ಈ 6 ರಾಶಿಗಳು ಮನಸ್ಸು ಮಾಡಿದರೆ ಶತಕೋಟ್ಯಧಿಪತಿಗಳಾಗುವುದು ಕನಸಿನ ಮಾತಲ್ಲ!

ಶತಕೋಟ್ಯಧಿಪತಿಗಳಲ್ಲಿ 6 ರಾಶಿಯವರು ಹೆಚ್ಚಾಗಿ ಸೇರಿದ್ದಾರೆ. ಅಂದರೆ, ರಾಶಿಚಕ್ರದ ಸ್ವಭಾವಗಳು ಅವರನ್ನು ಶ್ರೀಮಂತಿಕೆಯ ಏಣಿ ಹತ್ತಲು ನೆರವಾಗಿವೆ ಎಂದರ್ಥ. ಹೀಗೆ ಬಿಲಿಯನೇರ್ ಆಗುವ ಸಾಮರ್ಥ್ಯ ಹೊಂದಿದ ರಾಶಿಚಕ್ರಗಳಿವು.. ಇದರಲ್ಲಿ ನಿಮ್ಮ ರಾಶಿ ಇದೆಯೇ ನೋಡಿ..

These zodiac signs are likely to become billionaires skr

ನಮ್ಮಲ್ಲಿ ಕೆಲವರಿಗೆ ಕಷ್ಟಪಟ್ಟು ದುಡಿಯುವ ಮತ್ತು ಕೋಟ್ಯಧಿಪತಿಗಳಾಗುವ ಉತ್ಸಾಹವಿರುತ್ತದೆ, ಆದರೆ ಕೆಲವರು ಹಣದ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವುದಿಲ್ಲ. ಬಹಳ ಕಷ್ಟಪಟ್ಟಾಗ, ರಾಶಿಚಕ್ರಗಳ ಪ್ರಕಾರ, ಅಂಬಾನಿಗಳಂತೆ ಶತ ಕೋಟ್ಯಧಿಪತಿಗಳಾಗುವ ಸಾಧ್ಯತೆಯಿರುವ ಕೆಲವು ರಾಶಿಗಳು ಇಲ್ಲಿವೆ!

ತುಲಾ ರಾಶಿ(Libra)
ಶತಕೋಟ್ಯಧಿಪತಿಗಳಲ್ಲಿ ರಾಲ್ಫ್ ಲಾರೆನ್, ಸ್ಟೀಫನ್ ಪರ್ಸನ್, ಲಿಲಿಯನ್ ಬೆಟೆನ್‌ಕೋರ್ಟ್ ಮತ್ತು ಆಲಿಸ್ ವಾಲ್ಟನ್ ಅವರಂತಹ ಅನೇಕರು ತುಲಾ ರಾಶಿಗೆ ಸೇರಿದ್ದಾರೆ. ತುಲಾ ರಾಶಿಯವರು ಬಹಳ ರಾಜತಾಂತ್ರಿಕರು ಮತ್ತು ಅವರು ತಮ್ಮ ಕೆಲಸವನ್ನು ಮಾಡುವುದರಲ್ಲಿ ಉತ್ತಮರು. ಅಷ್ಟೇ ಅಲ್ಲ, ಅವರಿಗೆ ಕಷ್ಟಪಟ್ಟು ಕೆಲಸ ಮಾಡುವುದು ಗೊತ್ತು ಮತ್ತು ತುಂಬಾ ಬುದ್ಧಿವಂತರಾಗಿದ್ದಾರೆ. ಈ ಕಾರಣಗಳಿಂದ ಅವರು ಬಿಲಿಯನೇರ್‌ಗಳಾಗಬಲ್ಲರು. 

ಮೀನ ರಾಶಿ(Pisces)
ಮೀನವು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಕೆಲವು ಬಿಲಿಯನೇರ್‌ಗಳಲ್ಲಿ ಬರ್ನಾರ್ಡ್ ಅರ್ನಾಲ್ಟ್, ರೂಪರ್ಟ್ ಮುರ್ಡೋಕ್, ಮೈಕೆಲ್ ಡೆಲ್ ಮುಂತಾದವರು ಮೀನ ರಾಶಿಗೆ ಸೇರಿದ್ದಾರೆ. ಈ ರಾಶಿಚಕ್ರದ ಚಿಹ್ನೆಯು ಸೃಜನಶೀಲವಾಗಿದೆ. ಸದಾ ವಾಸ್ತವಕ್ಕೆ ದೂರದ ಕನಸುಗಳನ್ನು ಕಾಣುತ್ತಾರೆ. ಆದರೆ, ಅವರು ನಿಮ್ಮ ಕನಸಿನ ಜೀವನವನ್ನು ಅತಿರೇಕಗೊಳಿಸುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಬೇರೆಯವರಿಗೆ ಅಸಾಧ್ಯವೆಂದು ಕಂಡಿದ್ದನ್ನು ಇವರು ಸಾಧಿಸಿ ತೋರುತ್ತಾರೆ. ಮೀನವು ಉಪಪ್ರಜ್ಞೆಯ ಹನ್ನೆರಡನೇ ಮನೆಯಿಂದ ಆಳಲ್ಪಡುತ್ತದೆ. ಆದ್ದರಿಂದ ಅವರು ಶತಕೋಟ್ಯಧಿಪತಿಗಳಾಗಬಲ್ಲರು.

ಜೈನದೀಕ್ಷೆ ಪಡೆಯುತ್ತಿದ್ದಾಳೆ ನೂರಾರು ಕೋಟಿ ಒಡೆಯನ 8 ವರ್ಷದ ಪುಟಾಣಿ!

ಕರ್ಕಾಟಕ ರಾಶಿ(Cancer)
ಈ ವರ್ಷಗಳಲ್ಲಿ ಕರ್ಕಾಟಕ ರಾಶಿಯವರು ಹೆಚ್ಚು ಹೆಚ್ಚು ಬಿಲಿಯನೇರ್‌ಗಳ ಪಟ್ಟಿಗೆ ಸೇರಲು ಪ್ರಾರಂಭಿಸಿದ್ದಾರೆ ಮತ್ತು ಅದರಲ್ಲಿ ಹೈನೆಕೆನ್ ಉತ್ತರಾಧಿಕಾರಿ ಚಾರ್ಲೀನ್ ಡಿ ಕಾರ್ವಾಲೋ-ಹೆನೆಕೆನ್, ಟೆಸ್ಲಾ ಮೋಟಾರ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಮತ್ತು ಉದ್ಯಮಿ ಸರ್ ರಿಚರ್ಡ್ ಬ್ರಾನ್ಸನ್ ಮತ್ತು ಗೌತಮ್ ಅದಾನಿ ಅವರ ಹೆಸರುಗಳಿವೆ. ಕರ್ಕಾಟಕ ರಾಶಿಯವರು ಉತ್ತಮ ನಾಯಕರಾಗಿದ್ದಾರೆ. ಏಕೆಂದರೆ ಅವರು ದೃಢವಾದ ಕೆಲಸದ ಬದ್ಧತೆ ಮತ್ತು ಸಹಾನುಭೂತಿಯ ಸಾಮರ್ಥ್ಯಗಳನ್ನು ಹೊಂದಿದ್ದಾರೆ.

ವೃಷಭ ರಾಶಿ(Taurus)
ವೃಷಭ ರಾಶಿಯವರು ಹಠಮಾರಿಗಳಾಗಿರುತ್ತಾರೆ. ಆದರೆ ಕೆಲಸದ ವಿಷಯದಲ್ಲಿ ಹೆಚ್ಚು ಗಮನ ಹರಿಸುತ್ತಾರೆ. ಅವರು ಐಷಾರಾಮಿತನದ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿ ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಿದ್ದಾರೆ. ಕೆಲವು ವೃಷಭ ರಾಶಿಯ ಹೆಸರುಗಳಲ್ಲಿ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಮತ್ತು ಕೋಚ್ ಇಂಡಸ್ಟ್ರೀಸ್ ಉಪಾಧ್ಯಕ್ಷ ಡೇವಿಡ್ ಕೋಚ್ ಸೇರಿದ್ದಾರೆ.

ಸಿಂಹ ರಾಶಿ(Leo)
ಸಿಂಹ ರಾಶಿಯವರು ಉದ್ಯಮಿಗಳಾಗಿ ಅಭಿವೃದ್ಧಿ ಹೊಂದುತ್ತಾರೆ. ಅವರು ಮಹತ್ವಾಕಾಂಕ್ಷೆ ಮತ್ತು ಸೃಜನಾತ್ಮಕ ಆಲೋಚನೆಗಳಿಂದ ತುಂಬಿರುತ್ತಾರೆ ಮತ್ತು ಅವರು ತಮ್ಮದೇ ಆದ ಮಾರ್ಗವನ್ನು ಚೆನ್ನಾಗಿ ರಚಿಸಬಹುದು. ಅವರು ಯಶಸ್ವಿಯಾಗಲು ಹೂಡಿಕೆ, ಬಿಸ್ನೆಸ್ ಮಾರ್ಗಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಕೆಲವು ಯಶಸ್ವಿ ಹೆಸರುಗಳಲ್ಲಿ ಗೂಗಲ್ ಸಂಸ್ಥಾಪಕ ಸೆರ್ಗೆ ಬ್ರಿನ್ ಮತ್ತು ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ಸೇರಿದ್ದಾರೆ.

ರಾವಣ ಸಂಹಾರಕ್ಕೂ ಮುನ್ನ ರಾಮ ಹೇಳಿದ ಈ ಶ್ಲೋಕ ಪಠಿಸಿದರೆ ಶತ್ರುಕಾಟದಿಂದ ಮುಕ್ತಿ!

ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರಪ ಉತ್ಸಾಹಿಗಳು ಮತ್ತು ಅಂತಃಪ್ರಜ್ಞೆ ಹೊಂದಿದವರು. ಅವರು ಹಣವನ್ನು ಪರಿವರ್ತಕ ಮತ್ತು ನಿಯಂತ್ರಣ ಶಕ್ತಿ ಎಂದು ಪರಿಗಣಿಸುತ್ತಾರೆ. ಸಂಬಂಧಕ್ಕಿಂತ ಹಣ ಸಂಪಾದನೆ ಕಡೆಗೇ ಒಳವು ಹೊಂದಿದವರು. ಈ ರಾಶಿಚಕ್ರದ ಚಿಹ್ನೆಯು ಬಿಲಿಯನೇರ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಮತ್ತು  ಏರ್‌ಟೆಲ್‌ನ ಸುನಿಲ್ ಮಿತ್ತಲ್ ಮತ್ತು ಏಷ್ಯನ್ ಪೇಂಟ್ಸ್‌ನ ಅಶ್ವಿನ್ ದಾನಿ ಸೇರಿದಂತೆ ಹಲವು ಶತಕೋಟ್ಯಧಿಪತಿಗಳು ವೃಶ್ಚಿಕ ರಾಶಿಗೆ ಸೇರಿದ್ದಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios