Asianet Suvarna News Asianet Suvarna News

February Calendar: ಮಾಘ ನವರಾತ್ರಿಯಿಂದ ವಸಂತ ಪಂಚಮಿವರೆಗೆ.. ಫೆಬ್ರವರಿ ವಿಶೇಷ ದಿನಗಳು

ಫೆಬ್ರವರಿ ಎಂದರೆ ಮಾಘ ಹಾಗೂ ಫಾಲ್ಗುಣ ಮಾಸಗಳೆರಡೂ ಸೇರಲಿವೆ. ಈ ಮಾಸಗಳಲ್ಲಿ ಬರುವ ವಿಶೇಷ ಧಾರ್ಮಿಕ ಆಚರಣೆಗಳೇನೇನು ನೋಡೋಣ.

Check out important dates of February for Hindus skr
Author
Bangalore, First Published Jan 31, 2022, 12:13 PM IST | Last Updated Jan 31, 2022, 12:31 PM IST

ಮಾಘ(Magh) ಮಾಸವೆಂದರೆ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಜನರು ಗಂಗೆ, ಯಮುನೆ, ಗೋದಾವರಿ, ಕಾವೇರಿ ನದಿಗಳಲ್ಲಿಸ್ನಾನ ಮಾಡುವ ಅಭ್ಯಾಸ ಹೊಂದಿದ್ದಾರೆ. ಮಾಘದಲ್ಲಿ ಮಾಘ ನವರಾತ್ರಿಯಿಂದ ಹಿಡಿದು ವಸಂತ್ ಪಂಚಮಿವರೆಗೆ ಹಬ್ಬಗಳಿವೆ. ಇನ್ನು ನಂತರದಲ್ಲಿ ಬರುವ ಫಾಲ್ಗುಣ(Phalguna)ದಲ್ಲೂ ಕೆಲ ಪ್ರಮುಖ ದಿನಗಳಿವೆ. ಈ ಎರಡೂ ಮಾಸಗಳು ಇಂಗ್ಲಿಷ್ ಕ್ಯಾಲೆಂಡರಿನ ಫೆಬ್ರವರಿ(February)ಯಲ್ಲಿ ದಿನಗಳನ್ನು ಹಂಚಿಕೊಂಡಿವೆ. ಹಾಗಾದರೆ, ಫೆಬ್ರವರಿಯಲ್ಲಿ ಧಾರ್ಮಿಕವಾಗಿ ಪ್ರಮುಖವೆನಿಸಿರುವ ದಿನಗಳು ಯಾವೆಲ್ಲ ನೋಡೋಣ. 

ಮಾಘ ನವರಾತ್ರಿ(Magha Navratri)- ಫೆಬ್ರವರಿ 2
ದುರ್ಗಾ ಮಾತೆಯ ಭಕ್ತರು ನವರಾತ್ರಿಯನ್ನು ವರ್ಷದಲ್ಲಿ ನಾಲ್ಕು ಬಾರಿ ಆಚರಿಸುತ್ತಾರೆ. ಅದರಲ್ಲೊಂದು ಮಾಘ ಮಾಸದಲ್ಲಿ. ಇದನ್ನು ಗುಪ್ತ್ ನವರಾತ್ರಿ ಎಂದೂ ಕರೆಯಲಾಗುತ್ತದೆ. ಮಾಘ ಮಾಸದ ಶುಕ್ಲ ಪಕ್ಷ, ಪ್ರತಿಪದ ತಿಥಿಯಂದು ಮಾಘ ನವರಾತ್ರಿಯ ಮೊದಲ ದಿನ ಆರಂಭವಾಗುತ್ತದೆ. ಈ ವರ್ಷ ಇದು ಫೆಬ್ರವರಿ 2ರಂದು ಶುರುವಾಗುತ್ತದೆ. 

ಗಣೇಶ ಜಯಂತಿ ಹಾಗೂ ವಿನಾಯಕ ಚತುರ್ಥಿ- ಫೆಬ್ರವರಿ 4
ವಿನಾಯಕ ಚತುರ್ಥಿ ವ್ರತವು ಶುಕ್ಲ ಪಕ್ಷದ ಚತುರ್ಥಿಯಂದು ಆಚರಿಸಲಾಗುತ್ತದೆ. ಫೆಬ್ರವರಿ 4ರಂದು ಇದನ್ನು ಆಚರಿಸಲಾಗುತ್ತದೆ. ಆಸಕ್ತಿದಾಯಕ ವಿಷಯವೆಂದರೆ, ಮಹಾರಾಷ್ಟ್ರದಲ್ಲಿ ಇದೇ ದಿನವನ್ನು ಗಣಪತಿಯ ಹುಟ್ಟುಹಬ್ಬ ಎಂದು ಆಚರಿಸಲಾಗುತ್ತದೆ.

ವಸಂತ ಪಂಚಮಿ(Vasant Panchami)- ಫೆಬ್ರವರಿ 5
ವಂಸತ ಪಂಚಮಿಯು ವಸಂತ ಋತುವಿನ ಆರಂಭದ ಸಂಭ್ರಮಾಚರಣೆಯಾಗಿದೆ. ಈ ದಿನ ಜ್ಞಾನದ ತಾಯಿ ಸರಸ್ವತಿಗೆ ಮೀಸಲಾಗಿದೆ. ಹಾಗಾಗಿ, ಈ ವಸಂತ ಪಂಚಮಿಯಂದು ಜನರು ಸರಸ್ವತಿಯನ್ನು ಆರಾಧಿಸುತ್ತಾರೆ. ಈ ವರ್ಷ ಫೆಬ್ರವರಿ 5ರಂದು ವಸಂತ ಪಂಚಮಿ ಬರಲಿದೆ. 

ಸ್ಕಂದ ಷಷ್ಠಿ ವ್ರತ- ಫೆಬ್ರವರಿ 6
ಸುಬ್ರಹ್ಮಣ್ಯನಿಗೆ ಮೀಸಲಾಗಿ ಭಕ್ತರು ಸ್ಕಂದ ಷಷ್ಠಿ ವ್ರತವನ್ನು ಆಚರಿಸುತ್ತಾರೆ. ಶುಕ್ಲ ಪಕ್ಷದ ಷಷ್ಠಿ ತಿಥಿಯಂದು ಈ ವ್ರತಾಚರಣೆ ನಡೆಯುತ್ತದೆ. ತಮಿಳುನಾಡಿನಲ್ಲಿ ಈ ವ್ರತವನ್ನು ಜೋರಾಗಿ ಸಂಭ್ರಮಿಸಲಾಗುತ್ತದೆ. ಈ ವರ್ಷ ಫೆಬ್ರರಿ 6ರಂದು ಸ್ಕಂದ ಷಷ್ಠಿ ವ್ರತ ಬರುತ್ತದೆ. 

Pradosh Vrat 2022: ಇಂದು ರವಿ ಪ್ರದೋಶ ವ್ರತ, ಈ ದಿನದ ವೈಶಿಷ್ಟ್ಯತೆಗಳನ್ನು ತಿಳಿಯಿರಿ..

ರಥ ಸಪ್ತಮಿ- ಫೆಬ್ರವರಿ 7
ಮಾಘ ಮಾಸದ ಶುಕ್ಷ ಪಕ್ಷದ ಸಪ್ತಮಿಯಂದು ರಥ ಸಪ್ತಮಿ ಆಚರಿಸಲಾಗುತ್ತದೆ. ಇದನ್ನು ಆರೋಗ್ಯ ಸಪ್ತಮಿ ಅಥವಾ ಅಚಲ ಸಪ್ತಮಿ ಎಂದೂ ಹೇಳಲಾಗುತ್ತದೆ. ಈ ದಿನವು ಸೂರ್ಯ ದೇವ(the Sun God)ನ ಹುಟ್ಟಿದ ದಿನ ಎಂದು ಸಂಭ್ರಮವನ್ನು ಪಡೆದುಕೊಳ್ಳುತ್ತದೆ. ಈ ವರ್ಷ ಫೆಬ್ರವರಿ 7ರಂದು ರಥಸಪ್ತಮಿ ಬರುತ್ತದೆ. 

ಭೀಷ್ಮ ಅಷ್ಟಮಿ- ಫೆಬ್ರವರಿ 8
ಭೀಷ್ಮನ ಸಾವಿನ ತಿಥಿಯೇ ಭೀಷ್ಮ ಅಷ್ಟಮಿ. ಈ ವರ್ಷ ಇದು ಫೆಬ್ರವರಿ 8ರಂದು ಬರುತ್ತದೆ. 

ಜಯ, ವಿಜಯ ಏಕಾದಶಿ- ಫೆ.12, ಫೆ.26
ಮಾಘ ಮಾಸದ 11ನೇ ದಿನವು ಜಯ ಏಕಾದಶಿಯಾಗಿದೆ. ಹಾಗೂ ಫಾಲ್ಗುಣ ಮಾಸದ ಏಕಾದಶಿಯು ವಿಜಯ ಏಕಾದಶಿಯಾಗಿದೆ. ಈ ದಿನ ವಿಷ್ಣುವಿನ ಭಕ್ತರು ಉಪವಾಸ ಆಚರಿಸುತ್ತಾರೆ. ದ್ವಾದಶಿಯಂದು ಆಹಾರ ಸೇವಿಸುತ್ತಾರೆ. ಈ ವರ್ಷ ಜಯ, ವಿಜಯ ಏಕಾದಶಿಯು ಕ್ರಮವಾಗಿ ಫೆ.11 ಹಾಗೂ ಫೆ.26ರಂದು ಬರಲಿದೆ. ಜಯ, ವಿಜಯರು ವೈಕುಂಠದ ದ್ವಾರಪಾಲಕರಾಗಿದ್ದಾರೆ. 

Yogi Aditynath ಈ ದೇಶದ ಲೀಡರ್‌ ಆಗ್ತಾರಾ? ಫಲಜ್ಯೋತಿಷ್ಯ ಹೀಗೆ ಹೇಳುತ್ತೆ..

ಕುಂಭ ಸಂಕ್ರಾಂತಿ- ಫೆಬ್ರವರಿ 13
ಸೂರ್ಯನು ಮಕರ(Capricorn)ದಿಂದ ಕುಂಭಕ್ಕೆ ಪ್ರವೇಶಿಸುವ ಸಮಯವೇ ಕುಂಭ(Aquarius) ಸಂಕ್ರಾಂತಿ. ಈ ಬಾರಿ ಫೆಬ್ರವರಿ 13ರಂದು ಕುಂಭ ಸಂಕ್ರಾಂತಿ ಬರಲಿದೆ. 

ಪ್ರದೋಶ ವ್ರತ- ಫೆ.14, ಫೆ.28
ಪ್ರದೋಶ ವ್ರತವು ಶಿವ(Lord Shiva)ನನ್ನು ಮೆಚ್ಚಿಸಲು ಕೈಗೊಳ್ಳುವ ವ್ರತವಾಗಿದೆ. ಪ್ರತಿ ಪಕ್ಷದ ತ್ರಯೋದಶಿಯಂದು ಇದನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ 32 ಬಾರಿ ಪ್ರದೋಶ ವ್ರತ ಆಚರಿಸಲಾಗುತ್ತದೆ. 

ಮಾಘ ಪೂರ್ಣಿಮಾ- ಫೆ.16
ಮಾಘ ಮಾಸದ ಹುಣ್ಣಿಮೆಯ ದಿನ ಪವಿತ್ರವಾದುದಾಗಿದೆ. ಅಂದು ಗಂಗಾ ಸೇರಿದಂತೆ ಪವಿತ್ರ ನದಿಯಲ್ಲಿ ಮುಳುಗೇಳುವ ಜನರು ಸತ್ಯನಾರಾಯಣ ಪೂಜೆ, ಉಪವಾಸ ಸೇರಿದಂತೆ ಸಾಕಷ್ಟು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. 

ಕ್ರಶ್ ಎದುರು ಬಂದಾಗ feelings ಮುಚ್ಚಿಡಲಾಗದವರು ಇವರು!

ದ್ವಿಜಪ್ರಿಯ ಸಂಕಷ್ಟಿ- ಫೆ.20
ಸಂಕಷ್ಟಿಯನ್ನು ಕೃಷ್ಣ ಪಕ್ಷದ ಚತುರ್ಥ ತಿಥಿಯಂದು ಆಚರಿಸಲಾಗುತ್ತದೆ, ಈ ವ್ರತವು ಗಣೇಶನಿಗೆ ಮೀಸಲಾಗಿದ್ದು, ಭಕ್ತರು ತಮ್ಮ ಸಂಕಷ್ಟ ಪರಿಹಾರಕ್ಕಾಗಿ ಕೋರಿ ಈ ವ್ರತ ಆಚರಿಸುತ್ತಾರೆ. 

ಇವಲ್ಲದೆ, ಫೆ.22ರಂದು ಕೃಷ್ಣನ ಸಾಕುತಾಯಿ ಯಶೋಧೆಯ ಜನ್ಮದಿನ ಯಶೋಧ ಜಯಂತಿ, ಫೆ.23ರಂದು ರಾಮನ ಭಕ್ತೆ ಶಬರಿ ಜಯಂತಿ, ಫೆ.24ರಂದು ತಾಯಿ ಸೀತಾದೇವಿಯ ಜಯಂತಿ ಆಚರಿಸಲಾಗುತ್ತದೆ. 

Latest Videos
Follow Us:
Download App:
  • android
  • ios