ತಲಕಾವೇರಿ: ನಿಮಿಷ ತಡವಾಗಿ ತೀರ್ಥರೂಪಿಣಿಯಾದ ಕಾವೇರಿ ಮಾತೆ!
ಬ್ರಹ್ಮಗಿರಿ ತಪ್ಪಲಿನ ಕಾವೇರಿ ಕ್ಷೇತ್ರದಲ್ಲಿ ಭಕ್ತರ ಹರ್ಷೋದ್ಗಾರದ ನಡುವೆ ಮಾತೆ ಕಾವೇರಿ ತೀರ್ಥಸ್ವರೂಪಿಣಿಯಾದಳು.
ಕೊಡಗು (ಅ.17): ಬ್ರಹ್ಮಗಿರಿ ತಪ್ಪಲಿನ ಕಾವೇರಿ ಕ್ಷೇತ್ರದಲ್ಲಿ ಭಕ್ತರ ಹರ್ಷೋದ್ಗಾರದ ನಡುವೇ ಮಾತೆ ಕಾವೇರಿ ತೀರ್ಥಸ್ವರೂಪಿಣಿಯಾದಳು. ತುಲಾ ಲಗ್ನದಲ್ಲಿ ಬೆಳಗ್ಗೆ 7 ಗಂಟೆ 41 ನಿಮಿಷಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ದರ್ಶನ ರೂಪ ತೋರಿದಳು. ಅರ್ಚಕರು ಈ ವಿಶೇಷ ಸಂದರ್ಭದಲ್ಲಿ ಭಕ್ತರಿಗೆ ತೀರ್ಥ ಸಿಂಪಡಿಸಿದರು.
ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ ನೇತೖತ್ವದಲ್ಲಿ ಅರ್ಚಕ ಸಮೂಹದಿಂದ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ವೇದ ಮಂತ್ರ ಮಂತ್ರ ಘೋಷದ ನಡುವೇ ತೀರ್ಥರೂಪಿಣಿಯಾಗಿ ಮಾತೆ ಕಾವೇರಿ ದಶ೯ನ ತೋರಿದಳು. ಪುಪ್ಪಾಲಂಕಾರದಿಂದ ಕಾವೇರಿ ಕ್ಷೇತ್ರ ಕಂಗೊಳಿಸಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಕೊಡಗು ಏಕೀಕರಣ ರಂಗದಿಂದ ಭಕ್ತರಿಗೆ ದೇವಾಲಯದ ಅನ್ನ ಪ್ರಸಾದ ಸಭಾ ಭವನದಲ್ಲಿ ಉಪಹಾರ ವಿತರಣೆ ಮಾಡಲಾಯಿತು.
ಕಾವೇರಿ ತೀರ್ಥೋದ್ಭವ: ಮಧ್ಯರಾತ್ರಿ 1.27ಕ್ಕೆ ತೀರ್ಥ ರೂಪಿಣಿಯಾದ ಕಾವೇರಿ, ಪುನೀತರಾದ ಭಕ್ತಗಣ
ಕಾವೇರಿ ತೀರ್ಥೋದ್ಬವ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಎ ಎಸ್ ಪೊನ್ನಣ್ಣ, ಡಾ ಮಂತರ್ ಗೌಡ, ಸುಜಾಕುಶಾಲಪ್ಪ, ಸರಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧಮ೯ಜಾ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಎಎಸ್ ಪಿ ಸುಂದರ್ ರಾಜ್ , ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವಯ೯ ಸೇರಿದಂತೆ ಅನೇಕರು ಭಾಗಿಯಾಗಿದ್ದರು.