ಇಂದಿನಿಂದ ಹಾಸನಾಂಬೆ ದರ್ಶನ ಆರಂಭ: ದಸರಾ ಮಾದರಿಯಲ್ಲಿ ಹಾಸನ ನಗರ ಸಿಂಗಾರ

ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇಗುಲ ಗುರುವಾರ ತೆರೆಯಲಿದ್ದು, ಅ.27 ವರೆಗೆ ದರ್ಶನ ಸಿಗಲಿದೆ. ಜಿಲ್ಲಾಡಳಿತವು ದಸರಾವನ್ನು ಮಾದರಿಯಾಗಿಟ್ಟುಕೊಂಡು ನಗರವನ್ನು ಅಲಂಕರಿಸಿದೆ. 

Hasanamba Jathra Mahotsava from October 13th to 27th gvd

ಹಾಸನ (ಅ.13): ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇಗುಲ ಗುರುವಾರ ತೆರೆಯಲಿದ್ದು, ಅ.27 ವರೆಗೆ ದರ್ಶನ ಸಿಗಲಿದೆ. ಜಿಲ್ಲಾಡಳಿತವು ದಸರಾವನ್ನು ಮಾದರಿಯಾಗಿಟ್ಟುಕೊಂಡು ನಗರವನ್ನು ಅಲಂಕರಿಸಿದೆ. ದೇಶದಾದ್ಯಂತ ಕಳೆದ ಎರಡು ವರ್ಷ ಕೊರೋನಾ ಹಿನ್ನಲೆಯಲ್ಲಿ ಹಾಸನ ನಗರ ಜಿಲ್ಲೆಯ ಶಕ್ತಿ ದೇವತೆ ದರ್ಶನ ಮಾಡಲು ಅಡಚಣೆಯಾಗಿತ್ತು. ಆದರೆ ಈಗ ಎಲ್ಲಾ ಸಂಕಷ್ಟಗಳು ಮಾಯವಾಗಿರುವುದರಿಂದ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಮಾಡಲು ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ಹಾಸನಾಂಬೆ ದೇವಾಲಯದ ಬಾಗಿಲು ತೆಗೆದ ಮೇಲೆ ಬರುವ ಲಕ್ಷಾಂತರ ಮಂದಿ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ನೇತೃತ್ವದಲ್ಲಿ ಅನೇಕ ಸಭೆಗಳು ನಡೆದಿವೆ. 

ಈಗಾಗಲೇ ದಸರಾ ಮಹೋತ್ಸವ ಮುಗಿದಿದ್ದು, ಅಲ್ಲಿದ್ದ ಸುಂದರ ಆನೆಗಳ ಕಲಾಕೃತಿಗಳನ್ನು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ತರಲಾಗಿದೆ. ನಗರದ ಮುಖ್ಯ ವೃತ್ತಗಳ ಮಧ್ಯೆ ಮಂಟಪ, ಆಚ್‌ರ್‍ಗಳು ಹಾಗೂ ದಸರಾ ಮಾದರಿಯಲ್ಲಿಯೇ ರಸ್ತೆಗಳಲ್ಲಿ ವಿದ್ಯುತ್‌ ದೀಪಗಳು ಭಕ್ತರ ಸೆಳೆಯುತ್ತಿವೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಮಾಡಲಾಗಿದೆ. ವರ್ಷಕ್ಕೊಮ್ಮೆ ಹಾಸನಾಂಬೆ ತಾಯಿ ತನ್ನ ದರ್ಶನ ಭಾಗ್ಯ ಕರುಣಿಸಲಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗದ ಲಕ್ಷಾಂತರ ಭಕ್ತರ ದಂಡೆ ಬರುತ್ತದೆ. ಅ.13ರ ರಂದು ದರ್ಶನ ಭಾಗ್ಯ ನೀಡಲಿದ್ದು, ಈ ಬಾರಿ ಹಿಂದೆಂದಿಗಿಂತ ಸಡಗರ ಸಂಭ್ರಮದಿಂದ ಕೂಡಿರುವುದಲ್ಲದೆ, 15 ದಿನಗಳ ಕಾಲ ಬಾಗಿಲು ತೆರೆದಿರುತ್ತದೆ. 

ಗ್ರಹಣದ ಸಮಯದಲ್ಲಿ ದೇವಾಲಯಗಳ ಬಾಗಿಲು ಮುಚ್ಚುವುದೇಕೆ?

ಇದರಲ್ಲಿ ಮೊದಲ ದಿನ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಉಳಿದ 13 ದಿನ ಮಾತ್ರ ಸಾರ್ವಜನಿಕ ದರ್ಶನಕ್ಕೆ ಲಭ್ಯವಿರುತ್ತದೆ. ಅ. 13ರ ಮಧ್ಯಾಹ್ನ 12.30ಕ್ಕೆ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದೆ. ಅಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ನಂತರದ ದಿನಗಳಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅಕ್ಟೋಬರ್‌ 25ರ ಮಂಗಳವಾರದಂದು ಅಮವಾಸೆ ಇರುವುದರಿಂದ ಸಾರ್ವಜನಿಕರಿಗೆ ದೇವಿಯ ದರ್ಶನ ಅವಕಾಶ ಇರುವುದಿಲ್ಲ. 

ಆದರೇ ಪೂಜೆಗಳು ಎಂದಿನಂತೆ ನಡೆಯುತ್ತದೆ. ಅ.27 ರಂದು ಮಧ್ಯಾಹ್ನ ಸುಮಾರು 130 ರಿಂದ 2 ಗಂಟೆ ಒಳಗೆ ಶಾಸ್ತೊ್ರೕಕ್ತವಾಗಿ ಧಾರ್ಮಿಕ ಪೂಜಾ ಕೈಂಕರ್ಯ ಮುಗಿಸಿ ಎಂದಿನಂತೆ ಬಾಗಿಲನ್ನು ಮುಚ್ಚಲಾಗುವುದು. ಮೂಲಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೌಲಭ್ಯ ಮತ್ತು ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಸರತಿ ಸಾಲುಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಲಾಗಿದೆ. ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಲಭಿಸುವ ಹಾಸನಾಂಬೆ ತಾಯಿಯ ದರ್ಶನಕ್ಕಾಗಿ ರಾಜ್ಯ ಮತ್ತು ದೇಶದ ಹಲವೆಡೆಯಿಂದಲೂ ಕೂಡ ಭಕ್ತರ ದಂಡೆ ಹರಿದುಬರಲಿದೆ.

ಇನ್ನೇನು ದೀಪಾವಳಿ ಬಂತು, ಲಡ್ಡು ಗೋಪಾಲನ ಪೂಜೆ ಮಾಡೋದು ಹೇಗೆ?

ಬೆಳಗ್ಗೆಯಿಂದ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಬಸವಳಿದಿರುತ್ತಾರೆ. ಆದರೆ ವಿಐಪಿಗಳು ಮತ್ತು ಅವರ ಹೆಸರಿನಲ್ಲಿ ಬರುವಂತಹ ಜನರಿಂದ ಸಾಮಾನ್ಯ ಭಕ್ತರಿಗೆ ಸಾಕಷ್ಟು ತೊಂದರೆಗಳಾಗುತ್ತವೆ. ಓರ್ವ ವಿಐಪಿ ಆಗಮಿಸಿದರೆ ಅವರ ಹಿಂದೆ ಹಿಂಬಾಲಕರ ಸಂಖ್ಯೆ ಹನುಮಂತನ ಬಾಲದಂತೆ ದೇವಾಲಯವನ್ನು ಪ್ರವೇಶಿಸುತ್ತಾರೆ. ಇದರಿಂದ ಗಂಟೆಗಟ್ಟಲೆ ತಾಯಿಯ ದರ್ಶನವಾಗದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆಲ್ಲಾ ಆದಷ್ಟು ಪರಿಹಾರ ನೀಡಲು ಈ ಬಾರಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

Latest Videos
Follow Us:
Download App:
  • android
  • ios