Astrology Tips: ಹಳೆ ಪೊರಕೆ ಎಸೆಯುವ ಮುನ್ನ ಇದು ನೆನಪಿರಲಿ
ಮನೆಗೆ ಹೊಸ ವಸ್ತು ಬರ್ತಿದ್ದಂತೆ ಹಳೆಯ, ಹಾಳಾದ ವಸ್ತುವನ್ನು ಎಸೆಯುತ್ತೇವೆ. ಆದ್ರೆ ಪೊರಕೆ ವಿಷ್ಯದಲ್ಲಿ ಈ ತಪ್ಪನ್ನು ಮಾಡ್ಬಾರದು. ಧನ ತ್ರಯೋದಶಿ ದಿನ ಹೊಸ ಪೊರಕೆ ತಂದು, ಹಳೆ ಪೊರಕೆ ಎಸೆದ್ರೆ ಆರ್ಥಿಕ ಸಮಸ್ಯೆ ನಿಶ್ಚಿತ.
ದೀಪಾವಳಿ ಧನ ತ್ರಯೋದಶಿಯಿಂದ ಶುರುವಾಗುತ್ತದೆ, ಹಿಂದೂ ಧರ್ಮದಲ್ಲಿ ಧನ ತ್ರಯೋದಶಿಗೆ ವಿಶೇಷ ಮಹತ್ವವಿದೆ. ಧನ ತ್ರಯೋದಶಿ ದಿನ ಕೆಲವು ವಿಶೇಷ ವಸ್ತುಗಳನ್ನು ಜನರು ಖರೀದಿ ಮಾಡಲು ಆಧ್ಯತೆ ನೀಡ್ತಾರೆ. ಧನ ತ್ರಯೋದಶಿ ದಿನ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಿದ್ರೆ ದೇವಿ ಲಕ್ಷ್ಮಿ ನಮ್ಮನ್ನು ಆಶೀರ್ವದಿಸುತ್ತಾಳೆ ಎಂಬ ನಂಬಿಕೆಯಿದೆ. ಎಂದೂ ಹಣದ ಕೊರತೆ ಎದುರಾಗುವುದಿಲ್ಲವೆಂದು ಜನರು ನಂಬಿದ್ದಾರೆ. ಧನ ತ್ರಯೋದಶಿ (Dhanteras.) ದಿನ ಬರೀ ಬಂಗಾರ, ಬೆಳ್ಳಿ ಆಭರಣ ಮಾತ್ರವಲ್ಲ ಪೊರಕೆ (brooms) ಖರೀದಿಗೂ ವಿಶೇಷ ಮಹತ್ವವಿದೆ. ಜ್ಯೋತಿಷ್ಯದಲ್ಲಿ ಧನ ತ್ರಯೋದಶಿ ದಿನ ಪೊರಕೆ ಖರೀದಿಸುವುದು ಅಗತ್ಯ ಎನ್ನಲಾಗಿದೆ. ಏಕೆಂದರೆ ಇದು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಗೆ ಹೊಸ ಪೊರಕೆ ತರುವುದರ ಅರ್ಥ ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸಿದಂತೆ. ಧನ ತ್ರಯೋದಶಿ ದಿನ ಹೊಸ ಪೊರಕೆಯನ್ನು ಖರೀದಿಸುವುದು ಮಾತ್ರವಲ್ಲ, ಅದನ್ನು ಪೂಜಿಸಲಾಗುತ್ತದೆ.
ಆ ದಿನ ಪೊರಕೆಯನ್ನು ಮನೆಗೆ ತಂದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಆದ್ರೆ ಹೊಸ ಪೊರಕೆಯನ್ನು ಖರೀದಿಸುವ ಮೊದಲು ಹಳೆ ಪೊರಕೆ ಬಗ್ಗೆ ಆಲೋಚನೆ ಮಾಡ್ಬೇಕು. ಕೆಲ ನಿಯಮಗಳನ್ನು ಪಾಲನೆ ಮಾಡ್ಬೇಕು. ಆಗ ಮಾತ್ರ ತಾಯಿ ಲಕ್ಷ್ಮಿ ಒಲಿಯಲು ಸಾಧ್ಯ. ಹಳೆ ಪೊರಕೆ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಧನ ತ್ರಯೋದಶಿ ದಿನ ಹಳೆ ಪೊರಕೆಯನ್ನು ಏನು ಮಾಡ್ಬೇಕು? : ಧನ ತ್ರಯೋದಶಿ ದಿನ ಹೊಸ ಪೊರಕೆ ಮನೆಗೆ ತರುವುದು ಶುಭವೆಂದು ಮೊದಲೇ ಹೇಳಿದ್ದೇವೆ. ಸಾಮಾನ್ಯವಾಗಿ ಹೊರ ಪೊರಕೆ ಮನೆಗೆ ಬರ್ತಿದ್ದಂತೆ ಹಳೆ ಪೊರಕೆಯನ್ನು ನಾವೆಲ್ಲ ಎಸೆಯುತ್ತೇವೆ. ಆದ್ರೆ ಅಪ್ಪಿತಪ್ಪಿಯೂ ಧನ ತ್ರಯೋದಶಿ ದಿನ ಹಳೆ ಪೊರಕೆಯನ್ನು ಎಸೆಯಬಾರದು.
ಹೊಸ ಪೊರಕೆಯಂತೆ ಹಳೆ ಪೊರಕೆಗೂ ಪೂಜೆ ಮಾಡ್ಬೇಕು. ಹಳೆ ಪೊರಕೆಗೆ ಕುಂಕುಮ ಹಚ್ಚಿ ಪೂಜೆ ಮಾಡಬೇಕು. ನಂತ್ರ ಹೊರಗಿನ ವ್ಯಕ್ತಿಗಳಿಗೆ ಕಾಣದ ಜಾಗದಲ್ಲಿ ಪೊರಕೆಯನ್ನು ಇಡಬೇಕು. ಧನ್ ತ್ರಯೋದಶಿ ದಿನ ಹಳೆ ಪೊರಕೆಯನ್ನು ಎಸೆದರೆ ಲಕ್ಷ್ಮಿ ಕೂಡ ಮನೆಯಿಂದ ಹೊರಗೆ ಹೋಗ್ತಾಳೆ. ಹಾಗಾಗಿ ಹಳೆ ಪೊರಕೆಗೆ ಕಪ್ಪು ದಾರವನ್ನು ಕಟ್ಟಿ, ಯಾರ ಕಣ್ಣಿಗೂ ಕಾಣದ ಜಾಗದಲ್ಲಿ ಇಡಿ.
Feng Shui Tips: ಮನೆಯ ಕಿಟಕಿ ಹೀಗಿದ್ದರೆ ಒಳ್ಳೇದು
ಪೊರಕೆಯನ್ನು ಶುಕ್ರನ ಸಂಕೇತವೆಂದು ಭಾವಿಸಲಾಗುತ್ತದೆ. ಕಪ್ಪು ದಾರವನ್ನು ಶನಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಪೊರಕೆಗೆ ಕಪ್ಪು ದಾರವನ್ನು ಕಟ್ಟುವುದು ಮಂಗಳಕರವೆಂದು ನಂಬಲಾಗಿದೆ.
ಹಳೆಯ ಪೊರಕೆಯನ್ನು ಹಾಸಿಗೆಯ ಕೆಳಗೆ ಮತ್ತು ಅಡುಗೆ ಮನೆಯಲ್ಲಿ ಇಡಬೇಡಿ. ಧನ ತ್ರಯೋದಶಿ ದಿನ ಹಳೆ ಪೊರಕೆಯಲ್ಲಿ ಮನೆ ಸ್ವಚ್ಛಗೊಳಿಸಬೇಡಿ. ಹೊಸ ಪೊರಕೆಗೆ ಪೂಜೆ ಮಾಡಿ ಅದರಲ್ಲಿಯೇ ಮನೆಯನ್ನು ಸ್ವಚ್ಛಗೊಳಿಸಿ.
ಪೊರಕೆ ಬಗ್ಗೆ ಇರಲಿ ಈ ಎಲ್ಲ ಗಮನ : ಎಂದೂ ಹಾಳಾದ ಪೊರಕೆಯನ್ನು ಬಳಸಲು ಹೋಗಬೇಡಿ. ಹಾಳಾದ ಪೊರಕೆಯನ್ನು ಎಲ್ಲರ ಕಣ್ಣಿಗೆ ಕಾಣುವಂತೆ ಇಡಲೂಬಾರದು. ಪೊರಕೆಯನ್ನು ಮನೆಯಿಂದ ಹೊರಗೆ ಹಾಕಲು ಕೂಡ ದಿನವಿದೆ. ಶನಿವಾರ ಅಥವಾ ಅಮವಾಸ್ಯೆ ದಿನದಂದು ನೀವು ಹಳೆ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬೇಕು. ಪೊರಕೆ ಯಾರ ಕಾಲಿಗೂ ತಾಗದ ಜಾಗದಲ್ಲಿ ಇಡಬೇಕು.
ನೀವು ಹುಟ್ಟಿದ ಡೇಟ್ ಏನು? ಈ ದಿನ ಹುಟ್ಟಿದರೆ ದುಡ್ಡು ಕೈ ತುಂಬಾ ಇರುತ್ತೆ!
ಹೊಸ ಪೊರಕೆ ಖರೀದಿಗೂ ದಿನ ನೋಡುವುದು ಅಗತ್ಯ. ಧನ ತ್ರಯೋದಶಿ ದಿನ ಅಗತ್ಯವಾಗಿ ಪೊರಕೆ ಖರೀದಿ ಮಾಡಿ. ಧನ ತ್ರಯೋದಶಿ ದಿನ ಪೊರಕೆ ಖರೀದಿ ಮಾಡುವಾಗ ಮುರಿದ ಅಥವಾ ಹಗುರವಾಗಿರುವ ಪೊರಕೆ ಖರೀದಿ ಮಾಡಬೇಡಿ. ಪೊರಕೆಯನ್ನು ಖರೀದಿಸಿ ಮನೆಗೆ ತಂದು ಅದ್ರಲ್ಲಿ ಮನೆ ಕ್ಲೀನ್ ಮಾಡಿ. ಆದ್ರೆ ರಾತ್ರಿ ಪೊರಕೆ ಬಳಸಬೇಡಿ. ಪೊರಕೆಯನ್ನು ನೆಲಕ್ಕೆ ಇರಬೇಡಿ. ಅದನ್ನು ಗೋಡೆಗೆ ನೇತು ಹಾಕಿ. ಪೊರಕೆಯನ್ನು ಎಂದಿಗೂ ತುಳಿಯಬೇಡಿ. ಪೊರಕೆ ತುಳಿದ್ರೆ ನಕಾರಾತ್ಮಕ ಶಕ್ತಿ ನಿಮ್ಮನ್ನು ಆವರಿಸುತ್ತದೆ.