Uttara Kannada : ಕಲಿಯುಗದ ಗೋಸ್ವರ್ಗ ಬಾನ್ಕುಳಿಯಲ್ಲಿ ಆಲೇಮನೆಯ ಸವಿ!
ಗೋವುಗಳ ಸ್ವರ್ಗ(Heaven of cows) ಇರೋದು ಉತ್ತರ ಕನ್ನಡ(Uttara kannada) ಜಿಲ್ಲೆ ಸಿದ್ದಾಪುರ(Siddapur) ತಾಲೂಕಿನ ಬಾನ್ಕುಳಿ (Bankuli Village) ಎಂಬ ಹಳ್ಳಿಯಲ್ಲಿದೆ..ಇಲ್ಲಿ ದನಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ.. ಅಲ್ಲಿ-ಇಲ್ಲಿ ಹೋಗಬಾರದೆಂಬ ನಿರ್ಬಂಧವಿಲ್ಲ.. ಬೇಕಾದಾಗ ಮೇವು ತಿನ್ನಬಹುದು, ನೀರು ಕುಡಿಯಬಹುದು.. ಎಲ್ಲೆಂದರಲ್ಲಿ ಮಲಗಬಹುದು. ಹಾಗಂತ ಇಲ್ಲಿರುವುದು ಒಂದೆರಡು ಆಕಳಲ್ಲ.. ಬರೋಬ್ಬರಿ ಸಾವಿರ ಆಕಳುಗಳಿಗೆ ಸ್ವರ್ಗದ ಪ್ರತಿರೂಪವಾಗಿದೆ ಈ ಸ್ಥಳ!
- ಅಶ್ವತ್ಥ ಕೋಡಗದ್ದೆ
ಶ್ರೀಕೃಷ್ಣನ ಬಾಲ್ಯದಲ್ಲಿ ಮಥುರೆಯಲ್ಲಿ ಇದ್ದಾಗ ಗೋವುಗಳೇ ಆತನಿಗೆ ಸ್ನೇಹಿತರು. ಕೃಷ್ಣನೆಂದರೆ ಆ ಮೂಕ ಪ್ರಾಣಿಗಳಿಗೂ ಇನ್ನಿಲ್ಲದ ಪ್ರೀತಿ. ಕೊಳಲ ಗಾನಕ್ಕೆ ತಲೆದೂಗುತ್ತಿದ್ದವು. ಮೇವು ತಿನ್ನಲು ಹೋದ ಹಸುಗಳು ಆ ಧ್ವನಿ ಕೇಳಿಯೇ ಮನೆಗೆ ಹೊರಡುತ್ತಿದ್ದವು. ಇವೆಲ್ಲಕ್ಕಿಂತ ವಿಶೇಷ ಏನು ಗೊತ್ತಾ.. ಮಥುರೆಯಲ್ಲಿ ಗೋವುಗಳನ್ನು ಕಟ್ಟಿ ಹಾಕುತ್ತಿರಲಿಲ್ಲವಂತೆ.. ಅವು ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ತಿರುಗಾಡಿಕೊಂಡಿರುತ್ತಿದ್ದವು. ಗೋವುಗಳ ಪಾಲಿಗೆ ಮಥುರಾ ಸ್ವರ್ಗವೇ ಆಗಿತ್ತು.
ಕಲಿಯುಗದಲ್ಲೂ ಅಂತಹ ಒಂದು ಗೋಸ್ವರ್ಗವಿದೆ. ಇಲ್ಲಿಯೂ ದನಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ.. ಅಲ್ಲಿ-ಇಲ್ಲಿ ಹೋಗಬಾರದೆಂಬ ನಿರ್ಬಂಧವಿಲ್ಲ.. ಬೇಕಾದಾಗ ಮೇವು ತಿನ್ನಬಹುದು, ನೀರು ಕುಡಿಯಬಹುದು.. ಎಲ್ಲೆಂದರಲ್ಲಿ ಮಲಗಬಹುದು. ಹಾಗಂತ ಇಲ್ಲಿರುವುದು ಒಂದೆರಡು ಆಕಳಲ್ಲ.. ಬರೋಬ್ಬರಿ ಸಾವಿರ ಆಕಳುಗಳಿಗೆ ಸ್ವರ್ಗದ ಪ್ರತಿರೂಪವಾಗಿದೆ ಈ ಸ್ಥಳ..
ಹೊನ್ನಾವರ: ಗೋವುಗಳನ್ನ ಸ್ವಂತ ಮಕ್ಕಳಂತೆ ಸಾಕುತ್ತಿರುವ ಸುಬ್ರಾಯ ಶೆಟ್ಟಿ ಕುಟುಂಬ..!
ಈ ಗೋವುಗಳ ಸ್ವರ್ಗ(Heaven of cows) ಇರೋದು ಉತ್ತರ ಕನ್ನಡ(Uttara kannada) ಜಿಲ್ಲೆ ಸಿದ್ದಾಪುರ(Siddapur) ತಾಲೂಕಿನ ಬಾನ್ಕುಳಿ (Bankuli Village) ಎಂಬ ಹಳ್ಳಿಯಲ್ಲಿ. ರಾಮಚಂದ್ರಾಪುರ ಮಠ(Ramachandrapur mutt)ದ ರಾಘವೇಶ್ವರ ಭಾರತೀ ಸ್ವಾಮೀಜಿ(Raghaveshwar Bharati swamiji)ಯ ಕನಸಿನ ಗೋಸ್ವರ್ಗವಿದು. ಸಹಸ್ರ ಗೋವುಗಳ ಸ್ವಚ್ಛ ಸಾಮ್ರಾಜ್ಯ ಎಂಬುದೇ ಈ ಗೋಶಾಲೆಯ ಧ್ಯೇಯವಾಕ್ಯ. ಭಾರತೀಯ ಗೋ ತಳಿಗಳ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿರುವ ರಾಮಚಂದ್ರಾಪುರ ಮಠ ಕಳೆದ 5 ವರ್ಷದ ಹಿಂದೆ ಈ ಗೋಸ್ವರ್ಗವನ್ನು ಆರಂಭಿಸಿದೆ.
ಸೂರ್ಯ ಕಿರಣಗಳ ಅಡಿ ಗೋವುಗಳು ಸ್ವಚ್ಛಂದವಾಗಿ ಓಡಾಡುವಂತೆ ಮಾಡುವದು ಗೋಸ್ವರ್ಗ ನಿರ್ಮಾಣದ ಮೂಲ ಉದ್ದೇಶ. ಇದಕ್ಕಾಗಿ ಮೀಸಲಿಟ್ಟಿರುವುದು ಸಣ್ಣಪುಟ್ಟ ಜಾಗವಲ್ಲ. ಸುಮಾರು 70 ಸಾವಿರ ಚದರಡಿಗಳ ವಿಸ್ತಾರದಲ್ಲಿ ಗೋ ವಿಹಾರಧಾಮ ನಿರ್ಮಾಣವಾಗಿದೆ. 30 ಸಾವಿರ ಚದರ ಅಡಿಗಳ ವಿಸ್ತೀರ್ಣದ ಗೋಶಾಲೆ ಕಾರ್ಯನಿರ್ವಹಿಸುತ್ತಿದೆ. ಇಲ್ಲೆಲ್ಲೂ ಯಾವ ಗೋವುಗಳನ್ನೂ ಕಟ್ಟಿ ಹಾಕುವದಿಲ್ಲ. ಸದಾ ಕಾಲ ಎಲ್ಲೆಂದರಲ್ಲಿ ಸಂಚರಿಸುತ್ತ, ಮೇವು ತಿನ್ನುತ್ತಾ, ಮಲಗುತ್ತಾ ಸ್ವತಂತ್ರವಾಗಿ ಇರುವಂಥ ವ್ಯವಸ್ಥೆ ಕಲ್ಪಿಸಲಾಗಿದೆ.
ಇದೀಗ ಈ ಗೋಸ್ವರ್ಗ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗುತ್ತಿದೆ. ಗೋದಿನ ಮತ್ತು ಗೋವಿಗಾಗಿ ಆಲೇಮನೆ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ. ಜನವರಿ 12 ರಿಂದ 15ರ ವರೆಗೆ ಈ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದ್ದು ಗೋ ರಕ್ಷಣೆಯತ್ತ ಮತ್ತೊಂದು ಹೆಜ್ಜೆ ಇಡಲಾಗ್ತಿದೆ. ದೇಸೀ ಗೋಮೂತ್ರ ಮತ್ತು ಗೋಮಯದಿಂದಲೇ ಬೆಳೆದ ಸಾವಯವ ಕಬ್ಬಿನಿಂದ ಸಾಂಪ್ರದಾಯಿಕ ಆಲೇಮನೆ ನಡೆಯಲಿದೆ. ಕಬ್ಬಿನ ಹಾಲು, ಬೆಲ್ಲ ಪ್ರದರ್ಶನ ಮಾರಾಟ ನಡೆಯಲಿದೆ. ಇದರಿಂದ ಬಂದ ಲಾಭವನ್ನು ಗೋವು ನಿರ್ವಹಣೆಗೆ ಬಳಸಲು ನಿರ್ಧರಿಸಲಾಗಿದೆ.
ಕಾಸರಗೋಡು: ಸಂಗೀತಕ್ಕೆ ಹೆಜ್ಜೆ ಹಾಕುವ ಗೋವು, ವಿಡಿಯೋ ವೈರಲ್
ರಾಜ್ಯಮಟ್ಟದ ಗೋಪಾಲಕ ಪ್ರಶಸ್ತಿ ಪ್ರದಾನವೂ ನಡೆಯಲಿದೆ. ಗಂಗಾರತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಬಿ ವೈ ರಾಘವೇಂದ್ರ ಸೇರಿ ಗಣ್ಯರು ಭಾಗವಹಿಸಲಿದ್ದಾರೆ. ಕೊರೊನಾ ಕಾರಣದಿಂದ ಕಳೆದೆರಡು ವರ್ಷ ಸಾಂಕೇತಿಕವಾಗಿ ನಡೆದಿದ್ದ ಆಲೇಮನೆ ಉತ್ಸವ ಈ ವರ್ಷ ವಿಜೃಂಭಣೆಯಿಂದ ನಡೆಯಲಿದೆ. ನೀವೂ ಈ ಆಲೇಮನೆ ಉತ್ಸವದಲ್ಲಿ ಭಾಗವಹಿಸಿ ಕಬ್ಬಿನ ಉತ್ಪನ್ನಗಳ ಸವಿ ಸವಿಯಬಹುದು.