Asianet Suvarna News Asianet Suvarna News

ಈ ತಾರೀಖಿನಲ್ಲಿ ಜನಿಸಿದವರಿಗೆ ಶುಕ್ರ ದೆಸೆ, ಐಷಾರಾಮಿ ಜೀವನ ನಡೆಸ್ತಾರೆ!

ಸಂಖ್ಯಾಶಾಸ್ತ್ರ ಹೇಳುತ್ತೆ ನಿಮ್ಮ ಅದೃಷ್ಟ. 6, 15, 24ನೇ ದಿನಾಂಕದಲ್ಲಿ ಜನಿಸಿದವರು ಹೇಗೆ? ಇವರ ಜಾತಕ ಏನು..? ಸ್ವಭಾವತಃ ಹೇಗೆ? ಯಾರ ವಿಷಯದಲ್ಲಿ ಹೇಗಿರುತ್ತಾರೆ? ಅವರಿಗೆ ಸಂಬಂಧ ಮುಖ್ಯವಾ, ದುಡ್ಡಾ..? ಹೀಗೆ ಹತ್ತು ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ, ಇವರ ಗುಣ, ಸ್ವಭಾವ, ಆರ್ಥಿಕ ಸ್ಥಿತಿ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ…

Born on these dates people will get Venus planet good effects
Author
Bangalore, First Published Jun 7, 2021, 1:36 PM IST

ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿರುವ ಸಂಖ್ಯಾ ಶಾಸ್ತ್ರದ ಮೂಲಕ ವ್ಯಕ್ತಿತ್ವ, ಅದೃಷ್ಟ, ಏಳಿಗೆಯನ್ನು ಕಂಡುಕೊಳ್ಳಬಹುದಾಗಿದೆ. ಇಂಥ ದಿನಾಂಕದಲ್ಲಿ ಜನಿಸಿದರೆ ಯಾವ ತರಹದ ಅದೃಷ್ಟ, ದುರಾದೃಷ್ಟ, ಶೈಕ್ಷಣಿಕ ಪ್ರಗತಿ, ಉದ್ಯೋಗ, ಪ್ರೀತಿ, ಮದುವೆ, ಜೀವನದಲ್ಲಿ ಏನಾಗಬಹುದು ಎಂಬಿತ್ಯಾದಿ ಅಂಶಗಳನ್ನು ಅರಿತುಕೊಳ್ಳಬಹುದಾಗಿದೆ. 

ಹೀಗಾಗಿ 6, 15, 24ನೇ ದಿನಾಂಕದಲ್ಲಿ ಜನಿಸಿದವರು ಒಟ್ಟಾರೆಯಾಗಿ ಏನು? ಅವರಿಗೆ ಯಾವ ಫಲವಿದೆ ಎಂಬುದನ್ನು ಸಂಖ್ಯಾಶಾಸ್ತ್ರ ಹೇಳುತ್ತದೆ. ಈ ಫಲದ ಲಾಭವೇನು? ನಷ್ಟವೇನು..? ಎಂಬುದನ್ನು ತಿಳಿದುಕೊಳ್ಳಲು ಪಾದಾಂಕವು ಮುಖ್ಯವಾಗುತ್ತದೆ. 

ಇದನ್ನು ಓದಿ: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಗೆ ಉದ್ಯೋಗ ಬಡ್ತಿ ಗ್ಯಾರಂಟಿ! 

ತಿಂಗಳ 6, 15, 24 ದಿನಾಂಕದಂದು ಜನಿಸಿದವರ ಪಾದಾಂಕವು 6 ಆಗಿರುತ್ತದೆ. ಇದು ಶುಕ್ರ ಗ್ರಹಕ್ಕೆ ಸಂಬಂಧಿಸಿದ ಸಂಖ್ಯೆಯಾಗಿದೆ. ಶುಕ್ರ ಗ್ರಹವು ಶಾಂತಿ, ಭೌತಿಕ ಸುಖ, ವಿಲಾಸಿ ಜೀವನ, ಸೌಂದರ್ಯ, ಸಮೃದ್ಧಿ, ಕಲೆ, ಕಾರ್ಯ ಮತ್ತು ಐಶ್ವರ್ಯ ಕಾರಕ ಗ್ರಹವಾಗಿದೆ,

ಪಾದಾಂಕ 6 ರಲ್ಲಿ ಜನಿಸಿದ ವ್ಯಕ್ತಿಗಳು ನೋಡಲು ಬಹಳ ಸುಂದರವಾಗಿರುತ್ತಾರೆ. ಇವರಿಗೆ ವಯಸ್ಸು ಆಗಿದ್ದೇ ತಿಳಿಯುವುದಿಲ್ಲ, ಇವರ ವಯಸ್ಸನ್ನು ತಕ್ಷಣ ಕಂಡುಹಿಡಿಯುವುದು ಸಹ ಕಷ್ಟ. ಇವರ ಕಲಾ ಪ್ರೇಮಿಯಾಗಿರುತ್ತಾರೆ. ಸೌಂದರ್ಯಕ್ಕೆ ಬಹಳ ಆಕರ್ಷಿತರಾಗುವ ಸ್ವಭಾವ ಇವರದ್ದಾಗಿರುತ್ತದೆ. 

Born on these dates people will get Venus planet good effects


ದೀರ್ಘಾಯುಷ್ಯ
ಪಾದಾಂಕ 6ರಲ್ಲಿ ಜನಿಸಿದವರು ಉತ್ತಮ ಉಡುಪುಗಳನ್ನು ಧರಿಸಲು ಇಷ್ಟಪಡುವುದಲ್ಲದೆ, ಹೊರಗೆ ಹೊರಡಲು ಸದಾ ಸಿದ್ಧವಿರುವಂತೆ ಮೇಕಪ್ ಮಾಡಿಕೊಂಡಿರುತ್ತಾರೆ. ಇವರಿಗೆ ಭೌತಿಕ ಸುಖವನ್ನು ಅನುಭವಿಸುವ ಯೋಗ ಬಹಳವೇ ಇದೆ. ಈ ವ್ಯಕ್ತಿಗಳು ವಿಶ್ವಾಸಕ್ಕೆ ಅರ್ಹರು, ಶಾಂತಿ ಪ್ರಿಯರು, ದೀರ್ಘಾಯುಷ್ಯವುಳ್ಳವರು, ಆರೋಗ್ಯವಂತರು, ಬಲವುಳ್ಳವರೂ ಆಗಿರುತ್ತಾರೆ. ಇದಲ್ಲದೆ, ಬೇರೆಯವರನ್ನು ಸೆಳೆಯುವ ಗುಣ ಇವರಲ್ಲಿರುತ್ತದೆ. ಇತರರಿಗೆ ಸಹಾಯ ಮಾಡುವ ಗುಣವೂ ಇವರಲ್ಲಿದೆ. 

ಇದನ್ನು ಓದಿ:  ಈ ನಕ್ಷತ್ರದವರು ಆಗುತ್ತಾರೆ ಸಂಪತ್ತಿಗೆ ಒಡೆಯರು, ನಿಮ್ಮ ನಕ್ಷತ್ರ ಯಾವುದು..? 

ವಿದ್ಯಾಭ್ಯಾಸಕ್ಕೆ ಅಡೆತಡೆ
ವಿದ್ಯಾಭ್ಯಾಸದಲ್ಲಿ ಸದಾ ಮುಂದಿರುವ ಇವರು, ಓದಿನಲ್ಲಿ ಎತ್ತರಕ್ಕೆ ಬೆಳೆಯುತ್ತಾರೆ. ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಪೂರೈಸುವ ಮೂಲಕ ಹೆಸರು ಗಳಿಸುತ್ತಾರೆ. ಅಲ್ಲದೆ, ಸಂಗೀತ ಮತ್ತು ಚಿತ್ರಕಲೆಯ ಅಭಿರುಚಿಯನ್ನು ಹೆಚ್ಚಾಗಿ ಬೆಳೆಸಿಕೊಂಡಿರುತ್ತಾರೆ. ಆದರೆ, ಇವರ ವಿದ್ಯಾಭ್ಯಾಸಕ್ಕೆ ಅಡೆತಡೆಗಳು ಬಹಳವೇ ಬರಲಿದ್ದು, ಅವುಗಳನ್ನು ಎದುರಿಸಲು ಸಿದ್ಧರಾಗಬೇಕಷ್ಟೇ. 

ಆರ್ಥಿಕ ಸ್ಥಿತಿ ಒಂದೇ ತರ ಇರಲ್ಲ
ಇವರ ಆರ್ಥಿಕ ಸ್ಥಿತಿ ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಸದಾ ಏರಿಳಿತಗಳನ್ನು ಕಾಣಬಹುದಾಗಿದ್ದು, ಖರ್ಚು – ವೆಚ್ಚದಲ್ಲಿಯೂ ಹಿಡಿತ ಇರುವುದಿಲ್ಲ. ಅಗತ್ಯಕ್ಕಿಂತ ತುಸು ಹೆಚ್ಚೇ ಇವರು ಖರ್ಚು ಮಾಡುತ್ತಾರೆ. ಇಷ್ಟಾದರೂ ನಿರಂತರ ಪರಿಶ್ರಮ ಇವರನ್ನು ಕಾಪಾಡಲಿದ್ದು, ಹಣವಂತರಾಗಿರುತ್ತಾರೆ. 

ಕೌಟುಂಬಿಕ ಸಂಬಂಧ ಉತ್ತಮವಾಗಿರಲ್ಲ
ಪಾದಾಂಕ 6ರಲ್ಲಿ ಹುಟ್ಟಿದವರ ಕೌಟುಂಬಿಕ ಸಂಬಂಧ ಅಷ್ಟಾಗಿ ಉತ್ತಮವಾಗಿರುವುದಿಲ್ಲ. ಯಾವುದಾದರೂ ವಿಷಯಕ್ಕೆ ಕುಟುಂಬ ಸದಸ್ಯರ ಯಾವುದಾದರೊಬ್ಬರ ಜೊತೆ ವಿವಾದಗಳು ಆಗುತ್ತಲೇ ಇರುತ್ತವೆ. ಆದರೆ, ಸ್ನೇಹಿತರ ಜೊತೆ ಮಾತ್ರ ಬಹಳ ಉತ್ತಮವಾದ ಸ್ನೇಹವನ್ನು ಹೊಂದಿರುತ್ತಾರೆ. ಸ್ನೇಹಕ್ಕಾಗಿ ಯಾವುದೇ ಸಹಾಯವನ್ನು ಮಾಡಲೂ ಇವರು ಹಿಂದೆ ಮುಂದೆ ನೋಡುವವರಲ್ಲ. 

ಗಟ್ಟಿ ಪ್ರೇಮ ಇವರದ್ದಲ್ಲ
ಪ್ರೀತಿ-ಪ್ರೇಮ ವಿಷಯದಲ್ಲಿ ಇವರದ್ದು ಚಂಚಲ ಸ್ವಭಾವವಾಗಿರುತ್ತದೆ. ಪ್ರೀತಿಯಲ್ಲಿ ಎಷ್ಟು ಬೇಗ ಬೀಳುತ್ತಾರೋ ಅಷ್ಟೇ ವೇಗವಾಗಿ ಕೈಕೊಡುವ ಪ್ರವೃತ್ತಿ ಹಲವರದ್ದಾಗಿರುತ್ತದೆ. ಇವರು ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುವವರಾಗಿರುವುದರಿಂದ ಸೌಂದರ್ಯವುಳ್ಳವರ ಮೇಲೆ ಆಕರ್ಷಿತಗೊಂಡು ಪ್ರೀತಿಯಲ್ಲಿ ಬಹುಬೇಗ ಬೀಳುತ್ತಾರೆ. ಆದರೆ, ದಿನ ಕಳೆಯುತ್ತಾ ಆಕರ್ಷಣೆ ಜೊತೆಗೆ ಪ್ರೀತಿ ಕಡಿಮೆಯಾಗುತ್ತದೆ. ಆದರೆ, ಇವರ ಗೃಹಸ್ಥ ಜೀವನ ಸುಖಮಯವಾಗಿರುತ್ತದೆ. 

ಇದನ್ನು ಓದಿ: ನಿಮ್ಮ ದೇವರ ಕೋಣೆಯ ದಿಕ್ಕು ಬದಲಾಯಿಸಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ...! 

ಶುಕ್ರ ಗ್ರಹಕ್ಕೆ ಸಂಬಂಧಿಸಿದ ಉದ್ಯೋಗವನ್ನು ಮಾಡಿದರೆ ಪಾದಾಂಕ 6ರಲ್ಲಿ ಜನಿಸಿದವರು ಸಫಲತೆಯನ್ನು ಕಾಣಬಹುದಾಗಿದೆ. ಆ ಕ್ಷೇತ್ರಗಳು ಯಾವುವು ಎಂಬುದನ್ನು ನೋಡುವುದಾದರೆ, ಕಲೆ, ಆಭರಣ, ವಸ್ತ್ರಗಳ ವ್ಯಾಪಾರ ಮಾಡಿದರೆ ಯಶಸ್ಸು ಲಭಿಸಲಿದೆ. ಇವುಗಳನ್ನು ಹೊರತುಪಡಿಸಿ, ಬಂಗಾರ, ಬೆಳ್ಳಿ, ವಜ್ರ, ಸಿನಿಮಾ, ನಾಟಕಗಳಿಗೆ ಸಂಬಂಧಪಟ್ಟ ಕೆಲಸವನ್ನು ಮಾಡಿದರೂ ಸಹ ಶುಭ ಫಲ ದೊರಕಿ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ. 

Follow Us:
Download App:
  • android
  • ios