Asianet Suvarna News Asianet Suvarna News

Chanakya Neeti: ಈ ಶಬ್ದಗಳನ್ನು ಉಚ್ಚರಿಸಿದರೂ ಸಾಕು, ದುರದೃಷ್ಟ ನಿಮ್ಮನ್ನು ಬೆನ್ನಟ್ಟುತ್ತದೆ!

ಕೆಲವೊಮ್ಮೆ ನಾವು ಕೆಲವು ಪದ, ಮಾತುಗಳನ್ನು ನಮ್ಮನಮ್ಮಲ್ಲೇ ಉಚ್ಚರಿಸುತ್ತಾ ಇರುತ್ತೇವೆ. ಅವು ಹಾಗೆ ಮಾತಾಡುವವನಿಗೇ ಸ್ವತಃ ಹಾನಿ (harmful words). ಅವುಗಳನ್ನು ನಾವು ಗಟ್ಟಿಯಾಗಿ ಉಚ್ಚರಿಸಲೂಬಾರದು,

Chanakya Neeti: these words are Unfortunate, telling these will bring you harm
Author
First Published Sep 3, 2023, 11:30 AM IST

ಆಚಾರ್ಯ ಚಾಣಕ್ಯರು (Chanakya) ಭಾರತ ದೇಶ ಕಂಡ ಮಹಾನ್‌ ರಾಜನೀತಿ (Politician)  ಶಾಸ್ತ್ರಜ್ಞ, ಬುದ್ಧಿವಂತ, ಶಾಸ್ತ್ರಜ್ಞ, ಅರ್ಥಕೋವಿದ. ಇವರು ಚಾಣಕ್ಯ ಜತೆಗೆ ಕೌಟಿಲ್ಯ (Kautilya) ಎಂಬ ಹೆಸರಿನಿಂದಲೂ ಪ್ರಸಿದ್ಧರು. ಮೌರ್ಯ ಸಾಮ್ರಾಜ್ಯದ ಸ್ಥಾಪನೆಯ ಮೂಲ ಕರ್ತೃವೇ ಇವರು. ದುಷ್ಟರಾದ ನಂದರನ್ನು ಸೋಲಿಸಿ, ಸಾಯಿಸಿ, ಚಂದ್ರಗುಪ್ತನಿಗೆ ಪಟ್ಟವಾಗುವಂತೆ ಮಾಡಿದವರು ಇವರು. ಇವರು ರಚಿಸಿದ ಒಂದೇ ಒಂದು ಗ್ರಂಥ ಚಾಣಕ್ಯನೀತಿ (Chanakya Neeti). ಇದರಲ್ಲಿ ರಾಜಕೀಯ, ದಾಂಪತ್ಯ, ಸಾಮಾಜಿಕ, ತಂತ್ರಗಾರಿಕೆ, ರಸೌಷಧ, ನೀತಿ ಇತ್ಯಾದಿಗಳಿಗೆಲ್ಲ ಸಂಬಂಧಿಸಿದ ಹಲವು ಸೂತ್ರಗಳೂ, ಶ್ಲೋಕಗಳೂ ಇವೆ. ಇಂದಿಗೂ ನಮ್ಮ ಸಾಮಾಜಿಕ ಬದುಕಿಗೆ ಬೇಕಾದ ನೀತಿ ನಡವಳಿಕೆಗಳಲ್ಲಿ ಪಾಲಿಸಬಹುದಾದ ಬಹಳ ವಿಷಯಗಳು ಇದರಲ್ಲಿ ಸಿಗುತ್ತವೆ.

ಬೈಗುಳ (abusing words) ಮಾತುಗಳನ್ನು ಆಡಿದರೆ ಆಡಿದವನಿಗೂ ಕೇಡು; ಆಡಿಸಿಕೊಂಡವನಿಗೂ ಕೇಡು. ಯಾಕೆಂದರೆ ಅವು ಜಗಳವನ್ನೇ ಸೃಷ್ಟಿಸುತ್ತವೆ. ಆದರೆ ಕೆಲವೊಮ್ಮೆ ನಾವು ಕೆಲವು ಪದ, ಮಾತುಗಳನ್ನು ನಮ್ಮನಮ್ಮಲ್ಲೇ ಉಚ್ಚರಿಸುತ್ತಾ ಇರುತ್ತೇವೆ. ಅವು ಹಾಗೆ ಮಾತಾಡುವವನಿಗೇ ಸ್ವತಃ ಹಾನಿ. ಅವುಗಳನ್ನು ನಾವು ಗಟ್ಟಿಯಾಗಿ ಉಚ್ಚರಿಸಲೂಬಾರದು, ಕೆಲವು ಪದಗಳನ್ನು ಹೇಳಲೂಬಾರದು. ಹಾಗೆ ಹೇಳುವಾಗ ಆಕಾಶದಲ್ಲಿ ಸಂಚರಿಸುವ ತಥಾಸ್ತು ದೇವತೆಗಳು ತಥಾಸ್ತು ಎಂದರೆ ಹಾಗೇ ಆಗಿಬಿಡುತ್ತವೆ ಎಂಬ ನಂಬಿಕೆಯಿದೆ, ಇದು ಸುಳ್ಳಲ್ಲ ಎಂದು ಚಾಣಕ್ಯನೂ ಸಮರ್ಥಿಸುತ್ತಾನೆ. ಹಾಗಿದ್ದರೆ ಬನ್ನಿ, ಆ ಮಾತುಗಳಾವುವು? ನೋಡೋಣ.

ಥೂ ದರಿದ್ರ: ನಾವು ಕೆಲವೊಮ್ಮೆ ನಮಗೆ ಏನಾದರೂ ಕೆಟ್ಟದಾದರೆ, ನಮಗೆ ಇಷ್ಟವಾಗದವರು ಯಾರಾದರೂ ವಕ್ಕರಿಸಿದರೆ, ನಮಗೆ ಬೇಡದೇ ಇದ್ದದ್ದು ದೊರೆತರೆ, ಬೇಕಿದ್ದದ್ದು ಸಿಕ್ಕದೇ ಹೋದರೆ ಹೀಗೆ ಬೈದುಕೊಳ್ಳುತ್ತೇವೆ. ʼದರಿದ್ರʼ ಎಂಬ ಪದದ ಅರ್ಥ ʼಬಡತನʼ ಎಂದು. ದರಿದ್ರ ಎಂಬ ಬೈದುಕೊಳ್ಳುವವನ ಮೇಲೇ ಬಡತನಕ್ಕೆ ಪ್ರೀತಿ ಉಂಟಾಗುತ್ತದಂತೆ. ಆದ್ದರಿಂದ ತಪ್ಪಿಯೂ ಇದನ್ನು ಹೇಳಬೇಡಿ.

ಗ್ರಹಚಾರ: ಜಾತಕದಲ್ಲಿ ಗ್ರಹಗಳು ತಮ್ಮ ತಮ್ಮ ಮನೆಯಲ್ಲಿ ನಡೆಯುವುದನ್ನು ಗ್ರಹಚಾರ ಎನ್ನುತ್ತಾರೆ. ಆದರೆ ನಾವು ʼಗ್ರಹಚಾರʼ ಎಂದು ಉದ್ಗರಿಸುವುದು ನಮಗೆ ಏನಾದರೂ ಕೆಟ್ಟದು ಸಂಭವಿಸಿದಾಗ. ನಾವು ಆಡುವ ಮಾತಿನ ಧ್ವನಿಯಲ್ಲಿ ʼಕೆಟ್ಟದುʼ ಎಂಬುದು ಹೊರಸೂಸುತ್ತಾ ಇರುತ್ತದೆ. ಇದು ನಿಮ್ಮ ಜಾತಕದಲ್ಲಿರುವ ಕೆಲವು ಗ್ರಹಗಳಿಗೆ ಇಷ್ಟವಾಗದು. ಹೀಗಾಗಿ ಗ್ರಹಗಳಿಗೆ ಕೋಪ ತರಿಸಬೇಡಿ.

ಅನಿಷ್ಟ: ಅನಿಷ್ಟ ಎಂಬ ಪದದ ಅರ್ಥ ಇಷ್ಟವಲ್ಲದ್ದು ಎಂಬುದು ಮಾತ್ರ. ಆದರೆ ಅನಿಷ್ಠ ಎಂದು ಉದ್ಗರಿಸುವಾಗ ನೀವು ಕೋಪದಿಂದ, ದುಃಖದಿಂದ ವ್ಯಾಕುಲರಾಗಿರುತ್ತೀರಿ. ಇನ್ನೊಬ್ಬರಿಗೆ ಬಯ್ಯುತ್ತಿರುತ್ತೀರಿ. ಇದು ಸಲ್ಲದು. ಕೆಲವೊಮ್ಮೆ ನಿಮ್ಮ ಬಂಧುಗಳಿಗೇ (ಸಾಮಾನ್ಯವಾಗಿ ಗಂಡ ಹೆಂಡತಿಗೆ, ತಂದೆ ತಾಯಿ ಮಕ್ಕಳಿಗೆ) ಬಯ್ಯುವುದು ಸಾಮಾನ್ಯ. ಇದು ಅನಿಷ್ಟವನ್ನೇ ಉಂಟುಮಾಡೀತು ಜಾಗ್ರತೆ.

ಎಷ್ಟೇ ಸುಂದರಿಯಾಗಿದ್ದರೂ ಇಂಥ ಹುಡುಗಿಯರನ್ನು ಮದುವೆಯಾಗಲೇಬಾರದು: ಚಾಣಕ್ಯ ನೀತಿ!

ಎಲಾ ಶನಿ: ಕೆಲವೊಮ್ಮೆ ನಮ್ಮನ್ನು ನಕ್ಷತ್ರಿಕನಂತೆ ಕಾಡುವ ಕೆಲವರನ್ನು ಇದ್ದಕ್ಕಿದ್ದಂತೆ ಕಂಡಾಗ ʼಎಲಾ ಶನಿ!ʼ ಎಂದು ಉದ್ಗರಿಸುವುದುಂಟು. ಅಂದರೆ ಆತ/ ಆಕೆ ಕಾಟ ಕೊಡಲು ಬಂದಿದ್ದಾನೆ/ಳೆ ಎಂಬ ಅರ್ಥ ಧ್ವನಿಸುತ್ತದೆ. ಆದರೆ ಈ ಮಾತು ಶನಿಗೆ ಇಷ್ಟವಾಗುವುದಿಲ್ಲ. ಶನಿ ಎಂದರೆ ಬರೀ ಕಷ್ಟ ಕೊಡುವುದಕ್ಕಿರುವವನಲ್ಲ, ಆತ ಸುಯೋಗ ಉಂಟುಮಾಡುವವನೂ ಕೂಡ. ಹೀಗಾಗಿ ಈ ಪದಪ್ರಯೋಗ ಬೇಡ.

ಶಾಪ: ʼಇದೊಂದು ಶಾಪʼ ಎಂದು ಸಿಟ್ಟಿನಿಂದ ಯಾರಾದರೂ ಅರಚಾಡುವುದನ್ನು ನೀವು ನೋಡಬಹುದು. ನಿಜಕ್ಕೂ ಆತನಿಗೆ ಯಾರದೂ ಶಾಪ ಇದ್ದಿರಲಾರದು. ಆದರೆ ಗಾಳಿಯಲ್ಲಿ ತೇಲಾಡುತ್ತಾ ಇರುವ ಯಾರ್ಯಾರದೋ ಶಾಪಗಳು, ದುಃಖಗಳು ಆತನನ್ನು ಬಂದು ಅಂಟಿಕೊಳ್ಳುವುದು ಖಂಡಿತ.

ಕೆಟ್ಟ ಕಾಲದಲ್ಲಿ ಚಾಣಕ್ಯರ ಈ ಮಾತುಗಳನ್ನು ಪಾಲಿಸಿ, ಲೈಫೇ‌ ಚೇಂಚ್ ಆಗಿ ಬಿಡುತ್ತೆ!

ಹಾಳಾಗಿ ಹೋಗು, ಸರ್ವನಾಶವಾಗು: ಜಗಳವಾಗುವಾಗ, ಯಾರಾದರ ಮೇಲಾದರೂ ತುಂಬ ಸಿಟ್ಟು ಬಂದರೆ ಹೀಗೆ ಹೇಳಿಹೋಗುವುದು ಸಹಜ. ಆದರೆ ಇಂಥ ಮಾತುಗಳು ಆಡಿದವರ ಬದುಕಿನ ಮೇಲೂ ಪ್ರಭಾವ ಬೀರುತ್ತವೆ. ಆದ್ದರಿಂದ ಎಚ್ಚರಿಕೆಯಿಂದಿರಿ. ಇನ್ನು ಕೆಲವೊಮ್ಮೆ ನೀವು ಆ ರ್ಥದಲ್ಲಿ ಉದ್ದೇಶಿಸರದೇ ಇದ್ದರೂ, ದೇವತೆಗಳು ತಥಾಸ್ತು ಎಂದುಬಿಡಬಹುದು. ಹೀಗಾಗಿ ಪ್ರೀತಿಪಾತ್ರರ ಜತೆ ಜಗಳವಾಡುವಾಗ ಇವನ್ನು ಬಳಸಬೇಡಿ. 
 

Follow Us:
Download App:
  • android
  • ios