ಇವರು 'ವೈರಿ'ಗಳಿಗಿಂತ ಡೇಂಜರ್: ಇಂತವರಿಂದ ದೂರ ಇರಿ ಅಂತಾರೆ ಚಾಣಕ್ಯರು..!
ಇಂದಿನ ಆಧುನಿಕ (Modern) ಯುಗದಲ್ಲಿ ಯಾರನ್ನು ನಂಬಬೇಕು ಎಂಬುದು ಬಹಳ ದೊಡ್ಡ ಪ್ರಶ್ನೆ (question) ಯಾಗಿದೆ. ಕೆಲವರು ನಮಗೆ ತುಂಬಾ ಅಪಾಯಕಾರಿ (dangerous) . ಅವರಿಂದ ನಾವು ಯಾವಾಗಲೂ ಅಂತರ ಕಾಯ್ದುಕೊಳ್ಳಬೇಕು ಎಂದು ಚಾಣಕ್ಯ (Chanakya) ತಿಳಿಸಿದ್ದಾರೆ.
ಇಂದಿನ ಆಧುನಿಕ (Modern) ಯುಗದಲ್ಲಿ ಯಾರನ್ನು ನಂಬಬೇಕು ಎಂಬುದು ಬಹಳ ದೊಡ್ಡ ಪ್ರಶ್ನೆ (question) ಯಾಗಿದೆ. ಕೆಲವರು ನಮಗೆ ತುಂಬಾ ಅಪಾಯಕಾರಿ (dangerous) . ಅವರಿಂದ ನಾವು ಯಾವಾಗಲೂ ಅಂತರ ಕಾಯ್ದುಕೊಳ್ಳಬೇಕು ಎಂದು ಚಾಣಕ್ಯ (Chanakya) ತಿಳಿಸಿದ್ದಾರೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನವನ್ನು ಹೇಗೆ ನಡೆಸಬೇಕು ಎಂಬ ಸರಿಯಾದ ಮಾರ್ಗ (way) ವನ್ನು ಹೇಳಿದ್ದಾರೆ. ನಮ್ಮ ಜೀವನದಲ್ಲಿ ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಅವರು ಬರೆದು ಹೋಗಿದ್ದಾರೆ. ಕೆಲವರು ತಮ್ಮ ಸ್ವಂತ ಲಾಭ (profit) ಕ್ಕಾಗಿ ಬೇರೆಯವರಿಗೆ ಏನು ಮಾಡಲು ಕೂಡ ಹಿಂಜರಿಯುವು (hesitate) ದಿಲ್ಲ. ಇವರು ತಮ್ಮ ಸ್ವಾರ್ಥ (selfishness) ಕ್ಕಾಗಿ ನಿಮ್ಮ ಬೆನ್ನ ಹಿಂದೆ ನಿಮಗೆ ಹಾನಿ ಮಾಡುತ್ತಾರೆ. ಅಂತಹ ವ್ಯಕ್ತಿ (person) ಗಳಿಂದ ದೂರ ಇರಿ ಎಂದು ಅವರು ಹೇಳಿದ್ದಾರೆ.
ನಂಬಿಕೆ ದ್ರೋಹಿಗಳಿಂದ ದೂರವಿರಿ
ನಾವು ಜೀವನ (life) ದಲ್ಲಿ ಯಾರನ್ನು ನಂಬಬೇಕು ಎಂಬುದು ಬಹಳ ಮುಖ್ಯ. ನಂಬಿಕೆ (trust) ದ್ರೋಹಿಗಳನ್ನು ಎಂದಿಗೂ ನಮ್ಮ ಹತ್ತಿರ ಬಿಟ್ಟುಕೊಳ್ಳಬಾರದು. ಇಂತಹ ನೀಚ ವ್ಯಕ್ತಿಯನ್ನು ಎಂದಿಗೂ ನಂಬಬಾರದು. ಏಕೆಂದರೆ ಇವರು ನಿಮಗೆ ಗೊತ್ತಿಲ್ಲದೆ ತೊಂದರೆ (trouble) ಗೆ ಸಿಲುಕಿಸಲು ಪ್ರಯತ್ನ ಮಾಡುತ್ತಾರೆ.
ಕೋಪ ಇರುವವರಿಂದ ಅಂತರ ಕಾಯ್ದುಕೊಳ್ಳಿ
ಕೋಪ (anger) ವು ನಾಶಕ್ಕೆ ನಾಂದಿ ಎಂಬ ಮಾತು ಇದೆ. ಅದರಂತೆ ಚಾಣಕ್ಯ ನೀತಿ (chanakya niti) ಯ ಪ್ರಕಾರ ಕೋಪಗೊಂಡ ವ್ಯಕ್ತಿಯಿಂದ ನಾವು ದೂರ ಇರಬೇಕು. ಕೋಪ ಬಂದಾಗ ಆ ವ್ಯಕ್ತಿಗೆ ಯಾವುದರ ಅರಿವು (Awareness) ಇರಲ್ಲ. ಆ ವ್ಯಕ್ತಿಯು ತನಗೆ ಮತ್ತು ಇತರರಿಗೆ ಹಾನಿ (damage) ಮಾಡುತ್ತಾನೆ. ಅವನಿಗೆ ಸರಿ ತಪ್ಪು (right wrong) ಗಳ ಬಗ್ಗೆ ತಿಳುವಳಿಕೆ ಇರಲ್ಲ. ಬರೀ ತನಗೆ ಅನ್ನಿಸಿದ್ದನ್ನು ಮಾತ್ರ ಮಾಡುತ್ತಾನೆ.
ನಾಳೆ ದೇವಶಯನಿ ಏಕಾದಶಿ: ಯಾವ ರಾಶಿಯವರು ಏನು ದಾನ ಮಾಡಬೇಕು?
ದುರಾಸೆ ಇರುವವರು ನಿಮಗೆ ಕಂಟಕ
ಮನುಷ್ಯರಿಗೆ ಆಸೆ ಆಕಾಂಕ್ಷೆ (aspiration) ಗಳು ಇರುವುದು ಸಾಮಾನ್ಯ. ಆದರೆ ದುರಾಸೆ (Greedy) ಇರಬಾರದು. ಆಸೆಯೇ ದುಃಖಕ್ಕೆ ಮೂಲ ಎಂಬಂತೆ, ಇನ್ನು ದುರಾಸೆಯು ಅವನತಿ (decline) ಗೆ ದಾರಿ ಮಾಡಿ ಕೊಡುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರ (Ethics) ದಲ್ಲಿ ಜೀವನದಲ್ಲಿ ದುರಾಸೆ ಇರುವ ವ್ಯಕ್ತಿಗಳಿಂದ ದೂರ ಇರಿ ಎಂದು ಹೇಳಿದ್ದಾರೆ.
ನಾಳೆ ಆಷಾಢ ಏಕಾದಶಿ: ಪೂಜೆ ವಿಧಾನ ಯಾವುದು? ಏನು ಮಾಡಬೇಕು?
ಅಸೂಹೆ ಪಡುವ ವ್ಯಕ್ತಿಯ ಸಹಾಯ ಬೇಡ
ಆಚಾರ್ಯ ಚಾಣಕ್ಯರು ಅಸೂಯೆ (Jealousy) ಗುಣ ಇರುವ ವ್ಯಕ್ತಿಗಳಿಂದ ಯಾವಾಗಲೂ ಅಂತರ (distance) ವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಇವರ ಬಳಿ ಸಹಾಯ (help) ಪಡೆಯಬಾರದು ಎಂದು ಚಾಣಕ್ಯ ಹೇಳಿದ್ದಾರೆ. ಏಕೆಂದರೆ ನಿಮ್ಮ ಮೇಲಿನ ಅಸೂಯೆಯಿಂದ ಅವರು ಅವಕಾಶ ಪಡೆದುಕೊಂಡು, ನಿಮಗೆ ಹಾನಿ (damage) ಮಾಡುತ್ತಾರೆ. ಅವರು ಎಂದಿಗೂ ನಿಮ್ಮ ಏಳ್ಗೆಯನ್ನು ಸಹಿಸಲ್ಲ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.