Asianet Suvarna News Asianet Suvarna News

Maha Shivratri: ರಾಶಿಯನುಸಾರ ಶಿವರಾತ್ರಿಯಂದು ಈ ಮಂತ್ರಗಳನ್ನು ಜಪಿಸಿದರೆ ಫಲಸಿದ್ಧಿ..

ಶಿವನ ಕೃಪೆ ಪಡೆಯಲು ಮಹಾ ಶಿವರಾತ್ರಿಯು ಅತ್ಯಂತ ವಿಶೇಷ ದಿನವಾಗಿದೆ. ಈ ದಿನ ಭಕ್ತಿ ಶ್ರದ್ಧೆಗಳಿಂದ ಈಶ್ವರನನ್ನ  ಸಕಲ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ. ಹಾಗಾಗಿ ಈ ದಿನ ರಾಶಿಯ ಅನುಸಾರ ಈ ಮಂತ್ರಗಳನ್ನು ಜಪಿಸಿದರೆ ಆಯಾ ರಾಶಿಯವರ ಮನೋಕಾಮನೆಗಳು ಈಡೇರುತ್ತವೆ. ಆ ಮಂತ್ರಗಳು ಯಾವುವು ಎಂಬುದನ್ನು ತಿಳಿಯೋಣ.

Chant These Mantras According To Your Zodiac Sign on MahaShivratri
Author
Bangalore, First Published Feb 23, 2022, 10:46 AM IST | Last Updated Feb 27, 2022, 7:36 PM IST

ಹಿಂದುಗಳ ಮಹತ್ವದ ಹಬ್ಬಗಳಲ್ಲೊಂದಾದ ಮಹಾ ಶಿವರಾತ್ರಿ ( Shivarathri) ಈ ಬಾರಿ ಮಾರ್ಚ್ 1ರಂದು ಬಂದಿದೆ.  ಹಿಂದೂ ಪಂಚಾಂಗದ ಪ್ರಕಾರ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಶಿವರಾತ್ರಿ ಆಚರಿಸಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ಶಿವ ಪಾರ್ವತಿಯರ ವಿವಾಹವಾದ ಕಾರಣ ಇದೇ ಮಾಸದ ಚತುರ್ದಶಿಯಂದು ಈ ಶಿವರಾತ್ರಿ ವ್ರತವನ್ನು ಆಚರಿಸಲಾಗುತ್ತದೆ. 

ಬೇಡಿದ್ದನ್ನು ಕೊಡುವ ಶಿವನನ್ನು ಭಕ್ತಿ ಶ್ರದ್ಧೆಯಿಂದ ಈ ದಿನ ಪೂಜಿಸಿದರೆ ಸರ್ವ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ.  ಭಕ್ತಿಯಿಂದ ಭಜಿಸಿದವಗೆ ತನ್ನ ಆತ್ಮಲಿಂಗವನ್ನೇ  ಕೊಟ್ಟ ಶಿವ, ಮಾನವರ ಇಷ್ಟಾರ್ಥಗಳನ್ನು ಈಡೇರಿಸದೆ ಇರುತ್ತಾನೆಯೇ? ಹಾಗಾಗಿ ಶಿವರಾತ್ರಿಯಂದು ವಿಶೇಷವಾದ ಪೂಜೆ (Pooja), ಅರ್ಚನೆ, ಜಲಾಭಿಷೇಕ ಮುಂತಾದ  ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಹಾಗಾದರೆ ಈ ದಿನ ರಾಶಿಯ (Zodiac sign) ಅನುಸಾರ ಯಾವ ಮಂತ್ರಗಳನ್ನು ಹೇಳಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದನ್ನು ತಿಳಿಯೋಣ....

ಮೇಷ ರಾಶಿ (Aries): ಮೇಷ ರಾಶಿಯ ವ್ಯಕ್ತಿಗಳು ಈ ದಿನ ಶಿವ ಪೂಜೆ ಮಾಡಿದ ನಂತರ 'ಹ್ರೀಂ ಓಂ ನಮಃ ಶಿವಾಯ ಹ್ರೀಂ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

ವೃಷಭ ರಾಶಿ (Taurus): ವೃಷಭ ರಾಶಿಯ ವ್ಯಕ್ತಿಗಳು ಈ ದಿನ ಮಲ್ಲಿಕಾರ್ಜುನನನ್ನು ಧ್ಯಾನಿಸುತ್ತಾ 'ಓಂ ನಮ ಶಿವಾಯ' ಎಂಬ ಮಂತ್ರವನ್ನು 108 ಬಾರಿ ಜಪಿಸಿದರೆ ಇಷ್ಟಾರ್ಥ ಸಿದ್ಧಿಸುವುದಲ್ಲದೆ, ಕಾರ್ಯಕ್ಷಮತೆ ಹೆಚ್ಚುತ್ತದೆ.

ಮಿಥುನ ರಾಶಿ (Gemini): ಈ ರಾಶಿಯ ವ್ಯಕ್ತಿಗಳು ಮಹಾ ಶಿವರಾತ್ರಿಯಂದು ಮಹಾಕಾಳೇಶ್ವರನನ್ನು ಧ್ಯಾನಿಸುತ್ತ ಪೂಜೆ ಮಾಡುವುದು ಮತ್ತು 'ಓಂ ನಮೋ ಭಗವತೇ ರುದ್ರಾಯ' ಎಂಬ ಮಂತ್ರವನ್ನು ಜಪಿಸುವುದರಿಂದ ಆರ್ಥಿಕ ಸಂಕಷ್ಟ ದೂರವಾಗುವುದಲ್ಲದೆ ಮನೋ ಕಾಮನೆಗಳು ಪೂರ್ಣಗೊಳ್ಳುತ್ತವೆ.

ಕರ್ಕಾಟಕ ರಾಶಿ (Cancer) :  ಮಹಾ ಶಿವರಾತ್ರಿಯಂದು ಈ ರಾಶಿಯ ವ್ಯಕ್ತಿಗಳು ಮಹಾದೇವನನ್ನು ಭಜಿಸಿ ಪೂಜಿಸುವುದಲ್ಲದೆ, 'ಓಂ ಹೌ ಜೂಮ್ ಸಃ'  ಎಂಬ ಮಂತ್ರವನ್ನು ಜಪಿಸುವುದರಿಂದ ಭೌತಿಕ ಸುಖ ಸಾಧನಗಳು ಲಭಿಸುತ್ತವೆ.

ಇದನ್ನು ಓದಿ: Saturday Born Personality: ಶನಿವಾರ ಜನಿಸಿದವರಿಗಿರುತ್ತಾ ಶನಿ ಕೃಪೆ?

ಸಿಂಹ ರಾಶಿ (Leo):  ಸಿಂಹ ರಾಶಿಯ ವ್ಯಕ್ತಿಗಳು ಮಹಾ ಶಿವರಾತ್ರಿಯ ದಿನದಂದು 'ಹ್ರೀಂ ಓಂ ನಮ ಶಿವಾಯ ಹ್ರೀಂ' ಎಂಬ ಮಂತ್ರವನ್ನು ಐವತ್ತೊಂದು ಬಾರಿ ಜಪಿಸಿದರೆ ಸರ್ಕಾರಿ ಉದ್ಯೋಗ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ಬಹು ಬೇಗ ಈಡೇರುತ್ತವೆ. 

ಕನ್ಯಾ ರಾಶಿ (Virgo) : ಕನ್ಯಾ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಮಹಾ ಶಿವರಾತ್ರಿಯ ದಿನದಂದು , 'ಓಂ ನಮೋ ಭಗವತೇ ರುದ್ರಾಯ' ಎಂಬ ಮಂತ್ರವನ್ನು ಜಪಿಸಬೇಕು. ಇದರಿಂದ ಧನ ಲಾಭವಾಗುವ ಸಂಭವ ಹೆಚ್ಚಿರುತ್ತದೆ. 

ತುಲಾ ರಾಶಿ (Libra) : ತುಲಾ ರಾಶಿಯ ವ್ಯಕ್ತಿಗಳು ಮಹಾ ಶಿವರಾತ್ರಿಯಂದು ಶಿವ ಪಂಚಾಕ್ಷರಿ ಮಂತ್ರವಾದ 'ಓಂ ನಮಃ ಶಿವಾಯ' ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಇದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ. 

ವೃಶ್ಚಿಕ ರಾಶಿ (Scorpio) : ಈ ರಾಶಿಯ ವ್ಯಕ್ತಿಗಳು ಮಹಾ ಶಿವರಾತ್ರಿಯಂದು ಮಹಾದೇವನನ್ನು ಭಕ್ತಿಯಿಂದ ಪೂಜಿಸಿ 'ಹ್ರೀಂ ಓಂ ನಮಃ  ಶಿವಾಯ ಹ್ರೀಂ'  ಎಂಬ ಮಂತ್ರವನ್ನು ಜಪಿಸಬೇಕು ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ.

ಧನು ರಾಶಿ (Sagittarius) : ಮಹಾ ಶಿವರಾತ್ರಿಯ ದಿನದಂದು ಚಂದ್ರ ನೀಚ ಸ್ಥಿತಿಯಲ್ಲಿರುತ್ತಾನೆ. ಈ ದಿನ ಧನು ರಾಶಿಯ ವ್ಯಕ್ತಿಗಳು 'ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ। ತನ್ನೋ ರುದ್ರಃ ಪ್ರಚೋದಯಾತ್' ಮಂತ್ರವನ್ನು ಜಪಿಸುವುದರಿಂದ ಚಂದ್ರನು ಬಲಗೊಳ್ಳುತ್ತಾನೆ. 

ಮಕರ ರಾಶಿ (Capricorn): ಈ ರಾಶಿಯ ವ್ಯಕ್ತಿಗಳು ಶಿವನ ಕೃಪೆ ಪಡೆಯಲು 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸಬೇಕು. ಇದರಿಂದ ಯಶಸ್ಸು ಲಭಿಸುತ್ತದೆ.

ಇದನ್ನು ಓದಿ: Personality Traits: ಮಾರ್ಚ್‌ನಲ್ಲಿ ಜನಿಸಿದವರ ಕ್ಯೂರಿಯಸ್ ಕಹಾನಿ!

ಕುಂಭ ರಾಶಿ (Aquarius): ಈ ರಾಶಿಯವರು ಸಹ ಶಿವರಾತ್ರಿಯಂದು ಶಿವನ ಕೃಪೆ ಪಡೆಯಲು ಓಂ ನಮ ಶಿವಾಯ ಮಂತ್ರವನ್ನು 108 ಬಾರಿ ಜಪಿಸಬೇಕು.  ಇದರಿಂದ ಈ ರಾಶಿಯವರ ಆರೋಗ್ಯ ಉತ್ತಮವಾಗಿರುತ್ತದೆ.

ಮೀನರಾಶಿ (Pisces) : ಮೀನ ರಾಶಿಯ ವ್ಯಕ್ತಿಗಳು ಶಿವರಾತ್ರಿಯಂದು 'ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ। ತನ್ನೋ ರುದ್ರಃ ಪ್ರಚೋದಯಾತ್' ಮಂತ್ರವನ್ನು ಜಪಿಸುವುದರಿಂದ ಸಕಲ ಕಷ್ಟಗಳು ದೂರವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ.

Latest Videos
Follow Us:
Download App:
  • android
  • ios