏನಾಗುತ್ತದೆ ಎಂದು ತಿಳಿಯಲು ಬಯಸುತ್ತಾರೆ. ಇದರ ಬಗ್ಗೆ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ ಎನ್ನುವ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಓದಿ.
ಹುಟ್ಟಿದ ಪ್ರತಿಯೊಂದು ಜೀವಿಯೂ ಸಾಯಲೇಬೇಕು. ನಮ್ಮ ದೇಹವಷ್ಟೇ ಸಾಯುತ್ತದೆ, ಆತ್ಮವಲ್ಲ ಎನ್ನುತ್ತಾರೆ. ಪ್ರತಿಯೊಬ್ಬರೂ ಸಾವಿನ ನಂತರ ಏನಾಗುತ್ತದೆ ಎಂದು ತಿಳಿಯಲು ಬಯಸುತ್ತಾರೆ. ಇದರ ಬಗ್ಗೆ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ ಎನ್ನುವ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಓದಿ.
ಸಾವಿನ ನಂತರ ಮನುಷ್ಯ ಮುಂದೆ ಏನಾಗುತ್ತಾನೆ ಎಂದು ಸಾಮಾನ್ಯವಾಗಿ ಯಾರಿಗೂ ತಿಳಿದಿರುವುದಿಲ್ಲ. ಸಾವಿನ ನಂತರ ಸ್ವರ್ಗಕ್ಕೆ ಹೋಗುತ್ತಾರೋ ಅಥವಾ ನರಕಕ್ಕೆ ಹೋಗುತ್ತಾರೋ ಎಂಬ ಅನುಮಾನವೂ ಹಲವರಿಗೆ ಇರುತ್ತದೆ. ಸಾವಿನ ನಂತರದ ಸಂಗತಿಯನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಮಾನವರು ಸಾವಿನ ನಂತರ ಏನಾಗುತ್ತಾರೆ ಎಂಬ ಕುತೂಹಲಕಾರಿ ಸಂಗತಿ ಹಾಗೂ ಮರಣದ ನಂತರ ನಮ್ಮ ಆತ್ಮ ಏನಾಗುತ್ತದೆ ಎಂಬ ನಿಗೂಢ ರಹಸ್ಯ ಇಲ್ಲಿದೆ.
12 ದಿನಗಳವರೆಗೆ ಮನೆಯಲ್ಲೇ ಇರುತ್ತೆ ಆತ್ಮ
ಮನುಷ್ಯನಿಗೆ ಹುಟ್ಟು ಹಾಗೂ ಸಾವು ಸಹಜ. ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಬೇಕು. ಗರುಡ ಪುರಾಣದ ಪ್ರಕಾರ ಸಾವಿನ ನಂತರ ಆತ್ಮವು ದೇಹವನ್ನು ತೊರೆದಾಗ ಅದು 12 ದಿನಗಳವರೆಗೆ ಮನೆಯಲ್ಲೇ ಇರುತ್ತೆ ಎನ್ನಲಾಗಿದೆ. ತನ್ನ ದೇಹವನ್ನು ಕಂಡು ಆತ್ಮ ದುಃಖಪಡುತ್ತದೆ ಹಾಗೂ ತನ್ನ ಕುಟುಂಬವನ್ನು ಕಂಡು ಮರಗುತ್ತದೆ ಎನ್ನುತ್ತೆ ಗರುಡ ಪುರಾಣ. ಹಾಗೂ ತನ್ನ ದೇಹವನ್ನು ಮರಳಿ ಸೇರಲು ಇಚ್ಛಿಸುತ್ತದೆ ಎಂಬ ನಂಬಿಕೆ ಇದೆ.
ಹೆಣ್ಣಿಗೆ ಈ ಗುಣವಿದ್ದರೆ ಮಾತ್ರ ಮದುವೆಯಾಗಿ; ಹುಡುಗರೇ ಎಚ್ಚರ ಎಂದಿದ್ದಾರೆ ಚಾಣಕ್ಯ..!
ಜೀವ ಹೋದ ನಂತರ ಏನಾಗುತ್ತೆ?
ಒಂದು ಸಲ ಮನುಷ್ಯನ ದೇಹದಿಂದ ಜೀವ ಹೋದ ನಂತರ ಏನಾಗುತ್ತದೆ ಎಂಬುದೇ ಬಹಳ ಮುಖ್ಯವಾದ ಅಂಶ. ದೇಹವನ್ನು ಕಳೆದುಕೊಂಡ ಆತ್ಮವು ತನ್ನ ಪ್ರಯಾಣ ಆರಂಭಿಸಬೇಕಾಗುತ್ತದೆ. ಈ ಭೂಮಿ ಮೇಲೆ ಬರುವುದಕ್ಕೆ ಕಾರಣವಾದ ಕೆಲಸಗಳನ್ನೆಲ್ಲ ಮುಗಿಸಿದ ತೃಪ್ತಿ ಇರುವ ಆತ್ಮಗಳು ಅವುಗಳ ಪಾಪ ಹಾಗೂ ಪುಣ್ಯಗಳ ಲೆಕ್ಕಾಚಾರದಲ್ಲಿ ಸ್ವರ್ಗ ಅಥವಾ ನರಕವನ್ನು ಸೇರುತ್ತವೆ. ಆತ್ಮಕ್ಕೆ ಯಾವುದೇ ಹಾನಿ ಮಾಡಲು ಆಗಲ್ಲ ಎಂಬ ನಂಬಿಕೆ ಇದ್ದರೂ ಸ್ವರ್ಗ -ನರಕಗಳಲ್ಲಿ ಪಾಪ- ಪುಣ್ಯಗಳಿಗೆ ತಕ್ಕಂತೆ ಸುಖ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಸಾವಿನ ನಂತರ ಪ್ರತಿಯೊಬ್ಬ ವ್ಯಕ್ತಿಯು 12 ದಿನಗಳ ಕಾಲ ಪ್ರೇತಾತ್ಮವಾಗಿ ಅಲೆದಾಡಬೇಕಾಗುತ್ತದೆ. ಆತ್ಮವು ಕರ್ಮದ ಫಲವನ್ನು ಅನುಭವಿಸಿದ ನಂತರ ಮತ್ತೆ ಹೊಸ ದೇಹವನ್ನು ಸೇರುತ್ತದೆ. ಸ್ವರ್ಗವನ್ನು ಸೇರಿದ ಆತ್ಮವು ಸದ್ಗುಣಶೀಲನಾಗಿ, ಶ್ರೀಮಂತ ಮತ್ತು ಸಂತೋಷದ ಕುಟುಂಬದಲ್ಲಿ ಜನಿಸುತ್ತಾರೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ.