Asianet Suvarna News Asianet Suvarna News

Personality Traits: ಮಾರ್ಚ್‌ನಲ್ಲಿ ಜನಿಸಿದವರ ಕ್ಯೂರಿಯಸ್ ಕಹಾನಿ!

ಒಬ್ಬೊಬ್ಬರದ್ದು ಒಂದೊಂದು ರೀತಿಯ ವ್ಯಕ್ತಿತ್ವ.. ಒಬ್ಬರು ಬುದ್ಧಿವಂತರಾಗಿದ್ದರೆ, ಮತ್ತೊಬ್ಬರು ಒಂದೊಂದು ಕ್ಷೇತ್ರದಲ್ಲಿ ಬಲಿಷ್ಠರಾಗಿರುತ್ತಾರೆ. ಕೆಲವರು ಅದೃಷ್ಟವಂತರಾಗಿದ್ದರೆ, ಕೆಲವರು ಬಹಳ ಕಠಿಣ ಪರಿಶ್ರಮಿಗಳು ಆಗಿರುತ್ತಾರೆ. ಜಾತಕದ ಆಧಾರದ ಮೇಲೆ ಅವರ ಭವಿಷ್ಯವನ್ನು ತಿಳಿಯಬಹುದಾಗಿದೆ. ಹುಟ್ಟಿದ ತಿಂಗಳಿನ ಮೇಲೂ ವ್ಯಕ್ತಿಯ ಗುಣ -  ಸ್ವಭಾವಗಳನ್ನು ತಿಳಿಯಬಹುದು. ಮಾರ್ಚ್ ‌ನಲ್ಲಿ ಜನಿಸಿದವರ ವ್ಯಕ್ತಿತ್ವ, ಗುಣ, ಸ್ವಭಾವಗಳ ಬಗ್ಗೆ ತಿಳಿಯೋಣ...

Personality traits Of March Born People
Author
Bangalore, First Published Feb 21, 2022, 2:57 PM IST

ಮಾರ್ಚ್ (March) ಎಂದರೆ ಬೇಸಿಗೆಯ (Summer) ಆರಂಭದ ಕಾಲ. ಹವಾಮಾನದಲ್ಲಿ (Weather) ಸಹ ಇದು ಬದಲಾವಣೆಯ (Changes) ಕಾಲವಾಗಿದೆ. ಮಾರ್ಚ್ನಲ್ಲಿ ಹುಟ್ಟಿದ (Born) ಅನೇಕರು ಬಹಳ ಸಾಧನೆಯನ್ನು (Achieve) ಮಾಡಿರುವುದನ್ನು ಕಂಡಿದ್ದೇವೆ. ಮಾರ್ಚ್‌ನಲ್ಲಿ ಜನಿಸಿದವರು ವಿಶೇಷ ವ್ಯಕ್ತಿತ್ವವನ್ನು (Special personality) ಹೊಂದಿರುತ್ತಾರೆ. ವ್ಯಕ್ತಿಗಳು ಹುಟ್ಟಿದ ದಿನಾಂಕ (Born Date), ಗಳಿಗೆ (Time), ರಾಶಿ (Zodiac Sign) ನಕ್ಷತ್ರಗಳಿಗೆ (Star) ಅನುಗುಣವಾಗಿ ಅಲ್ಲದೆ ಜನಿಸಿದ ತಿಂಗಳಿನ ವಿಶೇಷತೆಯೂ ಸಹ ಅವರ ಗುಣ ವಿಶೇಷತೆಗಳಿಗೆ ಪುಷ್ಟಿ ನೀಡುತ್ತದೆ. ಇನ್ನೊಂದು ಮಹತ್ವದ ಅಂಶವೆಂದರೆ ಈ ತಿಂಗಳಿನಲ್ಲಿ ಜನಿಸಿದವರ ಕಣ್ಣು (Eye) ತಪ್ಪಿಸಿ ಕೆಲಸ ಮಾಡಬಹುದು ಎಂದು ತಿಳಿದುಕೊಂಡರೆ ಅದು ಬಹಳ ಕಷ್ಟ. ತಕ್ಷಣವೇ ಇವರು ಅಂಥವುಗಳನ್ನು ಕಂಡುಹಿಡಿದು ಬಿಟ್ಟಿರುತ್ತಾರೆ.

ಸದಾ ಜಾಗ್ರತೆ ಉಳ್ಳವರು (Alert)
ಮಾರ್ಚ್‌ನಲ್ಲಿ ಜನಿಸಿದವರು ತುಂಬಾ ಜಾಗರೂಕರಾಗಿರುತ್ತಾರೆ. ಇವರ ಚುರುಕುಬುದ್ಧಿಯು ಇವರನ್ನು ಕಾಪಾಡುತ್ತದೆ. ಹಾಗಾಗಿ ಯಾರೂ ಸಹ ವ್ಯವಹಾರದಲ್ಲಾಗಲಿ ಇತರ ಇನ್ಯಾವುದೇ ಕ್ಷೇತ್ರದಲ್ಲಾಗಲೀ ಇವರನ್ನು ಮೋಸಗೊಳಿಸುವುದು (Cheating) ಬಹಳ ಕಷ್ಟ. ಆದರೆ ಒಮ್ಮೆ ಈ ವ್ಯಕ್ತಿಗಳ ನಂಬಿಕೆಯನ್ನು (Trust) ಕಳೆದುಕೊಂಡರೆ ಪುನಃ ಅದನ್ನು ಗಳಿಸುವುದು ಬಹಳವೇ ಕಷ್ಟ. 

ಸಖತ್ ಆ್ಯಕ್ಟಿವ್ (Active) 
ಮಾರ್ಚ್‌ನಲ್ಲಿ ಜನಿಸಿದವರು ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಎಷ್ಟರ ಮಟ್ಟಿಗೆಂದರೆ ನಿದ್ದೆ ಮಾಡುವಾಗಲೂ ಅವರು ಬಹಳ ಜಾಗ್ರತೆಯಿಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಮನಸ್ಸು ಗೆಲ್ಲುವವರು
ಈ ತಿಂಗಳಿನಲ್ಲಿ ಜನಿಸಿದವರು ಎದುರಿನ ವ್ಯಕ್ತಿಗಳ ಮನಸ್ಸನ್ನು (Mind) ಬಹಳ ಬೇಗ ಗೆದ್ದುಬಿಡುತ್ತಾರೆ. ಅಲ್ಲದೆ ಇವರು ಅಪರಿಚಿತರೊಂದಿಗೆ ಮಾತನಾಡೋದು ಸ್ವಲ್ಪ ಕಡಿಮೆ. ಆದರೆ ಇವರ ಜೊತೆ ಯಾರೇ ಮಾತನಾಡಿದರೂ ಸಹ ಆಕರ್ಷಣೆಗೆ (Attraction) ಒಳಗಾಗುತ್ತಾರೆ.

ದಾನಶೂರರು 
ಇವರದ್ದು ಇನ್ನೊಬ್ಬರ ಕಷ್ಟಕ್ಕೆ ಮರುಗುವ ವ್ಯಕ್ತಿತ್ವ. ಅಲ್ಲದೆ ದಾನ ಮಾಡುವುದರಲ್ಲಿ ಇವರು ಎತ್ತಿದ ಕೈ. ಇವರದ್ದು ಸ್ವಚ್ಛ ಹೃದಯ (Clean Heart). ಸಾಮಾಜಿಕ ಕಾರ್ಯಗಳಿಂದ (Social Service) ಇವರು ಜನಮನ್ನಣೆಯನ್ನು ಗಳಿಸುತ್ತಾರೆ.

ಇದನ್ನು ಓದಿ : Aries Character Traits: ಮೇಷ ರಾಶಿಯ ಹುಡುಗ ನಿಮ್ಮವನಾದರೆ ಅವನ ಕುರಿತ ಈ 9 ವಿಷಯಗಳು ತಿಳಿದಿರಲಿ..

ಸಂಗಾತಿ (Partner) ಇವರಿಗೆ ಅಚ್ಚುಮೆಚ್ಚು 
ಇವರು ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವವರೂ ಆಗಿದ್ದಾರೆ. ಅದರಲ್ಲೂ ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿ (Love) ಮಾಡುತ್ತಾರೆ. ಎಂದಿಗೂ ಅವರನ್ನು ಮೋಸಗೊಳಿಸುವುದಿಲ್ಲ. ಎಂತಹ ಸಂದರ್ಭ ಬಂದರೂ ಅವರನ್ನು ಬಿಟ್ಟುಕೊಡಲಾರರು.

ಸಾಕುಪ್ರಾಣಿ ಪ್ರಿಯರು (Pet lovers)
ಇವರಿಗೆ ಪ್ರಕೃತಿ (Nature) ಮತ್ತು ವನ್ಯಜೀವಿಗಳು (Wildlife) ಎಂದರೆ ಬಹಳ ಅಚ್ಚುಮೆಚ್ಚು. ಅಲ್ಲದೆ, ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕುವ ಪ್ರವೃತ್ತಿ ಇವರದ್ದಾಗಿರುತ್ತದೆ.

ಪ್ರತಿಭಾವಂತರು(Talented)
ಈ ತಿಂಗಳಿನಲ್ಲಿ ಜನಿಸಿದವರು ಬಹಳ ಪ್ರತಿಭಾವಂತರು. ಇವರು ಯಾವುದೇ ಕೆಲಸಕ್ಕೆ ಕೈಹಾಕಿದರೂ ಶೇಕಡಾ ನೂರರಷ್ಟು ಶ್ರಮವನ್ನೂ ಹಾಕುತ್ತಾರೆ.

ಉಲ್ಲಾಸದ ವ್ಯಕ್ತಿತ್ವ 
ಇವರು ಸಖತ್ ಪಾಸಿಟಿವ್ ಥಿಂಕಿಂಗ್ (Positive Thinkers) ವ್ಯಕ್ತಿಗಳಾಗಿದ್ದು, ಸದಾ ಉಲ್ಲಾಸದಿಂದ ಇರುತ್ತಾರೆ. ಹೀಗಾಗಿ ಇವರ ಜೊತೆಗಿರುವವರು ಸಹ ಇವರನ್ನು ಬಹಳವೇ ಇಷ್ಟಪಡುತ್ತಾರೆ. 

ಇದನ್ನು ಓದಿ : Relationship Tips: ಹೀಗಿದ್ದರೆ ಸತಿ ಪತಿ, ಸಂಬಂಧ ಅಧೋಗತಿ; ಇದು ಚಾಣಕ್ಯ ನೀತಿ

ಬಹಳ ಕುತೂಹಲಿಗಳು (Curious personality)
ಮಾರ್ಚ್ ತಿಂಗಳಿನಲ್ಲಿ  ಜನಿಸಿದ ಮಹಿಳೆಯರಿಗೆ (Woman) ಅಲಂಕಾರ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಸಾಹಸ (Adventure) ಕಾರ್ಯಗಳನ್ನು ಮಾಡುವುದೆಂದರೆ ಅಚ್ಚುಮೆಚ್ಚು. ರಹಸ್ಯವಾದ ವಿಷಯಗಳನ್ನು ತಿಳಿದುಕೊಳ್ಳುವ ಕೂತುಹಲವನ್ನು ಹೆಚ್ಚು ಹೊಂದಿರುತ್ತಾರೆ. ಧರ್ಮ ಮತ್ತು ಆಧ್ಯಾತ್ಮಿಕ (Religion and Spiritual) ವಿಚಾರಗಳನ್ನು ತಿಳಿದುಕೊಳ್ಳುವ ಅಭಿರುಚಿಯನ್ನು ಸಹ ಹೊಂದಿರುತ್ತಾರೆ.

ಯಾವ ದೇವರನ್ನು ಪೂಜಿಸಬೇಕು?
ಮಾರ್ಚ್ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳು ಶ್ರೀ ಮಹಾವಿಷ್ಣುವನ್ನು (Lord Vishnu) ಪೂಜಿಸಬೇಕು. ವಿಷ್ಣು ಸಹಸ್ರನಾಮವನ್ನು (Vishnu Sahasranama) ಪ್ರತಿನಿತ್ಯ ಪಠಿಸುವುದರಿಂದ ಜೀವನದಲ್ಲಿ (Life) ಏಳಿಗೆಯನ್ನು ಕಾಣಬಹುದಾಗಿದೆ. ಅರ್ಧಕ್ಕೆ ನಿಂತಿರುವ ಕಾರ್ಯಗಳೆಲ್ಲ ಬಹುಬೇಗ ಪೂರ್ಣವಾಗುತ್ತವೆ. ಪ್ರತಿ ಭಾನುವಾರ (Sunday) ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಅದಕ್ಕೆ ಜೇನುತುಪ್ಪವನ್ನು (Honey) ಬೆರಸಿ ಪ್ರಾತಃಕಾಲದಲ್ಲಿ ಸೂರ್ಯನಿಗೆ (Sun) ಅರ್ಘ್ಯ ನೀಡಬೇಕು.

Follow Us:
Download App:
  • android
  • ios