Asianet Suvarna News Asianet Suvarna News

Chanakya Niti: ಜೀವನ ಸಂಗಾತಿ ಆಯ್ಕೆ ಮಾಡುವಾಗ ಈ ವಿಷಯ ಪರಿಗಣಿಸಿ

ಪ್ರತಿಯೊಬ್ಬರ ಜೀವನದಲ್ಲೂ ವಿವಾಹವು ಬಹಳ ದೊಡ್ಡ ನಿರ್ಧಾರ. ಅದನ್ನು ತೆಗೆದುಕೊಳ್ಳುವ ಮೊದಲು, ನಿಮ್ಮ ಜೀವನ ಸಂಗಾತಿಯಾಗುವ ವ್ಯಕ್ತಿಯನ್ನು ಕೂಲಂಕಷವಾಗಿ ಪರೀಕ್ಷಿಸಬೇಕು. ಈ ವಿಷಯದಲ್ಲಿ, ಆಚಾರ್ಯ ಚಾಣಕ್ಯರು ಹೇಳಿದ ಈ ವಿಷಯಗಳು ನಿಮಗೆ ಸಹಾಯಕವಾಗಬಹುದು.

Chanakya Niti 2022 Know the qualities while choosing a life partner skr
Author
First Published Sep 21, 2022, 11:14 AM IST

ಮದುವೆಯು ನಿಮ್ಮ ಇಡೀ ಜೀವನವನ್ನು ಬದಲಾಯಿಸುವ ನಿರ್ಧಾರವಾಗಿದೆ. ನಿಮಗೆ ಉತ್ತಮ ಜೀವನ ಸಂಗಾತಿ ಸಿಕ್ಕರೆ ಜೀವನದ ಎಲ್ಲಾ ಸವಾಲುಗಳನ್ನು ಜಯಿಸುವುದು ಸುಲಭವಾಗುತ್ತದೆ. ಆದರೆ ಸಂಗಾತಿ ಸರಿಯಿಲ್ಲದಿದ್ದರೆ ಇಡೀ ಜೀವನವೇ ಸವಾಲಾಗಿ ಪರಿಣಮಿಸುತ್ತದೆ. ಆದ್ದರಿಂದ, ಯಾವುದೇ ವ್ಯಕ್ತಿಯೊಂದಿಗೆ ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಅವನು ಅಥವಾ ಅವಳನ್ನು ಸಂಪೂರ್ಣವಾಗಿ ಪರೀಕ್ಷಿಸುವುದು ಬಹಳ ಮುಖ್ಯ. ಆಚಾರ್ಯ ಚಾಣಕ್ಯರು ತಮ್ಮ ಪುಸ್ತಕದಲ್ಲಿ ಹೇಳಿರುವ ಈ ವಿಷಯಗಳನ್ನು ಮಸ್ತಕದಲ್ಲಿಟ್ಟುಕೊಂಡರೆ ಉತ್ತಮ ಸಂಗಾತಿಯ ಆಯ್ಕೆ ಸುಲಭವಾಗಬಹುದು.

ಜೀವನ ಸಂಗಾತಿ(Life partner)ಯನ್ನು ಹೊಂದಿರುವುದು ಬಹಳ ಮುಖ್ಯ. ಜೀವನದ ಏಳುಬೀಳುಗಳೆರಡರಲ್ಲೂ ಅವರು ನಿಮ್ಮೊಂದಿಗೆ ನಿಲ್ಲುತ್ತಾರೆ. ಇಂಥವರು ಇದ್ದರೆ ಎಂಥ ಕಷ್ಟವನ್ನೂ ದೃಢ ಮನಸ್ಸಿನಿಂದ ಎದುರಿಸಬಹುದು. 
ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರ ಆಲೋಚನೆಗಳ ಬಗ್ಗೆ ಗಮನಿಸಿ. ಅವರೆಲ್ಲ ಯೋಚನೆಗಳು ಉತ್ತಮವಾಗಿವೆ, ಅಲ್ಲಿ ಕೊಳಕು ತರ್ಕಕ್ಕೆ ಜಾಗವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.  
ವಿವಾಹದ ಕುರಿತಾಗಿ ಆಚಾರ್ಯ ಚಾಣಕ್ಯರು ಹೀಗೆ ಹೇಳಿದ್ದಾರೆ -
ವರ್ಯೇತ್ ಕುಲಜನ್ ಪ್ರಜ್ಞಾನೋ ವಿರೂಪಮ್ಪಿ ಕನ್ಯಕಾಂ, ರೂಪಶೀಲಂ ನ ನಿಚೇಷ್ಯ ವಿವಾಹ: ಇದೇ ನಿಯಮ.

ಒತ್ತಡದಲ್ಲಿ ವಿವಾಹ ಮಾಡಬಾರದು
ಆಚಾರ್ಯ ಚಾಣಕ್ಯ(Acharya Chanakya)ರು ಮದುವೆಯನ್ನು ಯಾವುದೇ ಒತ್ತಡದಲ್ಲಿ ಮಾಡಬಾರದು ಎಂದು ನಂಬುತ್ತಾರೆ. ಒತ್ತಡ(pressure)ದಲ್ಲಿ ಮಾಡಿದ ಮದುವೆ ರಾಜಿಯಾಗುತ್ತದೆ. ಕುಟುಂಬದವರ ಒತ್ತಡಕ್ಕೆ ಮಣಿದು ಮದುವೆಯಾಗುವುದು ಅಥವಾ ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂಬುದು ಚಾಣಕ್ಯರ ನಂಬಿಕೆ. 

Pitru Paksha: ಶುಭ ಫಲ ಸಿಗಲು ಪಿತೃ ಪಕ್ಷದಲ್ಲಿ ಈ ವಸ್ತುಗಳನ್ನು ದಾನ ಮಾಡಿ

ನಿಮಗೆ ಎಂಥವರು ಬೇಕು ಎಂಬುದು ನಿಮಗಿಂತ ಚೆನ್ನಾಗಿ ಇನ್ನಾರಿಗೂ ತಿಳಿದಿರುವುದು ಸಾಧ್ಯವಿಲ್ಲ. ನಿಮ್ಮ ಕುಟುಂಬ ಕೂಡಾ ನಿಮ್ಮಷ್ಟು ಸರಿಯಾಗಿ ಯಾರು ನಿಮಗೆ ಸರಿಯಾದ ಜೀವನ ಸಂಗಾತಿ ಎಂದು ಗುರುತಿಸಲಾರರು. ಪ್ರತಿ ಕಷ್ಟದಲ್ಲಿ, ಏರಿಳಿತಗಳಲ್ಲಿ, ಎಲ್ಲದರಲ್ಲೂ ನಿಮ್ಮನ್ನು ಬೆಂಬಲಿಸುವಂಥ ವ್ಯಕ್ತಿತ್ವವನ್ನು ನೀವೇ ಆರಿಸಿ. ಆದ್ದರಿಂದ, ಮದುವೆ(marriage)ಯನ್ನು ಯಾವಾಗಲೂ ಯೋಚಿಸಿದ ನಂತರವೇ ಆಗಬೇಕು. ಇದರಲ್ಲಿ ಯಾವುದೇ ಆತುರ ತೋರಿಸಬೇಡಿ ಮತ್ತು ಯಾವುದೇ ಒತ್ತಡದಲ್ಲಿ ಮದುವೆಯಾಗಬೇಡಿ. ಇಲ್ಲದಿದ್ದರೆ ಭವಿಷ್ಯದಲ್ಲಿ ಪತಿ-ಪತ್ನಿಯ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಆಗ ಆ ಸಂಬಂಧದಲ್ಲಿ ಪ್ರೀತಿಯೇ ಇರುವುದಿಲ್ಲ.

ತಾಳ್ಮೆ ಇದೆಯೇ?
ಯಾರ ಪರಿಸ್ಥಿತಿಯೂ ಸದಾ ಒಂದೇ ರೀತಿ ಇರುವುದಿಲ್ಲ. ಜೀವನವು ಅದರ ಏರಿಳಿತಗಳನ್ನು ಹೊಂದಿದೆ. ಇಂಥ ಎಲ್ಲ ಪರಿಸ್ಥಿತಿಗಳಲ್ಲೂ ನಿಮ್ಮ ಜೀವನ ಸಂಗಾತಿಯೊಂದಿಗೆ ತಾಳ್ಮೆಯಿಂದಿರುವುದು ಬಹಳ ಮುಖ್ಯ. ನಿಮ್ಮ ಸಂಗಾತಿಗೆ ತಾಳ್ಮೆ ಇದೆಯೇ ಅಥವಾ ಇಲ್ಲವೇ ಎಂಬ ವಿಷಯವನ್ನು ಖಂಡಿತವಾಗಿ ಪರಿಶೀಲಿಸಿ. ತಾಳ್ಮೆ(Patience)ಯ ವ್ಯಕ್ತಿ ತೊಂದರೆಯಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಮತ್ತು ಅದೇ ಸಮಯದಲ್ಲಿ ನಿಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾರೆ. ನಿಮ್ಮ ಜೀವನ ಸಂಗಾತಿಯಲ್ಲಿ ಈ ಗುಣಗಳು ಇದ್ದರೆ, ನೀವು ಸುಲಭವಾಗಿ ದೊಡ್ಡ ಸವಾಲನ್ನು ಜಯಿಸುತ್ತೀರಿ. ಅಲ್ಲದೆ, ನಿಮ್ಮ ಸಂಗಾತಿಯೊಂದಿಗೆ ಜೀವನವು ತುಂಬಾ ಸಂತೋಷವಾಗಿರುತ್ತದೆ.

ಧಾರ್ಮಿಕ ಪ್ರವೃತ್ತಿ ಮುಖ್ಯ
ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಯಾವುದೇ ವ್ಯಕ್ತಿಗೆ ಧಾರ್ಮಿಕ ಪ್ರವೃತ್ತಿಯನ್ನು ಹೊಂದಿರುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಏಕೆಂದರೆ ಧರ್ಮವಿಲ್ಲದ ವ್ಯಕ್ತಿ ಸುಲಭವಾಗಿ ಅನ್ಯಾಯದ ಕಡೆ ವಾಲುತ್ತಾನೆ. ನಿಮ್ಮ ಜೀವನ ಸಂಗಾತಿಯು ಧರ್ಮ(religion)ದ ಕಡೆಗೆ ಒಲವು ಹೊಂದಿದ್ದರೆ, ಅನ್ಯಾಯದ ಕೃತ್ಯವನ್ನು ಮಾಡುವ ಮೊದಲು ಖಂಡಿತವಾಗಿಯೂ ಅದನ್ನು ಒಮ್ಮೆ ಪರಿಗಣಿಸುತ್ತಾರೆ. ಆದ್ದರಿಂದ ನೀವು ನಿಮಗಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ, ಅವರು ಧಾರ್ಮಿಕ ಸ್ವಭಾವದವರಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಸಂಸಾರದಲ್ಲಿ ಸಂಸ್ಕಾರವಂತ ಸೊಸೆ ಬಂದರೆ ಇಡೀ ಮನೆಯನ್ನು ಸುಸಂಸ್ಕೃತರನ್ನಾಗಿಸುತ್ತಾಳೆ. ಅಂತೆಯೇ ಧರ್ಮವಂತ ವ್ಯಕ್ತಿಯು ಹೆಚ್ಚು ಪ್ರಾಮಾಣಿಕನಾಗಿರುತ್ತಾನೆ. 

ಸೌಂದರ್ಯಕ್ಕೆ ಮಣೆ ಹಾಕಬೇಡಿ
ಆಚಾರ್ಯ ಚಾಣಕ್ಯ ಅವರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ, ನೀವು ಅವರ ಮುಖವನ್ನು ನೋಡಬಾರದು ಎಂದು ನಂಬುತ್ತಾರೆ ಏಕೆಂದರೆ ಸೌಂದರ್ಯವು ಸ್ವಲ್ಪ ಸಮಯದ ನಂತರ ಮರೆಯಾಗುತ್ತದೆ. ಆದರೆ ಆಂತರಿಕ ಸೌಂದರ್ಯ(Inner beauty)ವು ಎಲ್ಲಿಯೂ ಹೋಗುವುದಿಲ್ಲ. ಆಂತರಿಕ ಸೌಂದರ್ಯವು ನಿಮ್ಮ ಜೀವನದುದ್ದಕ್ಕೂ ನಿಮ್ಮನ್ನು ಸುಂದರವಾಗಿರಿಸುತ್ತದೆ. ನಿಮ್ಮ ಜೀವನ ಸಂಗಾತಿಯು ಈ ಗುಣಗಳನ್ನು ಹೊಂದಿದ್ದರೆ, ಅವರು ಕುಟುಂಬವನ್ನು ಒಟ್ಟಿಗೆ ಇಡುತ್ತಾರೆ. ಹಾಗಾಗಿ, ಆಂತರಿಕ ಸೌಂದರ್ಯಕ್ಕೆ ಮಾತ್ರ ಮನ್ನಣೆ ಕೊಡಿ, ಬಾಹ್ಯ ಸೌಂದರ್ಯವನ್ನು ಕಡೆಗಣಿಸಿ. 

Chanakya niti : ಸಂತೋಷವನ್ನೇ ನಾಶ ಮಾಡುವ ಜೀವನದ 3 ದುಃಖಗಳು

ಪರಸ್ಪರ ಗೌರವ(Mutual respect)
ಯಾವುದೇ ಸಂಬಂಧದಲ್ಲಿ ಗೌರವವನ್ನು ಹೊಂದಿರುವುದು ಬಹಳ ಮುಖ್ಯ ಎಂದು ಚಾಣಕ್ಯ ನಂಬುತ್ತಾರೆ. ಪತಿ-ಪತ್ನಿಯರ ನಡುವಿನ ಸಂಬಂಧದ ವಿಷಯಕ್ಕೆ ಬಂದರೆ, ಇಬ್ಬರೂ ಪರಸ್ಪರ ಗೌರವವನ್ನು ಹೊಂದಿರಬೇಕು. ಆಗ ಮಾತ್ರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯಲ್ಲಿ ಹಿರಿಯರ ಬಗ್ಗೆ ಗೌರವ ಭಾವನೆಯೂ ಇರಬೇಕು. ಇದರಿಂದ ಅವರು ನಿಮ್ಮ ಹೆತ್ತವರನ್ನೂ ಗೌರವಿಸುತ್ತಾರೆ. 

Follow Us:
Download App:
  • android
  • ios