ರಾಹು ಕೇತು ದೋಷದಿಂದ ಮುಕ್ತರಾಗಲು Pitru Pakshaದಲ್ಲಿ ಈ ಕೆಲಸ ಮಾಡಿ..
ರಾಹು ಕೇತುಗಳ ಕೆಟ್ಟ ಪ್ರಭಾವದಿಂದಾಗಿ, ವ್ಯಕ್ತಿಯ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಬರುತ್ತವೆ. ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಇದ್ದೇ ಇರುತ್ತವೆ. ಇವುಗಳ ಕೆಟ್ಟ ಪ್ರಭಾವದಿಂದ ತಪ್ಪಿಸಿಕೊಳ್ಳಲು ಪಿತೃ ಪಕ್ಷ ಒಳ್ಳೆಯ ಸಮಯ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಪಿತೃ ಪಕ್ಷದಲ್ಲಿ ಪಿತೃಗಳ ಶ್ರಾದ್ಧ, ಪಿಂಡ ದಾನ ಮಾಡುವುದು ಮತ್ತು ಪಿತೃ ಪಕ್ಷದಲ್ಲಿ ಅವರಿಗೆ ತರ್ಪಣವನ್ನು ನೀಡುವ ಸಂಪ್ರದಾಯವಿದೆ. ಪೂರ್ವಜರಿಗೆ ಶ್ರಾದ್ಧ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಅವರ ಆತ್ಮಕ್ಕೆ ತೃಪ್ತಿ ಸಿಗುತ್ತದೆ. ಅವರ ಆಶೀರ್ವಾದದಿಂದ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರಾದ್ಧವನ್ನು 3 ತಲೆಮಾರುಗಳಿಗೆ ನಡೆಸಲಾಗುತ್ತದೆ. ಪಿತೃದೋಷದಿಂದ ಮುಕ್ತರಾಗುವುದು ಬಹಳಷ್ಟು ಯಶಸ್ಸು, ಸಂತೋಷ, ನೆಮ್ಮದಿಯನ್ನು ತರುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 10ರಿಂದ 25 ಸೆಪ್ಟೆಂಬರ್ 2022ರವರೆಗೆ( Pitru Paksha 2022 date) ನಡೆಯುತ್ತವೆ. ರಾಹು ಮತ್ತು ಕೇತುಗಳ ದೋಷಗಳನ್ನು ತೆಗೆದುಹಾಕಲು ಪಿತೃ ಪಕ್ಷವು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ರಾಹು ಕೇತುವಿನ ಕೆಟ್ಟ ಪರಿಣಾಮಗಳು
ಜ್ಯೋತಿಷ್ಯದಲ್ಲಿ ರಾಹು-ಕೇತುಗಳನ್ನು ಛಾಯಾ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಮತ್ತು ಕೇತುಗಳ ಕಾರಣದಿಂದಾಗಿ ಕಾಲ ಸರ್ಪ ಯೋಗ(Kala Sarpa Yog)ವು ರೂಪುಗೊಳ್ಳುತ್ತದೆ. ರಾಹು-ಕೇತುಗಳ ಸ್ಥಾನವು ವ್ಯಕ್ತಿಯ ಪರವಾಗಿಲ್ಲದಿದ್ದಾಗ ಅವನ ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಅವರ ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಇದ್ದೇ ಇರುತ್ತವೆ. ಮಾನಸಿಕ ಒತ್ತಡ ಎಷ್ಟರಮಟ್ಟಿಗೆ ಹೆಚ್ಚುತ್ತದೆ ಎಂದರೆ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ರಾಹು-ಕೇತುಗಳ ಅಶುಭ ಪರಿಣಾಮಗಳಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಅದನ್ನು ತಪ್ಪಿಸಲು ಪಿತೃ ಪಕ್ಷದಲ್ಲಿ ಈ ಖಚಿತವಾದ ಕ್ರಮಗಳನ್ನು ತೆಗೆದುಕೊಳ್ಳಿ. ಏಕೆಂದರೆ, ರಾಹು ಕೇತುಗಳ ದೋಷ ನಿವಾರಿಸಲು ಪಿತೃ ಪಕ್ಷ ಅತ್ಯುತ್ತಮ ಸಮಯವಾಗಿದೆ.
Shukra Gochar 2022: ಸಮಸ್ಯೆಗಳ ಸುಳಿಗೆ ಸಿಲುಕುವ ನಾಲ್ಕು ರಾಶಿಗಳು!
ರಾಹು ಮತ್ತು ಕೇತು ಶಾಂತಿಗೆ ಪರಿಹಾರಗಳು(remedies)
ಪಿತೃ ಪಕ್ಷದಲ್ಲಿ ಪೂರ್ವಜರು ಧರಿಸಬಹುದಾದ ಧೋತಿ, ಕುರ್ತಾ, ಪಂಚೆ, ಸೀರೆ ಇತ್ಯಾದಿಗಳನ್ನು ದಾನ ಮಾಡಿ. ಈ ಸಮಯದಲ್ಲಿ ವಸ್ತ್ರದಾನ ಬಹಳ ಮುಖ್ಯ.
ರಾಹು-ಕೇತು ದೋಷಗಳ ನಿವಾರಣೆಗೆ ಪಿತೃ ಪಕ್ಷದಲ್ಲಿ ಪಾದರಕ್ಷೆ, ಚಪ್ಪಲಿ, ಕೊಡೆಗಳನ್ನು ದಾನ ಮಾಡಬೇಕು.
ಧಾರ್ಮಿಕ ನಂಬಿಕೆಯ ಪ್ರಕಾರ, ಪಿತೃಪಕ್ಷದ ಸಮಯದಲ್ಲಿ ಹಸಿದವರಿಗೆ, ಬಡವರಿಗೆ ಮತ್ತು ಬ್ರಾಹ್ಮಣರಿಗೆ ಆಹಾರವನ್ನು ನೀಡುವುದು, ರಾಹು-ಕೇತುಗಳ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ.
ಕೇತುವಿನ ದುಷ್ಪರಿಣಾಮಗಳನ್ನು ತಪ್ಪಿಸಲು, ಪ್ರತಿ ದಿನ ಕೇತುವಿನ ಬೀಜ ಮಂತ್ರವನ್ನು ಪಠಿಸಿ 'ಓಂ ಸ್ರಾನ್ ಶ್ರೀಂ ಸ್ರೋಂಸ: ಕೇತ್ವೇ ನಮಃ'.
ಎಳ್ಳು, ಧ್ವಜ, ಕಾಜಲ್, ಬೆಚ್ಚನೆಯ ವಸ್ತ್ರಗಳು, ಸಾತಂಜಸ, ಮೂಲಂಗಿ ಮುಂತಾದವುಗಳನ್ನು ದಾನ ಮಾಡುವುದರಿಂದ ಕೇತುವಿನ ಕೆಟ್ಟ ಪರಿಸ್ಥಿತಿಯನ್ನು ತೊಡೆದು ಹಾಕಬಹುದು.
ರಾಹು ಶಾಂತಿಗಾಗಿ, ಅದರ ಬೀಜಮಂತ್ರ 'ಓಂ ಭ್ರಂ ಭ್ರೈನ್ ಭ್ರೌನ್ ಸಹ ರಾಹವೇ ನಮಃ' ವನ್ನು ಪ್ರತಿದಿನ ಪಠಿಸಿ.
ಶಿವ ಪಂಚಾಕ್ಷರ ಮಂತ್ರ "ಓಂ ನಮಃ ಶಿವಾಯ"ವನ್ನು ಪಿತೃ ಪಕ್ಷದಲ್ಲಿ ಪ್ರತಿದಿನ 108 ಬಾರಿ ಜಪಿಸಿ. ಶಿವನ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಬೇಲ್ಪತ್ರ, ಹಸಿ ಹಾಲು, ಹಣ್ಣುಗಳು ಮತ್ತು ನೀರನ್ನು ಅರ್ಪಿಸಿ.
ಪಿತೃ ಪಕ್ಷದುದ್ದಕ್ಕೂ ನಿವಾರಣ್ ಯಂತ್ರ ಅಥವಾ ರುದ್ರಾಕ್ಷ ಮಾಲೆ ಧರಿಸಿ ಅಥವಾ ಇಟ್ಟುಕೊಳ್ಳಿ. ಪ್ರತಿ ದಿನ ನಾಗ ಪೂಜೆಯನ್ನು ನೆರವೇರಿಸಿ. ಬೆಳ್ಳಿಯನ್ನು ಬಳಸಿ ಮಾಡಿದ ನಿವಾರಣಾ ಉಂಗುರವನ್ನು ಧರಿಸಿ.
ಮೂಲಾಧಾರ ರಹಸ್ಯ: ಗಣೇಶನಿಗೂ, ಸಂಖ್ಯೆ 21ಕ್ಕೂ ಇರುವ ನಂಟೇನು?
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.