ರಾಮಾಯಣದಲ್ಲಿ ಒಂದು ಸನ್ನಿವೇಶವಿದೆ. ರಾವಣನು ಸೀತೆಯನ್ನು ಕದ್ದು ಲಂಕೆಗೆ ಒಯ್ದಿರುತ್ತಾನೆ. ಆಕೆಯನ್ನು ಮರಳಿ ಪಡೆಯಲು ಶ್ರೀರಾಮಚಂದ್ರನು ಕಪಿಗಳನ್ನು ಸೇರಿಕೊಂಡು ಲಂಕೆಗೆ ಲಗ್ಗೆಯಿಟ್ಟು, ರಾವಣನೊಂದಿಗೆ ಯುದ್ಧ ಸಾರಿರುತ್ತಾನೆ. ಲಂಕಾಯುದ್ಧದಲ್ಲಿ ರಾವನ ನಿಕಟವರ್ತಿಗಳಾದ ಅನೇಕ ಪ್ರಮುಖ ರಾಕ್ಷಸರು ಸಾಯುತ್ತಾರೆ. ಆಗ ರಾವಣನೇ ಘೋರ ರೂಪ ತಾಳಿ ಕದನಕಣಕ್ಕೆ ಬರುತ್ತಾನೆ. ಶ್ರೀರಾಮನಿಗೂ ರಾವಣನಿಗೂ ಘೋರ ಯುದ್ಧ ನಡೆಯುತ್ತದೆ.

ಆ ಸಂದರ್ಭದಲ್ಲಿ ದೇವತೆಗಳು, ಋಷಿಗಳು ಹಲವಾರು ವಿಧದಿಂದ ರಾಮನಿಗೆ ಸಹಾಯ ಮಾಡುತ್ತಾರೆ. ದೇವತೆಗಳ ರಾಜನಾದ ಇಂದ್ರ, ತನ್ನ ದಿವ್ಯವಾದ ರಥವನ್ನೂ ತನ್ನ ಸಾರಥಿ ಮಾತಲಿಯನ್ನೂ ಶ್ರೀರಾಮನಿಗೆ ನೆರವಾಗಲು ಕಳುಹಿಸುತ್ತಾನೆ. ಶ್ರೀರಾಮನು ಅದನ್ನು ಏರಿ ಯುದ್ಧ ಮಾಡುತ್ತಾನೆ. ಆದರೂ ರಾವಣನು ವಿಜೃಂಭಿಸುವುದು ಕಂಡುಬರುತ್ತದೆ. ಅದಕ್ಕೆ ಕಾರಣ ರಾವಣನ ಆಸುರೀ, ಮಾಯಾಶಕ್ತಿ.

ರಾವಣನ ಮಾಯೆಯ ಪ್ರಭಾವದಿಂದಾಗಿ ಪಾತಾಳದಿಂದ ಮಾಯಾಕ್ರಿಮಿಗಳು ದೊಡ್ಡ ಸಂಖ್ಯೆಯಲ್ಲಿ ಧಾವಿಸಿ ಬರುತ್ತವೆ. ಇವು ಕಣ್ಣಿಗೆ ಕಾಣುವುದಿಲ್ಲ. ಆದರೆ ಕಪಿಗಳು ಹಾಗೂ ರಾಮಲಕ್ಷ್ಮಣರ ದೇಹದ ಒಳಹೊಕ್ಕು ನಾನಾ ಅನಾರೋಗ್ಯಗಳನ್ನು ಸೃಷ್ಟಿಸತೊಡಗುತ್ತವೆ. ಇದರಿಂದಾಗಿ ಶಕ್ತಿ ಕಳೆದುಕೊಂಡ ರಾಮ ಹಾಗೂ ಕಪಿಗಳು ಇನ್ನೇನು ನೆಲಕ್ಕೆ ಒರಗಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಮಹಾಮುನಿ ಅಗಸ್ತ್ಯರು ಧಾವಿಸಿ ಬರುತ್ತಾರೆ. ಅವರು ಒಂದು ಮಂತ್ರವನ್ನು ರಾಮನಿಗೆ ಉಪದೇಶಿಸುತ್ತಾರೆ.

ಕಲ್ಯಾಣ ರಾಮನ ಕಲ್ಯಾಣ ಚರಿತೆ ...

ಅದರ ಹೆಸರು 'ಆದಿತ್ಯ ಹೃದಯ'. ಇದನ್ನು 'ಆದಿತ್ಯ ಕವಚ' ಎಂದೂ ಕರೆಯುತ್ತಾರೆ. ಆದಿತ್ಯ ಎಂದರೆ ಸೂರ್ಯ. ಇದು ಸೂರ್ಯನನ್ನು ಸ್ತುತಿಸುವ ಮಂತ್ರ. ಸವಿತೃ( ಆದಿತ್ಯ) ಮಂತ್ರೋಪದೇಶದ ನಂತರ ಅಗಸ್ತ್ಯರ ಸೂಚನೆಯಂತೆ ಬ್ರಹ್ಮಾಸ್ತ್ರ ಹೂಡಿದ ರಾಮನ ಬಾಣದಲ್ಲಿ ಸವಿತೃಶಕ್ತಿ ಜಾಗೃತವಾಗುತ್ತದೆ. ರಾಮ ಪ್ರಯೋಗಿಸಿದ ಬಾಣದಿಂದ ರಾವಣನ ಕವಚ ಛೇದನವಾಗಿ ರಾವಣ ಸಾಯುತ್ತಾನೆ. ಅಗಸ್ತ್ಯರಿಂದ ಉಪದೇಶಿಸಿಸಲ್ಪಟ್ಟ ಆದಿತ್ಯ ಹೃದಯದಿಂದ ರಾವಣನ ವಧೆ ಮಾಡುವ ಶ್ರೀರಾಮನ ತಪಸ್ಸು ಪೂರ್ಣವಾಗುತ್ತದೆ.

ಆದ್ದರಿಂದಲೇ ಆದಿತ್ಯ ಹೃದಯ ಪಾರಾಯಣದಿಂದ ಎಲ್ಲ ಕಾರ್ಯಗಳಲ್ಲಿ ಜಯ, ಆಪತ್ತುಗಳನ್ನು ನಿವಾರಿಸಿಕೊಳ್ಳಲು ಸಾಧ್ಯ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಇದರಿಂದ ಆಯುರಾರೋಗ್ಯ ಅಭಿವೃದ್ಧಿಯೂ ಸಾಧ್ಯ. ಸೂರ್ಯನೇ ವಿಶ್ವ ಶಕ್ತಿಯಾಗಿರುವಾಗ. ಸೂರ್ಯನೇ ರುದ್ರ, ಸೂರ್ಯನೇ ಬ್ರಹ್ಮ, ವಿಷ್ಣು. ಸೂರ್ಯವ್ರತ , ಸೂರ್ಯ ನಮಸ್ಕಾರಗಳು ದೇಹ ಮನಸ್ಸಿಗೆ ಶಕ್ತಿ ಕೊಡುತ್ತವೆ. ಸೂರ್ಯನೇ ಪರಬ್ರಹ್ಮ. ಆ ಸೂರ್ಯನೇ ನಮ್ಮಲ್ಲಿ ತುಂಬಿರುವ ಶಕ್ತಿ. ಆದಿತ್ಯ ಹೃದಯ ಸ್ತೋತ್ರ ವ್ಯಕ್ತಿಯೊಳಗಿರುವ ಆತ್ಮವಿಶ್ವಾಸದ ಶಕ್ತಿಯನ್ನೂ ಹೆಚ್ಚಿಸುವುದಕ್ಕೂ ಸಹಕಾರಿ ಎಂಬ ನಂಬಿಕೆ ಇದೆ.

ರಾಮಾಯಣವೆಂಬ ವೇದದಲ್ಲಿ ರಾಮನೆಂಬ ಪರಬ್ರಹ್ಮ ...

ಇದು ವೈಜ್ಞಾನಿಕವಾಗಿಯೂ ಸತ್ಯ. ಇಂದು ಕೊರೊನಾ ಸೇರಿದಂತೆ ಎಲ್ಲ ರೋಗಗಳನ್ನೂ ಎದುರಿಸಲು ನಮಗೆ ರೋಗ ಪ್ರತಿರೋಧ ಶಕ್ತಿ ಅಥವಾ ಇಮ್ಯುನಿಟಿ ಅಗತ್ಯವಾಗಿದೆ. ಈ ಇಮ್ಯುನಿಟಿ ಬರುವುದು ವಿಟಮಿನ್ ಸಿ ಮೂಲಕ. ಸೂರ್ಯನ ಬೆಳಕಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಸೂರ್ಯನ ಬೆಳಕಿನಲ್ಲಿ ನಿಂತು ಆದಿತ್ಯ ಹೃದಯವನ್ನು ಪಠಿಸುವುದು ಎಂದರೆ ವಿಟಮಿನ್ ಸಿಯ್ನು ಪಡೆಯುವುದು, ಅರ್ಥಾತ್ ಎಲ್ಲ ರೋಗಗಳನ್ನು ಎದುರಿಸಲು ಶಕ್ತಿ ಪಡೆಯುವುದು ಎಂದೇ ಅರ್ಥ. ಇಂದಿನ ಸಂಕಟದ ಸಮಯದಲ್ಲಂತೂ ಆದಿತ್ಯ ಕವಚ ನಮಗೆ ಆಪತ್‌ಬಂಧು.

ಆದಿತ್ಯ ಹೃದಯ ಸ್ತೋತ್ರ :

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||

ಶ್ರೀರಾಮಚಂದ್ರನ ಆರಾಧನೆ ಅಂದರೆ ಸದ್ಗುಣಗಳ ಆರಾಧನೆ ...

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ || 4 ||

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || 6 ||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || 7 ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || 8 ||

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ || 9 ||

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ || 10 ||

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋsಅಂಶುಮಾನ್ || 11 ||

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋ‌உದಿತೇಃ ಪುತ್ರಃ ಶಂಖಃ ಶಿಶಿರನಾಶನಃ || 12 ||

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || 13 ||

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ 
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || 14 ||

ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ |

ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌sಸ್ತು ತೇ || 15 ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 16 ||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || 17 ||

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || 18 ||

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || 19 ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || 20 ||

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋ‌ಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || 21 ||

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || 22 ||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || 23 ||

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || 24 ||

ಫಲಶ್ರುತಿ :-

ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ || 25 ||

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || 26 ||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || 27 ||

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋ‌sಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || 28 ||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || 29 ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋ‌sಭವತ್ || 30 ||

ಅಥರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || 31 ||

2 ಕೋಟಿ ಕ್ಲಿಕ್ಸ್ ಪಡೆದ ಇನ್ನೆಷ್ಟು ಬೇಕೆನ್ನ ಹೃದಯಕ್ಕೆ...