Chanakya Neeti: ಚಾಣಕ್ಯ ಹೇಳುವಂತೆ ನಿಮ್ಮ ಹಿತಶತ್ರುಗಳನ್ನು ಹೀಗೆ ಪತ್ತೆ ಮಾಡಿ

ನಿಮ್ಮ ಜೊತೆಗೇ ಇದ್ದು ನಿಮಗೆ ಕೇಡನ್ನು ಬಯಸುವವರು. ಇವರು ಮಿತ್ರರಂತೆಯೇ ನಟಿಸುತ್ತಾರೆ. ಆದರೆ ಇವರನ್ನು ಗುರುತಿಸುವುದು ಹೇಗೆ? ಚಾಣಕ್ಯರ ಸೂತ್ರಗಳು ಇಲ್ಲಿವೆ.

how to figure out who is betrayer? how to differentiate between a friend and betrayer? chanakya says

ಚಾಣಕ್ಯ ಅಥವಾ ಕೌಟಿಲ್ಯ ನಮ್ಮ ದೇಶದ ಮಹಾನ್ ಬುದ್ಧಿವಂತ, ವಿದ್ವಾಂಸ. ಅವರು ತಮ್ಮ ಚಾಣಕ್ಯ ನೀತಿ ಎಂಬ ಗ್ರಂಥದಲ್ಲಿ ಹೇಳಿದ ನೂರಾರು ವಿಷಯಗಳು ಇಂದಿಗೂ ಪ್ರಸ್ತುತ. ತಮ್ಮ ಪಾಂಡಿತ್ಯ, ಬುದ್ಧಿವಂತಿಕೆ ಮತ್ತು ಸಾಮರ್ಥ್ಯದಿಂದಾಗಿ ಭಾರತೀಯ ಇತಿಹಾಸದ ಹಾದಿಯನ್ನು ಬದಲಿಸಿದ ಮಹಾನ್ ವ್ಯಕ್ತಿಯಾದ ಚಾಣಕ್ಯ ತಮ್ಮ ರಾಜತಾಂತ್ರಿಕತೆಯ ಮೂಲಕ ಸಾಮಾನ್ಯ ಚಂದ್ರಗುಪ್ತನನ್ನು ಮಗಧದ ರಾಜನನ್ನಾಗಿ ಮಾಡಿದರು. “ಚಾಣಕ್ಯ ನೀತಿ” ಎಂಬುದು ಚಾಣಕ್ಯನ ಸಲಹೆಗಳ ಅದ್ಭುತ ಸಂಗ್ರಹ, ಸಂತೋಷದ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಇರಬೇಕಾದ ಗುಣಗಳ ಬಗ್ಗೆ, ಎಂಥವರ ಜತೆ ಸ್ನೇಹ ಮಾಡಬೇಕು, ಯಾರ ಜೊತೆ ಸಂಬಂಧ ಮಾಡಬೇಕು, ವೈರಿಗಳನ್ನು ಗುರುತಿಸುವುದು ಹೇಗೆ, ಇತ್ಯಾದಿಗಳನ್ನು ತಿಳಿಯಲು ನಾವು ಚಾಣಕ್ಯ ನೀತಿಯನ್ನು ಇಂದಿಗೂ ರೆಫರ್ ಮಾಡಬಹುದು.

ಹಿತಶತ್ರುಗಳನ್ನು ಗುರುತಿಸುವ ಬಗ್ಗೆಯೂ ಅವರು ಕೆಲವು ಸೂತ್ರಗಳನ್ನು ತಿಳಿಸುತ್ತಾರೆ. ಹಿತಶತ್ರುಗಳು ಎಂದರೆ ನಿಮಗೆ ಗೊತ್ತು ತಾನೆ? ನಿಮ್ಮ ಜೊತೆಗೇ ಇದ್ದು ನಿಮಗೆ ಕೇಡನ್ನು ಬಯಸುವವರು. ಇವರು ಮಿತ್ರರಂತೆಯೇ ನಟಿಸುತ್ತಾರೆ. ಆದರೆ ಇವರನ್ನು ಗುರುತಿಸುವುದು ಹೇಗೆ? ಚಾಣಕ್ಯರ ಸೂತ್ರಗಳು ಇಲ್ಲಿವೆ.

- ನಿಮ್ಮ ಸ್ನೇಹಿತರಾಗುವ ಅನೇಕ ಜನರನ್ನು ನೀವು ಗಮನಿಸಬೇಕು. ಅವರು ನಿಮ್ಮೊಂದಿಗೆ ಕುಳಿತು ತುಂಬಾ ನಯವಾಗಿ ನಿಮ್ಮೊಂದಿಗೆ ಮಾತನಾಡುತ್ತಾರೆ. ನಿಮ್ಮ ಖಾಸಗಿ ಸಂಗತಿಗಳ ಬಗ್ಗೆ ಇನ್ನಿಲ್ಲದ ಆಸ್ಥೆ ತೋರಿಸುತ್ತಾರೆ. ನಿಮ್ಮ ದೌರ್ಬಲ್ಯಗಳ ಬಗ್ಗೆ ತಿಳಿಯಲು ಅವರಿಗೆ ತುಂಬಾ ಆಸಕ್ತಿ. ಕುಡಿತ, ಜೂಜು ಮುಂತಾದ ದುರ್ಗುಣಗಳು ನಿಮ್ಮಲ್ಲಿದ್ದರೆ, ಅವುಗಳನ್ನು ಪೋಷಿಸುವಂತೆ ಮಾತನಾಡುತ್ತಾರೆ. ಇಂಥವರು ಇದ್ದಲ್ಲಿ ಒಂದು ಪೆಗ್ ತೆಗೆದುಕೊಳ್ಳುವಲ್ಲಿ ಎರಡು ಪೆಗ್ ಇಳಿಸುವಂತೆ ಮಾಡುತ್ತಾರೆ. 'ಕುಡಿ, ಏನೂ ಆಗಲ್ಲ' ಎನ್ನುತ್ತಾರೆ. ಸಕ್ಕರೆ ಕಾಯಿಲೆ ಇದ್ದರೂ ಸಿಹಿ ತಿನ್ನಿಸಲು ಯತ್ನಿಸುತ್ತಾರೆ. ಅವರು ಪ್ರೀತಿಯಿಂದ ಹೇಳುತ್ತಿದ್ದಾರೆ ಎಂದು ನೀವು ತಿಳಿಯುತ್ತೀರಿ. ಆದರೆ ಅದು ನಿಜವಲ್ಲ.    

- ನೀವು ನಿಮ್ಮ ಒಂದು ಗುಟ್ಟನ್ನು ಹಂಚಿಕೊಳ್ಳಲು ಯತ್ನಿಸಿದರೆ ಆ ವ್ಯಕ್ತಿ ನಿಮ್ಮ ಮಾತನ್ನು ಕೇಳದಂತೆ ನಟಿಸುತ್ತಾನೆ. ಆದರೆ ಒಳಗಿಂದೊಳಗೇ ಕೇಳುತ್ತಿರುತ್ತಾನೆ. ನಿಮ್ಮ ದೌರ್ಬಲ್ಯದ ಬಗ್ಗೆ ಏನು ಸಿಕ್ಕಿದರೆ ಅದನ್ನು ದಾಖಲೆ ಮಾಡಿಕೊಳ್ಳುತ್ತಿರುತ್ತಾನೆ. ನಂತರ ಈ ವ್ಯಕ್ತಿಯು ಖಂಡಿತವಾಗಿಯೂ ನಿಮ್ಮನ್ನು ಮೋಸ ಮಾಡುತ್ತಾನೆ ಎಂದು ಅರ್ಥಮಾಡಿಕೊಳ್ಳಿ. ಅಂತಹ ಜನರನ್ನು ನಂಬಬೇಡಿ. ನೀವು ಸಾರ್ವಜನಿಕವಾಗಿ ಏನು ಹಂಚಿಕೊಳ್ಳಬಹುದು ಎಂಬುದನ್ನು ಇಂತಹವರೊಂದಿಗೆ ಹಂಚಿಕೊಳ್ಳಿ. ಇಂಥವರೊಂದಿಗೆ ಫೋನ್‌ನಲ್ಲಿ ಮಾತನಾಡುವಾಗ ರೆಕಾರ್ಡ್ ಮಾಡಿಕೊಳ್ಳುತ್ತಿಲ್ಲ ಎಂಬ ಖಾತ್ರಿಪಡಿಸಿಕೊಳ್ಳಲು ಸಾಧ್ಯವಿಲ್ಲ. 

- ನಿಮಗೆ ಸಾಲ ಕೊಡಿಸಲು ಯತ್ನಿಸುತ್ತಾರೆ. ಆದರೆ ತಾವು ಖರ್ಚು ಮಾಡುವುದಿಲ್ಲ. ನಿಮಗೆ ಮದ್ಯಪಾನ ಮಾಡಿಸಲು ಯತ್ನಿಸುತ್ತಾರೆ. ಆದರೆ ತಾವು ಅದಕ್ಕಾಗಿ ಖರ್ಚು ಮಾಡುವುದಿಲ್ಲ. ನಿಮ್ಮ ಬಳಿ ಹಣ ಇದ್ದಾಗ ಅದನ್ನು ಆದಷ್ಟೂ ವೆಚ್ಚ ಮಾಡಿಸಲು ಯತ್ನಿಸುತ್ತಾರೆ. ಆದರೆ ತಮ್ಮ ಕೈಯಿಂದ ಒಂದು ಪೈಸೆಯನ್ನೂ ಬಿಚ್ಚುವುದಿಲ್ಲ. 

- ಇನ್ನೊಬ್ಬರ ಬಗ್ಗೆ ನಿಮ್ಮ ಬಳಿ ಬಂದು ಚಾಡಿ ಹೇಳುತ್ತಿರುತ್ತಾರೆ. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಹೇಳುವವನು, ನಿಮ್ಮ ಬಗ್ಗೆ ಇನ್ನೊಬ್ಬರಲ್ಲಿಯೂ ಹೇಳಬಹುದಲ್ಲವೇ? ಈ ಸರಳ ಸಂಗತಿ ನಿಮಗೆ ಗೊತ್ತಿರಲಿ. 

- ಇವರನ್ನು ಪರೀಕ್ಷಿಸಲು ಇರುವ ಒಂದು ಎರಡು ಉಪಾಯಗಳಿವೆ. ಒಂದು, ಬೇರೆ ಯಾರ ಬಳಿಯೂ ಹೇಳಿರದ ಗುಟ್ಟನ್ನು ಅವರ ಬಳಿ ಹೇಳುವುದು. ಆ ಗುಟ್ಟು ಇನ್ನೊಬ್ಬರ ಕಿವಿ ಸೇರಿರುವುದು ನಿಮಗೆ ಗೊತ್ತಾದರೆ,  ಇವನು ಚಾಡಿಕೋರ ಎಂದು ಖಾತ್ರಿ ಮಾಡಿಕೊಳ್ಳಬೇಕು. 

ಕೆಟ್ಟ ಕಾಲದಲ್ಲಿ ಚಾಣಕ್ಯರ ಈ ಮಾತುಗಳನ್ನು ಪಾಲಿಸಿ, ಲೈಫೇ‌ ಚೇಂಚ್ ಆಗಿ ಬಿಡುತ್ತೆ!

- ಇನ್ನೊಂದು ಉಪಾಯ ಎಂದರೆ, ಕಷ್ಟದಲ್ಲಿ ಸಿಕ್ಕಿಬಿದ್ದಂತೆ ನಟಿಸುವುದು. ಅಥವಾ ನಿಜಕ್ಕೂ ಕಷ್ಟ ಬಂದಾಗ, ಅದನ್ನು ಮಿತ್ರರ ಬಳಿ ಹೇಳಿಕೊಳ್ಳಿ. ನಿಮ್ಮ ಕಷ್ಟದಲ್ಲಿ ಯಾರು ನಿಮ್ಮ ಸಹಾಯಕ್ಕೆ ಒದಗುತ್ತಾನೋ ಅವನೇ ನಿಮ್ಮ ನಿಜವಾದ ಮಿತ್ರ. ಕೆಲವರಿಗೆ ನೆರವಾಗಲು ಮನಸ್ಸಿರಬಹುದು, ಆದರೆ ಸಾಧ್ಯವಾಗದಿರಬಹುದು. ಆದರೆ ಇನ್ನು ಕೆಲವರು ಇರುತ್ತಾರೆ. ಅವರಲ್ಲಿ ನಿಮಗೆ ನೆರವಾಗಬಲ್ಲ ಎಲ್ಲ ಸಂಪನ್ಮೂಲ ಇದ್ದರೂ ಏನಾದರೊಂದು ನೆವ ಹೇಳಿ ನೀವು ಕಷ್ಟದಿಂದ ಪಾರಾಗದಂತೆ ನೋಡಿಕೊಳ್ಳುತ್ತಾರೆ. ಅವರೇ ನಿಮ್ಮ ಹಿತಶತ್ರು. 

- ಇವರ ಬಳಿ ಹೇಗೆ ಇರಬೇಕು? ನಿಮ್ಮ ಗುಟ್ಟು ಹೇಳಬೇಡಿ. ನಿಮ್ಮ ದೌರ್ಬಲ್ಯ ತಿಳಿಸಬೇಡಿ. ನಿಮ್ಮ ದಿನಚರಿ ಗೊತ್ತಾಗಿಸಬೇಡಿ. ನಿಮ್ಮ ಶಕ್ತಿಗಳನ್ನೂ ಬಿಟ್ಟುಕೊಡಬೇಡಿ. ಅವರನ್ನೂ ದೂರವಿಟ್ಟಷ್ಟೂ ಒಳ್ಳೆಯದೇ. ಸಾಧ್ಯವಾದರೆ ಸ್ವಲ್ಪ ಸಾಲ ಕೊಟ್ಟು ಅವರು ನಿಮ್ಮಿಂದ ದೂರ ಉಳಿಯುವಂತೆ ನೋಡಿಕೊಳ್ಳಿ.  

ಎಷ್ಟೇ ಸುಂದರಿಯಾಗಿದ್ದರೂ ಇಂಥ ಹುಡುಗಿಯರನ್ನು ಮದುವೆಯಾಗಲೇಬಾರದು: ಚಾಣಕ್ಯ ನೀತಿ!

Latest Videos
Follow Us:
Download App:
  • android
  • ios