ವಿಜಯಪುರ: ತಾಳಿಕೋಟೆ ಜಾತ್ರಾ ದಾಸೋಹದಲ್ಲಿ ರೊಟ್ಟಿ ಊಟದ ರುಚಿ..!

ನೂರಾರು ಹಳ್ಳಿಗಳ ಜನರ ಆರಾದ್ಯ ಮಠಗಳಲ್ಲಿ ಒಂದಾಗಿರುವ ಶ್ರೀ ಖಾಸ್ಗತ ಮಠಕ್ಕೆ ಲಕ್ಷಾಂತರ ಭಕ್ತಾಧಿಗಳು ಬರು ಹೋಗುವದು ಕಾಣುತ್ತೇವೆ ಸುಮಾರು 10 ದಿನಗಳ ಕಾಲ ನಡೆಯುತ್ತಿರುವ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವಕ್ಕೆ ಹಾಗೂ 5 ದಿನಗಳ ಕಾಲ ನಡೆಯುವ ಶ್ರೀ ದ್ಯಾಮವ್ವದೇವಿ ಜಾತ್ರೋತ್ಸವಕ್ಕೆ ಪಟ್ಟಣ ಅಲ್ಲದೇ ಗ್ರಾಮೀಣ ಭಾಗದ ಲಕ್ಷಾಂತರ ಭಕ್ತರು ತಮ್ಮ ಮನೆಯಿಂದಲೇ ರೊಟ್ಟಿಯನ್ನು ತಯಾರಿಸಿ ದಾಸೋಹ ಸೇವೆಗೆ ಅರ್ಪಿಸುತ್ತಾ ಸಾಗಿದ್ದಾರೆ. 

Daily Dasoha During Talikote Fair in Vijayapura grg

ಪ್ರವೀಣ್‌ ಘೋರ್ಪಡೆ

ತಾಳಿಕೋಟೆ(ಜೂ.25): ಉತ್ತರ ಕರ್ನಾಟಕ ಭಾಗದಲ್ಲಿ ಊಟಕ್ಕೆಂದು ಕುಳಿತರೆ ಮೊದಲು ಕೇಳುವದೇ ಜೋಳದ ರೊಟ್ಟಿಅಂತಹ ರೊಟ್ಟಿಯ ರುಚಿಯ ಸೊಬಗು ಸವಿಯಲ್ಲಿ ಸುಪ್ರಸಿದ್ದತೆ ಪಡೆದ ರಾಜ್ಯದ ವಿವಿಧ ಧಾರ್ಮಿಕ ದೇವಸ್ಥಾನ ಮತ್ತು ಮಠಗಳಲ್ಲಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠ, ಶ್ರೀ ದ್ಯಾಮವ್ವದೇವಿ ಜಾತ್ರೋತ್ಸವಗಳು ಮೊದಲನೇಯ ಸಾಲಿನಲ್ಲಿ ಕಾಣುತ್ತದೆ ಅಲ್ಲದೇ ನಿತ್ಯ ದಾಸೋಹ ಸಾಕ್ಷೀಕರಿಸಿದೆ.

ನೂರಾರು ಹಳ್ಳಿಗಳ ಜನರ ಆರಾದ್ಯ ಮಠಗಳಲ್ಲಿ ಒಂದಾಗಿರುವ ಶ್ರೀ ಖಾಸ್ಗತ ಮಠಕ್ಕೆ ಲಕ್ಷಾಂತರ ಭಕ್ತಾಧಿಗಳು ಬರು ಹೋಗುವದು ಕಾಣುತ್ತೇವೆ ಸುಮಾರು 10 ದಿನಗಳ ಕಾಲ ನಡೆಯುತ್ತಿರುವ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವಕ್ಕೆ ಹಾಗೂ 5 ದಿನಗಳ ಕಾಲ ನಡೆಯುವ ಶ್ರೀ ದ್ಯಾಮವ್ವದೇವಿ ಜಾತ್ರೋತ್ಸವಕ್ಕೆ ಪಟ್ಟಣ ಅಲ್ಲದೇ ಗ್ರಾಮೀಣ ಭಾಗದ ಲಕ್ಷಾಂತರ ಭಕ್ತರು ತಮ್ಮ ಮನೆಯಿಂದಲೇ ರೊಟ್ಟಿಯನ್ನು ತಯಾರಿಸಿ ದಾಸೋಹ ಸೇವೆಗೆ ಅರ್ಪಿಸುತ್ತಾ ಸಾಗಿದ್ದಾರೆ. ನಿತ್ಯ ದಾಸೋಹದಲ್ಲಿ ಯಾವ ಭಕ್ತರಿಗೂ ಹಸಿವು ಎಂಬುದು ಕಾಣುವದಿಲ್ಲಾ ತಮ್ಮ ಹೊಟ್ಟೆತುಂಬಾ ಶ್ರೀ ದೇವಿಯ ಹಾಗೂ ಶ್ರೀ ಖಾಸ್ಗತನ ಪ್ರಸಾದ ಸ್ವಿಕರಿಸಿ ಪುನಿತರಾಗುತ್ತಾ ಸಾಗಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ರಥ ಸೇವೆ ಆರಂಭ: ಉಘೇ.. ಉಘೇ.. ಮಾದಪ್ಪ

ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಶ್ರೀ ದ್ಯಾಮವ್ವದೇವಿಯ ಜಾತ್ರೋತ್ಸವ ಹಾಗೂ ಪ್ರತಿವರ್ಷ ಜರುಗುವ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವವು ಈ ಭಾರಿ ಒಟ್ಟಿಗೆ ಕೂಡಿಬಂದಿರುವದರಿಂದ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ ಈ ಈ ಎರಡೂ ಜಾತ್ರೋತ್ಸವದ ದಾಸೋಹದಲ್ಲಿ ಜೋಳದ ರೋಟ್ಟಿ, ಸಜ್ಜಿ ರೋಟ್ಟೆ, ಸೀರಾ, ಸಜ್ಜಕ, ಬದನಿಕಾಯಿ ಪಲ್ಲೆ, ಅನ್ನ, ಸಾಂಬರು, ಮಾದ್ಲಿ, ಬೊಂದೆ, ಹುಗ್ಗಿ ಒಳಗೊಂಡು ಇನ್ನಿತರವನ್ನು ತಯಾರಿಸಿ ಪ್ರಸಾದ ರೂಪದಲ್ಲಿ ನೂರಾರು ವರ್ಷಗಳಿಂದ ನೀಡುತ್ತಾ ಬರಲಾಗಿದೆ. ಅದೇ ಪರಂಪರೆಯನ್ನು ಈಗಿನ ಶ್ರೀ ಖಾಸ್ಗತ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಶ್ರೀಮಠದಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದು ವರ್ಷದಿಂದ ವರ್ಷಕ್ಕೆ ಭಕ್ತಾಧಿಗಳ ಸಂಖ್ಯೆ ದ್ವಿಗುಣವಾಗುತ್ತಾ ಸಾಗಿದೆ.

ಮಠ ಮಾನ್ಯಗಳು ಕೇವಲ ಭಕ್ತರಿಂದ ಪಡೆದುಕೊಳ್ಳುವದನ್ನು ಕಂಡಿದ್ದೇವೆ ಆದರೆ ಜನರಿಗೆ ಸಂಕಷ್ಟಬಂದಾಗ ಕೊಡುವ ಮಠಗಳಿವೆ ಎಂಬುದಕ್ಕೆ ಸಾಕ್ಷೀಕರಿಸಿದಂತೆ ಕೊರೊನಾ ಸಂದರ್ಬದಲ್ಲಿ ಲಾಕ್‌ ಡೌನ್‌ ವಿಧಿಸಿದಾಗ ಶ್ರೀ ಖಾಸ್ಗತ ಮಠದಿಂದ ಸುಮಾರು 52 ಹಳ್ಳಿಗಳಿಗೆ ಬಾಲಶಿವಯೋಗಿ ಸಿದ್ದಲಿಂಗಶ್ರೀಗಳೇ ಸ್ವತಃ ಸಂಚರಿಸಿ 23 ಸಾವಿರ ಕುಟುಂಭಗಳಿಗೆ ಕಿಟ್‌ ರೂಪದಲ್ಲಿ ವಿವಿಧ ದವಸ ದಾನ್ಯಗಳನ್ನು ಮನೆಮನೆಗೆ ಮುಟ್ಟಿಸಿ ಭಕ್ತರ ಹಸಿವು ನೀಗಿಸುವಂತಹ ಕಾರ್ಯ ಮಾಡಿರುವದು ಭಕ್ತರ ಮನಸ್ಸಿನಲ್ಲಿ ಶ್ರೀ ಖಾಸ್ಗತ ಮಠದ ಮೇಲಿನ ಭಕ್ತಿ ಶಾಶ್ವತ ಉಳಿದುಕೊಳ್ಳುವಂತೆ ಮಾಡಿದೆ.

ಸದ್ಯ ಜಾತ್ರೋತ್ಸವದಲ್ಲಿ ದವಸ ದಾನ್ಯಗಳು ಭಕ್ತರಿಂದ ಹರಿದು ಬರುತ್ತಿದ್ದು ರಾಶಿ ರಾಶಿ ರೋಟ್ಟಿಗಳು ಭಕ್ತರಿಗೆ ಉಣಬಡಿಸಲು ದಾಸೋಹಕ್ಕಾಗಿ ಕೈಬೀಸಿ ಕರೆಯುತ್ತಿವೆ ಸದ್ಯ ನಿತ್ಯ ಸಪ್ತ ಭಜನೆ ನಡೆಯುತ್ತಿದ್ದು 1 ಗಂಟೆ ಒಂದು ಗ್ರಾಮದವರಿಗಾಗಿ ಹಂಚಿಕೆ ಮಾಡಲಾಗಿದ್ದು ದಿನಕ್ಕೆ 20 ಕ್ಕೂ ಹೆಚ್ಚು ಗ್ರಾಮಸ್ಥರು ತಂಡೋಪ ತಂಡವಾಗಿ ಶ್ರೀಮಠಕ್ಕೆ ಆಗಮಿಸಿ ಭಜನೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವಿಕರಿಸಿ ಪುನಿತರಾಗುತ್ತಿದ್ದಾರೆ.

ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಶವದ ಬಾಯಿಗೆ ನೀರು ಬಿಟ್ಟ ಗ್ರಾಮಸ್ಥರು

ವಿರಕ್ತಶ್ರೀಗಳ ಮೂರ್ತಿ ಅಲಂಕೃಂತ

ಶ್ರೀ ಮಠದ ಹಿಂದಿನ ಶ್ರೀಗಳಾದ ಲಿಂ.ವಿರಕ್ತ ಮಹಾಸ್ವಾಮಿಗಳ ಮಹಾ ಮೂರ್ತಿಯನ್ನು ಹಾಗೂ ಶ್ರೀ ಖಾಸ್ಗತರ ಗದ್ದುಗೆಯನ್ನು ಶ್ರೀ ಮಠದಲ್ಲಿ ಅಲಂಕೃತಗೊಳಿಸಿ ಭಕ್ತರ ಮನವನ್ನು ತಣಿಸುವಂತಹ ಕಾರ್ಯ ಶ್ರೀಮಠದಿಂದ ಮಾಡಲಾಗಿದೆ ಇದರ ಜೊತೆಗೆ ಮಠದ ಗೋಪೂರಕ್ಕೆ ವಿದ್ಯುತ್‌ ದ್ವಿಪಗಳಿಂದ ಅಲಂಕರಿಸಿ ಜಾತ್ರಾ ವೈಭವಕ್ಕೆ ಮೆರಗನ್ನು ಹೆಚ್ಚಿಸುವಂತಹ ಕಾರ್ಯ ಮಾಡಲಾಗಿದೆ.

ಲಕ್ಷಾಂತರ ಭಕ್ತರನ್ನು ಹೊಂದಿರುವ ಶ್ರೀ ಖಾಸ್ಗತ ಮಠದ ಜಾತ್ರೋತ್ಸವಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ರೋಟ್ಟಿ ಊಟಕ್ಕೆ ಬಹಳೇ ಬೇಡಿಕೆ ಇರುವಂತಹದ್ದು ಅಂತಹ ರೋಟ್ಟಿಯನ್ನು ಭಕ್ತರೇ ಮನೆಯಿಂದ ತಯಾರಿಸಿಕೊಂಡು ಶ್ರೀಮಠದ ದಾಸೋಹಕ್ಕೆ ನೀಡುತ್ತಿದ್ದಾರೆ. ಈ ಪದ್ದತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಂತಹದ್ದಾಗಿದೆ. ಶ್ರೀಮಠದ ಜಾತ್ರೆಯ ಜೊತೆಗೆ ಶ್ರೀ ದ್ಯಾಮವ್ವದೇವಿಯ ಜಾತ್ರೆಯ ಕೂಡಿಬಂದಿರುವದರಿಂದ ಜನರು ಹಬ್ಬದ ರೀತಿಯಲ್ಲಿ ಭಕ್ತಿಯಿಂದ ಸಂಭ್ರಮಿಸುತ್ತಿದ್ದಾರೆ ಎಂದು ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಮಠ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios