ಕೋಪವೂ ಜಾಸ್ತಿ, ಪ್ರೀತಿಯೂ ಹೆಚ್ಚು.. ಕರ್ಕಾಟಕ ರಾಶಿಯ ಸ್ವಭಾವ ಹೀಗೆ..
ಕರ್ಕಾಟಕ ರಾಶಿಯ ಅಧಿಪತಿ ಗ್ರಹ ಚಂದ್ರದೇವನಾಗಿದ್ದಾನೆ. ಹಾಗಾಗಿ ಈ ರಾಶಿಯ ವ್ಯಕ್ತಿಗಳು ಅತ್ಯಂತ ಭಾವುಕ ಸ್ವಭಾವವನ್ನು ಹೊಂದಿರುತ್ತಾರೆ. ಇತರರಿಗೆ ಸಹಾಯ ಮಾಡುವುದು ಮತ್ತು ಇತರರ ಕೋಪಕ್ಕೆ ಗುರಿಯಾಗುವಂಥಹ ಕಾರ್ಯಗಳಿಂದ ತಪ್ಪಿಸಿಕೊಳ್ಳುವುದರಲ್ಲಿ ಚತುರರಾಗಿರುತ್ತಾರೆ. ಹಾಗೆಯೇ ಈ ರಾಶಿಯವರ ಬಗ್ಗೆ ಇನ್ನಷ್ಟು ತಿಳಿಯೋಣ...
ವೈದಿಕ ಜ್ಯೋತಿಷ್ಯದ ಪ್ರಕಾರ ಜಾತಕದ ಯಾವ ಮನೆಯಲ್ಲಿ ಚಂದ್ರ (Moon) ಗ್ರಹ ಸ್ಥಿತವಾಗಿದೆಯೋ ಅದೇ ಆ ವ್ಯಕ್ತಿಯ ರಾಶಿ ಎಂದು ಪರಿಗಣಿಸಲಾಗುತ್ತದೆ. ಜನನ ಸಮಯದಲ್ಲಿ ಚಂದ್ರನ ಸ್ಥಾನ ಮತ್ತು ಸ್ಥಿತಿಯ ಆಧಾರದ ಮೇಲೆ ಸಹ ವ್ಯಕ್ತಿಯ ರಾಶಿಚಕ್ರದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಜೂನ್ 21 ರಿಂದ ಜುಲೈ 22ರ ವರೆಗೆ ಜನಿಸಿದವರ ಸೂರ್ಯ ರಾಶಿ ಕರ್ಕಾಟಕವಾಗಿರುತ್ತದೆ ಎಂದು ಜ್ಯೋತಿಷ್ಯ (Astrology) ಹೇಳುತ್ತದೆ. ರಾಶಿ ಚಕ್ರಗಳಲ್ಲಿ ನಾಲ್ಕನೇ ರಾಶಿಯಾದ ಕರ್ಕಾಟಕ ರಾಶಿಯ ಅಧಿಪತಿ ಗ್ರಹ ಚಂದ್ರ ಗ್ರಹವಾಗಿದೆ. ಈ ರಾಶಿ ಚಕ್ರದವರ ಇನ್ನಷ್ಟು ಸ್ವಭಾವ ಮತ್ತು ಗುಣಗಳ ಬಗ್ಗೆ ತಿಳಿಯೋಣ..
ಕುಟುಂಬ ಪ್ರೇಮ (Family lover)
ಕರ್ಕಾಟಕ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚಿನ ಮಹತ್ವಾಕಾಂಕ್ಷೀಯ ಗುಣವನ್ನು ಹೊಂದಿರುವುದಿಲ್ಲ. ಆದರೆ ಯಶಸ್ಸಿನ (Success) ಬಗ್ಗೆ ದೊಡ್ಡ ಕನಸನ್ನೇ ಕಂಡಿರುತ್ತಾರೆ, ಅಷ್ಟೇ ಅಲ್ಲದೇ ಯಶಸ್ಸನ್ನು ಪಡೆಯಲು ಇಚ್ಚಿಸುತ್ತಾರೆ. ಈ ವ್ಯಕ್ತಿಗಳು ಶಾಂತ ಮತ್ತು ಸಾಮಾಜಿಕವಾದ ಕುಟುಂಬ (Family) ಜೀವನವನ್ನು ಇಷ್ಟಪಡುತ್ತಾರೆ. ಕುಟುಂಬವನ್ನು ಪ್ರೀತಿಸುವ ಈ ರಾಶಿಯವರು ಅವರ ಕಾಳಜಿ ಮಾಡುವುದರಲ್ಲಿ ಮೊದಲಿಗರಾಗಿರುತ್ತಾರೆ. ಉದ್ಯೋಗದಲ್ಲಿರುವವರು ಸಹ ಸಹೋದ್ಯೋಗಿಗಳನ್ನು ಕುಟುಂಬದವರಂತೆಯೇ ನೋಡಿಕೊಳ್ಳುತ್ತಾರೆ, ಅಷ್ಟೇ ಕಾಳಜಿಯನ್ನು (Care) ಮಾಡುತ್ತಾರೆ.
ಗಡಿಬಿಡಿ, ಅಗ್ರೆಸ್ಸೀವ್, ಉತ್ಸಾಹಿ, ರೊಮ್ಯಾಂಟಿಕ್ ನಕ್ಷತ್ರಗಳಿವು!
ಶಕ್ತಿ(Strength)
ಕರ್ಕಾಟಕ ರಾಶಿಯವರ ಸ್ವಭಾವ ಶಾಂತವೇ (Peace) ಆಗಿದ್ದರೂ, ಕೆಲವೊಮ್ಮೆ ಸಿಟ್ಟು ಮತ್ತು ಅಶಾಂತ ಮನಸ್ಥಿತಿ ಹೊಂದಿದ್ದಾಗ ಇವರು ತೀರಾ ವಿರುದ್ಧ ಸ್ವಭಾವವನ್ನು ಹೊಂದಿದವರಂತೆ ಕಾಣುತ್ತಾರೆ. ಆದರೆ ಪ್ರೀತಿ ತೋರಿಸುವಾಗ ನಿಶ್ಚಲರಾಗಿರುತ್ತಾರೆ. ಶಾಂತ ರೀತಿಯಿಂದ ಸರಳ ಶಬ್ಧಗಳಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಕರ್ಕಾಟಕ ರಾಶಿಯ ವ್ಯಕ್ತಿಗಳ ದೊಡ್ಡ ಶಕ್ತಿಯೆಂದರೆ ಅದು ದೃಢ ಸಂಕಲ್ಪ ಮಾಡಿಕೊಳ್ಳುವುದು. ಯಾವುದೇ ವಿಷಯದ ಸಲುವಾಗಿ ಸಂಕಲ್ಪ ಮಾಡಿದರೆಂದರೆ ಅದು ಪೂರ್ಣಗೊಳ್ಳುವವರೆಗೂ ಸುಮ್ಮನೆ ಕೂರುವುದಿಲ್ಲ.
ಪರಿಪೂರ್ಣ ಸಂಗಾತಿ (Partner)
ಕರ್ಕಾಟಕ ರಾಶಿಯ ವ್ಯಕ್ತಿಗಳು ಉತ್ತಮ ಸಂಗಾತಿಗಳಾಗುತ್ತಾರೆ. ತಮ್ಮ ಪತಿ (Husband) ಅಥವಾ ಪತ್ನಿಯ (Wife) ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಸಂಗಾತಿಗೆ ಪ್ರಾಮಾಣಿಕರಾಗಿರುತ್ತಾರೆ (Prompt). ಸಾಮಾನ್ಯವಾಗಿ ಸಂಗಾತಿಯ ಉತ್ತಮ ಗುಣಗಳನ್ನು ಬಾಯಿಬಿಟ್ಟು ಹೇಳುವುದಿಲ್ಲ. ಒಮ್ಮೆ ಹೇಳಬೇಕೆಂದೆನಿಸಿ ಹೇಳಿದರೆಂದರೆ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿಬಿಡುತ್ತಾರೆ.
ಈ ರಾಶಿಯ ವ್ಯಕ್ತಿಗಳು ಉತ್ತಮ ಪೋಷಕರಾಗುತ್ತಾರೆ (Parents). ಮನೆಯಲ್ಲಿರುವ ವಸ್ತುಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ. ಅದರಲ್ಲಿಯೇ ಮನೆಯನ್ನು ಅಂದವಾಗಿಟ್ಟುಕೊಂಡಿರುತ್ತಾರೆ. ಜೀವನಕ್ಕೆ ಸಂಬಂಧಿಸಿದ ಎಲ್ಲ ಅನುಭವಗಳನ್ನು ಮನೆಯವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಈ ರಾಶಿಯ ವ್ಯಕ್ತಿಗಳು ದಯಾ ಗುಣವನ್ನು ಹೊಂದಿರುತ್ತಾರೆ. ಹಾಗಾಗಿ ಈ ರಾಶಿಯ ವ್ಯಕ್ತಿಗಳೊಂದಿಗೆ ಸ್ನೇಹಿತರು ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಾರೆ.
Best Partners: ಈ 4 ರಾಶಿಯವರು ನಿಮ್ಮ ಅತ್ಯುತ್ತಮ ಸಂಗಾತಿ ಆಗಬಲ್ಲರು!
ಕಾರ್ಯಕ್ಷೇತ್ರ (Career)
ಕಾರ್ಯಕ್ಷೇತ್ರದಲ್ಲಿ ಸಹ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುವುದರ ಮೂಲಕ ಈ ರಾಶಿಯವರು ಉತ್ತಮ ಪ್ರಶಂಸೆಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೇ ಈ ರಾಶಿಯವರಿಗೆ ಜವಾಬ್ದಾರಿಯನ್ನು (Responsibility) ವಹಿಸಿ ಆರಾಮಾವಾಗಿ ಇರಬಹುದಾಗಿದೆ. ಮೆಡಿಕಲ್, ಮ್ಯಾನೇಜ್ಮೆಂಟ್, ನರ್ಸರಿ, ರಾಜಕಾರಣ ಮತ್ತು ಮೀಡಿಯಾ ಕ್ಷೇತ್ರಗಳು ಈ ರಾಶಿಯ ವ್ಯಕ್ತಿಗಳಿಗೆ ಆಗಿಬರುತ್ತದೆ.
ಸಮಯ ಕಳೆದಂತೆ ಕರ್ಕಾಟಕ ರಾಶಿಯವರ ಆರ್ಥಿಕ ಸ್ಥಿತಿ (Economic status) ಉತ್ತಮವಾಗುತ್ತಾ ಹೋಗುತ್ತದೆ. ಸುಲಭವಾಗಿ ಹಣ ಗಳಿಸುವ ಬಗೆಯನ್ನು ಇವರು ತಿಳಿದುಕೊಳ್ಳುತ್ತಾರೆ. ಈ ವ್ಯಕ್ತಿಗಳ ಬಳಿ ಹಣ ಬಂದು ಸೇರುತ್ತದೆ. ಅದಕ್ಕೆ ತಕ್ಕ ಹಾಗೆ ಖರ್ಚು ಸಹ ಇರುತ್ತದೆ. ಮನೆ ಅಥವಾ ಭೂಮಿ ಖರೀದಿಯ ಬಗ್ಗೆ ಸಹ ಆಸಕ್ತಿಯನ್ನು ಹೊಂದಿರುತ್ತಾರೆ. ಅದಕ್ಕಾಗಿ ಹಣ ಮತ್ತು ಸಮಯವನ್ನು ಉಳಿಸುವಲ್ಲಿ ಹೆಚ್ಚಿನ ಶ್ರಮವನ್ನು ಪಡುತ್ತಾರೆ.
ಈ ರಾಶಿಯ ಮಹಿಳೆಯರು ಸೂಕ್ಷ್ಮ (Sensitive) ಮತ್ತು ಭಾವುಕ ಸ್ವಭಾವವನ್ನು ಹೊಂದಿರುತ್ತಾರೆ. ಸಂಬಂಧಗಳನ್ನು ನಿಭಾಯಿಸುವಲ್ಲಿ ಈ ರಾಶಿಯವರು ಪ್ರಾಮಾಣಿಕರಾಗಿರುತ್ತಾರೆ. ನಿಜವಾದ ಪ್ರೀತಿಯನ್ನು ಹುಡುಕಿ ಪಡೆಯುವುದರಲ್ಲಿ ಇವರು ಸಫಲರಾಗುತ್ತಾರೆ.