ಹಿಂದೂ ಮಾಸದ ಪ್ರಕಾರ ಜ್ಯೇಷ್ಠ ಮಾಸವನ್ನು ಅತ್ಯಂತ ಶ್ರೇಷ್ಠವಾದ ಮಾಸವೆಂದು ಹೇಳಲಾಗುತ್ತದೆ. ಇದೇ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಸೂರ್ಯ ಗ್ರಹವು ಮಿಥುನ ರಾಶಿಗೆ ಪ್ರವೇಶಿಸುತ್ತದೆ. ಸೂರ್ಯನು ಮಿಥುನ ರಾಶಿ ಪ್ರವೇಶಿಸುವ ದಿನವನ್ನು ಮಿಥುನ ಸಂಕ್ರಾಂತಿ ಎಂದು ಸಹ ಕರೆಯುತ್ತಾರೆ.

ಇದೇ ಜೂನ್‌ 15ರ ಬೆಳಗ್ಗೆ 6ಗಂಟೆ 17ನಿಮಿಷಕ್ಕೆ ಸೂರ್ಯ ಗ್ರಹವು ಮಿಥುನ ರಾಶಿಗೆ ಪ್ರವೇಶಿಸಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಗ್ರಹವನ್ನು ಪ್ರತಿಷ್ಠೆ ಮತ್ತು ಗೌರವಕಾರಕ ಗ್ರಹವೆಂದು ಹೇಳಲಾಗುತ್ತದೆ. ವಾಯುತತ್ತ್ವ ರಾಶಿಯಾಗಿರುವ ಮಿಥುನ ರಾಶಿಗೆ ಸೂರ್ಯ ಗ್ರಹವು ಪ್ರವೇಶಿಸುವುದರಿಂದ ಹನ್ನೆರಡು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಗೋಚಾರದಿಂದ ಕೆಲವು ರಾಶಿಯವರಿಗೆ ಉತ್ತಮ ಫಲಗಳಿವೆ. ಸೂರ್ಯ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುವುದರಿಂದ ಶುಭಫಲವನ್ನು ಪಡೆಯುವ ಪಟ್ಟಿಯಲ್ಲಿ ಯಾವ್ಯಾವ ರಾಶಿಗಳಿಗೆ ಯಾವ ರೀತಿಯ ಲಾಭ ಉಂಟಾಗಲಿದೆ? ಎಂಬುದನ್ನು ತಿಳಿಯೋಣ ....

ಇದನ್ನು ಓದಿ: ಈ ನಕ್ಷತ್ರದವರು ಆಗುತ್ತಾರೆ ಸಂಪತ್ತಿಗೆ ಒಡೆಯರು, ನಿಮ್ಮ ನಕ್ಷತ್ರ ಯಾವುದು..? 

ವೃಷಭ ರಾಶಿ 
ಸೂರ್ಯಗ್ರಹದ ಈ ರಾಶಿ ಪರಿವರ್ತನೆಯಿಂದ ವೃಷಭ ರಾಶಿಯವರಿಗೆ ಉತ್ತಮ ಲಾಭವಾಗಲಿದೆ. ಈ ಗೋಚಾರದ ಅವಧಿಯಲ್ಲಿ ಈ ರಾಶಿಯವರು ಸ್ಥಿರ ಆಸ್ತಿಗೆ ಅಥವಾ ಸಂಪತ್ತಿಗೆ ಒಡೆಯರಾಗುತ್ತಾರೆ. ಹಾಗಾಗಿ ಈ ರಾಶಿಯವರಿಗೆ ಆರ್ಥಿಕ ಲಾಭವಾಗುವ ಸಾಧ್ಯತೆ ಸಹ ಇದೆ. ಅಷ್ಟೇ ಅಲ್ಲದೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವ ಹೆಚ್ಚಿದೆ. ಕಟುವಾಗಿ ಮಾತನಾಡುವುದರಿಂದ ಹತ್ತಿರದವರೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವ ಈ ರಾಶಿಯವರಿಗೆ ಉನ್ನತ ಅಧಿಕಾರಿಗಳಿಂದ ಗೌರವಾದರಗಳು ಲಭಿಸಲಿವೆ. ಈ ರಾಶಿಯ ವ್ಯಾಪಾರಸ್ಥರಿಗೆ ಸಂಧಾನಗಳಿಂದ ಉತ್ತಮ ಲಾಭ ಉಂಟಾಗುತ್ತದೆ.‍ಮಿಥುನ ರಾಶಿ 
ಸೂರ್ಯ ಗ್ರಹವು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ಈ ರಾಶಿಯವರಿಗೆ ಲಾಭ ಉಂಟಾಗಲಿದೆ. ಈ ಅವಧಿಯಲ್ಲಿ ಜವಾಬ್ದಾರಿಯಿಂದ ಕೆಲಸಗಳನ್ನು ನಿಭಾಯಿಸುವಲ್ಲಿ ಸಫಲರಾಗುವಿರಿ. ಕೆಲಸ ತುಸು ಹೆಚ್ಚಿದ್ದರೂ,  ಉದ್ಯೋಗದ ದೃಷ್ಟಿಯಿಂದ ಉತ್ತಮ ಪರಿಣಾಮಗಳು ಆಗಲಿವೆ. ಕಾರ್ಯಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚಿನ ಜವಾಬ್ದಾರಿಗಳನ್ನು ವಹಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಈ ರಾಶಿಯ ವ್ಯಾಪಾರಸ್ಥರಿಗೂ ಈ ಅವಧಿಯು ಅನುಕೂಲವಾಗಿರಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

ಇದನ್ನು ಓದಿ: ನಿಮ್ಮ ದೇವರ ಕೋಣೆಯ ದಿಕ್ಕು ಬದಲಾಯಿಸಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ...! 

ಸಿಂಹ ರಾಶಿ 
ಈ ರಾಶಿಯ ವ್ಯಕ್ತಿಗಳು ಮಾರ್ಕೆಟಿಂಗ್ ಸೇಲ್ಸ್ ಮತ್ತು ಬರವಣಿಗೆಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಲ್ಲಿ, ಅಂಥವರಿಗೆ ಈ ಗೋಚಾರವು ಉತ್ತಮ ಲಾಭವನ್ನುಂಟು ಮಾಡಲಿದೆ. ಪ್ರೊಮೋಷನ್ ಸಿಗುವ ನಿರೀಕ್ಷೆಯಲ್ಲಿ ಹಲವು ಸಮಯದಿಂದ ಕಾಯುತ್ತಿದ್ದ ಈ ರಾಶಿಯವರಿಗೆ ಈ ಅವಧಿಯಲ್ಲಿ ಬಡ್ತಿ ಸಿಗುವುದು ಖಚಿತ. ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕ್ಷಮತೆ ಹೆಚ್ಚಲಿದೆ. ಸರ್ಕಾರಿ ಕ್ಷೇತ್ರದಲ್ಲೂ ಲಾಭವಾಗುವ ಸಾಧ್ಯತೆ ಇದೆ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ.

ಕನ್ಯಾ ರಾಶಿ 
ಸೂರ್ಯಗ್ರಹವು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ಕನ್ಯಾ ರಾಶಿಯವರು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಹಣ ಗಳಿಸುವ ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿದ್ದು, ಅಂತಹ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಅಭಿವೃದ್ಧಿ ಖಚಿತ. ಈ ರಾಶಿಯ ವ್ಯಾಪಾರಸ್ಥರು ಈ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ಗಳಿಸಲಿದ್ದಾರೆ. ಅಷ್ಟೇ ಅಲ್ಲದೆ ಸಮಾಜದಲ್ಲಿ ಈ ರಾಶಿಯವರ ಗೌರವ ಪ್ರತಿಷ್ಠೆಗಳು ಹೆಚ್ಚಲಿವೆ. 

ಇದನ್ನು ಓದಿ: ಕೆಲಸ – ಕಾರ್ಯಗಳು ಅಡೆತಡೆಯಿಲ್ಲದೆ ಆಗಬೇಕಿದ್ದರೆ ಈ ವಾಸ್ತು ಉಪಾಯ ಪಾಲಿಸಿ... 

ಕುಂಭ ರಾಶಿ 
ಸೂರ್ಯ ಗ್ರಹವು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ಕುಂಭ ರಾಶಿಯವರು ಶುಭ ಫಲವನ್ನು ಪಡೆಯಲಿದ್ದಾರೆ. ಈ ರಾಶಿಯ ವ್ಯಾಪಾರಸ್ಥ ವ್ಯಕ್ತಿಗಳು ಉತ್ತಮ ಪ್ರಗತಿಯನ್ನು ಕಾಣಲಿದ್ದಾರೆ. ಹಲವು ಸಮಯಗಳಿಂದ ಬರಬೇಕಿದ್ದ ಲಾಭವು ಈ ಅವಧಿಯಲ್ಲಿ ಬರುವ ಸಾಧ್ಯತೆ ಇದೆ. ಈ ರಾಶಿಯವರ ಪ್ರೇಮ ಜೀವನ ಉತ್ತಮವಾಗಿರಲಿದೆ.