ಚೆಲುವೆ ಹೆಂಡತಿಯನ್ನು ತಪ್ಪಿಯೂ ಇಂಥ ಕಡೆ ಒಂಟಿಯಾಗಿ ಬಿಡಬೇಡಿ!
ಆಚಾರ್ಯ ಚಾಣಕ್ಯ ದಾಂಪತ್ಯದ ಬಗ್ಗೆ ತನ್ನ ಅರ್ಥಶಾಸ್ತ್ರದಲ್ಲಿ ಹಲವು ಸಲಹೆಗಳನ್ನು ನೀಡಿದ್ದಾನೆ. ದಾಂಪತ್ಯದಲ್ಲಿ ಗಂಡ-ಹೆಂಡತಿ ಹೇಗಿರಬೇಕು ಎಂಬುದನ್ನು ವಿವರಿಸಿದ್ದಾನೆ. ಅದರಲ್ಲಿ ಸುಂದರಿ ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದೂ ಇಂದು. ಚೆಲುವೆ ಹೆಂಡತಿಯನ್ನು ಇಂಥ ಕಡೆಗಳಲ್ಲಿ ಬಿಡಬಾರದು ಎನ್ನುತ್ತಾನೆ ಆತ. ಎಲ್ಲೆಲ್ಲಿ ನೋಡೋಣ.
ಸುಂದರಿ ಪತ್ನಿ ಇದ್ದರೆ ಆಕೆಯ ಚೆಲುವೇ ಕೆಲವೊಮ್ಮೆ ಗಂಡನಿಗೆ ಶತ್ರುವಾಗಿ ಬಿಡುತ್ತದೆ ಎಂದು ನಮ್ಮ ಈ ಹಿಂದಿನ ಸುಭಾಷಿತಕಾರರು ಹೇಳಿದ್ದುಂಟು. ಭಾರ್ಯಾ ರೂಪವತೀ ಶತ್ರುಃ ಎಂಬುದೇ ಈ ನೀತಿ. ಚಾಣಕ್ಯನೂ ಕೂಡ ತನ್ನ ನೀತಿಶಾಸ್ತ್ರದಲ್ಲಿ ಈ ಬಗ್ಗೆ ಕೆಲವು ಕಿವಿಮಾತುಗಳನ್ನು ಹೇಳುತ್ತಾನೆ. ಗಂಡ ಹೆಂಡತಿಯರು ಎಷ್ಟೇ ಸುಂದರ- ಸುಂದರಿ ಆಗಿದ್ದರೂ ಪರಸ್ಪರರ ನಂಬಿಕೆ ಕಾಪಾಡಿಕೊಳ್ಳುವುದು ಮುಖ್ಯ ಎನ್ನುತ್ತಾನೆ. ಮನಸ್ಸು ಸುಂದರವಾಗಿರಬೇಕು: ಮದುವೆ ಜೀವನದ ಪ್ರಮುಖ ಹೆಜ್ಜೆ. ಅನೇಕ ಪುರುಷರು ಸುಂದರ ಮಹಿಳೆಯರನ್ನು ಮದುವೆಯಾಗಲು ಬಯಸುತ್ತಾರೆ. ಆಗಲಿ. ಅದರೆ ಅವರನ್ನು ಈ ಕೆಳಗಿನ ಕಡೆಗಳಲ್ಲಿ ಒಂಟಿಯಾಗಿ ಬಿಡಬಾರದು ಎನ್ನುತ್ತಾನೆ.
ಅಂದಹಾಗೆ ಇವೆಲ್ಲವೂ ಅಂದಿನ ಕಾಲದಲ್ಲಿ ಚಾಣಕ್ಯ ಹಾಗೂ ಆತನಂತೆ ಯೋಚಿಸುವ ಸಾಂಪ್ರದಾಯಿಕ ಮಂದಿ ಹುಟ್ಟುಹಾಕಿದ ಸೂತ್ರಗಳು ಎಂಬುದನ್ನು ಮರೆಯಬಾರದು. ಇವುಗಳಲ್ಲಿ ಹಲವು ಇಂದು ಆಚರಣಯೋಗ್ಯವಲ್ಲದಿರಬಹುದು. ಇದು ಗೊತ್ತಿರಬೇಕು.
ಸಾಲ ನೀಡಿದವರಲ್ಲಿ
ತನಗೆ ಸಾಲ ನೀಡಿದವರ ಬಳಿ ಹೆಂಡತಿಯನ್ನು ಒಂಟಿಯಾಗಿ ಬಿಟ್ಟು ಬರಬಾರದು. ಯಾಕೆಂದರೆ ಅವರು ಸಾಲದ ನೆವ ತೆಗೆದು ಪತ್ನಿಯ ಜೊತೆಗೆ ಸಲಿಗೆ ಬೆಳೆಸಬಹುದು ಅಥವಾ ಬಲಾತ್ಕರಿಸಬಹುದು. ಹೀಗೆ ಬಲಾತ್ಕರಿಸುವುದು ತಮ್ಮ ಹಕ್ಕು ಎಂದು ಸಾಧಿಸಬಹುದು. ನೀನು ನನಗೆ ಒಲಿದರೆ ತಾನು ಸಾಲ ಮನ್ನಾ ಮಾಡುತ್ತೇನೆ ಎಂಬ ಆಮಿಷ ಒಡ್ಡಿಯೂ ಆತ ಆಕೆಯನ್ನು ಬಳಸಿಕೊಳ್ಳಬಹುದು.
ರಾಜನ ಬಳಿಯಲ್ಲಿ
ರಾಜ ಎಷ್ಟೇ ಒಳ್ಳೆಯವನಾಗಿರಲಿ, ಆತನ ಬಳಿ ಪತ್ನಿಯನ್ನು ಬಿಟ್ಟು ಬರಬಾರದು. ರಾಜನು ಸಹಜವಾಗಿ ಬಲವಂತನಾಗಿರುವುದರಿಂದ, ಆತನು ಕೆಟ್ಟ ಮನಸ್ಸು ಮಾಡಿದರೆ ನೀವು ನಿಮ್ಮ ಪತ್ನಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ರಾಜನ ಬಳಿ ಇರುವ ಕೆಲವು ಬಲಾಢ್ಯ ದುಷ್ಟರು ಕೂಡ ಆಕೆಯ ಮೇಲೆ ಕಣ್ಣು ಹಾಕಬಹುದು.
ಪರದೇಶದಲ್ಲಿ
ಪರಸ್ಥಳದಲ್ಲಿ, ಪರದೇಶದಲ್ಲಿ, ನಿರ್ಜನ ಪ್ರದೇಶದಲ್ಲಿ ಹಾಗೂ ಗುರುತು ಪರಿಚಯವಿಲ್ಲದ ಪ್ರದೇಶದಲ್ಲಿ ಚೆಲುವೆ ಹೆಂಡತಿಯನ್ನು ಒಂಟಿಯಾಗಿ ಬಿಟ್ಟು ಹೋಗಬಾರದು. ಇದು ಇಂದಿಗೂ ಸೂಕ್ತವಾಗ ಅನ್ವಯಿಸುತ್ತದೆ ಅಲ್ಲವೇ? ಬೀದಿ ಕಾಮಣ್ಣರು ಸದಾ ಇಂಥವರಿಗಾಗಿ ಹೊಂಚು ಹಾಕುತ್ತಿರುತ್ತಾರೆ. ಅವರು ಕೆಟ್ಟದು ಮಾಡಬಹುದು. ಆಕೆಯನ್ನು ರಕ್ಷಿಸಿಕೊಳ್ಳುವುದು ಗಂಡನ ಕರ್ತವ್ಯ.
ಗೆಳೆಯರ ಬಳಿ
ಆಶ್ಚರ್ಯವಾಯಿತೇ? ಹೌದು! ಗೆಳೆಯರ ಬಳಿಯೂ ಪತ್ನಿಯನ್ನು ಒಬ್ಬಳೇ ಬಿಟ್ಟುಬಿಡಬಾರದು ಎನ್ನುತ್ತಾನೆ ಚಾಣಕ್ಯ. ಗೆಳೆಯರು ಒಳ್ಳೆಯವರೇ ಇರಬಹುದು. ಆದರೆ ನಿಮ್ಮ ಯಾರೋ ಶ್ರೀಮಂತ ಗೆಳೆಯನನ್ನು ನೋಡಿ ಪತ್ನಿಯೇ ಮನಸೋಲಬಾರದು ಎಂದೇನಿಲ್ಲ. ಎಷ್ಟಾದರೂ ಮನಸ್ಸು ಮರ್ಕಟ.
Chanakya Neethi: ಈ ಗುಣವಿರುವ ಸ್ನೇಹಿತರು ಶತ್ರುಗಳಿಗಿಂತ ಅಪಾಯಕಾರಿ!!
ಕಾಡು, ಮರುಭೂಮಿ, ಸಮುದ್ರ
ಕಾಡು, ಮರುಭೂಮಿ ಹಾಗೂ ಸಮುದ್ರಗಳಲ್ಲಿ ಪತ್ನಿಯನ್ನು ಮಾತ್ರವೇ ಅಲ್ಲ, ಯಾರನ್ನೂ ಒಂಟಿಯಾಗಿ ಬಿಡಬಾರದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂದು ಪತ್ನಿಯರು ಒಂಟಿಯಾಗಿ ಇಲ್ಲೆಲ್ಲಾ ಸೋಲೋ ಟ್ರಿಪ್ ಹೋಗುತ್ತಾರೆ, ಅದು ಬೇರೆ ಸಂಗತಿ.
ತವರು ಮನೆಯಲ್ಲಿ
ಪತ್ನಿಯನ್ನು ಬಹುಕಾಲ ಒಂಟಿಯಾಗಿ ತವರು ಮನೆಯಲ್ಲಿ ಬಿಡಬಾರದು ಅಂತಾನೆ ಚಾಣಕ್ಯ. ಅಲ್ಲಿ ಒಂಟಿಯಾಗಿ ಬಿಡುವುದರಿಂದ ಆಸುಪಾಸಿನವರು ಆಕೆಯನ್ನು ಅಪಹಾಸ್ಯ ಮಾಡಬಹುದು, ಅವಮಾನಿಸಬಹುದು. ತುಂಬಾ ಕಾಲ ಇದ್ದರೆ ಗಂಡನಿಗಿಂತ ಇಲ್ಲೇ ಚೆನ್ನಾಗಿದೆ ಎಂದು ಆಕೆಗೇ ಅನ್ನಿಸಬಹುದು. ಮನೆಯಲ್ಲಿ ಪ್ರೇಮದಿಂದ ಆಕೆಯನ್ನು ನೋಡಿಕೊಳ್ಳುವುದು ಗಂಡನಾದವನ ಕರ್ತವ್ಯ.
ಚಾಣಕ್ಯ ನೀತಿ: ಹೆಂಡತಿ ತನ್ನ ಪತಿಗೆ ಎಂದಿಗೂ ಈ ವಿಷಯಗಳನ್ನು ಹೇಳಿಕೊಳ್ಳಬಾರದು!