Asianet Suvarna News Asianet Suvarna News

Zodiac Sign: ಸೆಲ್ಫ್‌ ಕೇರ್‌ ಎನ್ನುವುದು ಈ ರಾಶಿಗಳ ಜನಕ್ಕೆ ರಕ್ತದಲ್ಲೇ ಬಂದಿರುತ್ತೆ

ಸೆಲ್ಫ್‌ ಕೇರ್‌ ಎನ್ನುವುದು ದೇಹ ಮತ್ತು ಮನಸ್ಸು ರಿಲ್ಯಾಕ್ಸ್‌ ಆಗಲು ಪ್ರಮುಖ ಮಾರ್ಗ. ಅದು ಸ್ಕಿನ್‌ ಕೇರ್‌ ಆಗಿರಬಹುದು ಅಥವಾ ಧ್ಯಾನವೇ ಆಗಿರಬಹುದು. ಅದನ್ನು ನಿಯಮಿತವಾಗಿ ಬದ್ಧತೆಯಿಂದ ಎಲ್ಲರೂ ಮಾಡುವುದಿಲ್ಲ. ಆದರೆ, ಕೆಲವು ರಾಶಿಗಳ ಜನ ಮಾತ್ರ ಇಂತಹ ಕಾಳಜಿ ತೆಗೆದುಕೊಳ್ಳಲು ಮರೆಯುವುದಿಲ್ಲ. 
 

These people takes self care for their mind and body
Author
First Published Dec 2, 2022, 5:31 PM IST

ಕೆಲಸದ ಒತ್ತಡ, ಜವಾಬ್ದಾರಿಗಳ ಭಾರ, ನಿರಂತರ ಶ್ರಮಗಳಿಂದಾಗಿ ಕೆಲವೊಮ್ಮೆ ತಲೆಚಿಟ್ಟು ಹಿಡಿದುಹೋಗುತ್ತದೆ. ಅಂತಹ ಸಮಯದಲ್ಲಿ ರಿಲ್ಯಾಕ್ಸ್‌ ಆಗಲು ಏನಾದರೊಂದು ಮಾರ್ಗ ಬೇಕಾಗುತ್ತದೆ. ಬಹಳಷ್ಟು ಜನ ಇದೇ ಕಾರಣಕ್ಕೆ ಕುಡಿತದ ಮೊರೆ ಹೋಗುವುದು ಕಂಡುಬರುತ್ತದೆ. ಆದರೆ, ಇದು ಆರೋಗ್ಯಕರ ಮಾರ್ಗವಲ್ಲ. ಹೀಗಾದಾಗ, ನಮ್ಮ ಬಗ್ಗೆ ನಾವು ಕಾಳಜಿ ವಹಿಸದೇ ಹೋದರೆ ಇನ್ಯಾರು ತೆಗೆದುಕೊಳ್ಳುತ್ತಾರೆ? ಇಂಥ ಸಮಯದಲ್ಲಿ ಮನಸ್ಸು ಮತ್ತು ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಬಹಳಷ್ಟು ಜನ ಇದರ ಬಗ್ಗೆ ಅರಿವಿಲ್ಲದೆ ತಾಳ್ಮೆ ಕಳೆದುಕೊಳ್ಳುತ್ತಾರೆ. ತಮ್ಮ ಬಗ್ಗೆ ಕಾಳಜಿ ವಹಿಸದೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದರೆ, ಸಾಕಷ್ಟು ಜನರಿಗೆ ಇಂದು ಈ ಬಗ್ಗೆ ಅರಿವಿದೆ. ಹೀಗಾಗಿ, ತಮ್ಮ ಮನಸ್ಸು ಮತ್ತು ದೇಹ  ಸಮಾಧಾನದಿಂದ ಇರಲು, ಒತ್ತಡದಿಂದ ಮುಕ್ತವಾಗಲು ಕಾಳಜಿ ವಹಿಸುತ್ತಾರೆ. ಸೆಲ್ಫ್‌ ಕೇರ್‌ ಎನ್ನುವುದನ್ನು ಇವರನ್ನು ನೋಡಿ ಅರಿತುಕೊಳ್ಳಬೇಕು, ಅಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಕೆಲವು ಜನ  ವ್ಯಾಯಾಮವನ್ನೋ ಧ್ಯಾನವನ್ನೋ ಮಾಡಲು ಆರಂಭಿಸಿದರೆ, ಅದನ್ನು ನಾಲ್ಕು ದಿನವೂ ಸರಿಯಾಗಿ ಮಾಡುವುದಿಲ್ಲ. ಬದ್ಧತೆಯಿಂದ ಅವುಗಳನ್ನು ಮುಂದುವರಿಸಿಕೊಂಡು ಹೋಗುವುದು ಅವರಿಂದ ಸಾಧ್ಯವಾಗುವುದಿಲ್ಲ. ಆದರೆ, ಕೆಲವು ರಾಶಿಗಳ ಜನ ಹಾಗಲ್ಲ. ಸೆಲ್ಫ್‌ ಕೇರ್‌ ಎನ್ನುವುದು ಅವರ ರಕ್ತದಲ್ಲೇ ಬಂದಿರುತ್ತದೆ. ತಮ್ಮ ರಿಲ್ಯಾಕ್ಸೇಷನ್‌ ಗಾಗಿ ವಿಶಿಷ್ಟ ವಿಧಾನ ಅನುಸರಿಸುತ್ತಾರೆ. ಎಷ್ಟೇ ಒತ್ತಡದ ಜೀವನದಲ್ಲೂ ಸೆಲ್ಫ್‌ ಕೇರ್‌ ಮೂಲಕ ಮನಸ್ಸು ಮತ್ತು ದೇಹವನ್ನು ಫ್ರೆಶ್‌ ಮಾಡಿಕೊಳ್ಳುತ್ತಾರೆ. 

•    ಕುಂಭ (Aquarius)
ಕುಂಭ ರಾಶಿಯ (Zodiac Sign) ಜನ ಜನಜಂಗುಳಿಯಲ್ಲಿ ಹೆಚ್ಚಾಗಿ ಇರಲು ಇಷ್ಟಪಡುವುದಿಲ್ಲ. ಆದರೆ, ತಾವು ಇಷ್ಟಪಡುವ ಕೆಲವೇ ಜನರೊಂದಿಗೆ ಎಂಜಾಯ್‌ (Enjoy) ಮಾಡಲು ಬಯಸುತ್ತಾರೆ. ತಮಗಾಗಿ ಕಾಳಜಿ ವಹಿಸುತ್ತಾರೆ. ಸೀಮಿತ ವಲಯದ ಜನರೊಂದಿಗೆ ಹೊರಗೆ ಹೋಗಲು ಇಷ್ಟಪಡುತ್ತಾರೆ. ಇದು ಅವರಿಗೆ ಭಾರೀ ರಿಲ್ಯಾಕ್ಸ್‌ (Relax) ನೀಡುತ್ತದೆ. ದೈನಂದಿನ ಜೀವನದಲ್ಲೂ ಬದ್ಧತೆಯಿಂದ (Commit) ಕೆಲವು ಚಟುವಟಿಕೆ ನಡೆಸುತ್ತಾರೆ. ಆಪ್ತ ಸ್ನೇಹಿತರೊಂದಿಗೆ ಇದ್ದಾಗ ತಮ್ಮ ಚಿಂತೆ (Worry) ಮರೆಯುತ್ತಾರೆ. 

Shukra Gochar 2022: ಮೇಷದಿಂದ ಕುಂಭದವರೆಗೆ 4 ರಾಶಿಗೆ 'ಶುಕ್ರ ದೆಸೆ'

•    ಮೀನ (Pisces)
ಭಾವನಾತ್ಮಕ (Emotional) ಪ್ರಧಾನವಾದ ಮನಸ್ಸನ್ನು ಹೊಂದಿರುವ ಮೀನ ರಾಶಿಯವರು ತಮ್ಮ ಖುಷಿಯಾಗಿ (Happiness), ರಿಲ್ಯಾಕ್ಸ್‌ ಗಾಗಿ ಕಂಡುಕೊಳ್ಳುವ ವಿಧಾನ ಶಾಪಿಂಗ್ (Shopping). ಅಂಗಡಿ ಸಾಲುಗಳಿಗೆ ಭೇಟಿ ನೀಡಿ ಬೇಕಾದುದನ್ನು, ಬೇಡವಾದುದನ್ನೆಲ್ಲ ತರುವುದು ಇವರಿಗೆ ಇಷ್ಟ. ಯಾವಾಗ ಒತ್ತಡವುಂಟಾದರೂ (Stress) ಅದನ್ನು ಮೆಟ್ಟಿ ನಿಲ್ಲಲು ಹಲವು ವಿಧಗಳ ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ಕೆಲವು ಕೆಲಸದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ಗಮನ ನೀಡುತ್ತ ತಮ್ಮನ್ನು ಮರೆಯುತ್ತಾರೆ. 

December Planet Transit 2022: ಡಿಸೆಂಬರ್‌ನಲ್ಲಿ 3 ಗ್ರಹಗಳ ರಾಶಿ ಬದಲಾವಣೆ

•    ವೃಷಭ (Taurus)
ಜೀವನ ಸ್ಥಗಿತವಾಗಿದೆ, ಗೊಂದಲದಿಂದ ಕೂಡಿದೆ ಎನಿಸಿದಾಗ ವೃಷಭ ರಾಶಿಯ ಜನ ಅದರಿಂದ ಹೊರಬರಲು ಯತ್ನಿಸುತ್ತಾರೆ. ಅತೀವ ಕಾರ್ಯಭಾರಗಳ (Hectic) ಒತ್ತಡವನ್ನು ಇವರು ಸಹಿಸುವುದಿಲ್ಲ. ಆ ಸಮಯದಲ್ಲಿ ತಮ್ಮ ಬಗ್ಗೆ ಕಾಳಜಿ (Care) ತೆಗೆದುಕೊಳ್ಳುವುದು ಅಗತ್ಯ ಎಂದು ಭಾವಿಸುತ್ತಾರೆ. ಇಷ್ಟವಾದ ತಿನಿಸುಗಳೊಂದಿಗೆ ಸಂಗೀತ (Music) ಕೇಳುವುದು, ಮಾಧುರ್ಯಭರಿತವಾದ ಹಾಡುಗಳು ಹಾಗೂ ರಾತ್ರಿ ಸಿನಿಮಾ (Film) ವೀಕ್ಷಣೆ ಮಾಡುವ ಮೂಲಕ ತಮ್ಮ ಒತ್ತಡ ಮರೆಯುತ್ತಾರೆ. 

•    ಮಿಥುನ (Gemini)
ಮಿಥುನ ರಾಶಿಯವರು ಆಗಿಂದಾಗ್ಗೆ ತಮ್ಮ ಒತ್ತಡದಿಂದ ಮುಕ್ತರಾಗಲು ಬಯಸುತ್ತಾರೆ. ಇದಕ್ಕಾಗಿ ಅವರು ಮಾಡುವ ಕ್ರಿಯೆ ಎಂದರೆ ವ್ಯಾಯಾಮ (Exercise) ಅಥವಾ ನೃತ್ಯದಂತಹ (Dance) ದೈಹಿಕ ಚಟುವಟಿಕೆ. ಸಾಕಷ್ಟು ಬೆವರು (Sweat) ಹರಿಸಿದರೆ ಇವರು ಖುಷಿಯಾಗಿರುತ್ತಾರೆ. ನೃತ್ಯ ಅಥವಾ ದೈಹಿಕ ಚಟುವಟಿಕೆಯ ಬಳಿಕ ಬೆವರು ಬಂದಾಗ ಇವರ ಮನಸ್ಸು ಶಾಂತ (Cool)ವಾಗುತ್ತದೆ. ಆಗ ಸಾಮಾನ್ಯ ಮನಸ್ಥಿತಿಗೆ ಮರಳುತ್ತಾರೆ. 

Follow Us:
Download App:
  • android
  • ios