ನೀವು ಹುಟ್ಟಿದ ಡೇಟ್ ಏನು? ಈ ದಿನ ಹುಟ್ಟಿದರೆ ದುಡ್ಡು ಕೈ ತುಂಬಾ ಇರುತ್ತೆ!

ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇರೋರು ಪ್ರತಿ ಹೆಜ್ಜೆ ಇಡುವಾಗಲೂ ಲೆಕ್ಕ ಹಾಕ್ಕೊಂಡೇ ಮುನ್ನಡಿ ಇಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಈ ಸಂಖ್ಯಾ ಶಾಸ್ತ್ರ ಹೇಳುವುದು ತಪ್ಪಾಗುವುದೇ ಇಲ್ಲ. ಆ ಪ್ರಕಾರ ತಿಂಗಳು ಈ ನಾಲ್ಕು ದಿನದಲ್ಲಿ ಹುಟ್ಟಿದವರು ಸಿಕ್ಕಾಪಟ್ಟೆ ಅದೃಷ್ಟವಂತರಾಗಿರುತ್ತಾರೆ. ಅವರ ಕೈಯಲ್ಲಿಗೂ ದುಡ್ಡಿಗೆ ಯಾವತ್ತೂ ಬರ ಇರೋಲ್ಲ. ನೀವೇನಾದರೂ ಈ ದಿನ ಹುಟ್ಟಿದವರಾ? 

people born on these four days of month would be lucky and earn money easily

ಹುಟ್ಟಿದ ದಿನ, ದಿನಾಂಕ ಜೊತೆ ಯಾವ ರಾಶಿ, ನಕ್ಷತ್ರದಲ್ಲಿ ಹುಟ್ಟಿದ್ದೀರಿ ಎನ್ನುವುದರ ಮೇಲೆ ಮನುಷ್ಯನ ಹಣೆ ಬರಹ ನಿರ್ಧಾರವಾಗುತ್ತೆ ಎಂಬುವುದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವ ಮೊದಲ ಪಾಠ. ಅಷ್ಟೇ ಅಲ್ಲ ಕೆಲವು ದಿನ ಹುಟ್ಟಿದವರಿಗೆ ಅದೃಷ್ಟ ಕೈ ಹಿಡಿಯುವುದೇ ಇಲ್ಲ. ಇನ್ನು ಕೆಲವು ದಿನ ಹುಟ್ಟಿದವರಿಗೆ ಲಕ್ ಕೈ ಕೊಡುವುದೇ ಇಲ್ಲ. ಮನುಷ್ಯನ ಶ್ರಮ, ಪ್ರತಿಭೆ ಯಶಸ್ಸಿನಲ್ಲಿ ಕೈ ಹಿಡಿಯುತ್ತೆ ಎಂದು ಹೇಳಿದರೂ, ಕೆಲವೊಮ್ಮೆ ಅಂದು ಕೊಂಡಿದ್ದು, ನಿರೀಕ್ಷಿಸಿದಂತೆ ಫಲ ನೀಡದೇ ಹೋದಾಗ ಅದೃಷ್ಟವನ್ನೇ ನಂಬೋದು. ಒಟ್ಟಿನಲ್ಲಿ ಯಾವುದೇ ತಿಂಗಳಾಗಲಿ, ಈ ದಿನಾಂಕದಲ್ಲಿ ಹುಟ್ಟಿದೋರು ಅದೃಷ್ಟವನ್ನೇ ಹೊತ್ತು ತಂದಿರುತ್ತಾರೆ ಎನ್ನಲಾಗುತ್ತೆ. 

ಯಾವುದೇ ತಿಂಗಳ 1, 10, 19, 28ನೇ ತಾರೀಖಿನಲ್ಲಿ ಹುಟ್ಟಿದವರ ಭವಿಷ್ಯ, ಅದೃಷ್ಟ ಹಾಗೂ ಆರ್ಥಿಕ ಸ್ಥಿತಿಯೂ ಸದ ಸೂಪರ್ ಆಗಿಯೇ ಇರುತ್ತೆ. ಜ್ಯೋತಿಷ್ಯ ಶಾಸ್ತ್ರದ (Astrology) ಭಾಗವಾದ ಸಂಖ್ಯಾಶಾಸ್ತ್ರದಲ್ಲಿಯೂ ಅದೃಷ್ಟದ ಬಗ್ಗೆ ಮಾಹಿತಿ ಇದೆ. ಕೆಲವು ಸಂಖ್ಯೆಗಳು ಕೆಲವರಿಗೆ ಅದೃಷ್ಟವನ್ನು ಹೊತ್ತು ತರುತ್ತದೆ. ಅವರು ಎಂಥದ್ದೇ ಕಾರ್ಯ ಮಾಡುವುದಾದರೂ ಈ ನಂಬರ್ಸ್ ನೋಡಿಕೊಂಡು ಮುಂದುವರಿಯುತ್ತಾರೆ. ಮನೆ ನಂಬರ್ (House Number), ಮೊಬೈಲ್ ನಂಬರ್ (Mobile Number), ವೆಹಿಕಲ್ ನಂಬರ್ (Vehicle Registration Number) ಹೀಗೆ ಎಲ್ಲದರಲ್ಲೂ ತಮಗೆ ಆಗಿಬರುವ, ಅದೃಷ್ಟವನ್ನು ಹೊತ್ತು ತರುವ ಸಂಖ್ಯೆಯನ್ನೇ ಹೊಂದಿರುತ್ತಾರೆ. ಹೊಸ ಕೆಲಸ ಮಾಡುವ ಮುನ್ನು ಕೂಡು, ಕಳೆ, ಗುಣಿಸಿ, ಭಾಗಿಸಿ ಯಾವ ದಿನವನ್ನು ಆರಿಸಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ.

ಜೀವನದ ದಿಕ್ಕೇ ಬದಲಿಸುವ ವಾಸ್ತು ಸಲಹೆಗಳು!

ಅಕರ್ಷಕ ವ್ಯಕ್ತಿತ್ವದ ಜೊತೆ ಆರ್ಥಿಕವಾಗಿ ಲಾಭ ತರುವ ಸಂಖ್ಯೆಗಳು ಯಾವುದು..? ಯಾವುದೇ ತಿಂಗಳ 1, 10, 19, 28ನೇ ತಾರೀಖಿಗೆ ಹುಟ್ಟಿದ ವ್ಯಕ್ತಿಗಳ ಭವಿಷ್ಯ ಏನು? ಅವರ ಲಕ್ ಹೇಗೆ ಇರಲಿದೆ? ಅವರ ಹಣಕಾಸು ಪರಿಸ್ಥಿತಿ ಹೇಗಿರಲಿದೆ? ಎಂಬಿತ್ಯಾದಿ ಅಂಶಗಳ ಬಗ್ಗೆ ತಿಳಿಯೋಣ...

ಸ್ವತಂತ್ರರು (Independents) 
ಇವರಿಗೆ ತಮ್ಮ ಕೆಲಸದಲ್ಲಿ ಇನ್ನೊಬ್ಬರು ಹಸ್ತಕ್ಷೇಪ ಮಾಡುವುದು ಇಷ್ಟವಾಗೋಲ್ಲ.  ಧೈರ್ಯವಂತರು, ಸಾಹಸಿಗಳೂ ಆಗಿರುತ್ತಾರೆ. ತುಂಬಾ ಸ್ವಾಭಿಮಾನಿಗಳೂ ಹೌದು. 

ಸಖತ್ ಕ್ರಿಯೇಟಿವ್ (Creative)
ಈ ತಾರೀಖಿನಲ್ಲಿ ಹುಟ್ಟಿದವರು ಸಖತ್ ಸೃಜನಶೀಲರಾಗಿರುತ್ತಾರೆ. ಮಾತಲ್ಲೇ ಮನೆ ಕಟ್ಟುತ್ತಾರೆ. ಮಾತಿನಿಂದಲೇ ಸುತ್ತು ಜನರು ಇರುವಂತೆ ನೋಡಿಕೊಳ್ಳುತ್ತಾರೆ. ತಮ್ಮ ಸಿದ್ಧಾಂತ ಬಿಟ್ಟು ಕೊಡಲು ಸುತಾರಾಂ ಒಪ್ಪುವುದಿಲ್ಲ. ಕೆಲಸದ ವಿಷಯಕ್ಕೆ ಬಂದರೆ ಪರ್ಫೇಕ್ಟ್. ಕಾಂಪ್ರೋಮೈಸ್ ಆಗೋಲ್ಲ. ಸೋಮಾರಿತನ ತೋರಿಸುವುದೇ ಇಲ್ಲ. ಶ್ರದ್ಧೆಯನ್ನೂ ಬಿಟ್ಟು ಕೊಡುವುದಿಲ್ಲ. 

ಸ್ವಾರ್ಥಿಗಳು (Selfish)
ಸಾಮಾನ್ಯವಾಗಿ ಗಮನಿಸಿ, ಲಕ್ ಇರೋರು ಧೈರ್ಯವಂತರೂ ಆಗಿರುತ್ತಾರೆ. ಅವರು ಜೀವನದಲ್ಲಿ ಎದುರಾಗುವ ಸಂಕಷ್ಟಕ್ಕೆ ಕುಗ್ಗಿ ಹೋಗುವುದಿಲ್ಲ. ಆ ಕಾರಣದಿಂದಲೇ ಅವರಿಗೆ ಲಕ್ ಸಹ ಕೈ ಬಿಡೋಲ್ಲ. ಯಾರು ಜೀವನದಲ್ಲಿ ಹೆಚ್ಚು ರಿಸ್ಕ್ ತೆಗೆದಕೊಳ್ಳಲು ರೆಡಿ ಇರುತ್ತಾರೆ, ಅವರಿಗೆ ಲಕ್ ಕೈ ಬಿಡೋಲ್ಲ. ಆದರೆ, ಮಾಡೋ ಕೆಲಸದಲ್ಲಿ ಸ್ವಲ್ಪ ಸ್ವಾರ್ಥಿಗಳು. ಇದರಿಂದಲೇ ಯಶಸ್ಸು ಇವರು ಕೈ ಹಿಡಿಯುತ್ತದೆ. 

ಮಹತ್ವಾಕಾಂಕ್ಷೆ (Ambitious)
1, 10, 19, 28ನೇ ತಾರೀಖಿನಲ್ಲಿ ಹುಟ್ಟಿದವರ ಪಾದಾಂಕ 1. ಒಂದನೇ ಪಾದಾಂಕದ ಸ್ವಾಮಿ ದೇವರು ಸೂರ್ಯ. ಈ ತಾರೀಖುಗಳಲ್ಲಿ ಜನಿಸಿದ ವ್ಯಕ್ತಿಗಳು ಪ್ರಾಮಾಣಿಕರೂ ಹೌದು. ಇವರಲ್ಲಿ ನೇತೃತ್ವ ವಹಿಸುವ ಕ್ಷಮತೆ ಇರುತ್ತದೆ. ಅಲ್ಲದೆ, ಜೀವನದಲ್ಲಿ ಸಾಧಿಸುವ ಛಲ ಇರುತ್ತೆ. ಆಕರ್ಷಕರಾಗಿ (Attractive), ದಕ್ಷ ಕೆಲಸಗಾರರೂ ಹೌದು. ಸೂಕ್ತ ಸಮಯಕ್ಕೆ ಸರಿಯಾದ ನಿರ್ಧಾರವನ್ನು ತೆಗದೆುಕೊಳ್ಳುವಲ್ಲಿ ಸಮರ್ಥರಾಗಿರುತ್ತಾರೆ. 

ನಿಮಗೆ ಎಷ್ಟು ಮದುವೆಯಾಗೋ ಯೋಗವಿದೆ? ನಿಮ್ಮ ಜಾತಕ ಏನನ್ನುತ್ತೆ?

ಆರ್ಥಿಕ ಏಳ್ಗೆ
ದುಡ್ಡಿನ ವಿಷಯಕ್ಕೆ ಬಂದರೆ ಇವರ ಜೇಬು ಸದಾ ತುಂಬಿ ತುಳುಕುತ್ತಿರುತ್ತದೆ. ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಸಾಗುತ್ತಾರೆ. ಯಶಸ್ಸು , ಲಾಭ (Profit – Success) ಕಟ್ಟಿಟ್ಟ ಬುತ್ತಿ. ಹಣದ ಕೊರತೆಯಾದಾಗ ಇವರಿಗೆ ಸ್ನೇಹಿತರು ಮತ್ತು ಬಂಧುಗಳು ಸಹಾಯ ಮಾಡುತ್ತಾರೆ. ಐಷಾರಾಮಿ ಜೀವನವೆಂದರೆ ಇವರಿಗೆ ಇಷ್ಟ. ಸದಾ ಖುಷಿಯಾಗಿರುತ್ತಾರೆ. ಹಾಗಾಗಿ ಇವರು ತುಂಬಾ ದುಡ್ಡು ಮಾಡುತ್ತಾರಂತೆ..

ಗೌರವಾದರಕ್ಕಾಗಿ ಹಾತೊರೆಯಲ್ಲ
1 ಪಾದಾಂಕದಲ್ಲಿ ಹುಟ್ಟಿದವರು ಸಾಮಾನ್ಯವಾಗಿ ಉನ್ನತ ಶಿಕ್ಷಣ (Higher Education) ಪಡೆಯುತ್ತಾರೆ. ಗೌರವಾದರ ಬೇಕೆಂದು ಬಯಸುವವರಲ್ಲ. ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳೋಲ್ಲ. ಗೌರವ ಬರಬೇಕೆಂದಿದ್ದರೆ ತಾನಾಗಿಯೇ ಬರಲಿದೆ ಎಂದು ನಂಬಿದವರು.

ಈ ತಾರೀಖಿನಲ್ಲಿ ಜನಿಸಿದವರು ಮೃದು ಸ್ವಭಾವಿಗಳು. ಹೃದಯವಂತರು. ಕಠೋರ ಎನಿಸಿದರೂ, ಮೃದು ಹೃದಯಿಗಳು ಇವರು. ಇಂಥವರನ್ನು ವರಿಸುವ ಸಂಗಾತಿ (Life Partner)ಯೂ ಸಹಜವಾಗಿಯೇ ಅದೃಷ್ಟವಂತರಾಗಿರುತ್ತಾರೆ. 

 

people born on these four days of month would be lucky and earn money easily

 

Latest Videos
Follow Us:
Download App:
  • android
  • ios