Pradosh Vrat 2022: ಇಂದು ರವಿ ಪ್ರದೋಶ ವ್ರತ, ಈ ದಿನದ ವೈಶಿಷ್ಟ್ಯತೆಗಳನ್ನು ತಿಳಿಯಿರಿ..

ಇಂದು ಪ್ರದೋಶ ವ್ರತ. ಈ ದಿನದ ವಿಶೇಷಗಳೇನು, ಈ ವ್ರತ ಆಚರಿಸುವುದರ ಫಲವೇನು, ಆಚರಣೆಯ ಕ್ರಮ ಹೇಗೆ ನೋಡೋಣ. 

Significance of Ravi pradosh vrat and fasting rules skr

ಇಂದು ಮಾಘ ಮಾಸ, ಕೃಷ್ಣ ಪಕ್ಷದ ತ್ರಯೋದಶಿ ತಿಥಿ- ಅಂದರೆ ಪಕ್ಷದ 13ನೇ ದಿನ. ಈ ದಿನದ ವಿಶೇಷವೆಂದರೆ ಇದು ಶಿವನಿಗಾಗಿ ಉಪವಾಸ ವ್ರತ ಆಚರಿಸುವ ದಿನ. ಇದನ್ನೇ ಪ್ರದೋಶ ವ್ರತ(Pradosh Vrat) ಎನ್ನುವುದು. ಆಸಕ್ತಿಕರ ವಿಷಯವೆಂದರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಶುಕ್ಲ ಪಕ್ಷ, ಕೃಷ್ಣ ಪಕ್ಷ((waning phase of the Moon)) ಎಂದು ತಿಂಗಳಿಗೆರಡು ಪಕ್ಷ ಬರುತ್ತದೆ. ಪ್ರತಿಯೊಂದು ಕಳೆದ ಬಳಿಕದ 13ನೇ ದಿನ ಪ್ರದೋಶ ವ್ರತ ಆಚರಿಸಲಾಗುತ್ತದೆ. ಇದು ಈ ಬಾರಿ ಭಾನುವಾರ ಬಂದಿರುವುದರಿಂದ ಇದನ್ನು ರವಿ ಪ್ರದೋಶ ವ್ರತ ಎನ್ನಲಾಗುತ್ತದೆ. ಈ ದಿನ ಶಿವ ಪೂಜೆ ಹೇಗೆ ಮಾಡಬೇಕು, ಹೇಗೆ ವ್ರತ ಆಚರಿಸುವುದು, ಅದರಿಂದೇನು ಲಾಭಗಳು ಎಲ್ಲ ವಿವರಗಳನ್ನು ಇಲ್ಲಿ ಕೊಡಲಾಗಿದೆ. 

ಇಂದು ಏಕೆ ಶಿವನನ್ನು ಪೂಜಿಸಬೇಕು ಎಂಬುದಕ್ಕೆ ಹಲವು ಪುರಾಣದ ಕತೆಗಳು ಸಿಗುತ್ತವೆ. ಅದರಲ್ಲಿ ಒಂದರಂತೆ, ಒಮ್ಮೆ ರಾಕ್ಷಸ(demons)ರ ಅಟ್ಟಹಾಸ ಹೆಚ್ಚಾದಾಗ ದೇವತೆಗಳು ಪ್ರದೋಶ ಕಾಲದಲ್ಲಿ ಶಿವನನ್ನು ಭೇಟಿಯಾಗಿ ಸಹಾಯ ಕೋರಿದರು. ಆಗ ಶಿವ ಹಾಗೂ ಆತನ ವಾಹನ ನಂದಿ(the bull) ಹೋಗಿ ರಾಕ್ಷಸರ ವಿರುದ್ಧ ಹೋರಾಡಿ ಗೆದ್ದರು. ರಾಕ್ಷಸರ ವಿರುದ್ಧದ ಶಿವನ ಗೆಲುವನ್ನು ಸಂಭ್ರಮಿಸುವ ಸಲುವಾಗಿ ಹಾಗೂ ತಮ್ಮ ಧನ್ಯವಾದವನ್ನು ಹೇಳುವ ಸಲುವಾಗಿ ದೇವತೆಗಳು ಪ್ರದೋಶ ವ್ರತ ಆಚರಿಸಿದರು. ಇದನ್ನೇ ಕೆಟ್ಟದ್ದರ ವಿರುದ್ಧ ಒಳ್ಳೆಯದರ ಗೆಲುವಿನ ಸಂಭ್ರಮಾಚರಣೆಗಾಗಿ ಪ್ರಾರ್ಥಿಸಿ ಭಕ್ತರು ಈ ದಿನ ವ್ರತ ಆಚರಿಸುತ್ತಾರೆ. ಜೊತೆಗೆ, ಪ್ರದೋಶ ಕಾಲದಲ್ಲಿ ಬೇಡಿದರೆ ಶಿವ ಬೇಗ ಒಲಿಯುತ್ತಾನೆ ಎಂಬ ನಂಬಿಕೆಯಿದೆ. 

ಪ್ರದೋಶ ವ್ರತ ಆಚರಿಸುವ ಕ್ರಮ
ತ್ರಯೋದಶಿಯ ದಿನವಾದ ಇಂದು ಬೆಳಗ್ಗೆಯಿಂದ ಉಪವಾಸವಿದ್ದು, ಸಂಜೆ ಸಮಯ 5:59ರಿಂದ 8:37ರವರೆಗೆ ಶಿವ ಪೂಜೆ(Shiva Puja) ನಡೆಸಬೇಕು. ನಂತರ ಆಹಾರ ಸೇವನೆ ಮಾಡಬೇಕು. ಶಿವ ಪೂಜೆಯ ಶೋಡಶೋಪಚಾರ ನಡೆಸುವಾಗ 16 ಕ್ರಮಗಳನ್ನು ಅನುಸರಿಸಬೇಕು. 
ಮೊದಲನೆಯದಾಗಿ ಪೂಜಾ ಮುಹೂರ್ತಕ್ಕೆ ಮುನ್ನ ಸ್ನಾನ ಮಾಡಿ, ಪೂಜೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಿ. ನಂತರ ಧ್ಯಾನ(Meditate)ದಿಂದ ಆರಂಭಿಸಿ. ನಂತರ ಪೂಜಾ ಕೋಣೆಯಲ್ಲಿ ಮರದ ಮಣೆಯ ಮೇಲೆ ಬಿಳಿ ವಸ್ತ್ರವನ್ನು ಹಾಸಿ ಅದರ ಮೇಲೆ ಶಿವಲಿಂಗ ಇಲ್ಲವೇ ಶಿವನ ಮೂರ್ತಿಯನ್ನು ಇಡಬೇಕು. ದೀಪ ಹಚ್ಚಿಕೊಳ್ಳಿ. 
ಈಗ ಶಿವನ ಪಾದಗಳನ್ನು ತೊಳೆಯಿರಿ. ನಂತರ ಶಿವನಿಗೆ ಅರ್ಘ್ಯ ಬಿಡಿ. ಈಗ ಆಚಮನ ಮಾಡಿ. ಅಂದರೆ ಉದ್ದರಣೆಯಿಂದ ಮೂರು ಬಾರಿ ನೀರು ತೆಗೆದುಕೊಂಡು ಬಲಗೈ ಮೇಲೆ ಹಾಕಿಕೊಂಡು ಕುಡಿಯಿರಿ. ನಂತರ ಕೈ ತೊಳೆಯಿರಿ. ಈಗ ಶಿವನಿಗೆ ಜಲಾಭಿಷೇಕ ಮಾಡಿ ಸ್ನಾನ ಮಾಡಿಸಿ. ಬಳಿಕ ಹಸಿ ಹಾಲು, ಗಂಗಾಜಲ, ಜೇನುತುಪ್ಪ(honey), ಮೊಸರು, ತುಪ್ಪದಿಂದ ಅಭಿಷೇಕ ಮಾಡಿ. (ಶಿವನ ವಿಗ್ರಹ ಅಥವಾ ಲಿಂಗವು ಮೆಟಲ್‌ನಿಂದ ಮಾಡಿದ್ದಾದರೆ ಮಾತ್ರ ಅಭಿಷೇಕ ಮಾಡಿ.)

Yogi Aditynath ಈ ದೇಶದ ಲೀಡರ್‌ ಆಗ್ತಾರಾ? ಫಲಜ್ಯೋತಿಷ್ಯ ಹೀಗೆ ಹೇಳುತ್ತೆ..

ಬಳಿಕ ಸ್ವಚ್ಛವಾದ ಬಟ್ಟೆಯಿಂದ ವಿಗ್ರಹವನ್ನು ಒರೆಸಿ. ಶಿವನಿಗೆ ಬಿಳಿ ವಸ್ತ್ರ ಅರ್ಪಿಸಿ. ನಂತರ ಅಕ್ಷತೆ, ಚಂದನ, ದತುರಾದ ಹೂವುಗಳು, ಬಿಲ್ವ ಪತ್ರೆ ಏರಿಸಿ. ಬಳಿಕ ಧೂಪ, ದೀಪಾರತಿ ಮಾಡಿ. ನಂತರದಲ್ಲಿ ಶಿವನಿಗೆ ನೈವೇದ್ಯ ಮಾಡುವ ಮೂಲಕ ಭೋಗ ಅರ್ಪಿಸಿ. ಇದಕ್ಕಾಗಿ ಹಣ್ಣುಗಳು, ತಾಂಬೂಲ ಹಾಗೂ ಮನೆಯಲ್ಲೇ ತಯಾರಿಸಿದ ಸಾತ್ವಿಕ ಆಹಾರ ನೀಡಬಹುದು. 
ನೈವೇದ್ಯದ ಬಳಿಕ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ. ಮಹಾ ಮಂಗಳಾರತಿ ಮಾಡಿ. ಪೂಜೆ ಮುಗಿದ ಬಳಿಕ ಪ್ರದೋಶ ವ್ರತ ಕತೆಯನ್ನು ಓದಬೇಕು. 
ಇಷ್ಟರ ಬಳಿಕ ನಿಮ್ಮ ಮನಸ್ಸಲ್ಲಿರುವ ಆಸೆ ಆಕಾಂಕ್ಷೆಗಳನ್ನು ಪ್ರಾರ್ಥಿಸಿಕೊಳ್ಳಿ. ಶಿವ ಈಡೇರಿಸುತ್ತಾನೆ. 

Margi Shukra 2022: ಇಂದಿನ ಶುಕ್ರ ಮಾರ್ಗಿಯಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

ನಿಯಮಗಳು
ವ್ರತದ ದಿನ ಆಹಾರ ಸೇವನೆ ಸಲ್ಲದು. ಹಣ್ಣುಗಳನ್ನು ಸೇವಿಸಬಹುದು. 
ಇಡೀ ದಿನ ಶಿವಧ್ಯಾನದಲ್ಲಿ ತೊಡಗಬೇಕು. 'ಓ ನಮಃ ಶಿವಾಯ' ಎಂದು ಸಾಧ್ಯವಾದಷ್ಟು ಬಾರಿ ಹೇಳಿಕೊಳ್ಳಬೇಕು. 
ಮನಸ್ಸಿನಲ್ಲಿ ಯಾರ ಬಗೆಗೂ, ಯಾವುದರ ಬಗೆಗೂ ಕೆಟ್ಟ ಆಲೋಚನೆಗಳು ಸಲ್ಲದು. 
ಸಿಗರೇಟ್, ಆಲ್ಕೋಹಾಲ್ ಸೇವನೆ ಮಾಡುವಂತಿಲ್ಲ. 

Latest Videos
Follow Us:
Download App:
  • android
  • ios