ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಬಗ್ಗೆ ಹಲವು ವಿಷಯಗಳನ್ನು ತಿಳಿಸಿದ್ದಾರೆ. ಗ್ರಹಗಳ ಸ್ವಭಾವ, ಪ್ರಭಾವ, ಫಲಾಫಲಗಳ ಬಗ್ಗೆ ಹೇಳಿದ್ದಾರೆ. ಹಾಗೇಯೇ ಒಂಭತ್ತು ಗ್ರಹಗಳಲ್ಲಿ ಯಾವುದು ಶುಭ ಗ್ರಹ, ಕ್ರೂರ ಗ್ರಹ ಮತ್ತು ಪಾಪಿ ಗ್ರಹಗಳೆಂದೂ ವಿಂಗಡಿಸಿದ್ದಾರೆ. ಅದಕ್ಕೆ ತಕ್ಕಂತೆ ಅವುಗಳ ಪ್ರಭಾವ ಮತ್ತು ಅದರಿಂದ ಪಾರಾಗುವ ಉಪಾಯವನ್ನೂ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕೆಲವು ವಿಪರೀತ ಸ್ಥಿತಿಯಲ್ಲಿ ಪಾಪಿಗ್ರಹವು ಶುಭವನ್ನುಂಟು ಮಾಡುತ್ತದೆ.

ಗುರು ಗ್ರಹ ಮತ್ತು ಶುಕ್ರ ಗ್ರಹ ಬಲವಿರುವ ಮತ್ತು ಶುಭಗ್ರಹವಾದರೆ. ಚಂದ್ರನನ್ನು ಪೂರ್ಣರೂಪದಲ್ಲಿ ಶುಭಗ್ರಹವೆಂದು ಹೇಳುತ್ತಾರೆ. ಸೂರ್ಯ ಮತ್ತು ಮಂಗಳ ಗ್ರಹವು ಕ್ರೂರ ಗ್ರಹವಾದರೆ, ಶನಿ ಮತ್ತು ರಾಹು-ಕೇತು ಪಾಪಿ ಗ್ರಹಗಳು. ಜಾತಕದಲ್ಲಿ ಈ ಗ್ರಹಗಳ ಸ್ಥಾನವನ್ನು ನೋಡಿ ಭವಿಷ್ಯದ ಅನೇಕ ವಿಚಾರಗಳನ್ನು ತಿಳಿಸುತ್ತಾರೆ. ಈ ಗ್ರಹಗಳ ಶುಭ-ಅಶುಭ ಫಲಗಳನ್ನು ತಿಳಿಯೋಣ.

ಇದನ್ನು ಓದಿ: ಅಪಮೃತ್ಯುವಿನಿಂದ ಪಾರಾಗಲು ಹೀಗ್ ಸ್ನಾನ ಮಾಡಿ

ಸೂರ್ಯ
ಸೂರ್ಯದೇವನನ್ನು ಎಲ್ಲ ಗ್ರಹಗಳ ರಾಜನೆಂದು ಕರೆಯುತ್ತಾರೆ. ಆತ್ಮ, ಪಿತಾ ಮತ್ತು ಉಚ್ಛ ಅಧಿಕಾರಿ ಇವುಗಳಿಗೆ ಕಾರಕನಾಗಿದ್ದಾನೆ. ಆದರೆ ಜಾತಕದಲ್ಲಿ ಸೂರ್ಯ ಉಚ್ಛನಾಗಿರದಿದ್ದರೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸೂರ್ಯನ ಅಶುಭ ಪ್ರಭಾವದಿಂದ ನೇತ್ರ ರೋಗ, ಸುಳ್ಳು ಆರೋಪಗಳು ಮತ್ತು ಹೃದಯಕ್ಕೆ ಸಂಬಂಧಿಸಿ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಪರಿಹಾರವಾಗಿ ಭಾನುವಾರದಂದು ಸೂರ್ಯನಿಗೆ ಜಲವನ್ನು ಅರ್ಪಿಸಬೇಕು. ನಿರ್ಗತಿಕರಿಗೆ ದಾನವನ್ನು ನೀಡಬೇಕು. 

ಮಂಗಳ
ಮಂಗಳ(ಕುಜ)ಗ್ರಹವು ಕ್ರೋಧ ಮತ್ತು ಶಕ್ತಿಯ ಕಾರಕನಾಗಿದ್ದಾನೆ. ಜೊತೆಗೆ ಭೂಮಿ, ಸೇನೆ, ಪೋಲಿಸ್, ಆಟ, ರತ್ನ, ಕೆಂಪು ಬಣ್ಣಗಳಿಗೂ ಕಾರಕನಾಗಿದ್ದಾನೆ. ಕುಜ ದೋಷಕ್ಕೆ ಕಾರಣ ಗ್ರಹವು ಮಂಗಳನೇ ಆಗಿದ್ದಾನೆ. ಈ ಗ್ರಹದ ಅಶುಭ ಫಲಗಳೆಂದರೆ ಸಾಲಬಾಧೆ, ಹೃದಯ ಸಮಸ್ಯೆ, ಭೂಮಿ ಮತ್ತು ಆಸ್ತಿ ಸಂಬಂಧಿತ ವಿವಾದಗಳು ಉತ್ಪನ್ನವಾಗುತ್ತವೆ. ಇದಕ್ಕೆ ಪರಿಹಾರವಾಗಿ ಕೆಂಪು ವಸ್ತ್ರ ದಾನ ಮಾಡಬೇಕು.

ಇದನ್ನು ಓದಿ: ನಿಮ್ಮ ರಾಶಿ ಮಂತ್ರ ಪಠಿಸಿರಿ, ಕಷ್ಟಗಳಿಂದ ಮುಕ್ತಿ ಹೊಂದಿರಿ!

ಶನಿ
ಪಾಪಿಗ್ರಹಗಳ ಪಟ್ಟಿಯಲ್ಲಿ ಶನಿಗ್ರಹ ಮೊದಲನೆಯದು. ನ್ಯಾಯದೇವನಾಗಿರುವ ಶನಿಯು, ಶಿಸ್ತು, ಸತ್ಯ ನಡೆ ಎಲ್ಲಿ ಕಾಣುವುದಿಲ್ಲವೋ ಅಲ್ಲಿಗೆ ಶನಿಯ ಆಗಮನವಾಗುತ್ತದೆ. ಜಾತಕದಲ್ಲಿ ಶನಿ ಗ್ರಹದ ಸ್ಥಾನ ನೀಚವಾಗಿದ್ದರೆ ಆರ್ಥಿಕ ನಷ್ಟ, ಕಣ್ಣಿನ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪಗಳಂತಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಶನಿಗ್ರಹದ ತೊಂದರೆಯಿಂದ ಪಾರಾಗಲು ಸಾಸಿವೆ ಎಣ್ಣೆ, ಕಪ್ಪು ಎಳ್ಳು ಮತ್ತು ಕಪ್ಪು ವಸ್ತ್ರವನ್ನು ದಾನ ಮಾಡಬೇಕು.

ರಾಹು-ಕೇತು
ರಾಹು-ಕೇತುವು ಪಾಪಿಗ್ರಹಗಳ ಪಟ್ಟಿಯಲ್ಲಿ ಬರುತ್ತವೆ. ಜಾತಕದಲ್ಲಿ ಕಾಳಸರ್ಪ ದೋಷಕ್ಕೆ ಈ ಗ್ರಹಗಳೇ ಕಾರಣವಾಗಿವೆ. ರಾಹು ಗ್ರಹವು ಅಶುಭವಾಗಿದ್ದರೆ ಶಾರೀರಿಕ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ಕೇತು ಗ್ರಹವು ಅಶುಭವಾಗಿದ್ದರೆ ವಿಶ್ವಾಸಘಾತ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ರಾಹು ಮತ್ತು ಕೇತುಗ್ರಹಗಳ ಶಾಂತಿಗಾಗಿ ತೆಂಗಿನಕಾಯಿ, ಉದ್ದಿನ ಬೇಳೆ ಮತ್ತು ಬಟ್ಟೆಯನ್ನು ದಾನ ಮಾಡಬೇಕು.

ಇದನ್ನು ಓದಿ: ಬಯಸಿದ್ದನ್ನೆಲ್ಲ ಕೊಡುವ ಶ್ರೀಕೃಷ್ಣನ ಕೃಪೆಗೆ ಹೀಗೆ ಮಾಡಿ!

ಪಾಪಿಗ್ರಹಗಳು ಕೆಲವು ವಿಶೇಷ ಸಮಯಗಳಲ್ಲಿ ಶುಭಫಲವನ್ನು ನೀಡುತ್ತದೆ. ಪಾಪಿಗ್ರಹವು ಸ್ವಾಮಿಸ್ಥಾನದಲ್ಲಿದ್ದರೆ ಶುಭಫಲವನ್ನು ನೀಡುತ್ತದೆ. ಆರು, ಎಂಟು ಅಥವಾ ಹನ್ನೇರಡನೇ ಮನೆಯ ಸ್ವಾಮಿ ಆಗಿದ್ದು ಪುನಃ ಅದೇ ಮನೆಗೆ ಬಂದು ಸ್ಥಿತನಾಗಿದ್ದು, ಆ ಗ್ರಹವನ್ನು ಬೇರೆ ಪಾಪಿಗ್ರಹವು ನೋಡುತ್ತಿದ್ದರೆ ಇದು ಶುಭದಾಯಕ ಎಂದು ಹೇಳಲಾಗಿದೆ. ಇಂಥ ಸ್ಥಿತಿಯಲ್ಲಿ ವಿಪರೀತವಾದ ಅಂದರೆ ಶುಭವಾದ ರಾಜಯೋಗವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.