Asianet Suvarna News Asianet Suvarna News

Numerology: ಈ ಸಂಖ್ಯೆಗೆ ಸಾಲದ ಹೊರೆ

ಸಂಖ್ಯೆ 6ಕ್ಕೆ ಮನೆಯ ಸದಸ್ಯರ ವಿವಾಹ ಸಂಭ್ರಮ.. ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ. 

Daily Numerology predictions of September 30th 2022 in Kannada SKR
Author
First Published Sep 30, 2022, 7:32 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದ ಜನರು)
ನೀವು ಕೆಲವು ಸಮಯದಿಂದ ಪ್ರಯತ್ನಿಸುತ್ತಿದ್ದ ಕೆಲಸವು ಇಂದು ಯಶಸ್ವಿಯಾಗುವ ಸಾಧ್ಯತೆಯಿದೆ. ತೋರಿಕೆ, ಪ್ರದರ್ಶನಕ್ಕಾಗಿ ಅತಿಯಾದ ಖರ್ಚು ಅಥವಾ ಸಾಲ ಮಾಡಿ ಪಶ್ಚಾತ್ತಾಪ ಪಡುವಿರಿ. ಮತ್ತೊಬ್ಬರಿಗೆ ಬಿಟ್ಟಿ ಸಲಹೆ ನೀಡಿ ಮುಖಭಂಗ ಮಾಡಿಕೊಳ್ಳುವಿರಿ. ಹೂಡಿಕೆಗೆ ಸೂಕ್ತ ದಿನವಲ್ಲ. 

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ಸಾಲದ ಹೊರೆ ಭಾರವೆನಿಸುವುದು. ಪರಿಶ್ರಮ ಹೆಚ್ಚುಗೊಳಿಸಿ.. ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗಗಳ ಬಗ್ಗೆ ಅವಲೋಕನ ಮಾಡಿ. ನಿಮ್ಮ ಗಮನವು ಕೆಲವು ತಪ್ಪು ಕೆಲಸಗಳ ಕಡೆಗೆ ಪ್ರಚೋದಿಸಬಹುದು. ನೈತಿಕತೆ ಬಿಟ್ಟುಕೊಡಬೇಡಿ. ಜನರು ಸುಖಾಸುಮ್ಮನೆ ನಿಮ್ಮ ವಿರುದ್ಧ ನಿಂತಂತೆನಿಸುವುದು. ನಿಮ್ಮದೂ ತಪ್ಪಿರಬಹುದು ಎಂಬ ದಿಕ್ಕಿನಲ್ಲಿ ಯೋಚಿಸಿ ನೋಡಿ.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಸಹೋದರರೊಂದಿಗಿನ ವೈಷಮ್ಯ ಹೆಚ್ಚಬಹುದು. ನಿಮ್ಮ ನಡುವೆ ಮೂರನೆಯವರು ಬೆಂಕಿ ಹಚ್ಚುತ್ತಿದ್ದಾರೆಯೇ ಗಮನಿಸಿ. ಯಾರಿಗೂ ಸಾಲ ನೀಡಬೇಡಿ. ದಾನ ಉತ್ತಮ. ಹೊಸ ವಸ್ತುಗಳ ಖರೀದಿ ಮಾಡುವುರಿ. ಮನೆಯ ಆಹಾರ ಕ್ರಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿರುವುದನ್ನು ಗಮನಿಸಿ. 

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಕೆಲವು ಕೆಲಸಗಳಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಮನಸ್ಥಿತಿಯು ತೊಂದರೆಗೊಳಗಾಗುತ್ತದೆ ಮತ್ತು ಇದು ಮನೆಯ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಯಾವುದೇ ರೀತಿಯ ಸ್ಥಳಾಂತರವು ಒತ್ತಡವನ್ನು ಉಂಟುಮಾಡಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. 

ಯಾವ ವಾರ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ? 

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಪ್ರಮುಖ ಹೂಡಿಕೆ ಯೋಜನೆಗಳಿರುತ್ತವೆ. ವಿದೇಶಕ್ಕೆ ಹೋಗುವ ಮಕ್ಕಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ತಂದೆ ಅಥವಾ ತಂದೆಯಂಥ ವ್ಯಕ್ತಿಯ ಸಹಕಾರವು ನಿಮಗೆ ಅದೃಷ್ಟವೆಂದು ಸಾಬೀತುಪಡಿಸುತ್ತದೆ. ಕೆಲವೊಮ್ಮೆ ನಿಮ್ಮ ಮಾತು ಮತ್ತು ಸ್ವಭಾವದಲ್ಲಿ ಕೋಪವು ನಿಮಗೆ ನೋವುಂಟು ಮಾಡಬಹುದು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಪ್ರಕರಣ ಬರಬಹುದು. ಈ ಸಮಯದಲ್ಲಿ ಹೆಚ್ಚಿನ ತಾಳ್ಮೆ ಮತ್ತು ಸಂಯಮದ ಅಗತ್ಯವಿದೆ. 

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಕುಟುಂಬದ ಸದಸ್ಯರ ವಿವಾಹದ ಯೋಜನೆಯೂ ಇರುತ್ತದೆ. ಒಂದು ಕೆಲಸವು ಮಾಡುವ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡರೆ, ಅದು ನಿಮ್ಮ ಏಕಾಗ್ರತೆ ಕಡಿಮೆಯಾಗಲು ಕಾರಣವಾಗಬಹುದು. ವ್ಯವಹಾರಕ್ಕೆ ಆಂತರಿಕ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ. ಮನೆಯ ಯಾವುದೇ ವ್ಯವಸ್ಥೆಗೆ ಸಂಬಂಧಿಸಿದಂತೆ ಪತಿ ಪತ್ನಿಯ ನಡುವೆ ಉದ್ವಿಗ್ನತೆ ಉಂಟಾಗಬಹುದು. ರಕ್ತದೊತ್ತಡ ಮತ್ತು ಮಧುಮೇಹಕ್ಕೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಇಂದು ಕೆಲವು ಸಮಸ್ಯೆಗಳಿರಬಹುದು. ಭಯ ಪಡುವ ಬದಲು ಪರಿಸ್ಥಿತಿಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತೀರಿ. ಇದರಲ್ಲಿ ನೀವು ಸಹ ಯಶಸ್ವಿಯಾಗುತ್ತೀರಿ. ಇದನ್ನು ನೆನಪಿನಲ್ಲಿಡಿ. ಇತರರೊಂದಿಗೆ ಅತಿಯಾಗಿ ಹಸ್ತಕ್ಷೇಪ ಮಾಡುವುದು ನಿಮ್ಮ ಕುಟುಂಬದ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮಾಧ್ಯಮ, ಕಲೆ, ಪ್ರಯಾಣಿಕರು ಇತ್ಯಾದಿಗಳೊಂದಿಗೆ ಸಂಪರ್ಕ ಹೊಂದಿದ ವ್ಯವಹಾರದಲ್ಲಿ ಲಾಭವಿದೆ.

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಯಾವುದೇ ರೀತಿಯ ಸಂದಿಗ್ಧತೆ ಮತ್ತು ಚಡಪಡಿಕೆಯಿಂದ ಮುಕ್ತಿ ಪಡೆಯಬಹುದು. ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಮತ್ತು ನಿಮ್ಮ ಕಾರ್ಯಗಳ ಮೇಲೆ ಗಮನ ಕೇಂದ್ರೀಕರಿಸಲು ನಿಮಗೆ ಸಾಧ್ಯವಾಗುತ್ತದೆ. ಇದ್ದಕ್ಕಿದ್ದಂತೆ ಅಸಾಧ್ಯವಾದವುಗಳು ಸಾಧ್ಯವಾಗಿ ಬಹಳ ಸಂತೋಷವಾಗುತ್ತದೆ. ಸಣ್ಣ ನಿರ್ಲಕ್ಷ್ಯವೂ ದೊಡ್ಡ ತೊಂದರೆಗೆ ಕಾರಣವಾಗಬಹುದು. ನಿಮ್ಮ ಅಹಂ ಮತ್ತು ಕೋಪವು ಸಂಬಂಧವನ್ನು ಹದಗೆಡಿಸಬಹುದು. 

Hindu Culture : ಪೂಜಾರಿ ಜುಟ್ಟು ಬಿಡಲು ಕಾರಣವೇನು ಗೊತ್ತಾ?

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ಇಂದು ಕೆಲವು ಸಮಸ್ಯೆಗಳಿರಬಹುದು. ನೀವು ಭಯಪಡುವ ಬದಲು ಪರಿಸ್ಥಿತಿಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತೀರಿ. ಇದರಲ್ಲಿ ಯಶಸ್ವಿಯಾಗುತ್ತೀರಿ. ಇದನ್ನು ನೆನಪಿನಲ್ಲಿಡಿ. ಇತರರೊಂದಿಗೆ ಅತಿಯಾಗಿ ಹಸ್ತಕ್ಷೇಪ ಮಾಡುವುದು ನಿಮ್ಮ ಕುಟುಂಬದ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮದುವೆ ಸುಖವಾಗಿರಬಹುದು. 

Follow Us:
Download App:
  • android
  • ios