Asianet Suvarna News Asianet Suvarna News

ಈ 4 ರಾಶಿಯವರಿಗೆ ಹಣ ಬೇಕಾದಷ್ಟಿದೆ, ಆದ್ರೆ ಲವ್ ಲೈಫ್ ಮಾತ್ರ ಹೀಗೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ಚಕ್ರಗಳ ಪ್ರಕಾರ ಕೆಲವು ರಾಶಿಯವರು ಕೆಲವು ವಿಷಯಗಳನ್ನು ಆರಾಮವಾಗಿ ಪಡೆದುಕೊಂಡರೆ, ಇನ್ನು ಕೆಲವು ವಿಚಾರಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಕೆಲವು ರಾಶಿಯ ವ್ಯಕ್ತಿಗಳಿಗೆ ಹಣಕ್ಕೆ ಕೊರತೆ ಇಲ್ವಂತೆ, ಪ್ರೇಮ ಜೀವನಕ್ಕೆ ಸಮಸ್ಯೆಯಂತೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

Aries Leo Virgo Aquarius Zodiac sign people are lucky for money and not for love life
Author
Bangalore, First Published Oct 17, 2021, 2:29 PM IST
  • Facebook
  • Twitter
  • Whatsapp

ಜಗತ್ತಿನಲ್ಲಿ ಎಲ್ಲವೂ ಎಲ್ಲರಿಗೂ ಸಿಗುವುದಿಲ್ಲ. ಒಬ್ಬ ವ್ಯಕ್ತಿ ಒಂದು ವಿಷಯದಲ್ಲಿ ಅದೃಷ್ಟವಂತನಾಗಿದ್ದರೆ (Fortunate), ಇನ್ಯಾವುದೊ ವಿಷಯದಲ್ಲಿ ಆತ ದುರದೃಷ್ಟವಂತನಾಗಿರುತ್ತಾನೆ (Unfortunate). ನಮ್ಮ ಬಳಿ ಯಾವುದಿಲ್ಲವೋ ಅದು ಬೇಕೆಂಬ ಹಂಬಲ ಉಂಟಾಗುತ್ತದೆ. ಕೆಲ ವ್ಯಕ್ತಿಗಳಿಗೆ ಅದೃಷ್ಟದಿಂದ ಕೆಲವು ಸಿಕ್ಕರೆ ಮತ್ತೆ ಕೆಲವು ಸಿಕ್ಕಿರುವುದಿಲ್ಲ. ರಾಶಿಚಕ್ರಗಳ (Zodiac sign)  ಪ್ರಕಾರ ಕೆಲವು ರಾಶಿಯವರು ಕೆಲವು ವಿಷಯದಲ್ಲಿ ಅದೃಷ್ಟವಂತರಾಗಿರುತ್ತಾರೆ. ಅದೇ ಮತ್ತೆ ಕೆಲವು ವಿಚಾರಗಳಲ್ಲಿ ಅದೃಷ್ಟ ಪಡೆದುಕೊಂಡು ಬಂದಿರುವುದಿಲ್ಲ. 

ಇದನ್ನು ಓದಿ: ಓಡುತ್ತಿರುವ ಕುದುರೆ ಪೇಂಟಿಂಗ್‌ನಲ್ಲಿದೆ ಈ ರಹಸ್ಯ...

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಮೇಷ ರಾಶಿ (Aries), ಸಿಂಹ ರಾಶಿ (Leo) , ಕನ್ಯಾ ರಾಶಿ (Virgo) ಮತ್ತು ಕುಂಭ ರಾಶಿಯ (Aquarius) ವ್ಯಕ್ತಿಗಳು ಹಣದ ವಿಚಾರದಲ್ಲಿ ಅದೃಷ್ಟವಂತರಾಗಿರುತ್ತಾರೆ. ಆದರೆ ಈ ರಾಶಿ ವ್ಯಕ್ತಿಗಳ ಪ್ರೇಮ ವಿವಾಹ ಅಥವಾ ಪ್ರೇಮ ಜೀವನ ಅಷ್ಟಾಗಿ ಚೆನ್ನಾಗಿರುವುದಿಲ್ಲವೆಂದು ಹೇಳಲಾಗುತ್ತದೆ. ಈ ಬಗ್ಗೆ ಇನ್ನಷ್ಟು ತಿಳಿಯೋಣ...

ಮೇಷ ರಾಶಿ (Aries)

ಈ ರಾಶಿಯ ವ್ಯಕ್ತಿಗಳು ಅತ್ಯಂತ ಭಾಗ್ಯಶಾಲಿಗಳೆಂದು (Fortunate) ಹೇಳಲಾಗುತ್ತದೆ. ಮೇಷ ರಾಶಿಯ ವ್ಯಕ್ತಿಗಳಲ್ಲಿ ನಾಯಕತ್ವದ ಕ್ಷಮತೆ ಉತ್ತಮವಾಗಿರುತ್ತದೆ. ಈ ವ್ಯಕ್ತಿಗಳು ಪರಿಶ್ರಮಿಗಳು (Effort) ಮತ್ತು ಪ್ರಾಮಾಣಿಕರಾಗಿರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳು ಜೀವನದಲ್ಲಿ (Life) ಏನು ಬೇಕೋ ಅದನ್ನು ಪಡೆಯುತ್ತಾರೆ. ಹಣದ ಕೊರತೆ ಇವರಿಗೆ ಕಾಡುವುದೇ ಇಲ್ಲ. ಆದರೆ, ಈ ವ್ಯಕ್ತಿಗಳ ಪ್ರೇಮ ಜೀವನದಲ್ಲಿ (Love life) ಸಮಸ್ಯೆಗಳು ಎದುರಾಗುವುದೇ ಹೆಚ್ಚು. ಮೇಷ ರಾಶಿಯವರದ್ದು ಹೆಚ್ಚು ಪ್ರಾಬಲ್ಯ (Dominating) ತೋರುವ ವ್ಯಕ್ತಿತ್ವವಾದ್ದರಿಂದ ಹೊಂದಾಣಿಕೆಯ ಸಮಸ್ಯೆ ಹೆಚ್ಚು ಎದುರಾಗುತ್ತದೆ. ಹಾಗಾಗಿ ಪ್ರೇಮ ಜೀವನ ತಾಪತ್ರಯದಲ್ಲಿ ಸಾಗುತ್ತದೆ.

ಇದನ್ನು ಓದಿ: ರಾಶಿ ಚಕ್ರಗಳಲ್ಲಿ ಅಡಗಿರೋ ರಹಸ್ಯ ಗೊತ್ತೇ..? ನಿಮ್ಮದ್ಯಾವ ರಾಶಿ?

ಸಿಂಹ ರಾಶಿ (Leo)

ಈ ಸಿಂಹ ರಾಶಿಯವರು ಹೆಚ್ಚು ಪ್ರಾಮಾಣಿಕರು ಮತ್ತು ಪರಿಶ್ರಮದಿಂದ ಕಾರ್ಯ (Work) ನಿರ್ವಹಿಸುವ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಜೀವನದಲ್ಲಿ ಬಹು ಬೇಗ ಯಶಸ್ಸನ್ನು (Success) ಕಾಣುತ್ತಾರೆ. ಹಣದ (Finance) ವಿಚಾರದಲ್ಲಿ ಹೆಚ್ಚು ಕಷ್ಟ ಪಡುವ ಅಗತ್ಯ ಇವರಿಗಿರುವುದಿಲ್ಲ. ಈ ವ್ಯಕ್ತಿಗಳು ಇತರರ ಮಾತನ್ನು ಹೆಚ್ಚು ಕೇಳುವುದಿಲ್ಲ. ಆದರೆ ಇತರರು ತಮ್ಮ ಮಾತನ್ನು ಕೇಳಬೇಕೆಂದು ಹೆಚ್ಚು ಬಯಸುತ್ತಾರೆ. ಹಾಗಾಗಿ ಈ ವ್ಯಕ್ತಿಗಳ ಪ್ರೇಮ ಜೀವನದಲ್ಲಿ ತೊಂದರೆಗಳು ಉದ್ಭವವಾಗುವ ಸಂಭವ ಹೆಚ್ಚಿರುತ್ತದೆ.

ಕನ್ಯಾ ರಾಶಿ (Virgo)

ಈ ರಾಶಿಯ ವ್ಯಕ್ತಿಗಳು ಸೂಕ್ಷ್ಮ ಮನಸ್ಥಿತಿಯನ್ನು (Emotional) ಉಳ್ಳವರಾಗಿರುತ್ತಾರೆ. ಈ ವ್ಯಕ್ತಿಗಳು ಪ್ರೇಮಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಈ ವ್ಯಕ್ತಿಗಳು ತಮ್ಮ ಸಂಗಾತಿಯನ್ನು (Partner) ಖುಷಿಯಾಗಿಡಲು (Happy) ಹೆಚ್ಚು ಪ್ರಯತ್ನ ಪಡುತ್ತಾರೆ. ಸಂಗಾತಿಯ ಚಿಕ್ಕ-ಪುಟ್ಟ ವಿಷಯಗಳ ಬಗ್ಗೆ ಕಾಳಜಿ (Care) ವಹಿಸುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಆದರೆ ಈ ವ್ಯಕ್ತಿಗಳು ತಮ್ಮ ತಪ್ಪನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಈ ರಾಶಿಯವರ ಪ್ರೇಮ ಜೀವನ ಅಷ್ಟೊಂದು ನೆಮ್ಮದಿಯಿಂದ ಕೂಡಿರುವುದಿಲ್ಲ.

ಇದನ್ನು ಓದಿ: ಶ್ರವಣ, ಧನಿಷ್ಠಾ, ಶತಭಿಷಾ ನಕ್ಷತ್ರದವರ ವಿಶೇಷ ಗುಣ ಅರಿಯಿರಿ..!

ಕುಂಭ ರಾಶಿ (Aquarius)

ಈ ರಾಶಿಯ ವ್ಯಕ್ತಿಗಳು ಪ್ರೀತಿ ಮತ್ತು ಬಾಂಧವ್ಯಕ್ಕೆ (Bonding) ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ಕುಂಭ ರಾಶಿಯವರು ಹೆಚ್ಚು ಪರಿಶ್ರಮದಿಂದ (Effort) ದುಡಿಯುತ್ತಾರೆ. ಹಾಗಾಗಿ ಸಾಕಷ್ಟು ಹಣ ಸಂಪಾದನೆಯನ್ನು (Salary) ಇವರು ಮಾಡುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಕೆಲಸದಲ್ಲಿ ಹೆಚ್ಚು ವ್ಯಸ್ತವಾಗಿರುವ ಕಾರಣ ಪ್ರೀತಿಸಿದವರಿಗೆ ಸಾಕಷ್ಟು ಸಮಯ ನೀಡಲು ಇವರಿಗೆ ಸಾಧ್ಯವಾಗುವುದಿಲ್ಲ. ಇದೇ ಕಾರಣದಿಂದ  ಈ ರಾಶಿಯ ವ್ಯಕ್ತಿಗಳ ಪ್ರೇಮ ಜೀವನದಲ್ಲಿ ಭಿನ್ನಾಭಿಪ್ರಾಯ (Differences) ಮೂಡುವ ಸಾಧ್ಯತೆ (Possibilities) ಇರುತ್ತದೆ.

Follow Us:
Download App:
  • android
  • ios