ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಹಾಸನಾಂಬೆ ದೇವಿ ದರ್ಶನ ಪಡೆದು. ಭವಿಷ್ಯ ನುಡಿದಿದ್ದಾರೆ. ದೇವರ ಸತ್ಯವಾಗಿ 31 ವರ್ಷದೊಳಗೆ  ಕರ್ನಾಟಕ ಮೂರು ಭಾಗ ಆಗುತ್ತೆ. ಮೂರು ಮುಖ್ಯಮಂತ್ರಿ, ಮೂವರು ವಿಶೇಷವಾಗಿ ರಾಜ್ಯಪಾಲರಾಗುತ್ತಾರೆ, ಶಿವನ ಆಣೆ ಮೇಲೆ ಸತ್ಯ ಎಂದಿದ್ದಾರೆ.

ಹಾಸನ (ಅ.14): ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಹಾಸನಾಂಬೆ ದೇವಿ ದರ್ಶನ ಪಡೆದು. ದೇವಿ ದರ್ಶನದ ಬಳಿಕ ಭೀಕರ ಭವಿಷ್ಯ ನುಡಿದಿದ್ದಾರೆ. ದೇಶದ ಬಗ್ಗೆ ಮಾತನಾಡಿದಾಗ ಟ್ರೋಲ್ ಮಾಡ್ತಾರೆ. ಪಾರ್ಲಿಮೆಂಟ್ ಏನ್ ಕಟ್ಟಿದ್ದಾರೆ ಅದರು ಭಾರಿ ಘೋರವಾಗಿರುತ್ತೆ ಸಂಭವ ಅನ್ನೋದು ವೀರ ಬ್ರಹ್ಮ‌ಸ್ವಾಮಿ ಚರಿತ್ರೆಯಲ್ಲಿ ಬರೆದಿದ್ದಾರೆ. ತ್ರೀಕೋನಾತ್ಮಿಕ ದೀಪಿಕ, ಯಾವುದೇ ಪಾರ್ಲಿಮೆಂಟ್ ಗುಂಡಾಗಿರಬೇಕು, ಇಲ್ಲ ಚೌಕವಾಗಿರಬೇಕು. ಚಂದ್ರ ಇಲ್ಲ ಪೂರ್ತಿಯಾಗಿ ಕುಜನಾಂಶವಾಗಿರಬೇಕು. ತ್ರಿಕೋನ ಮಾಡಿದ ದಾಗ ಉಗ್ರವಾಗಿರುತ್ತೆ. ಇನ್ಮೇಲೆ ದೇಶದ ಮೇಲೆ, ಜನಗಳ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತೆ. ಮೊದಲು ಕದ್ದುಮುಚ್ಚಿ ಲಂಚ ತೆಗೆದುಕೊಳ್ಳುತ್ತಿದ್ದರು, ಈಗ ಎಲ್ಲಾ ಓಪನ್. ದಡಂದಶಗುಣಂ ಭಗವಂತ ಆ ಸಮಯಕ್ಕೆ ಬಂದೇ ಬರುತ್ತಾನೆ. ಕಲಿಯುಗ ಅಂತ್ಯ ಕಾಲಕ್ಕೆ ರೋಗ ರುಜಿನಗಳು ಜಾಸ್ತಿ ಆಗುತ್ತೆ. ಡಿಸೆಂಬರ್ ಅಂತ್ಯಕ್ಕೆ ಐದು ಗ್ರಹಗಳು ಒಟ್ಟಿಗೆ ಬರುತ್ತೆ ಒಂಭತ್ತು ತಿಂಗಳು ಕೂರುತ್ತೆ. ಎರಡು ಗ್ರಹಣಗಳ ಹತ್ತಿರ ಬರಬಾರದು. ಜನರಿಗೆ ನೀರಿನ‌ ಅಭಾವ, ಬೆಂಕಿ, ಗಲಾಟೆ, ಘರ್ಷಣೆ, ಸ್ವಂತದವರ ಹತ್ತಿರ ಘರ್ಷಣೆಗಳು ಆಗುತ್ತೆ. ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ದೇವರ ಸತ್ಯವಾಗಿ 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತೆ. ಮೂರು ಮುಖ್ಯಮಂತ್ರಿ, ಮೂವರು ವಿಶೇಷವಾಗಿ ರಾಜ್ಯಪಾಲರಾಗುತ್ತಾರೆ, ಶಿವನ ಆಣೆ ಮೇಲೆ ಸತ್ಯ.

ಹಾಸನಾಂಬೆ ಸನ್ನಿಧಿಯಲ್ಲಿ ಹೇಳುತ್ತೇನೆ. ಭಾರತ ದೇಶ ಎರಡು ಆಗುತ್ತೆ, ಎರಡು, ಎರಡು ರಾಷ್ಟ್ರಪತಿ ಆಗೋದು ಸತ್ಯ. 31 ವರ್ಷದಲ್ಲಿ ಹೀಗೆ ಆಗಬೇಕು ಅಂತ ನಾನು ಹೇಳಿದ್ದಲ್ಲ. ವೀರ ಬ್ರಹ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ಧಾರೆ. ಇದು ನಡೆಯೋದು ನಿಜ, ಸತ್ಯ ಬ್ರಹ್ಮಾಂಡ ಗುರೂಜಿ ಎಂದು ಹೇಳಿದ್ದಾರೆ.

ಮೊದಲ ದಿನ ಹಾಸನಾಂಬೆ ದರ್ಶನ: ಗುರುವಾರ ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆದ ಬಳಿಕ ಇಂದು ಮೊದಲ ದಿನದ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ಭಕ್ತರು ನಿಂತಿದ್ದಾರೆ. ರಾತ್ರಿ ಸುರಿದ ಮಳೆಯಿಂದ ಒಂದು ಗಂಟೆ ತಡವಾಗಿ ದರ್ಶನೋತ್ಸವ ಆರಂಭವಾಗುತ್ತಿದೆ. ಸತತ ಮಳೆಯಿಂದ ಹಾಸನಾಂಬೆ ನೈವೇದ್ಯ ಪೂಜೆ ತಡವಾದ್ದರಿಂದ ಮೊದಲ ದಿನದ ದರ್ಶನಕ್ಕೆ ವಿಳಂಬವಾಯ್ತು. ಇಂದಿನಿಂದ ಅಕ್ಟೋಬರ್ 27 ರವರೆಗೆ ತೆರೆದಿರೊ ಹಾಸನಾಂಬೆ ದೇಗುಲ. ಮುಂಜಾನೆಯೇ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ದೇವಿ ದರ್ಶನ ಪಡೆಯುತ್ತಿರುವ ಭಕ್ತರು.

ಇಂದಿನಿಂದ ಹಾಸನಾಂಬೆ ದರ್ಶನ ಆರಂಭ: ದಸರಾ ಮಾದರಿಯಲ್ಲಿ ಹಾಸನ ನಗರ ಸಿಂಗಾರ

ಹಾಸನಾಂಬೆ ದರ್ಶನ ಪಡೆದ ಹೆಚ್.ಡಿ. ರೇವಣ್ಣ:
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಕುಟುಂಬ ಸಮೇತರಾಗಿ ಬಂದು ಹಾಸನಾಂಬೆಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಹೆಚ್ ಡಿ ದೇವೇಗೌಡರು ಮತ್ತು ಚನ್ನಮ್ಮ ದೇವೇಗೌಡರ ಕುಟುಂಬದ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ಪತ್ನಿ ಭವಾನಿ ಜೊತೆ ಆಗಮಿಸಿದ ಅವರು ಸುಮಾರು ಅರ್ಧಗಂಟೆಗು ಹೆಚ್ಚು ಕಾಲ‌ ಗರ್ಭಗುಡಿಯಲ್ಲಿ ಇದ್ದು ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ರೇವಣ್ಣ ರಾಜ್ಯದ ಜನತೆಗೆ ಒಳ್ಳೆಯದಾಗಬೇಕು. ಒಳ್ಳೆಯ ಮಳೆ, ಬೆಳೆ ಆಗಿ ರೈತರು ಸಮೃದ್ದಿಯಾಗಿರಬೇಕು, ಬಡವರು ಚೆನ್ನಾಗಿ ಇರಬೇಕು, ಆರೋಗ್ಯ ಕೊಡಬೇಕು ಎಂದು ವಿಶೇಷವಾಗಿ ಪ್ರಾರ್ಥಿಸಿದ್ದೇನೆ. ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು, ಈ‌ ಜಿಲ್ಲೆ ಎಸ್‌ಎಸ್‌ಎಲ್‌‌ಸಿ, ಪಿಯುಸಿಯಲ್ಲಿ ಮೊದಲ ಸ್ಥಾನದಲ್ಲಿತ್ತು ಅದೇ ರೀತಿ ಮತ್ತೆ‌ ಮೊದಲ ಸ್ಥಾನಕ್ಕೆ ಬರಲಿ. ಮುಂದಿನ ದಿನಗಳಲ್ಲಿ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಸಿಗಲಿ, ಅದಕ್ಕೆ ಸರ್ಕಾರ ಮೂಲಭೂತ ಸೌಲಭ್ಯ ಒದಗಿಸಲಿ. ದೇವೇಗೌಡರು, ಚೆನ್ನಮ್ಮನವರಿಗೆ ಆರೋಗ್ಯ ಕೊಡಲಿ ಎಂದು ಬೇಡಿದ್ದೇನೆ. 2023 ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಏಳಕ್ಕೆ ಏಳು ಗೆಲ್ಲಲಿ ಅಂತ ಪ್ರಾರ್ಥನೆ ಮಾಡಿದ್ದೀನಿ ಎಂದು ಹೇಳಿದರು.