Asianet Suvarna News Asianet Suvarna News

Chanakya Neeti: ಹಣ ಮತ್ತು ಹೆಣ್ಣು ಒಂದೇ ಥರ ಅಂತಾನೆ ಚಾಣಕ್ಯ; ಅದು ಹೇಗೆ?

ಅರ್ಥಶಾಸ್ತ್ರ ಬರೆದ ಆಚಾರ್ಯ ಬರೆಯದೇ ಇದ್ದ ನೀತಿಯ ವಿಷಯವೇ ಇಲ್ಲ. ದಾಂಪತ್ಯದಿಂದ ಹಿಡಿದು ಸಮಾಜದವರೆಗೆ, ಹಣಕಾಸಿನಿಂದ ಹಿಡಿದು ರೊಮ್ಯಾನ್ಸ್‌ ವರೆಗೆ ಅನೇಕ ವಿಷಯಗಳು ಚಾಣಕ್ಯ ನೀತಿಯಲ್ಲಿವೆ. ಹಣಕಾಸಿನ ಬಗ್ಗೆ ಆತ ಹೇಳಿದ ಕುತೂಹಲಕಾರಿ ಸಂಗತಿ ಇಲ್ಲಿದೆ.

 

chanakya neeti says woman and money are one and the same bni
Author
First Published Aug 13, 2024, 7:28 PM IST | Last Updated Aug 13, 2024, 7:28 PM IST


ಆಚಾರ್ಯ ಚಾಣಕ್ಯರ ಪ್ರಕಾರ ಹಣ ಮತ್ತು ಹೆಣ್ಣು ಒಂದೇ ರೀತಿಯ ಸ್ವಭಾವದರಂತೆ. ಅದು ಯಾಕೆಂಬುದಕ್ಕೂ ಚಾಣಕ್ಯರು ಕಾರಣ ನೀಡುತ್ತಾರೆ. ಈ ಕಾರಣಗಳನ್ನು ನೋಡಿದರೆ, ಅವರು ಹೇಳಿದ್ದು ನಿಜವೋ ಅಲ್ಲವೋ ಎಂಬುದು ನಿಮಗೇ ಅರ್ಥವಾಗುತ್ತದೆ.

1) ಮೊದಲನೆಯದಾಗಿ, ಹಣವನ್ನು ಪರಿಶ್ರಮದಿಂದ ಗಳಿಸಬೇಕು. ಹೆಣ್ಣನ್ನು ಕೂಡ ಹೀಗೆಯೇ ಕಷ್ಟಪಟ್ಟೇ ಗಳಿಸಬೇಕು. ಹೆಣ್ಣು ಯಾವುದೇ ಪುರುಷನಿಗೆ ಸುಲಭವಾಗಿ ಒಲಿಯುವವಳಲ್ಲ. ಅವಳು ಗಂಡಿನಲ್ಲಿ ಹಲವು ಗುಣಗಳಿರಲಿ ಎಂದು ಅಪೇಕ್ಷಿಸುತ್ತಾಳೆ. ಅದರಲ್ಲಿ ಒಂದು, ಆತ ತನ್ನನ್ನು ರಕ್ಷಿಸಬಲ್ಲನೇ ಎನ್ನುವುದು. ರಕ್ಷಿಸುವ ಸಾಮರ್ಥ್ಯ ಇದ್ದವನಲ್ಲಿ ಆಕೆ ಬರುತ್ತಾಳೆ. ಹಣವೂ ಹೀಗೆಯೇ. ಹಣವನ್ನು ರಕ್ಷಿಸಬಲ್ಲನಾದರೆ ಅದು ಆತನಲ್ಲಿ ಉಳಿಯುತ್ತದೆ.

2) ಹಣವನ್ನು ಪ್ರೀತಿಸಬೇಕು; ಹೇಗೆ ನೀವು ಹೆಣ್ಣನ್ನು ಪ್ರೀತಿಸುತ್ತೀರೋ ಹಾಗೆಯೇ. ಹಣವನ್ನು ನಿಮ್ಮಲ್ಲಿ ಉಳಿಸಿಕೊಳ್ಳುವುದಕ್ಕೆ ಬೇರೆ ದಾರಿಯೇ ಇಲ್ಲ. ತನ್ನನ್ನು ಅಪಾರವಾಗಿ ಪ್ರೀತಿಸುವ ಪುರುಷನನ್ನು ಹೆಣ್ಣು ಎಂದಿಗೂ ಬಿಟ್ಟು ಹೋಗುವುದೇ ಇಲ್ಲ. ಹಾಗೆಯೇ ಹಣ ಸಹ. ಅಂದರೆ ಪೆಟ್ಟಿಗೆಯಲ್ಲಿ ಗಂಟು ಕಟ್ಟಿ ಕೂಡಿಡಬೇಕು ಎಂದು ಅರ್ಥವಲ್ಲ. ಜೋಪಾನವಾಗಿ ನೋಡಿಕೊಳ್ಳಬೇಕು ಎಂದು ಅರ್ಥ. ಮಿತವ್ಯಯ ಮಾಡುವುದು, ಅನಗತ್ಯವಾಗಿ ವೆಚ್ಚ ಮಾಡದೆ ಇರುವುದು ಮುಖ್ಯ.

3) ದುಷ್ಟರ ಬಳಿ ಬಿಡಬಾರದು. ಹೆಣ್ಣನ್ನು ದುಷ್ಟರ ಬಳಿ ಹೇಗೆ ಬಿಡಬಾರದೋ ಹಾಗೆಯೇ ಹಣವನ್ನು ದುಂದುವೆಚ್ಚ ಮಾಡುವವರ ಬಳಿ ಕೊಡಬಾರದು. ಹಣದ ಮೌಲ್ಯ ಗೊತ್ತಿರುವವರ ಬಳಿ ಮಾತ್ರವೇ ಅದನ್ನು ಕೊಡಬೇಕು. ಪ್ರತಿಯೊಂದು ವೆಚ್ಚವನ್ನೂ ಬರೆದಿಡಬೇಕು. ಸಾಲ ಕೊಡಬಾರದು. ಹಾಗೆಯೇ ಅನಿವಾರ್ಯ ಅಲ್ಲದಿದ್ದರೆ ಸಾಲ ಪಡೆಯಬಾರದು. ಶ್ರೀಮಂತರಾಗಲು ನಿಮ್ಮ ಆದಾಯವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು.

4) ಹೇಗೆ ನೀವು ಹೆಣ್ಣನ್ನು ನಯವಾಗಿ, ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುತ್ತೀರೋ ಹಾಗೇ ಉತ್ತಮ ರೀತಿಯಲ್ಲಿ ಹಣವನ್ನು ವಿನಿಯೋಗ ಮಾಡಬೇಕು. ಕೆಟ್ಟ ಕೆಲಗಳಿಗೆ ಬಳಸಿದರೆ ಆಪಖ್ಯಾತಿ ಖಂಡಿತ. ಹಾಗೆಯೇ ಅಂಥ ಹಣವೂ ಹೆಣ್ಣೂ ಬಲು ಬೇಗ ನಿಮ್ಮ ಕೈಯಿಂದ ಜಾರಿ ಹೋಗುವುದು. ಹಣವನ್ನು ಸರಿಯಾದ ಕಡೆಯಲ್ಲಿ ಹೂಡಿಕೆ ಮಾಡಬೇಕು. ಆಗ ಅದು ಉತ್ತಮ ರೀತಿಯಲ್ಲಿ ಮರಳಿ ಬರುತ್ತದೆ. ಶ್ರೀಮಂತನಾಗಲು ಬಯಸುವ ವ್ಯಕ್ತಿಯು ಅಪಾಯಗಳನ್ನು ತೆಗೆದುಕೊಳ್ಳಲು ಎಂದಿಗೂ ಹೆದರಬಾರದು, ಆದರೆ ಬುದ್ಧಿವಂತಿಕೆಯಿಂದ ಯೋಚಿಸಿದ ನಂತರ ಅಪಾಯಕ್ಕೆ ಸರಿಯಾದ ಉಪಾಯಗಳನ್ನು ತೆಗೆದುಕೊಳ್ಳಬೇಕು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.

ಶನಿವಾರ ನಿಮ್ಮ ಚಪ್ಪಲಿ ಕಳೆದು ಹೋದರೆ ಏನರ್ಥ ಗೊತ್ತಾ?

5) ಜ್ಞಾನ ಮತ್ತು ಶಿಕ್ಷಣ ಬಲು ಮುಖ್ಯ. ಅದು ಹಣವನ್ನು ಬಳಸುವ ರೀತಿಯಲ್ಲಿ ಮುಖ್ಯ. ಹಾಗೆಯೇ ನೀವು ಜೊತೆಗಿರುವ ಹೆಣ್ಣಿನಲ್ಲೂ ಜ್ಞಾನ ಮತ್ತು ಶಿಕ್ಷಣ ಇರಬೇಕು. ಅವು ಇದ್ದರೆ ನಿಮಗೆ ಸಮಾಜದಲ್ಲಿ ಮರ್ಯಾದೆ. ಕೆಟ್ಟ ನಡತೆಯ ಹೆಣ್ಣು ಸಮಾಜದಲ್ಲಿ ನಿಮ್ಮ ಮರ್ಯಾದೆ ತೆಗೆದುಬಿಡುತ್ತಾಳೆ. ಹಾಗೆಯೇ ಕೆಟ್ಟ ರೀತಿಯಲ್ಲಿ ಬಂದ ಹಣ ನಿಮಗೆ ಅಪಖ್ಯಾತಿ ತಂದುಕೊಡುತ್ತದೆ.

6) ಒಲಿಸಿಕೊಳ್ಳುವ ಪ್ರಯತ್ನ ಇಂಟಾರ್ಟೆಂಟು: ಹುಡುಗಿ ಥಟ್ಟನೆ ಒಲಿಯುವುದಿಲ್ಲ. ಹಾಗೇ ಶ್ರೀಮಂತರಾಬೇಕೆಂದಾಕ್ಷಣ ಎಲ್ಲರಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ. ಶ್ರೀಮಂತಿಕೆಯ ಸುಖವನ್ನು ಅನುಭವಿಸಬೇಕಾದರೆ ಅದು ಒಂದಿಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಒಂದೇ ಕ್ಷಣದಲ್ಲಿ ಯಾರಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ. ಆದ್ದರಿಂದ ಫಲಿತಾಂಶದ ಬಗ್ಗೆ ಯೋಚಿಸದೆ ನಿರಂತರವಾಗಿ ಸರಿಯಾದ ಕಾರ್ಯಗಳನ್ನು ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು. ಚಾಣಕ್ಯ ನೀತಿಯ ಪ್ರಕಾರ, ಇದಕ್ಕಾಗಿ ವ್ಯಕ್ತಿಯು ತಾಳ್ಮೆ ಮತ್ತು ಸಂಯಮವನ್ನು ಹೊಂದಿರುವುದು ಬಹಳ ಮುಖ್ಯ.

ವಿರುದ್ಧ ಸ್ವಭಾವದ ರಾಶಿಗಳು ಇವು; ದಾಂಪತ್ಯದಲ್ಲಿ ನಿಮ್ಮ ಸಮತೋಲನ ಕಾಪಾಡಿಕೊಳ್ಳಿ!
 

Latest Videos
Follow Us:
Download App:
  • android
  • ios