Asianet Suvarna News Asianet Suvarna News

GouSwarga: ಇಂದಿನಿಂದ ಭಾನ್ಕುಳಿ ಗೋಸ್ವರ್ಗದಲ್ಲಿ ಗೋವು ದಿನ ಆಚರಣೆ

ಭಾನ್ಕುಳಿ ಶ್ರೀರಾಮದೇವಮಠ ಆವಾರದ ಗೋಸ್ವರ್ಗದಲ್ಲಿ ಜ.12ರಿಂದ ಜ.15ರ ವರೆಗೆ ಗೋದಿನ ಹಾಗೂ ಗೋವಿಗಾಗಿ ಆಲೆಮನೆ ಕಾರ್ಯಕ್ರಮ ನಡೆಯಲಿದೆ ಎಂದು ಗೋದಿನ ಆಚರಣೆ ಸಮಿತಿಯ ಅಧ್ಯಕ್ಷ ಎಂ.ಜಿ. ರಾಮಚಂದ್ರ ಮರ್ಡುಮನೆ ಹೇಳಿದ್ದಾರೆ. ದೇಶಿ ಗೋವಿನ ಸಗಣಿ ಗೊಬ್ಬರದಿಂದ ಸಾತ್ವಿಕವಾಗಿ ಬೆಳೆದ ಸಾವಯವ ಕಬ್ಬಿನಿಂದ ಸಾಂಪ್ರದಾಯಿಕ ಆಲೆಮನೆ ನಡೆಯಲಿದೆ.

Cow Day celebration at Bhankuli Gousvarga from today at siddapur rav
Author
First Published Jan 12, 2023, 7:15 AM IST

ಸಿದ್ದಾಪುರ (ಜ.12) : ತಾಲೂಕಿನ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಗೋಸ್ವರ್ಗದಲ್ಲಿ ಜ.12ರಿಂದ ಜ.15ರ ವರೆಗೆ ಗೋದಿನ ಹಾಗೂ ಗೋವಿಗಾಗಿ ಆಲೆಮನೆ ಕಾರ್ಯಕ್ರಮ ನಡೆಯಲಿದೆ ಎಂದು ಗೋದಿನ ಆಚರಣೆ ಸಮಿತಿಯ ಅಧ್ಯಕ್ಷ ಎಂ.ಜಿ. ರಾಮಚಂದ್ರ ಮರ್ಡುಮನೆ ಹೇಳಿದ್ದಾರೆ.

ತಾಲೂಕಿನ ಭಾನ್ಕುಳಿ(Bankuli) ಗೋಸ್ವರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮಚಂದ್ರಾಪುರಮಠ(Sriramchandrapur mutt)ದ ರಾಘವೇಶ್ವರ ಭಾರತೀ ಶ್ರೀ(Raghaveshwar Bharati shree) ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಿಂದ ಬರುವ ಆದಾಯವನ್ನು ಗೋವಿನ ಪಾಲನೆ ಪೋಷಣೆಗೆ ವಿನಿಯೋಗಿಸಲಾಗುವುದು ಎಂದರು.

Uttara Kannada : ಕಲಿಯುಗದ ಗೋಸ್ವರ್ಗ ಬಾನ್ಕುಳಿಯಲ್ಲಿ ಆಲೇಮನೆಯ ಸವಿ!

ದೇಶಿ ಗೋವಿನ ಸಗಣಿ ಗೊಬ್ಬರದಿಂದ ಸಾತ್ವಿಕವಾಗಿ ಬೆಳೆದ ಸಾವಯವ ಕಬ್ಬಿನಿಂದ ಸಾಂಪ್ರದಾಯಿಕ ಆಲೆಮನೆ ನಡೆಯಲಿದೆ. ಶುದ್ಧ ಕಬ್ಬಿನಹಾಲು, ಬೆಲ್ಲ, ಬೆಲ್ಲದ ವಿವಿಧ ಉತ್ಪನ್ನಗಳು ಹಾಗೂ ಗೋವಿನ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. ಜ.12ರಂದು ಆಲೆಮನೆ ಮತ್ತು ಆಹಾರೋತ್ಸವ ಉದ್ಘಾಟನೆ ನಡೆಯಲಿದೆ. ಹಿರಿಯ ಸಾಮಾಜಿಕ ಕಾರ್ಯಕರ್ತ ಜಿ.ಕೆ. ಹೆಗಡೆ ಗೋಳಗೋಡ ಹಾಗೂ ಯಕ್ಷಗಾನ ಕಲಾವಿದ ಕಮಲಾಕರ ಹೆಗಡೆ ಹುಕ್ಲಮಕ್ಕಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜ.13ರಂದು ಗೋಪಾಲ ಗೌರವ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಜೆ ಗೋಪೂಜೆ, ಗಂಗಾಜಲ ಅಭಿಷೇಕ, ಗೋ ಗಂಗಾರತಿ ನಡೆಯುತ್ತದೆ. ಜ.14ರಂದು ಕಾಮಧೇನು ಹವನ, ಮೊಟ್ಟಮೊದಲ ಬಾರಿಗೆ ಗೋವಿಗೆ ಅಷ್ಟಾಂಗ ಸೇವೆ ನಡೆಯಲಿದೆ. ಜ.15ರಂದು ಆಲೆಮನೆ ಮತ್ತು ಆಹಾರೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪ್ರತಿದಿನ ಸಂಜೆ ಯಕ್ಷಗಾನ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಬಿ.ವೈ. ರಾಘವೇಂದ್ರ, ವಿಪ ಸದಸ್ಯ ಡಿ.ಎಸ್‌.ಅರುಣ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಸಿದ್ದಾಪುರ ಮಂಡಳ ಅಧ್ಯಕ್ಷ ಮಹೇಶ ಭಟ್ಟಚಟ್ನಳ್ಳಿ ಮಾತನಾಡಿ, ನಶಿಸುತ್ತಿರುವ ಭತ್ತದ ತಳಿಗಳ ಸಂರಕ್ಷಕ ಮಂಡ್ಯದ ಕೆ.ಜಿ. ಅನಂತರಾವ್‌, ಕಸಾಯಿಖಾನೆಗೆ ಹೋಗುತ್ತಿದ್ದ ಹಸುಗಳನ್ನು ರಕ್ಷಿಸಿದ ತುಮಕೂರಿನ ಸಿ.ವಿ. ರಮಾದೇವಿ ಮಧುಗಿರಿ, ಅರಸಿಕೆರೆಯ ಶ್ಯಾಮ ಗೌಡ, ದೇಶಿ ಗೋತಳಿ ಉಳಿಸಿ ಬೆಳೆಸಿದ ಮೂಡಿಗೆರೆಯ ನಿವೃತ್ತ ಪಶು ಪರಿವೀಕ್ಷಕ ಕ.ದಾ.ಕೃಷ್ಣರಾಜು, ವಿಜಯಪುರ ನಿಡೋಣಿಯ ಗುರುಪಾದ ನಿಡೋಣಿ ಅವರಿಗೆ ಗೋಪಾಲ ಗೌರವ ಪ್ರಶಸ್ತಿ ನೀಡಲಾಗುವುದು ಎಂದರು.

ಹೊನ್ನಾವರ: ಗೋವುಗಳನ್ನ ಸ್ವಂತ ಮಕ್ಕಳಂತೆ ಸಾಕುತ್ತಿರುವ ಸುಬ್ರಾಯ ಶೆಟ್ಟಿ ಕುಟುಂಬ..!

ಉತ್ಸವ ಸಮಿತಿ ಗೌರವಾಧ್ಯಕ್ಷ ಆರ್‌.ಎಸ್‌.ಹೆಗಡೆ ಹರಗಿ ಮಾತನಾಡಿ, ಜ.14ರಂದು ಹವ್ಯಕ ಮಹಾಸಭಾದಿಂದ ಶಿಷ್ಯವೇತನ ಪ್ರದಾನ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಮಹಾಸಭಾದ ಉಪಾಧ್ಯಕ್ಷ ಆರ್‌.ಎಂ.ಹೆಗಡೆ ಬಾಳೇಸರ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಗಳ ಪದಾಧಿಕಾರಿಗಳಾದ ಸತೀಶ ಹೆಗಡೆ ಆಲ್ಮನೆ, ಚಂದನ ಶಾಸ್ತ್ರಿ, ರಾಘವೇಂದ್ರ ಮುಸವಳ್ಳಿ, ಎಂ.ವಿ. ಹೆಗಡೆ ಮುತ್ತಿಗೆ, ಮಧು ಜಿ.ಕೆ. ಉಪಸ್ಥಿತರಿದ್ದರು.

Follow Us:
Download App:
  • android
  • ios