ಮಾತು ಮಾತಿಗೂ ಹೆಂಡತಿ ಅಳ್ತಿದ್ದರೆ ಖುಷಿಪಡಿ, ಯಾಕ್ ಅಂತೀರಾ?
ಅಳು ಎಂಬ ಶಬ್ಧ ಮಗು ಹಾಗೂ ಮಹಿಳೆಗೆ ಮೀಸಲಾಗಿದೆ. ಗಂಡಸರು ಅಳೋದು ಅಪರೂಪ. ಕೆಲ ಮಹಿಳೆಯರು ಸಣ್ಣಪುಟ್ಟದಕ್ಕೂ ಅತ್ರೆ ಕೆಲವರು ಗಟ್ಟಿಯಾಗಿರ್ತಾರೆ. ಪತ್ನಿ ಅಳ್ತಾಳೆ ಗುರು, ಸಾಕಾಗಿದೆ ಎನ್ನುವ ಪುರುಷರು ಇದನ್ನೋದಿ.
ಮಾತು ಮಾತಿಗೂ ಅಳುವ ಮಕ್ಕಳನ್ನು ನಾವು ನೋಡಿರ್ತೇವೆ. ಏನು ಹೇಳಿದ್ರೂ ಅವರು ಅಳಲು ಶುರು ಮಾಡ್ತಾರೆ. ಆದ್ರೆ ಕೆಲ ಮಹಿಳೆಯರು ಕೂಡ ಅಳೋದ್ರಲ್ಲಿ ಮುಂದಿರ್ತಾರೆ. ಮಕ್ಕಳು ಊಟ ಮಾಡಿಲ್ಲ ಎಂದ್ರೆ, ಗಂಡ ಸ್ವಲ್ಪ ಗದರಿದ್ರೆ, ಸಣ್ಣಪುಟ್ಟ ಖಾಯಿಲೆ ಬಂದ್ರೆ ಹೀಗೆ ಅತಿ ಸಣ್ಣ ವಿಷ್ಯಕ್ಕೂ ಅವರ ಕಣ್ಣಲ್ಲಿ ನೀರು ಬರುತ್ತದೆ. ದುಃಖವನ್ನು ತಡೆಹಿಡಿಯುವ ಶಕ್ತಿ ಸ್ವಲ್ಪವೂ ಅವರಿಗಿರೋದಿಲ್ಲ. ಅತಿ ಕೋಪಗೊಂಡಾಗ ಕೂಡ ಕೂಗಾಡ್ತಾ ಕೂಗಾಡ್ತಾನೆ ಅವರು ಅಳಲು ಶುರು ಮಾಡ್ತಾರೆ. ಈ ಅಳುವ ಮಹಿಳೆಯರನ್ನು ದುರ್ಬಲರೆಂದು ಪರಿಗಣಿಸಲಾಗುತ್ತದೆ. ಅನೇಕರು ಅವರ ಅಳುವನ್ನು ಜೋಕ್ ಆಗಿ ಕೂಡ ತೆಗೆದುಕೊಳ್ತಾರೆ. ನಿಮ್ಮ ಪತ್ನಿ ಕೂಡ ಆಗಾಗ ಅಳ್ತಿದ್ದರೆ ಇನ್ಮುಂದೆ ಮುಜುಗರಪಟ್ಟುಕೊಳ್ಳಬೇಡಿ. ಅಳುವ ಹೆಣ್ಣಿನ ಸ್ವಭಾವ ತಿಳಿದುಕೊಳ್ಳಿ. ಶಾಸ್ತ್ರಗಳಲ್ಲಿ ಅಳುವ ಹೆಣ್ಣಿನ ಬಗ್ಗೆ ಅಚ್ಚರಿ ವಿಷ್ಯವನ್ನು ಹೇಳಲಾಗಿದೆ. ಅಳುವ ಮಹಿಳೆ, ಆಕೆ ಪತಿ ಹಾಗೂ ಆಕೆ ಅತ್ತೆಗೆ ಮಂಗಳಕರವಂತೆ. ಸಣ್ಣಪುಟ್ಟ ವಿಷಯಗಳಿಗೂ ಅಳುವ ಸ್ವಭಾವದ ಮಹಿಳೆಯರನ್ನು ಏಕೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದರ ಹಿಂದಿನ ಸತ್ಯ ಏನು ಎಂಬುದನ್ನು ನಾವಿಂದು ಹೇಳ್ತೇವೆ.
ಸಣ್ಣ ಪುಟ್ಟ ವಿಷ್ಯಕ್ಕೆ ಅಳು (Cry) ವ ಮಹಿಳೆ ಏಕೆ ಮಂಗಳಕರ ? :
1. ಮಹಿಳೆ ಅತ್ತರೆ ಮನೆ ಶಾಂತಿ ಭಂಗವಾಗುತ್ತದೆ ಎಂದು ನಾವು ನಂಬುತ್ತೇವೆ. ಆದ್ರೆ ಧರ್ಮಗ್ರಂಥಗಳಲ್ಲಿ, ಪದೇ ಪದೇ ಅಳುವ ಮಹಿಳೆಯರಿಂದ ಮನೆಯ ಶಾಂತಿ ಉತ್ತಮವಾಗಿರುತ್ತದೆ ಎನ್ನಲಾಗಿದೆ.
2. ಸಣ್ಣ ಪುಟ್ಟ ಸಂಗತಿಗೆ ಅಳುವ ಮಹಿಳೆಯರನ್ನು ಗೇಲಿ ಮಾಡುವ ಬದಲು ಅವರನ್ನು ಗೌರವಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
Vastu Tips : ಕಚೇರಿಯಲ್ಲಿಈ ವಸ್ತುಗಳನ್ನಿಟ್ಟರೆ ಉತ್ತರೋತ್ತರ ಏಳಿಗೆ ಆಗೋದು ಗ್ಯಾರಂಟಿ
3. ಪದೇ ಪದೇ ಅಳುವ ಮಹಿಳೆಯರು ಗಂಡನಿಗೆ ಅದೃಷ್ಟ (Good Luck) ತರುತ್ತಾರೆ ಎನ್ನಲಾಗಿದೆ.
4. ಅಳುವ ಸ್ವಭಾವದ ಮಹಿಳೆಯರು ಪತಿ ಅಥವಾ ಕುಟುಂಬದಿಂದ ಬೇರೆಯಾಗಲು ಬಯಸುವುದಿಲ್ಲ. ಕುಟುಂಬ (Family) ದ ಮೇಲೆ ಅವರಿಗೆ ಅಪಾರ ಪ್ರೀತಿಯಿರುತ್ತದೆ.
5. ಚಿಕ್ಕ ಚಿಕ್ಕ ವಿಷಯಗಳಿಗೆ ಅಳುವ ಮಹಿಳೆಯರ ಸ್ವಭಾವ ಕುಟುಂಬವನ್ನು ಒಗ್ಗೂಡಿಸಲು ನೆರವಾಗುತ್ತದೆ ಎನ್ನಲಾಗಿದೆ.
6. ಯಾವುದೇ ತಪ್ಪಿಲ್ಲದೆ ಭಾವನಾತ್ಮಕವಾಗಿ ಅಳುವ ಮಹಿಳೆಯರಲ್ಲಿ ಮಮತೆ ಸಮೃದ್ಧವಾಗಿರುತ್ತದೆ.
7. ಅಳುವ ಮಹಿಳೆಯರು ಮಕ್ಕಳನ್ನು ಮಾತ್ರವಲ್ಲದೆ ಕುಟುಂಬದ ಪ್ರತಿಯೊಬ್ಬರನ್ನೂ ಸಹಾನುಭೂತಿಯಿಂದ ನೋಡುತ್ತಾರೆ ಎನ್ನಲಾಗಿದೆ.
8. ಅನೇಕ ಮಹಿಳೆಯರು ಅಳ್ತಾನೆ ಕೂಗಾಡುತ್ತಿರುತ್ತಾರೆ. ಕೋಪವನ್ನು ಹೊರ ಹಾಕ್ತಿರುತ್ತಾರೆ. ಅವರು ಮನಸ್ಸಿನಲ್ಲಿರೋದೆಲ್ಲವನ್ನೂ ಹೊರಗೆ ಹಾಕ್ತಿರುತ್ತಾರೆ. ಇದು ಒಳ್ಳೆಯದು. ಇದ್ರಿಂದ ಮಹಿಳೆ ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ.
9. ಇಷ್ಟೇ ಅಲ್ಲ ತಕ್ಷಣ ಅಳುವ ಮಹಿಳೆಯರು ಯಾವುದೇ ಭಾವನೆಯನ್ನು ಮನಸ್ಸಿನಲ್ಲಿ ಬಚ್ಚಿಡುವುದಿಲ್ಲ. ಕುಟುಂಬದ ಸದಸ್ಯರನ್ನು ಮತ್ತು ಪತಿಯನ್ನು ಅವರು ಕ್ಷಮಿಸುವ ಗುಣ ಕೂಡ ಹೊಂದಿರುತ್ತಾರೆ.
10. ಪತಿ ಅಥವಾ ಕುಟುಂಬಸ್ಥರನ್ನು ನೋಯಿಸುವ ಸ್ವಭಾವ ಇವರದ್ದಾಗಿರುವುದಿಲ್ಲ. ಸದಾ ಕುಟುಂಬದ ಹಿತವನ್ನು ಇವರು ಬಯಸ್ತಾರೆ.
11. ಪತಿ ಹಾಗೂ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅವರಿಗಿರುತ್ತದೆ. ಹಾಗೆಯೇ ಕುಟುಂಬದ ಕಷ್ಟದಲ್ಲಿ ಇವರು ಭಾಗಿಯಾಗ್ತಾರೆ. ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಸ್ವಭಾವ ಹೊಂದಿರುತ್ತಾರೆ.
12. ಪದೇ ಪದೇ ಅಳುವ ಮಹಿಳೆಯರು ದುರ್ಬಲರಲ್ಲ. ಇಂಥ ಮಹಿಳೆಯರು ಪತಿಗೆ ಅದೃಷ್ಟ ತರುತ್ತಾರೆ.
ದೃಷ್ಟಿ ತಾಕದಿರಲೆಂದು ಮಗುವಿನ ಕೈ, ಕಾಲುಗಳಿಗೆ ಕಪ್ಪು ದಾರ ಕಟ್ಟೋದು ಸರಿಯೇ?
ಒಂದ್ವೇಳೆ ನಿಮ್ಮ ಪತ್ನಿ ಕೂಡ ಮಾತು ಮಾತಿಗೆ ಅಳ್ತಿದ್ದರೆ ಇವತ್ತಿಂದ ಆಕೆಯ ಸ್ವಭಾವವನ್ನು ಗೌರವಿಸಿ. ಯಾವುದೇ ಕಾರಣಕ್ಕೂ ಆಕೆಗೆ ಅವಮಾನ ಮಾಡಬೇಡಿ. ಆಕೆಯನ್ನು ಕೀಳಾಗಿ ನೋಡಬೇಡಿ. ಅಳುವ ಪತ್ನಿ ನಿಮಗೆ ಸಿಕ್ಕರೆ ನಿಮ್ಮ ಭವಿಷ್ಯ ಬದಲಾಗುತ್ತೆ ಎಂಬುದು ನೆನಪಿರಲಿ.