Asianet Suvarna News Asianet Suvarna News

ಈ ಐದು ರಾಶಿಯವರಿಗೆ ಎಲ್ಲದರಲ್ಲೂ ನಾಚಿಕೆ ಸ್ವಲ್ಪ ಜಾಸ್ತಿನೇ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ಚಕ್ರಗಳ ಪ್ರಕಾರ ಕೆಲವು ರಾಶಿಯವರು ಕೆಲವು ವಿಷಯಗಳನ್ನು ಆರಾಮವಾಗಿ ಹೇಳಿಕೊಂಡರೆ, ಇನ್ನು ಕೆಲವು ರಾಶಿಯ ವ್ಯಕ್ತಿಗಳು ವಿಷಯಗಳನ್ನು ಹೇಳಿಕೊಳ್ಳಲು ಅಂಜಿಕೊಳ್ಳುತ್ತಾರೆ. ಈ ರಾಶಿಯ ವ್ಯಕ್ತಿಗಳದ್ದು ನಾಚಿಕೆ ಸ್ವಭಾವ  ಎಂದು ಹೇಳಲಾಗುತ್ತದೆ. ಹಾಗಾದರೆ ಅಂತಹ ರಾಶಿಯ ವ್ಯಕ್ತಿಗಳು ಹೆಚ್ಚು ನಾಚಿಕೆ ಸ್ವಭಾವವನ್ನು ಹೊಂದಿರುವ ಕಾರಣ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

Cancer Pisces Scorpio Virgo Capricorn Zodiac sign people are very Shy in nature
Author
Bangalore, First Published Oct 23, 2021, 4:24 PM IST

ಭಾವನೆಗಳನ್ನು (Feeling) ವ್ಯಕ್ತಪಡಿಸುವುದು (Express) ಹಲವರಿಗೆ ಕಷ್ಟ. ಇನ್ನು ಕೆಲವರು ಅಂದುಕೊಂಡದ್ದನ್ನು ಪಟ್ ಅಂತ ಹೇಳುವ ಸ್ವಭಾವವನ್ನು(Character) ಹೊಂದಿರುತ್ತಾರೆ. ಕೆಲವರು ಭಾವನೆಗಳನ್ನು ವ್ಯಕ್ತಪಡಿಸಲು (Express) ತುಂಬಾ ಮುಜುಗರ (Embarrassment) ಪಟ್ಟುಕೊಳ್ಳುತ್ತಾರೆ. ಕೆಲವು ರಾಶಿಯವರು ತುಂಬಾ ನಾಚಿಕೆ ಸ್ವಭಾವವನ್ನು ಹೊಂದಿರುತ್ತಾರೆ. ತಮ್ಮ ಭಾವನೆಗಳನ್ನು ಇತರರ ಎದುರಿಗೆ ಹೇಳಿಕೊಳ್ಳದೆ ರಹಸ್ಯವನ್ನು ಕಾಯ್ದುಕೊಳ್ಳುತ್ತಾರೆ.

ಇದನ್ನು ಓದಿ: ಗ್ರಹಗಳ ಅಶುಭ ಪ್ರಭಾವವನ್ನುಈ ಸಂಕೇತಗಳಿಂದ ತಿಳಿಯಿರಿ...!!

ಕೆಲವು ರಾಶಿಚಕ್ರದ (Zodiac sign) ವ್ಯಕ್ತಿಗಳು ತುಂಬಾ ನಾಚಿಕೆ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಹಾಗಾದರೆ ಅಂತಹ ಸ್ವಭಾವವನ್ನು (Character) ಹೊಂದಿರುವ ಕರ್ಕಾಟಕ ರಾಶಿ, ಮೀನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಮಕರ ರಾಶಿಯವರ ಬಗ್ಗೆ ತಿಳಿಯೋಣ... 

ಕರ್ಕಾಟಕ ರಾಶಿ (Cancer)

ಹನ್ನೆರಡು ರಾಶಿಗಳಲ್ಲಿ ಅತ್ಯಂತ ನಾಚಿಕೆ ಸ್ವಭಾವವನ್ನು ಹೊಂದಿರುವ ರಾಶಿಯವರೆಂದರೆ ಅದು ಕರ್ಕಾಟಕ ರಾಶಿಯವರು. ಈ ರಾಶಿಯವರು ಅಂಜಿಕೆ (Fear) ಮತ್ತು ನಾಚಿಕೆ (Shy) ಸ್ವಭಾವವನ್ನು ಹೊಂದಿರುತ್ತಾರೆ. ಜನರ ಜತೆ ಹೆಚ್ಚೆಚ್ಚು ಬೆರೆಯುವುದು ಈ ರಾಶಿಯವರಿಗೆ ಇಷ್ಟವಿರುವುದಿಲ್ಲ. ಹಾಗಾಗಿ ಜನರ ಜತೆ ಹೆಚ್ಚು ಮಾತನಾಡದ ಕಾರಣ ಈ ರಾಶಿಯವರಿಗೆ ಅಹಂಕಾರ (Arrogance) ಎಂದು ಭಾವಿಸಲಾಗುತ್ತದೆ.  ಸೂಕ್ಷ್ಮ (Sensitive) ಮತ್ತು ಸಂವೇದನಾಶೀಲ ವ್ಯಕ್ತಿತ್ವ ಇವರದ್ದಾಗಿರುತ್ತದೆ.  ಸುಮ್ಮನಿರುತ್ತಾರೆ ಮತ್ತು ಜನರ ಜತೆ ಬೆರೆಯುವುದಿಲ್ಲ ಎಂದ ಮಾತ್ರಕ್ಕೆ ಇವರು ಏಕಾಂತವನ್ನು ಇಷ್ಟಪಡುವವರು ಎಂದಲ್ಲ.  ಸುಮ್ಮನಿದ್ದೆ ಜನರ ವ್ಯಕ್ತಿತ್ವವನ್ನು ಚೆನ್ನಾಗಿ ಅರಿತುಕೊಳ್ಳುತ್ತಾರೆ. 

ಇದನ್ನು ಓದಿ: ಈ 4 ರಾಶಿಯವರಿಗೆ ಹಣ ಬೇಕಾದಷ್ಟಿದೆ, ಆದ್ರೆ ಲವ್ ಲೈಫ್ ಮಾತ್ರ ಹೀಗೆ

ಕನ್ಯಾ ರಾಶಿ (Virgo)

ಈ ರಾಶಿಯ ವ್ಯಕ್ತಿಗಳು ಇತರರೆದುರಿಗೆ ತಮ್ಮ ಆಲೋಚನೆಗಳನ್ನು ಹೇಳುವಾಗ ಹೆಚ್ಚು ಯೋಚಿಸುತ್ತಾರೆ. ತಾವು ಹೇಳುವ ವಿಷಯದಿಂದ ಅಥವಾ ಮಾಡುವ ಕಾರ್ಯದಿಂದ ಆಗುವ ಪರಿಣಾಮದ (Effects) ಬಗ್ಗೆ ಮೊದಲು ಕಲ್ಪಿಸಿಕೊಳ್ಳುತ್ತಾರೆ. ಹಾಗಾಗಿ ಹೆಚ್ಚು ನಾಚಿಕೆ ಸ್ವಭಾವ ಮತ್ತು ಶಾಂತ (Peace) ರೀತಿಯಿಂದ ಇರುವಂತೆ ಕಾಣುತ್ತಾರೆ. ಸ್ವಲ್ಪ ಮಟ್ಟಿಗಿನ ಅಹಂಕಾರ ಸ್ವಭಾವವನ್ನು ಹೊಂದಿರುತ್ತಾರೆ. ಈ ಕಾರಣದಿಂದಲೇ ಹೆಚ್ಚು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.   

ವೃಶ್ಚಿಕ ರಾಶಿ (Scorpio)

ಈ ರಾಶಿಯ ವ್ಯಕ್ತಿಗಳು ರಹಸ್ಯ (Secret ) ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಇತರರು ಏನು ಮಾಡುತ್ತಾರೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಬಗ್ಗೆ ಯಾವ ವಿಷಯವನ್ನು ಇತರರಿಗೆ ತಿಳಿಯದಂತೆ ಗುಪ್ತವಾಗಿಟ್ಟಿರುತ್ತಾರೆ (Hide). ಹೊಸ ವ್ಯಕ್ತಿಗಳ ಮೇಲೆ ವಿಶ್ವಾಸ (Confidence) ಬರುವವರೆಗೆ ಯಾವ ವಿಚಾರವನ್ನು ಹಂಚಿಕೊಳ್ಳದೆ ಅಂತರವನ್ನು (Gap) ಕಾಯ್ದುಕೊಂಡಿರುತ್ತಾರೆ. ತಮಗಿಷ್ಟ ಬಂದ ಹಾಗೆ ಇರಲು ಇಚ್ಛಿಸುತ್ತಾರೆ. ಕೆಲವೊಮ್ಮೆ ಇತರರ ಮೇಲೆ ಗುಪ್ತಚರರಂತೆ ಕಾರ್ಯನಿರ್ವಹಿಸುತ್ತಾರೆ.

ಮಕರ ರಾಶಿ (Capricorn)

ಮಕರ ರಾಶಿಯ ವ್ಯಕ್ತಿಗಳು ನಾಚಿಕೆ (Shy) ಸ್ವಭಾವವನ್ನು ಹೊಂದಿರುತ್ತಾರೆ. ಜನರೊಂದಿಗೆ ಬೆರೆಯಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ. ಸಾಮಾಜಿಕ (Social) ವಿಷಯಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುತ್ತಾರೆ ಆದರೂ ಬೇಗ ನಿರ್ಧಾರದಿಂದ (Decision) ವಾಪಾಸಾಗುತ್ತಾರೆ. ನೇತೃತ್ವದ (Leadership) ಗುಣ ಹೊಂದಿರುವ ಈ ರಾಶಿಯವರು ಸ್ವಭಾವದ ಕಾರಣದಿಂದ ಹಿಂದೆ ಸರಿಯುತ್ತಾರೆ.

ಇದನ್ನು ಓದಿ: ರಾಶಿ ಚಕ್ರಗಳಲ್ಲಿ ಅಡಗಿರೋ ರಹಸ್ಯ ಗೊತ್ತೇ..? ನಿಮ್ಮದ್ಯಾವ ರಾಶಿ?

ಮೀನ ರಾಶಿ (Pisces)

ಈ ರಾಶಿಯ ವ್ಯಕ್ತಿಗಳು ಗೊತ್ತಿರುವವರ ಜೊತೆ ತುಂಬಾ ಸಹಜವಾಗಿ ( Natural) ಮಾತನಾಡಿಕೊಂಡಿರುತ್ತಾರೆ (Talkative). ಅಷ್ಟೇ ಅಲ್ಲದೆ ಈ ವ್ಯಕ್ತಿಗಳು ಸಾಹಸಿಗಳು (Adventures) ಮತ್ತು ಹಾಸ್ಯ (Humour) ಗುಣವನ್ನು ಉಳ್ಳವರು ಆಗಿರುತ್ತಾರೆ. ಅಪರಿಚಿತರ (Stranger)  ನಡುವೆ ಈ ವ್ಯಕ್ತಿಗಳು ಮಾತೇ ಬರದವರಂತೆ ಇರುತ್ತಾರೆ. ಅಷ್ಟು ನಾಚಿಕೆ ಸ್ವಭಾವ ಮೀನ ರಾಶಿಯವರದ್ದು ಆಗಿರುತ್ತದೆ.

Follow Us:
Download App:
  • android
  • ios