Asianet Suvarna News Asianet Suvarna News

ಮನೆಯಲ್ಲಿ ಮಡದಿ ಹೀಗಿದ್ದರೆ ಲಕ್ ನಿಮಗೆ ಒಲಿಯೋದು ಗ್ಯಾರಂಟಿ ಅಂತಾನೆ ಚಾಣಕ್ಯ!

ಚಾಣಕ್ಯನ ಪ್ರಕಾರ, ಮನೆಯಲ್ಲಿ ಈ ಕೆಳಗಿನ ವಸ್ತುಗಳು, ವಿಷಯಗಳು ಇದ್ದರೆ ಮನೆಯಲ್ಲಿ ಸದಾ ಶುಭವಂತೆ. ಇವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತವಂತೆ.

chanakya neeti says these things auspicious and bring luck to home
Author
First Published Sep 9, 2023, 10:19 AM IST

ಚಾಣಕ್ಯ ಬರೀ ರಾಜನೀತಿಜ್ಞ ಮಾತ್ರವಲ್ಲ. ಆತ ಮಹಾಜ್ಞಾನಿ. ಚಂದ್ರಗುಪ್ತ ಮೌರ್ಯನ ಮಹಾಮಂತ್ರಿಯಂತೆ ಆತ ಕೆಲಸ ಮಾಡಿದ. ಇವನಿಗೆ ಜ್ಯೋತಿಷ್ಯದಿಂದ ಹಿಡಿದು ವಾಸ್ತುಶಾಸ್ತ್ರದ ವರೆಗೆ ಎಲ್ಲವೂ ತಿಳಿದಿದ್ದವು. ಹಾಗೆ ಎಲ್ಲ ವಿಷಯಗಳಿಗೂ ಸಂಬಂಧಿಸಿ ಕೆಲವೇ ಕೆಲವು ಸೂತ್ರಗಳಂಥ ಮಾತುಗಳನ್ನು ಚಾಣಕ್ಯ ನೀತಿಯಲ್ಲಿ ಹೇಳಿದ್ದಾನೆ. ರಾಜ್ಯದ ಆಡಳಿತದ ನೀತಿಯ ಬಗ್ಗೆ ಹೇಳಿದಂತೆಯೇ ಮನೆಯಲ್ಲಿ ವಾಸಿಸುವ ಕ್ರಮ, ಅದರ ಶುಭಾಶುಭಗಳ ಬಗ್ಗೆಯೂ ಅದರಲ್ಲಿ ಹೇಳಿದ್ದಾನೆ.   ಆತನ ಪ್ರಕಾರ, ಮನೆಯಲ್ಲಿ ಈ ಕೆಳಗಿನ ವಸ್ತುಗಳು, ವಿಷಯಗಳು ಇದ್ದರೆ ಮನೆಯಲ್ಲಿ ಸದಾ ಶುಭವಂತೆ. ಇವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತವಂತೆ. 

ಶುಭಲಕ್ಷಣದ ಸ್ತ್ರೀ
ಮನೆಯಲ್ಲಿ ಶುಭಲಕ್ಷಣಗಳಿರುವ ಹುಡುಗಿ ಅಥವಾ ಸ್ತ್ರೀ ಇರಬೇಕು. ಆಕೆಯೇ ಮಡದಿಯಾಗಿದ್ದರೆ, ಆಕೆಯ ಮನಸ್ಸು ನೋಯದಂತೆ ನೋಡಿಕೊಳ್ಳಬೇಕು. ಶುಭಲಕ್ಷಣಗಳೆಂದರೆ ಆಕೆ ಕಾಲಿಟ್ಟಲ್ಲಿ ಒಳ್ಳೆಯದಾಗುವುದು, ಆಕೆ ಸದಾ ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸುವವಳು, ಅನ್ಯಾಯವನ್ನು ಸಹಿಸದವಳು, ಸದಾ ದೈವಭಕ್ತಿ ಹೊಂದಿರುವವಳು, ವೃಥಾ ಖರ್ಚು ಮಾಡದವಳು, ಇತ್ಯಾದಿ. ಇಂಥ ಶುಭಲಕ್ಷಣೆ ಇದ್ದರೆ ಆ ಮನೆ ಸದಾ ವೃದ್ಧಿಯಾಗುತ್ತಲೇ ಇರುತ್ತದೆ. ಈಕೆಯ ಮನಸ್ಸು ನೋಯಿಸಬಾರದು ಮಾತ್ರ.

ಶ್ವೇತ ಧೇನು
ಶ್ವೇತ ವರ್ಣದ ಧೇನು ಅಥವಾ ಬಿಳಿ ಬಣ್ಣದ ಹಸು ಇದ್ದಲ್ಲಿ ಆ ಮನೆಯ ಸದಾ ಮಂಗಲಾತ್ಮಕವಾಗಿರುತ್ತದೆ. ಅಂಥ ಮನೆಯನ್ನು ಬಿಟ್ಟು ಹೋಗಲು ಲಕ್ಷ್ಮಿದೇವಿ ಒಪ್ಪುವುದೇ ಇಲ್ಲ. ಈಕೆ ಇದ್ದಲ್ಲಿ ಮುಕ್ಕೋಟಿ ದೇವತೆಗಳೂ ನೆಲೆಸಿರುತ್ತಾರೆ. ಈ ಧೇನುವನ್ನು ಸದಾ ಉತ್ತಮ ಆಹಾರ ನೀಡಿ, ಪೂಜಿಸಿ, ಮೈ ನೇವರಿಸಿ ನೋಡಿಕೊಂಡರೆ ಆಕೆ ನಿಮ್ಮ ಹಲವು ತಲೆಮಾರುಗಳಿಗೆ ಸಾಕಾಗುವಷ್ಟು ಪುಣ್ಯವನ್ನು ನಿಮ್ಮಲ್ಲಿ ಶೇಖರಿಸುತ್ತಾಳೆ.   

ದಕ್ಷಿಣಾವರ್ತಿ ಶಂಖ
ದಕ್ಷಿಣ ಮುಖದ ಶಂಖ ಅಥವಾ ದಕ್ಷಿಣಾವರ್ತಿ ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ವೇದಗಳಲ್ಲಿ ಮತ್ತು ಪುರಾಣಗಳಲ್ಲಿ ವಿವರಿಸಲಾಗಿದೆ. ದಕ್ಷಿಣಾವರ್ತಿ ಶಂಖವನ್ನು ಮನೆಯಲ್ಲಿ ದಕ್ಷಿಣ ಭಾಗದಲ್ಲಿ ಇಟ್ಟರೆ ಶತ್ರುಗಳ ಭಯ ಇರದು. ಇದು ಅಪಘಾತ, ಸಾವು ಮತ್ತು ಕಳ್ಳತನದ ಭಯವನ್ನು ತೆಗೆದುಹಾಕುತ್ತದೆ. ಇದು ಸಾಲ, ರೋಗ ಮತ್ತು ಬಡತನವನ್ನು ತೆಗೆದುಹಾಕುತ್ತದೆ. ಮನೆಯಲ್ಲಿ ಸಂತೋಷ, ಸಮೃದ್ಧಿಯು ಹೆಚ್ಚಾಗುತ್ತದೆ.

Chanakya Neeti: ಈ ಶಬ್ದಗಳನ್ನು ಉಚ್ಚರಿಸಿದರೂ ಸಾಕು, ದುರದೃಷ್ಟ ನಿಮ್ಮನ್ನು ಬೆನ್ನಟ್ಟುತ್ತದೆ!

ಧೂಪದ್ರವ್ಯ
ಮಂದಿರಗಳಲ್ಲಿ ಅಗರಬತ್ತಿ ಅಥವಾ ಧೂಪವನ್ನು ಸುಡುವುದು ಯುಗಗಳಿಂದಲೂ ಆಚರಣೆಯಲ್ಲಿದೆ. ಧೂಪದ್ರವ್ಯದೊಂದಿಗಿನ ಬಾಂಧವ್ಯದ ಹಿಂದಿನ ಸರಳವಾದ ವೈದಿಕ ವಿವರಣೆಯೆಂದರೆ, ಧೂಪವನ್ನು ಸುಡುವುದರಿಂದ ಉಂಟಾಗುವ ಹೊಗೆಯು ಹೊರಹೋಗುವಂತೆ, ಮನೆಯ ನಕಾರಾತ್ಮಕತೆಯೂ ಹೊರ ಹೋಗುತ್ತದೆ. ಸಂಜೆಯ ವೇಳೆ ಧೂಪ ಸುಡುವುದರಿಂದ ಪರಿಮಳವೂ ಹೌದು, ಅದೃಷ್ಟವೂ ಹೌದು. 

ತುಳಸಿ ಗಿಡ
ಮನೆಗಳಲ್ಲಿ ತುಳಸಿ ಇರುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ತುಳಸಿ ಸಸ್ಯವು ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಮನೆಯಲ್ಲಿನ ಎಲ್ಲಾ ರೀತಿಯ ಬಡತನವನ್ನು ತೆಗೆದುಹಾಕುತ್ತದೆ. ತುಳಸಿ ಗಿಡಕ್ಕೆ ಚಳಿಗಾಲದಲ್ಲಿ ವಿಶೇಷ ಕಾಳಜಿ ಬೇಕು. ಚಳಿಗಾಲದ ಅವಧಿಯಲ್ಲಿ, ತುಳಸಿ ಗಿಡವನ್ನು ತೆರೆದ ಆಕಾಶದ ಕೆಳಗೆ ಇಡಬಾರದು. ಪ್ರತಿದಿನ ಸಂಜೆ ತುಳಸಿ ಕೆಳಗೆ ದೀಪವನ್ನು ಹಚ್ಚುವುದರಿಂದ ನಮ್ಮೆಲ್ಲಾ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.

Chanakya Neeti: ಚಾಣಕ್ಯ ಹೇಳುವಂತೆ ನಿಮ್ಮ ಹಿತಶತ್ರುಗಳನ್ನು ಹೀಗೆ ಪತ್ತೆ ಮಾಡಿ
 

Follow Us:
Download App:
  • android
  • ios