18 ಫೆಬ್ರವರಿ 2022, ಶುಕ್ರವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ಮೇಷಕ್ಕೆ ಬದಲಾವಣೆಯ ಅನುಭವ, ಉಳಿದ ರಾಶಿಗಳ ಫಲವೇನಿದೆ? 

ಮೇಷ(Aries): ಜೀವನದಲ್ಲಿ ಹೊಸ ಬದಲಾವಣೆ ಆರಂಭವಾಗಿರುವುದು ಅನುಭವಕ್ಕೆ ಬರುತ್ತದೆ. ಆಧ್ಯಾತ್ಮಿಕವಾಗಿಯೂ ಮನಸ್ಸು ಹೆಚ್ಚು ತೊಡಗಿಸಿಕೊಳ್ಳಬಹುದು. ಭೂ ವ್ಯವಹಾರಗಳಿಂದ ಲಾಭವಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಮಹಾಲಕ್ಷ್ಮೀ ಆರಾಧನೆ ಮಾಡಿ. 

ವೃಷಭ(Taurus): ಕೆಲಸದ ಒತ್ತಡ ಆಲಸ್ಯ ಹೆಚ್ಚಿಸಬಹುದು. ವೃಥಾ ಯಾರೊಂದಿಗೂ ಕಲಹ ಮಾಡಬೇಡಿ. ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಿ. ಪ್ರಯಾಣ ಯೋಗ ಒದಗಿ ಬರಲಿದೆ. ಆದಾಯಕ್ಕಿಂತ ಖರ್ಚು ಹೆಚ್ಚಿ ಚಿಂತೆಯಾಗಬಹುದು. ಸ್ತ್ರೀಯರನ್ನು ಗೌರವದಿಂದ ಕಾಣಿ. ಶಾರದಾಂಬೆಯನ್ನು ಸ್ಮರಿಸಿ. 

ಮಿಥುನ(Gemini): ನಿರೀಕ್ಷೆಯಲ್ಲಿರುವ ದಂಪತಿಗೆ ಸಂತಾನ ಪ್ರಾಪ್ತಿ ಯೋಗವಿದೆ. ಆರೋಗ್ಯ ಯಥಾಸ್ಥಿತಿಯಲ್ಲಿರುತ್ತದೆ. ಆಪ್ತರ ಮನೆಯ ಕಾರ್ಯಕ್ರಮಗಳಿಗೆ ಖರ್ಚು ಮಾಡಬೇಕಾಗಿ ಬಂದು ಇಕ್ಕಟ್ಟಿಗೆ ಸಿಲುಕಿಸುತ್ತದೆ. ದೈವಾನುಗ್ರಹ ಇರಲಿದೆ. ಹಸಿರು ವಸ್ತ್ರವನ್ನು ಮುತ್ತೈದೆಗೆ ಬಾಗೀನ ನೀಡಿ. 

ಕಟಕ(Cancer): ಕಾರ್ಯಕ್ಷೇತ್ರದಲ್ಲಿ ಸಂತೋಷದ ವಾತಾವರಣ ಇರಲಿದೆ. ಸಂಸಾರವೂ ಶಾಂತಿಯಿಂದ ಕೂಡಿರಲಿದೆ. ಬೆನ್ನು ನೋವು ಸಿಕ್ಕಾಪಟ್ಟೆ ಕಾಡಬಹುದು. ಸಂತಾನದ ವಿಷಯವಾಗಿ ಚಿಂತೆಗಳು ಹೆಚ್ಚಬಹುದು. ಶೈಕ್ಷಣಿಕ ವೆಚ್ಚಗಳು ಭಾರವೆನಿಸಬಹುದು. ಅನ್ನಪೂರ್ಣೇಶ್ವರಿಯ ಸ್ಮರಣೆ ಮಾಡಿ. 

ಸಿಂಹ(Leo): ಹೊಸ ವ್ಯವಹಾರಗಳಿಗೆ ಕೈ ಹಾಕುವ ಮೊದಲು ನಾಲ್ಕು ಮಂದಿ ಅನುಭವಿಗಳಲ್ಲಿ ವಿಚಾರಿಸಿ ಮುಂದುವಿರಿಯಿರಿ. ವಿಚಾರಶೀಲರಿಗೆ ಪ್ರಶಂಸೆಗಳು ಹೆಚ್ಚಲಿವೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ತೃಪ್ತಿ ಇರಲಿದೆ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

ಕನ್ಯಾ(Virgo): ವ್ಯವಹಾರಗಳಲ್ಲಿ ಲಾಭದಾಯಕ ಆದಾಯ ಇರಲಿದೆ. ವಿದ್ಯಾರ್ಥಿಗಳಿಗೆ, ಕ್ರೀಡಾಳುಗಳಿಗೆ ಸಂತಸದ ದಿನ. ಸಂಧಿ ವಾತ, ಕಫ ದೋಷಗಳು ಕಂಗಾಲಾಗಿಸಬಹುದು. ಗೃಹದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಎದುರಾಗಿ ಮುಂದೂಡಬೇಕಾಗಬಹುದು. ತಾಯಿಯ ಆಶೀರ್ವಾದ ಪಡೆಯಿರಿ. 

ತುಲಾ(Libra): ದಾಂಪತ್ಯದಲ್ಲಿ ಸಂಗಾತಿಯ ಅಸಮಾಧಾನ ಮನಸ್ಸಿನ ನೆಮ್ಮದಿ ಕೆಡಿಸಲಿದೆ. ಎಷ್ಟು ಒದ್ದಾಡಿದರೂ ಸಾಲದೆಂಬಂತ ದುರಾಸೆ ಬಿಟ್ಟು ಬಿಡಿ. ಕಾರ್ಯರಂಗದಲ್ಲಿ ಅಪವಾದ ಭೀತಿ ಎದುರಾಗಲಿದೆ. ಸ್ವತಂತ್ರ ಪ್ರವೃತ್ತಿಯವರಿಗೆ ಕ್ಲೇಶ ತಪ್ಪದು. ಅಮ್ಮನವರಿಗೆ ಉಡಿ ತುಂಬಿ. 

ವೃಶ್ಚಿಕ(Scorpio): ಕೆಲವೊಂದು ವಿಷಯಕ್ಕೆ ತಗ್ಗಿ ಬಗ್ಗಿ ಹೋಗಬೇಕಾಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು ಮುಂದುವರಿಯಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳ ಸಹಕಾರ ಸಿಗಲಿದೆ. ಒತ್ತಡದಿಂದ ದೇಹಾಯಾಸ ಹೆಚ್ಚಲಿದೆ. ಮನಸ್ಸಿನ ಕೊರಗು ದೊಡ್ಡದಾಗಲಿದೆ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ. 

Personality Traits: ಏಕಾಂತವನ್ನು ಪ್ರೀತಿಸೋ ನಾಲ್ಕು ರಾಶಿಗಳಿವು..

ಧನುಸ್ಸು(Sagittarius): ನ್ಯಾಯಾಲಯದ ಕಾರ್ಯಗಳಲ್ಲಿ ಯಶ ಸಿಗಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭವಿರಲಿದೆ. ಮುಂಬಡ್ತಿಗೆ ಸದವಕಾಶ ಸಿಗಲಿದೆ. ರಾಜಕೀಯದಲ್ಲಿ ಉನ್ನತ ಸ್ಥಾನ ಸಿಗಲಿದೆ. ನಿಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಇರಲಿದೆ. ಲಲಿತಾ ಸಹಸ್ರನಾಮ ಪಠಿಸಿ. 

ಮಕರ(Capricorn): ನಿಮ್ಮ ದುಡುಕು ಕಾರ್ಯಕ್ಕೆ ಬೈಸಿಕೊಳ್ಳಬೇಕಾಗಬಹುದು. ಆತುರದ ನಿರ್ಧಾರಗಳು ಎಂದಿಗೂ ಒಳ್ಳೆಯದಲ್ಲ. ಶುಭ ಕಾರ್ಯದ ನಿಮಿತ್ತ ದೂರ ಪ್ರಯಾಣ ಮಾಡುವಿರಿ. ನೀವೆಣಿಸಿದ ಕಾರ್ಯಗಳು ಸಂಪೂರ್ಣ ತದ್ವಿರುದ್ಧ ಫಲಿತಾಂಶ ನೀಡಲಿವೆ. ದುರ್ಗಾ ಅಷ್ಟೋತ್ತರ ಪಠಿಸಿ. 

ಕುಂಭ(Aquarius): ಕಾರ್ಯಕ್ಷೇತ್ರದಲ್ಲಿ ಹೆಮ್ಮೆ ಇರಲಿದೆ. ನಿಮಗೆ ಸೂಕ್ತ ಸ್ಥಾನಮಾನ, ಗೌರವ ಪ್ರಾಪ್ತಿಯಾಗಲಿದೆ. ಮನೆಯಲ್ಲಿ ಸಂಗಾತಿ ಹಾಗೂ ಮಕ್ಕಳ ಸಹಕಾರ ಚೆನ್ನಾಗಿರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ ಸಿಗಲಿದೆ. ಆಕಸ್ಮಿಕ ಪ್ರವಾಸದಲ್ಲಿ ಅನಾರೋಗ್ಯ ಕಾಡಬಹುದು. ಮೂಕಾಂಬಿಕೆಯನ್ನು ಸ್ಮರಿಸಿ. 

ಹಣ, ಹೆಸರು, ಸಂತೋಷದ ಹೊಳೆಯನ್ನೇ ಹರಿಸುವ Gaja Kesari Yoga, ನಿಮ್ಮ ಜಾತಕದಲ್ಲಿದೆಯೇ?

ಮೀನ(Pisces): ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವರು. ಗೃಹದಲ್ಲಿ ಮಂಗಳಕಾರ್ಯಕ್ಕೆ ನಾಂದಿ ಹಾಡುವಿರಿ. ತಾತ್ಕಾಲಿಕ ವೃತ್ತಿಗಳಲ್ಲಿರುವವರಿಗೆ ಕೆಲಸ ಕಳೆದುಕೊಳ್ಳುವ ಭಯ ಕಾಡಬಹುದು. ಶತ್ರು ಕಾಟ ಹೆಚ್ಚಲಿದೆ. ಮನೆ ದೇವರ ಸ್ಮರಣೆ ಮಾಡಿ. 

(ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.)