Asianet Suvarna News Asianet Suvarna News

Marriage Horoscope 2022: ಈ ರಾಶಿಗಳಿಗೆ ಕೂಡಿ ಬರಲಿದೆ ಕಂಕಣ

ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಬದುಕಿನ ಘಟನೆಗಳ ಹಿಂದೆಯೂ ಗ್ರಹಗಳು ಕೆಲಸ ಮಾಡುತ್ತಿರುತ್ತವೆ. ಈ ಗ್ರಹಗಳ ಸ್ಥಾನ ಎಲ್ಲಿರುತ್ತದೆ ಎಂಬುದರ ಆಧಾರದ ಮೇಲೆ ಆ ವ್ಯಕ್ತಿಯ ಅದೃಷ್ಟ, ದುರದೃಷ್ಟ ನಿಂತಿರುತ್ತದೆ. ಅದರಲ್ಲೂ ವಿವಾಹದ ವಿಷಯಕ್ಕೆ ಬಂದರೆ ಮುಖ್ಯ ಪಾತ್ರ ವಹಿಸುವುದು ಗುರು ಹಾಗೂ ಶನಿ. ಇವೆರಡರ ಕೃಪಾಕಟಾಕ್ಷ ಹೊಸ ವರ್ಷದಲ್ಲಿ ಯಾವ ರಾಶಿಗಳಿಗಿರಲಿದೆ ಗೊತ್ತಾ?

These zodiac signs are destined to get married in 2022 skr
Author
Bangalore, First Published Dec 10, 2021, 3:52 PM IST
  • Facebook
  • Twitter
  • Whatsapp

ಮದುವೆ ಎಂದರೆ ತಮ್ಮೆಲ್ಲ ಸಂತೋಷ, ದುಃಖ, ಬದುಕನ್ನು ಹಂಚಿಕೊಂಡು ಒಟ್ಟಾಗಿ ಕಳೆಯಲು ಯೋಚಿಸಿ ಒಂದಾಗುವ ಜೋಡಿ. ಇದು ಎಲ್ಲರ ಬದುಕಿನ ಎರಡನೇ ಅಧ್ಯಾಯ. ಬಹಳಷ್ಟು ವಿವಾಹಪ್ರಾಯದ ಅವಿವಾಹಿತರು ತಮ್ಮ ಮದುವೆ ಎಂದಾಗುವುದೋ ಎಂದು ಎದುರು ನೋಡುತ್ತಿರುತ್ತಾರೆ. ಅವರಲ್ಲಿ ಕೆಲ ರಾಶಿಯವರಿಗೆ ಇದೋ ಇಲ್ಲಿದೆ ಶುಭ ಸುದ್ದಿ. 
ಹೌದು, 2022ರಲ್ಲಿ ಕಂಕಣಬಲ ಪಡೆಯಲಿರುವ ರಾಶಿಗಳ ಬಗ್ಗೆಯೇ ಇಲ್ಲಿ ಹೇಳ ಹೊರಟಿರುವುದು. 

ಕಟಕ(Cancer)
ಕಟಕ ರಾಶಿಯವರಿಗೆ 2022 ಬಹಳ ವಿಶೇಷ ವರ್ಷವಾಗಲಿದೆ. ನಿಮ್ಮ ಬಾಳ ಸಂಗಾತಿ ಈ ವರ್ಷದಲ್ಲಿ ನಿಮಗೆ ದೊರಕುವರು. ಶನಿಯು ನಿಮ್ಮ ವಿವಾಹದ ಮನೆಯಿಂದ ಮುಂದೆ ಹೋಗುವ ಮುನ್ನ ಅಂದರೆ ಏಪ್ರಿಲ್‌ನೊಳಗೆ ವಿವಾಹ ಫಲ ನೀಡಲಿದ್ದಾನೆ. ನಂತರ ಜುಲೈನಲ್ಲಿ ಮತ್ತೆ ನಿಮ್ಮ ಜಾತಕದ ವಿವಾಹ ಮನೆಗೆ ಶನಿ(Saturn) ಬರುವುದರಿಂದ ಮದುವೆ ಸಂಬಂಧ ಇದ್ದಿರಬಹುದಾದ ಎಲ್ಲ ಅಡೆತಡೆಗಳನ್ನು ನೀಗುತ್ತಾನೆ. ನೀವು ಜವಾಬ್ದಾರಿಯುತವಾದ, ನಿಮಗೆಂದೇ ಹುಟ್ಟಿದವರನ್ನೇ ವರಿಸಲಿರುವಿರಿ. ಒನ್ ಸೈಡ್ ಪ್ರೀತಿಯಲ್ಲಿರುವವರಿಗೆ ಕೂಡಾ ತಾವು ಪ್ರೇಮಿಸುವವರೇ ಬಾಳಿಗೆ ಬರುವ ಸಂಭವಗಳಿವೆ. ಪ್ರೀತಿಯಲ್ಲಿರುವ ಕಟಕ ರಾಶಿಯವರಿಗೆ ಕೂಡಾ ಪ್ರೇಮಿಯನ್ನೇ ಮದುವೆಯಾಗುವ ಅದೃಷ್ಟವಿದೆ.

ಸಿಂಹ(Leo)
ಬಹಳ ಕಾಲದಿಂದ ವಿವಾಹವಾಗಲು ತುದಿಗಾಲಲ್ಲಿ ನಿಂತಿರುವ ಸಿಂಹ ರಾಶಿಯ ಅವಿವಾಹಿತರಿಗೆ ತಮ್ಮ ಜೀವನಸಂಗಾತಿ ಬರುವ ವರ್ಷದಲ್ಲಿ ಸಿಗಲಿದ್ದಾರೆ. ವರ್ಷದ ಆರಂಭದಲ್ಲೇ ಕನಸಿನ ಸಂಗಾತಿ ದೊರಕಲಿದ್ದು, ಏಪ್ರಿಲ್‌(April)ನಲ್ಲಿ ವಿವಾಹ ನೇರವೇರುವುದು. ಏಪ್ರಿಲ್‌ನಿಂದ ಜುಲೈವರೆಗೆ ಶನಿ ನಿಮ್ಮ ವಿವಾಹ ಮನೆಯಲ್ಲೇ ಕುಳಿತು ಮದುವೆ ಮಾಡಿಸುತ್ತಾನೆ. ಪ್ರೇಮಿಗಳಿಗೆ ಕೂಡಾ ಈ ವರ್ಷ ವಿವಾಹ ಭಾಗ್ಯವಿದೆ. 2022 ನಿಮ್ಮ ಪಾಲಿಗೆ ಎಲ್ಲ ತರದಲ್ಲೂ ಅದೃಷ್ಟದ ವರ್ಷವಾಗಲಿದೆ. 

Astrological remedies: ತಡ ವಿವಾಹಕ್ಕೆ ಕೆಲ ಪರಿಹಾರಗಳು

ಕನ್ಯಾ(Virgo)
ಬರುವ ವರ್ಷ ಕನ್ಯಾ ರಾಶಿಯ ಕನ್ಯಾಮಣಿಗಳಿಗೆ ವರ ಸಿಕ್ಕರೆ, ಹುಡುಗರಿಗೆ ಕನ್ಯೆ ಸಿಗುವಳು. ಏಪ್ರಿಲ್ ಮಧ್ಯಭಾಗದಲ್ಲಿ ನಿಮ್ಮ ವಿವಾಹ ಕೆಲಸಗಳು ಆರಂಭವಾಗಲಿವೆ. ನಿಮ್ಮ ವಿವಾಹಕ್ಕಿದ್ದ ಅಡೆತಡೆಗಳೆಲ್ಲ ಈ ಸಮಯದಲ್ಲಿ ನೀಗಲಿವೆ. ನೀವೀಗಾಗಲೇ ಜಾತಕ ಹೊರಡಿಸಿದ್ದರೆ ಮುಂದಿನ ವರ್ಷದ ಮೊದಲಾರ್ಧದಲ್ಲೇ ಸಂಗಾತಿ ಸಿಕ್ಕು ವಿವಾಹವಾಗುವುದು. ಜಗಳವಾಡುತ್ತಿರುವ ಪ್ರೇಮಿಗಳು ಕೂಡ ಈ ಸಂದರ್ಭದಲ್ಲಿ ತಮ್ಮ ವೈಮನಸ್ಸು ಸರಿ ಮಾಡಿಕೊಳ್ಳಲು ಯತ್ನಿಸುವರು. ಇದರಿಂದ ವರ್ಷದ ಮಧ್ಯ ಭಾಗದಲ್ಲಿ ಕನ್ಯಾ ರಾಶಿಯ ಪ್ರೇಮಿಗಳಿಗೆ ವಿವಾಹವಾಗಲಿದೆ. ಗುರುವಿನ ಬಲದಿಂದ ಹೊಸ ವರ್ಷವು ಕನ್ಯಾ ರಾಶಿಗೆ ಎಲ್ಲ ಸಂಬಂಧಗಳು ಹಾಗೂ ವಿವಾಹದಲ್ಲಿ ಒಳಿತೇ ಆಗಲಿದೆ. 

Effect of Rahu in 2022: ಮೇಷ, ವೃಷಭ ಸೇರಿ 6 ರಾಶಿಗೆ ರಾಹು ಕಾಟ

ವೃಶ್ಚಿಕ(Scorpio)
ಪ್ರೀತಿ ಹಾಗೂ ಮದುವೆಯ ವಿಷಯದಲ್ಲಿ ವೃಶ್ಚಿಕ ರಾಶಿಯವರಿಗೆ 2022 ಸಂಪೂರ್ಣ ಬೆಂಬಲ ನೀಡಲಿದೆ. ವರ್ಷಾರಂಭದಲ್ಲಿ ನಿಮ್ಮ ಕನಸಿನ ಸಂಗಾತಿಯನ್ನು ಹುಡುಕಲು ಕೊಂಚ ಕಷ್ಟ ಪಡಬೇಕಾದೀತು. ಆದರೆ, ಜುಲೈ ತಿಂಗಳ ನಂತರ ಶನಿ ಹಾಗೂ ಗುರು(Jupiter) ಇಬ್ಬರೂ ನಿಮ್ಮ ರಾಶಿಗೆ ಸಂಪೂರ್ಣ ಆಶೀರ್ವಾದ ನೀಡಲಿದ್ದಾರೆ. ಇದರಿಂದ ಜೀವನಪರ್ಯಂತ ಉಳಿಯುವ, ಗಟ್ಟಿಯಾದ ಸಂಬಂಧವೊಂದು ಕೂಡಿ ಬರಲಿದೆ. ವರ್ಷದ ಮೊದಲಾರ್ಧದಲ್ಲೇ ನಿಮಗೆ ಜೋಡಿಯು ಸಿಕ್ಕಿ, ಮೊದಲ ಭೇಟಿಯಲ್ಲೇ ಪ್ರೀತಿಗೆ ಬೀಳುವ ಸಂಭವಗಳು ಹೆಚ್ಚಿವೆ. ಆದರೆ, ವಿವಾಹ ಮಾತ್ರ ಜುಲೈ ನಂತರದಲ್ಲಿ ನೆರವೇರುತ್ತದೆ. ಪ್ರೀತಿಯಲ್ಲಿರುವವರು ಈ ಸಂದರ್ಭದಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರೆ ಯಶಸ್ಸು ಸಿಗುವ ಸಂಭವಗಳು ಹೆಚ್ಚು. 

ಮೀನ(Pisces)
ಏಪ್ರಿಲ್ ನಂತರದಲ್ಲಿ ಗುರುವು ಸುಸ್ಥಾನಕ್ಕೆ ಬರುವುದರಿಂದ ಆ ನಂತರ ಮೀನ ರಾಶಿಯವರ ಗುರು ಬಲ ಹೆಚ್ಚಲಿದೆ. ಇದರಿಂದ ಏಪ್ರಿಲ್ ನಂತರದಲ್ಲಿ ವಿವಾಹ ಭಾಗ್ಯ ದೊರಕುತ್ತದೆ. ಈ ಹಿಂದೆ ಕೈ ತಪ್ಪಿದ್ದ ಒಳ್ಳೆಯ ಸಂಬಂಧಗಳು ಕೂಡಾ ಮತ್ತೆ ಹುಡುಕಿಕೊಂಡು ಬರಬಹುದು. ನಿಮ್ಮ ಸಂಬಂಧ ಹಾಗೂ ಪರಿಚಿತರಿಂದಲೇ ಸಂಗಾತಿ ದೊರಕುವ ಅವಕಾಶಗಳು ಹೆಚ್ಚಿವೆ. ಹೀಗಾಗಿ, ನಿಮ್ಮ ಸಂಗಾತಿಯಾಗುವವರನ್ನು ನೀವೀಗಾಗಲೇ ಭೇಟಿಯಾಗಿರುವ ಸಾಧ್ಯತೆಗಳು ನಿಚ್ಚಳವಾಗಿವೆ. ಪ್ರೇಮ ಸಂಬಂಧಗಳು ಮದುವೆಯಲ್ಲಿ ಸುಖಾಂತ್ಯವಾಗುತ್ತವೆ. 
 

Follow Us:
Download App:
  • android
  • ios