Asianet Suvarna News Asianet Suvarna News

Personality Traits: ಏಕಾಂತವನ್ನು ಪ್ರೀತಿಸೋ ನಾಲ್ಕು ರಾಶಿಗಳಿವು..

ಎಲ್ಲರಿಗೂ ಒಮ್ಮೊಮ್ಮೆ ಒಬ್ಬರೇ ಇರಬೇಕಿನಿಸುತ್ತೆ. ಆದರೆ ಹೆಚ್ಚು ಹೊತ್ತು ಹಾಗಿದ್ದರೆ, ಮತ್ತೆ ಜನ ಬೇಕೆನಿಸುತ್ತೆ. ಒಂಟಿತನ ಕಾಡುತ್ತೆ. ಆದರೆ, ಕೆಲವರಿಗೆ ಈ ಒಂಟಿತನ ಏಕಾಂತವಾಗಿ ಆಪ್ಯಾಯಮಾನವೆನಿಸುತ್ತೆ. ಹಾಗೆ ಏಕಾಂತವನ್ನು ಅತಿಯಾಗಿ ಆಸ್ವಾದಿಸುವ ರಾಶಿಗಳಿವು. 

Leo Libra Scorpio Cancer Zodiac signs love loneliness skr
Author
Bangalore, First Published Feb 17, 2022, 12:46 PM IST

ಕೆಲವೊಮ್ಮೆ ಒಬ್ಬರೇ ಕಿಟಕಿ ಪಕ್ಕ ಕುಳಿತು ಕಾಫಿ ಹೀರುತ್ತಾ, ಪುಸ್ತಕವನ್ನು ಓದುವುದೋ, ಹಗಲುಗನಸು ಕಾಣುವುದೋ ಎಷ್ಟೊಂದು ಚೆಂದವೆನಿಸುತ್ತಲ್ಲ.. ಹಾಗೆಯೇ ಒಬ್ಬರೇ ಕುಳಿತು ಫೋನ್‌ನಲ್ಲಿ ರೊಮ್ಯಾಂಟಿಕ್ ಮೂವಿ ಆಸ್ವಾದಿಸುವುದೋ ಅಥವಾ ಹಾಡು ಕೇಳುತ್ತಾ ಅಡುಗೆ ಮಾಡುವುದೋ ತುಂಬಾ ಮಜವೆನಿಸುತ್ತದೆ ಅಲ್ಲವೇ? ಇನ್ನು ಯಾವುದೋ ಪಾರ್ಟಿಯಲ್ಲಿ ಜನರೆಲ್ಲ ಗುಂಪುಗೂಡರುವಾಗಲೂ ಅಲ್ಲಿಂದ ಎದ್ದು ಯಾವುದಾದರೂ ಬೆಟ್ಟದ ತುದಿಗೆ ಒಬ್ಬರೇ ಹೋಗಿ ಕೂರಬೇಕಿನ್ನಿಸುತ್ತಿದೆ ಅಂದರೆ ನೀವು ಈ ನಾಲ್ಕು ರಾಶಿಗಳಲ್ಲಿ ಒಬ್ಬರಿರಬೇಕು. ಏಕೆಂದರೆ ಆ ನಾಲ್ಕು ರಾಶಿಯವರು ಒಬ್ಬರೇ ಇದ್ದರೆ ಅದನ್ನು ಒಂಟಿತನ ಎಂದುಕೊಳ್ಳದೆ ಏಕಾಂತ(loneliness) ಎಂದು ಪ್ರೀತಿಸುವವರು. 

ಬಹುತೇಕ ಜನರಿಗೆ ಒಬ್ಬರೇ ಇದ್ದರೆ ಒಂಟಿತನ ಕಾಡುತ್ತದೆ. ಹಳೆಯ ನೋವಿನ ನೆನಪುಗಳು ಕಾಡುತ್ತವೆ.. ಬೇಡದ ಯೋಚನೆಗಳು ಬರುತ್ತವೆ. ಸುಮ್ಮಸುಮ್ಮನೆ ಅಳು ಬರುತ್ತದೆ. ಆದರೆ, ಇನ್ನು ಕೆಲವರಿಗೆ ಏಕಾಂತ ಸಿಕ್ಕರೆ ಸಾಕಪ್ಪಾ ಎನಿಸುತ್ತದೆ. ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆ ಸಂದರ್ಭವನ್ನು ಎಂಜಾಯ್ ಮಾಡುವ ಜೊತೆಗೆ ಅವರು ಹೆಚ್ಚು ಕಂಫರ್ಟೇಬಲ್ ಆಗಿಯೂ, ಹೆಚ್ಚು ಪ್ರಾಡಕ್ಟಿವ್ ಆಗಿಯೂ ಬಳಸಿಕೊಳ್ಳುತ್ತಾರೆ. ಅಂಥ ನಾಲ್ಕು ರಾಶಿಯವರು ಯಾರು ನೋಡೋಣ.

ಸಿಂಹ(Leo)
ಇವರು ಅಂತರ್ಮುಖಿಗಳೇನು ಅಲ್ಲ, ಜನರ ಮಧ್ಯೆ ಇದ್ದು ಗಮನ ಸೆಳೆಯುವ ಸ್ವಭಾವದವರೇ. ಆದರೆ, ಇವರಿಗೆ ಒಬ್ಬರೇ ಇರುವುದು ಕೂಡಾ ಬಹಳ ಖುಷಿ ನೀಡುತ್ತದೆ. ಮೌನ(silence) ಹೆಚ್ಚು ಸುಖ ಅನಿಸುತ್ತದೆ, ಇಂಥ ಏಕಾಂತಗಳೆಲ್ಲ ತಮ್ಮ ಯೋಚನಾಲಹರಿಗೆ ಹೆಚ್ಚು ಅಗತ್ಯ ಹಾಗೂ ಬದುಕಿನ ಅತಿ ಅಮೂಲ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಕಾಗುತ್ತದೆ ಎಂದು ನಂಬಿದವರು ಇವರು. ತಮ್ಮ ಗುಣಸ್ವಭಾವಕ್ಕೆ ಹೊಂದದವರ ಜೊತೆಗಿರುವುದಕ್ಕಿಂತ ಏಕಾಂಗಿಯಾಗಿರುವುದೇ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಾರೆ. ಈ ಏಕಾಂತವು ಇವರ ದೂರದೃಷ್ಟಿಗೆ ಕಾರಣವಾಗುತ್ತದೆ. 

ಹಣ, ಹೆಸರು, ಸಂತೋಷದ ಹೊಳೆಯನ್ನೇ ಹರಿಸುವ Gaja Kesari Yoga, ನಿಮ್ಮ ಜಾತಕದಲ್ಲಿದೆಯೇ?

ವೃಶ್ಚಿಕ(Scorpio)
ವೃಶ್ಚಿಕ ರಾಶಿಯವರಿಗೆ ತಮ್ಮ ಪಾಡಿಗೆ ತಾವಿರುವುದು ಇಷ್ಟ. ಹೆಚ್ಚು ಗೆಳೆಯರನ್ನು ಮಾಡಿಕೊಳ್ಳದವರು ಇವರು. ಆದರೆ ಸಂಗಾತಿ ಸಿಕ್ಕ ಮೇಲೆ ತಾವಿಬ್ಬರೇ ಇರುವುದಿಷ್ಟ. ನೆಂಟರಿಷ್ಟರ ಮನೆಗಳಿಗೆ ಹೋಗುವುದೆಂದರೆ ಇವರಿಗೆ ಕಿರಿಕಿರಿ. ಸಂಬಂಧಿಗಳ ಮನೆಯ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳಲು ಒಂದಿಲ್ಲೊಂದು ಕಾರಣ ಸಿದ್ಧವಿಟ್ಟುಕೊಂಡಿರುತ್ತಾರೆ. ಕೀಳರಿಮೆಯೋ, ಮೇಲರಿಮೆಯೂ ಇವರಿಗೆ ಎಲ್ಲರನ್ನೂ ಭೇಟಿಯಾಗಲು ಅಡ್ಡಿಯಾಗುತ್ತದೆ. ಒಬ್ಬರೇ ಇದ್ದು ಆನ್‌ಲೈನ್‌ನಲ್ಲಿ ಬೇಕುಬೇಕಾದ ಶಾಪಿಂಗ್ ಮಾಡಿಕೊಂಡು ಅದನ್ನು ಧರಿಸಿಕೊಂಡು ಆಸ್ವಾದಿಸುತ್ತಾರೆ. ಜನ ಸಿಕ್ಕಾಗ ಮಾತನಾಡುತ್ತಾರೆ. ಆದರೆ, ಕೆಲ ಸಮಯಕ್ಕೇ ಇವರಿಗೆ ಸಾಕಾಗಿ ಬಿಡುತ್ತದೆ. 

ಕಟಕ(Cancer) 
ಕಟಕ ರಾಶಿಯವರು ಏಕಾಂತವನ್ನು ಬಹಳವಾಗಿ ಪ್ರೀತಿಸುತ್ತಾರೆ. ಒಬ್ಬರೇ ತಿರುಗಾಡಲೂ ಸೈ, ರಜೆಯ ಮಜವನ್ನು ಒಬ್ಬರೇ ಅನುಭವಿಸಲೂ ಸೈ. ಅದಕ್ಕಾಗಿ ಗುಂಪೊಂದು ಬೇಕೆಂಬುದರ ಅಗತ್ಯ ಇವರಿಗಿಲ್ಲ. ಅವರ ಹಳೆಯ ಅನುಭವ(past experience)ಗಳ ಕಾರಣವೋ ಅಥವಾ ಅಭದ್ರತೆ(insecurity)ಯ ಕಾರಣಕ್ಕೋ ಕಟಕದವರು ಜನರನ್ನು ಸುಲಭವಾಗಿ ಗೆಳೆಯರಾಗಿಸಿಕೊಳ್ಳಲಾರರು. ಒಬ್ಬರೇ ಇದ್ದಾಗ ಮಾತ್ರ ಇವರು ಇವರಾಗಿರಬಲ್ಲರು, ಹೆಚ್ಚು ಕಂಫರಟೇಬಲ್ ಆಗಿರಬಲ್ಲರು. 

Aries Traits: ಮೇಷ ರಾಶಿಯವರ ಐದು ಸಾಮಾನ್ಯ ಸ್ವಭಾವಗಳಿವು..

ತುಲಾ(Libra)
ಇವರಿಗೆ ಒಬ್ಬರೇ ಕಾಡಿಗೆ ಹೋಗಿ ಫೋಟೋಗ್ರಫಿ ಮಾಡುವುದಿಷ್ಟ. ಹಕ್ಕಿಗಳ ಇಂಚರ ಕೇಳಿಸಿಕೊಳ್ಳುವುದಿಷ್ಟ. ಯಾವುದೋ ಕಂಪ್ಯೂಟರ್ ಬಿಚ್ಚಿ ಒಳಗೇನಿದೆ ನೋಡುವುದು, ಕಾರನ್ನು ಜತನ ಮಾಡುವುದು.. ಹೀಗೆ ತಮ್ಮ ಲೋಕದಲ್ಲಿ ತಾವು ಹಾಯಾಗಿ ನೆಮ್ಮದಿಯಾಗಿ ಇದ್ದು ಬಿಡುತ್ತಾರೆ. ಒಬ್ಬರೇ ಇದ್ದಾಗ ಇವರು ಬದುಕಿನ ಗುರಿಗಳನ್ನು ಹಾಕಿಕೊಂಡು ಯೋಜಿಸುತ್ತಾರೆ, ಓದುತ್ತಾರೆ.. ಆವಿಷ್ಕಾರದಲ್ಲಿ ತೊಡಗುತ್ತಾರೆ. ಏಕಾಂತದ ಸಮಯ ಇವರ ಪಾಲಿಗೆ ಹೆಚ್ಚು ಉತ್ಪಾದಕ ಸಮಯವಾಗಿರುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios