ವಿಷ್ಣು ಸಹಸ್ರನಾಮ ಹೇಳುವ ಗಿಳಿ! ಅಜ್ಜಿಯ ಜೊತೆಗಿನ ಕ್ಯೂಟ್ ವಿಡಿಯೋ ವೈರಲ್
ಗಿಳಿಯೊಂದು ಅಜ್ಜಿಯ ಕಾಲ ಮೇಲೆ ಕುಳಿತು ವಿಷ್ಣು ಸಹಸ್ರನಾಮವನ್ನು ಪಠಿಸುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಇದರ ವಿಡಿಯೋ ಇಲ್ಲಿದೆ...
ಗಿಳಿಮರಿಗಳ ಕಥೆಯನ್ನು ನೀವು ಕೇಳಿರಬಹುದು. ಒಂದೇ ಮನೆಯಲ್ಲಿ ಹುಟ್ಟಿದ ಅಕ್ಕ-ತಂಗಿ ಗಿಳಿಗಳು ಬೇರೆಬೇರೆಯಾಗಿ ಒಂದು ಸಂತನ ಮನೆ ಸೇರುತ್ತದೆ, ಇನ್ನೊಂದು ಕಟುಕನ ಮನೆ ಸೇರುತ್ತದೆ. ಸಂತನ ಮನೆ ಸೇರಿದ ಗಿಳಿ ಒಳ್ಳೊಳ್ಳೆ ಮಾತುಗಳನ್ನು ಕಲಿಯುತ್ತದೆ, ಬಂದವರಿಗೆ ಅತಿಥಿ ಸತ್ಕಾರ ಮಾಡುತ್ತದೆ, ಎಲ್ಲರನ್ನೂ ಚೆನ್ನಾಗಿ ಉಪಚರಿಸುತ್ತದೆ. ಅದೇ ಕಟುಕನ ಮನೆಯಲ್ಲಿ ಇರುವ ಗಿಳಿ, ಹೊಡಿ, ಬಡಿ, ಸಾಯಿಸು... ಇಂಥದ್ದೇ ಪದಗಳನ್ನು ಪುನರುಚ್ಚರಿಸುತ್ತಿರುತ್ತದೆ ಎನ್ನುವುದು. ಈ ಗಿಳಿಯ ಕಥೆ ನಿಜ ಬದುಕಿಗೆ ಹೋಲಿಸಲಾಗುತ್ತದೆ. ಎಂಥ ಮನೆಗಳಲ್ಲಿ ಎಂಥ ಮಕ್ಕಳು ಹುಟ್ಟಿದರೆ, ಮುಂದೆ ಅವರು ಎಂಥ ಮಕ್ಕಳಾಗಿ ರೂಪುಗೊಳ್ಳುತ್ತಾರೆ ಎಂದು ಉದಾಹರಿಸುವ ಒಂದು ಕಥೆಯಿದು. ಆದರೆ ನಿಜವಾಗಿಯೂ ಇಲ್ಲೊಂದು ಮುದ್ದು ಗಿಳಿ, ಸಂತರ ಮನೆಯಲ್ಲಿಯೇ ಇದ್ದು, ವಿಷ್ಣು ಸಹಸ್ರನಾಮವನ್ನು ಪಠಿಸುತ್ತದೆ ಎಂದರೆ ನಂಬುವಿರಾ?
ಅಜ್ಜಿಯ ಕಾಲ ಮೇಲೆ ಕುಳಿತ ಗಿಳಿಮರಿಯೊಂದು ಅಜ್ಜಿಯ ಜೊತೆ ವಿಷ್ಣು ಸಹಸ್ರನಾಮವನ್ನು ಪಠಿಸುವ ವಿಡಿಯೋ ಇದಾಗಿದೆ. ಒಡಿಶಾದಲ್ಲಿನ ಮನೆಯಲ್ಲಿನ ಸಾಕು ಗಿಳಿ ಇದಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಗಿಳಿ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಅಜ್ಜಿ ವಿಷ್ಣು ಸಹಸ್ರನಾಮ ಹೇಳುತ್ತಿದ್ದಂತೆಯೇ ಅಜ್ಜಿಯ ಜೊತೆಯಲ್ಲಿಯೇ ಗಿಳಿ ನಾಮವನ್ನು ಉಚ್ಚರಿಸುವುದನ್ನು ನೋಡಬಹುದಾಗಿದೆ. ಅಷ್ಟಕ್ಕೂ ವಿಷ್ಣು ಸಹಸ್ರನಾಮ ಪಠಿಸುವ ಹಲವಾರು ಜನರಿದ್ದಾರೆ. ಭಗವಾನ್ ವಿಷ್ಣುವನ್ನು ಹೃದಯದಿಂದ ಪೂಜಿಸಿದರೆ, ಎಲ್ಲಾ ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಎನ್ನುವ ನಂಬಿಕೆಯಿಂದ ಶ್ರದ್ಧಾ ಭಕ್ತಿಗಳಿಂದ ಪ್ರತಿನಿತ್ಯವೂ ಕೆಲವು ಮನೆಯಲ್ಲಿ ವಿಷ್ಣುವಿನ ನಾಮ ಸ್ಮರಣೆ ಮಾಡಲಾಗುತ್ತದೆ.
ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ
ಈ ಪಾರಾಯಣವನ್ನು ಸರಿಯಾದ ವಿಧಾನ ಮತ್ತು ನಿಯಮಗಳೊಂದಿಗೆ ಮಾಡಿದರೆ, ಶ್ರೀ ಹರಿಯ ಕೃಪೆಯಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ವಿಷ್ಣು ಸಹಸ್ರನಾಮದಲ್ಲಿ ವಿಷ್ಣುವಿನ 1000 ಹೆಸರುಗಳನ್ನು ವಿವರಿಸಲಾಗಿದೆ. ಇದನ್ನು ಪಠಣ ಮಾಡುವುದರಿಂದ, ವ್ಯಕ್ತಿಯ ಭೌತಿಕ ಆಸೆಗಳನ್ನು ಪೂರೈಸಲಾಗುತ್ತದೆ. ಹಾಗೂ ಪ್ರತಿಯೊಂದು ಕಾರ್ಯದಲ್ಲೂ ಯುಶಸ್ಸನ್ನು ಪಡೆದುಕೊಳ್ಳಬಹುದು ಎನ್ನಲಾಗುತ್ತದೆ.
ಜಾತಕದಲ್ಲಿ ಗುರುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು, ಭಯದಿಂದ ಮುಕ್ತಿ ಪಡೆಯಲು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು, ಮನಸ್ಸನ್ನು ಏಕಾಗ್ರತೆಯಿಂದ ಕಾಪಿಟ್ಟುಕೊಳ್ಳಲು, ಒತ್ತಡ ನಿವಾರಣೆಯಾಗಲು, ಮನೆಯಲ್ಲಿ ಅದೃಷ್ಟ ಮತ್ತು ಸಂತೋಷವನ್ನು ತಂದುಕೊಳ್ಳಲು, ಹಣಕಾಸಿನ ವಿಷಯದಲ್ಲಿ ಸದೃಢರಾಗಲು ವಿಷ್ಣು ಸಹಸ್ರನಾಮವನ್ನು ಪಠಣ ಮಾಡುವುದು ಸೂಕ್ತ ಎಂಬ ನಂಬಿಕೆಯಿಂದ ಇದನ್ನು ಹೆಚ್ಚಿನವರು ಪ್ರತಿನಿತ್ಯವೂ ಪಠಿಸುತ್ತಾರೆ. ಹೀಗೆ ಪ್ರತಿನಿತ್ಯವೂ ವಿಷ್ಣುವಿನ ಸ್ಮರಣೆಯನ್ನು ಕೇಳುತ್ತ ಬಂದಿರುವ ಗಿಳಿ ಅಜ್ಜಿಯ ಜೊತೆ ಅದನ್ನು ಪಠಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಮೃತ ವ್ಯಕ್ತಿ ಜೀವಂತ ಆಗುವುದ್ಯಾಕೆ? ದೇಹದಲ್ಲಿರೋ ಧನಂಜಯ ಯಾರು? ರಾಮಚಂದ್ರ ಗುರೂಜಿ ರಿವೀಲ್