Asianet Suvarna News Asianet Suvarna News

Astrology Tips: ಮಂಗಳವಾರ ಜನಿಸಿದವರು ಅಪ್ಪಿತಪ್ಪಿಯೂ ಈ ಬಣ್ಣ ಬಳಸ್ಬೇಡಿ

ಜೀವನದಲ್ಲಿ ಸುಖ, ಸಮೃದ್ಧಿ ನೆಲೆ ನಿಲ್ಲಬೇಕೆಂದು ಎಲ್ಲರೂ ಬಯಸ್ತಾರೆ. ಇದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸ್ತಾರೆ. ಆದ್ರೆ ವಾರ, ಬಣ್ಣಗಳನ್ನು ಮರೆಯುತ್ತಾರೆ. ನಾವು ಜನಿಸಿದ ವಾರ ಹಾಗೂ ಅದಕ್ಕೆ ಸಂಬಂಧಿಸಿದ ಬಣ್ಣ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. 
 

Colors For Tuesday Born People
Author
First Published Dec 3, 2022, 5:25 PM IST

ಮನುಷ್ಯನ ಜೀವನದ ಮೇಲೆ ವಾರ, ಗ್ರಹ ಹಾಗೂ ಬಣ್ಣ ಎಲ್ಲವೂ ಪರಿಣಾಮ ಬೀರುತ್ತವೆ. ನಾವು ಹುಟ್ಟಿದ ವಾರಕ್ಕೂ ಬಣ್ಣಕ್ಕೂ ಸಂಬಂಧವಿದೆ. ಒಂದೊಂದು ವಾರ ಒಂದೊಂದು ಗ್ರಹಕ್ಕೆ ಸೀಮಿತವಾಗಿದೆ. ಹಾಗೆಯೇ ಗ್ರಹಗಳು ಬಣ್ಣಗಳ ಜೊತೆ ನಂಟು ಹೊಂದಿವೆ. ನಾವು ಹುಟ್ಟಿದ ದಿನಕ್ಕೆ ತಕ್ಕಂತೆ ಬಣ್ಣಗಳನ್ನು ಬಳಸಬೇಕು. ಕೆಲ ಬಣ್ಣಗಳನ್ನು ಬಳಸುವುದ್ರಿಂದ ಸಮಸ್ಯೆ ಎದುರಾಗುತ್ತದೆ. 

ಮಂಗಳವಾರ (Tuesday) ಜನಿಸಿದವರು ಮಂಗಳ ಗ್ರಹದ ಜೊತೆ ಸಂಬಂಧ ಹೊಂದಿರುತ್ತಾರೆ. ಮಂಗಳ ಗ್ರಹ ಕೆಂಪು (Red) ಗುಣವನ್ನು ಹೊಂದಿದೆ. ಅಂದ್ರೆ ಸ್ವಭಾವತಃ ಕೋಪ (Anger) ವನ್ನು ಇವರು ಹೊಂದಿರುತ್ತಾರೆ. ಮಂಗಳವಾರ ಜನಿಸಿದವರು ಸ್ವಲ್ಪ ಕಟ್ಟುನಿಟ್ಟಾಗಿರುತ್ತಾರೆ. ಕೆಲಸದಲ್ಲಿ ಪ್ರಾಮಾಣಿಕರಾಗಿರುವ ಅವರು ತಮ್ಮ ಸ್ವಭಾವ ಮತ್ತು ವ್ಯಕ್ತಿತ್ವದಿಂದ ಬೇರೆಯವರನ್ನು ಆಕರ್ಷಿಸುತ್ತಾರೆ. ಮಂಗಳವಾರ ಜನಿಸಿದವರ ಬಣ್ಣದ ಬಳಕೆ ವಿಷ್ಯ ಬಂದಾಗ ಕೆಲವು ಬಣ್ಣಗಳನ್ನು ಇವರು ಬಳಸಿದ್ರೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಣಬಹುದು. ಹಾಗೆಯೇ ಇವರು ಕೆಲವು ಬಣ್ಣಗಳನ್ನು ಬಳಸಬಾರದು. ನಾವಿಂದು ಮಂಗಳವಾರ ಹುಟ್ಟಿದವರು ಯಾವ ಬಣ್ಣವನ್ನು ಬಳಸಬೇಕು, ಯಾವುದು ಬೇಡ ಎಂಬುದರ ಬಗ್ಗೆ ವಿವರವಾಗಿ ಹೇಳ್ತೆವೆ.  

ಮಂಗಳವಾರ ಜನಿಸಿದವರು ಬಳಸಿ ಕೆಂಪು ಬಣ್ಣ: ಕೆಂಪು ಮಂಗಳ ಗ್ರಹದ ಬಣ್ಣ. ಹಾಗಾಗಿ ಇದನ್ನು ಬಳಸುವುದ್ರಿಂದ ನಿಮಗೆ ಮಂಗಳಕರ ಫಲಿತಾಂಶ ಸಿಗುತ್ತದೆ. ನಿಮ್ಮ ಜೀವನದಲ್ಲಿ ನೀವು ಹೆಚ್ಚೆಚ್ಚು ಕೆಂಪು ಬಣ್ಣವನ್ನು ಬಳಸಬೇಕು. ನೀವು ಯಾವ ಸಂದರ್ಭದಲ್ಲಿ ಕೆಂಪು ಬಣ್ಣ ಬಳಸಿದ್ರೂ ಅದು ನಿಮಗೆ ಶುಭವಾಗಲಿದೆ. ಮದುವೆ ಅಥವಾ ಯಾವುದೇ ವಿಶೇಷ ಸಂದರ್ಭದಲ್ಲಿ ಕೆಂಪು ಬಣ್ಣವನ್ನು ಅಗತ್ಯವಾಗಿ ಬಳಸಿ. ಯಶಸ್ಸು ಬಯಸುವವರು ನೀವಾಗಿದ್ದರೆ ಕೆಂಪು ಬಣ್ಣ ಬಳಸಲು ಮರೆಯದಿರಿ.

ಅತ್ಯಂತ ಮಂಗಳಕರ ಗುಲಾಬಿ (Rose): ಕೆಂಪು ಬಣ್ಣವನ್ನು ಹೋಲುವ ಗುಲಾಬಿ ಬಣ್ಣವನ್ನು ಕೂಡ ಮಂಗಳವಾರ ಜನಿಸಿದ ಜನರು ಬಳಕೆ ಮಾಡಬಹುದು. ಗುಲಾಬಿ ಬಣ್ಣದ ಬಟ್ಟೆ ನಿಮ್ಮ ಜೀವನದಲ್ಲಿ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗ (Employment) ಸಂದರ್ಶನದಲ್ಲಿ ಗುಲಾಬಿ ಬಣ್ಣ ಬಳಸಿದ್ರೆ ಒಳ್ಳೆಯದು. ಜೀವನದಲ್ಲಿ ಜಯ ಸಾಧಿಸಲು ಮಂಗಳವಾರ ಜನಿಸಿದವರು ಗುಲಾಬಿ ಬಣ್ಣದ ಬಟ್ಟೆ, ವಸ್ತುವನ್ನು ಹೆಚ್ಚಾಗಿ ಬಳಕೆ ಮಾಡಬೇಕು.

Zodiac Sign: ಸೆಲ್ಫ್‌ ಕೇರ್‌ ಎನ್ನುವುದು ಈ ರಾಶಿಗಳ ಜನಕ್ಕೆ ರಕ್ತದಲ್ಲೇ ಬಂದಿರುತ್ತೆ

ಸಕಾರಾತ್ಮಕ (Positive) ಪರಿಣಾಮಕ್ಕೆ ಬಳಸಿ ಕಿತ್ತಳೆ : ಕಿತ್ತಳೆ ಬಣ್ಣವನ್ನು ಮಂಗಳನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಇರಬೇಕು ಎಂದಾದ್ರೆ ನೀವು ಕೂಡ ಕಿತ್ತಳೆ ಬಣ್ಣವನ್ನು ಬಳಸಬಹುದು. ಸದಾ ಶಾಂತಿ ಬಯಸುವವರು, ಬಟ್ಟೆ, ಸೋಫಾ ಸೇರಿದಂತೆ ಮನೆಯ ಪೀಠೋಪಕರಣ ಆದಷ್ಟು ಕಿತ್ತಳೆ ಬಣ್ಣದಲ್ಲಿರುವಂತೆ ನೋಡಿಕೊಳ್ಳಿ. ಕಿತ್ತಳೆ ಬಣ್ಣವು ಜ್ಯೋತಿಷ್ಯದ ಪ್ರಕಾರ, ಯಶಸ್ಸಿನ ಸಂಕೇತವಾಗಿದೆ. ಹಾಗಾಗಿ ನೀವು ಆರಾಮವಾಗಿ ಕಿತ್ತಳೆ ಬಣ್ಣವನ್ನು ಬಳಸಿ.

ಮಂಗಳವಾರ ಜನಿಸಿದವರು ಈ ಬಣ್ಣ ಬಳಸಬೇಡಿ : 

ಕಪ್ಪು ಬಣ್ಣ ಒಳ್ಳೆಯದಲ್ಲ : ಕಪ್ಪು ಬಣ್ಣವನ್ನು ಮಂಗಳಕ್ಕೆ ವಿರುದ್ಧವಾದ ಬಣ್ಣವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಮಂಗಳ ಗ್ರಹದಲ್ಲಿ ಜನಿಸಿದವರು ಕಪ್ಪು ಬಣ್ಣವನ್ನು ಧರಿಸಬಾರದು. ಕಪ್ಪು ಬಣ್ಣವು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಉದ್ಯೋಗ ಪಡೆಯಲು ಸಂದರ್ಶನಕ್ಕೆ ಹೊರಟಿದ್ದರೆ ಅಥವಾ ನ್ಯಾಯಾಲಯದ ಪ್ರಕರಣಕ್ಕೆ ಹಾಜರಾಗುತ್ತಿದ್ದರೆ ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ. ಕಪ್ಪು ಬಣ್ಣದ ವಸ್ತುಗಳನ್ನು ಕೂಡ ಬಳಸಬೇಡಿ.

ಬೆಳಗ್ಗೆ ಮಹಿಳೆಯರು ಈ ಕೆಲಸ ಮಾಡಿದ್ರೆ ಕೋಪಗೊಳ್ತಾಳೆ ಲಕ್ಷ್ಮಿ

ನೀಲಿ ಬಣ್ಣದಿಂದ ದೂರವಿರಿ : ಮಂಗಳವಾರ ಜನಿಸಿದವರು ಗಾಢ ನೀಲಿ ಬಣ್ಣವನ್ನು ಬಳಸಬಾರದು. ಇದು ಜೀವನದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ದೊಡ್ಡ ಮಟ್ಟದಲ್ಲಿ ನೀಲಿ ಬಣ್ಣ ಯಾವುದೇ ನಕಾರಾತ್ಮಕ ಪ್ರಭಾವ ಬೀರದೆ ಹೋದ್ರೂ ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. 

Follow Us:
Download App:
  • android
  • ios