Asianet Suvarna News Asianet Suvarna News

ಈ ರಾಶಿಯವರು ಜಾಸ್ತಿ ಚಿಂತೆ ಮಾಡ್ತಾರೆ; ನೀವು ಅವರಲ್ಲಿ ಒಬ್ಬರಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಗಳಲ್ಲಿ ಬೇರೆ ಬೇರೆ ಗುಣಲಕ್ಷಣ (characterization) ಗಳು ಇರುತ್ತವೆ. ಕೆಲವು ರಾಶಿಯವರು ಹೆಚ್ಚಾಗಿ ಯೋಚಿಸುತ್ತಾರೆ. ಇದಕ್ಕೆ ಅವರ ರಾಶಿ ಚಕ್ರ (zodiac) ಕಾರಣ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

Cancer To Virgo Zodiac Signs Most Susceptible To Overthinking suh
Author
First Published Jun 29, 2023, 11:41 AM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ  ಪ್ರತಿಯೊಂದು ರಾಶಿಗಳಲ್ಲಿ ಬೇರೆ ಬೇರೆ ಗುಣಲಕ್ಷಣ (characterization) ಗಳು ಇರುತ್ತವೆ. ಕೆಲವು ರಾಶಿಯವರು  ಹೆಚ್ಚಾಗಿ ಯೋಚಿಸುತ್ತಾರೆ. ಇದಕ್ಕೆ ಅವರ ರಾಶಿ ಚಕ್ರ (zodiac) ಕಾರಣ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ಪ್ರತಿಯೊಬ್ಬ ಮನುಷ್ಯನು ಕೂಡ ವಿಭಿನ್ನ ಗುಣಗಳನ್ನು ಹೊಂದಿರುತ್ತಾನೆ. ಅವನ ರಾಶಿ ಚಕ್ರದ ಮೇಲೆ ಅವನ ಸ್ವಭಾವ  (nature) ಇರುತ್ತೆ. ಕೆಲವು ತುಂಬಾ ಅತಿಯಾಗಿ ಯೋಚಿಸುತ್ತಾರೆ. ಕಾರಣ ಇಲ್ಲದೇ ಚಿಂತಿಸುತ್ತಾರೆ. ಅವರಿಗೆ ಯಾವಾಗಲೂ ಆತಂಕ  (anxiety) ಎದುರಾಗುತ್ತೆ. ಇದು ಸಾಮಾನ್ಯವಾದ ವಿಚಾರವಲ್ಲ. ಇದನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗೆ ಗುರಿಯಾಗಬಹುದು. ಯಾವ ರಾಶಿಯವರಿಗೆ ಈ ಸಮಸ್ಯೆ ಇದೆ ಎಂಬ ಡೀಟೇಲ್ಸ್ ಇಲ್ಲಿದೆ.


ಕನ್ಯಾರಾಶಿ 

ಕನ್ಯಾ ರಾಶಿ (Virgo) ಯವರು ಪರಿಪೂರ್ಣತಾವಾದಿಗಳು. ಆದರೂ ಕೆಲವು ಸಂದರ್ಭಗಳನ್ನು ಅತಿಯಾಗಿ ಯೋಚಿಸು (think) ತ್ತಾರೆ. ಇವರು ಹೆಚ್ಚಾಗಿ ಚಿಂತೆ ಮಾಡುವ ಮೂಲಕ, ನಿರಂತರವಾಗಿ ತಮ್ಮನ್ನು ಮತ್ತು ಇತರರನ್ನು ವಿಶ್ಲೇಷಿಸುವ ಕೆಲಸ ಮಾಡುತ್ತಾರೆ ಮತ್ತು ಟೀಕಿಸುತ್ತಾರೆ. ಇದು ನಿಯಂತ್ರಣಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ.

ಮಿಥುನ ರಾಶಿ

ಮಿಥುನ ರಾಶಿ (Gemini)  ಯವರು ಸಾಮಾನ್ಯವಾಗಿ ಚಿಂತಕರು, ಅವರು ವಿಭಿನ್ನ ದೃಷ್ಟಿಕೋನ (perspective) ಹೊಂದಿದ್ದು, ಮತ್ತು ಆಲೋಚನೆಗಳು ಕೂಡ ಭಿನ್ನವಾಗಿ ಇರುತ್ತವೆ. ಇವರು ಯಾವುದೇ ಸನ್ನಿವೇಶ ಇರಲಿ ಪ್ರತಿಯೊಂದು ಅಂಶವನ್ನು ಕೂಡ ವಿಶ್ಲೇಷಣೆ  (Analysis) ಮಾಡುತ್ತಾರೆ. ಇದು ಇದು ಅತಿಯಾಗಿ ಯೋಚಿಸಲು ಕಾರಣವಾಗಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ (Scorpio) ಯವರು ಕೂಡ ಯಾವುದೇ ವಿಚಾರ ಇರಲಿ ತುಂಬಾ ಚಿಂತೆ ಮಾಡ್ತಾರೆ. ಹೆಚ್ಚಾಗಿ ಆಲೋಚನೆ ಮಾಡುತ್ತಾರೆ. ಇದರಿಂದ ಅವರು ನಿಯಂತ್ರಣ  (control ) ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಚಿಂತೆಗೆ ಪರಿಹಾರ ಕಂಡುಕೊಳ್ಳಲು ಅವರಿಂದ ಸಾಧ್ಯವಾಗುವುದು ಸ್ವಲ್ಪ ಕಷ್ಟ.

ಇವರು 'ವೈರಿ'ಗಳಿಗಿಂತ ಡೇಂಜರ್: ಇಂತವರಿಂದ ದೂರ ಇರಿ ಅಂತಾರೆ ಚಾಣಕ್ಯರು..!

ಮೀನ ರಾಶಿ

ಮೀನ ರಾಶಿ (Pisces) ಯ ವ್ಯಕ್ತಿಗಳು ಹೆಚ್ಚು ಅರ್ಥಗರ್ಭಿತ ಮತ್ತು ಸಂವೇದನಾಶೀಲ (Sensitive) ರು. ತಮ್ಮ ಸಹಾನುಭೂತಿಯ ಸ್ವಭಾವದಿಂದಾಗಿ ಹೆಚ್ಚಾಗಿ ಯೋಚಿಸುತ್ತಾರೆ. ಅವರು ತಮ್ಮದೇ ಆದ ಆಲೋಚನೆಗಳು ಮತ್ತು ಭಾವನೆ (feeling) ಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇದು ಕೆಲವೊಮ್ಮೆ ಅತಿಯಾಗಿ ಚಿಂತಿಸಲು ಕಾರಣ ಆಗಬಹುದು.

ತುಲಾ ರಾಶಿ

ತುಲಾ ರಾಶಿ (Libra) ಯವರು ಸಮತೋಲನ (balance)  ಮತ್ತು ಸಾಮರಸ್ಯದ ಜೀವನ ನಡೆಸುತ್ತಾರೆ. ಆದರೆ ಇದು ಕೆಲವೊಮ್ಮೆ ಅತಿಯಾದ ಚಿಂತನೆ (thinking) ಗೆ ಕಾರಣವಾಗಬಹುದು. ಅವರು ನಿರ್ಧಾರಗಳ ಸಾಧಕ-ಬಾಧಕಗಳನ್ನು ಅತಿಯಾಗಿ ತೂಗುತ್ತಾರೆ. ಈ ಸಮಯದಲ್ಲಿ ಏನು ಮಾಡಬೇಕು ಎಂಬ ಚಿಂತೆ ಅವರಿಗೆ ಕಾಡಲಿದೆ.

ಕಟಕ ರಾಶಿ

ಕಟಕ ರಾಶಿ (Cancer) ಯವರು ಭಾವಜೀವಿಗಳು. ಇವರು ತಮ್ಮ ಭಾವನೆ (feeling) ಗಳು ಮತ್ತು ಇತರರ ಭಾವನೆಗಳ ಬಗ್ಗೆ ಆಳ (depth) ವಾಗಿ ಯೋಚಿಸುತ್ತಾರೆ. ಇವರು ಯಾವುದೇ ಯಾರ ಜೊತೆಗೆ ಇರಲಿ ಮಾತನಾಡುವಾಗ ಅತಿಯಾಗಿ ವಿಶ್ಲೇಷಿಸುತ್ತಾರೆ. ಇದು ಕೆಲವೊಮ್ಮೆ ಅತಿಯಾಗಿ ಯೋಚಿಸುವುದು ಮತ್ತು ಚಿಂತಿಸುವುದಕ್ಕೆ ಕಾರಣವಾಗುತ್ತದೆ.

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios