ಮಹಿಳೆಯ ರಹಸ್ಯ ತಿಳ್ಕೊಬೇಕಾ? ಅಂದುಕೊಂಡಷ್ಟು ಕಷ್ಟವಲ್ಲ ಬಿಡಿ!
ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಎಂದು ಹೇಳಿಕೊಂಡೇ ಓಡಾಡುತ್ತೇವೆ. ಯಾಕಂದರೆ ಯಾರಿಗೂ ಹೆಣ್ಣನ್ನು ಹೀಗೇ ಎಂದು ಸರಿಯಾಗಿ ಅರ್ಥ ಮಾಡಿಕೊಂಡವರಿಲ್ಲ. ಆದರೆ, ಹೆಣ್ಣಿನ ಗುಣ – ಸ್ವಭಾವವನ್ನು ಆಕೆಯ ಮೂರು ಅಂಗಗಳ ಮೂಲಕ ತಿಳಿಯಬಹುದಾಗಿದ್ದು, ಅವುಗಳು ಯಾವುವು..? ಯಾವ ಸ್ವಭಾವ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂಬುದರ ಬಗ್ಗೆ ನೋಡೋಣ...
ಹೆಣ್ಣು (Women) ತರ್ಕಕ್ಕೆ ಸಿಗಳು ಎಂಬ ಮಾತಿದೆ. ಅಲ್ಲದೆ, ಮೀನಿನ ಹೆಜ್ಜೆಯ ರೀತಿ ಅವಳ ನಡೆ ಇರುತ್ತದೆ ಎಂದು ಹೇಳುತ್ತಾರೆ. ಒಂದು ಹೆಣ್ಣನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ದೇವರಿಗೇ (God) ಇದನ್ನು ಅರ್ಥ ಮಾಡಿಕೊಳ್ಳಲು ಆಗದು ಎಂಬ ಮಾತುಗಳು ಸಹ ಪ್ರಚಲಿತದಲ್ಲಿವೆ. ಹೆಣ್ಣಿನ ಸ್ವಭಾವಗಳು (Characteristics) ಸಹ ನಿಗೂಢವಾಗಿದ್ದು, ಆಕೆಯ ಆಲೋಚನೆಗಳು ಹೀಗೇ ಸಾಗುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ.
ಆಕೆಯ ಹಾವಭಾವಗಳಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟರೂ ಸಹ ಕೆಲವರು ಇದರಲ್ಲಿ ವಿಫಲವಾಗುತ್ತಾರೆ. ಕಾರಣ, ಏನೇ ಮಾಡಿದರೂ ಕೆಲವು ವಿಷಯಗಳಲ್ಲಿ ತಾವು ತಿಳಿದುಕೊಂಡಿದ್ದು ತಪ್ಪು ಎಂಬ ಸತ್ಯದ ಅರಿವು ಅವರಿಗೆ ಆಗುತ್ತದೆ. ಇನ್ನು ಅವರ ಜಾತಕಗಳಿಂದ (Horoscope) ಅರಿಯಬಹುದಾದರೂ ಎಲ್ಲರಿಗೂ ಎಲ್ಲರ ಜಾತಕ ಎಲ್ಲಿ ಸಿಗುತ್ತದೆ..? ಹಾಗಾಗಿ ಯಾವುದಾದರೂ ಹೆಣ್ಣನ್ನು, ಅವಳ ಸ್ವಭಾವವನ್ನು ಅರಿಯಬೇಕೆಂದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಅದಕ್ಕೊಂದು ಪರಿಹಾರ ಇದೆ.
ಹೀಗಾಗಿ ಮಹಿಳೆಯರನ್ನು ಅರ್ಥಮಾಡಿಕೊಳ್ಳಲು ಹೆಚ್ಚೇನು ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಸ್ವಭಾವ, ಗುಣಗಳ ಬಗ್ಗೆ ಆಕೆಯನ್ನು ನೋಡಿಯೇ ತಿಳಿದುಕೊಳ್ಳಬಹುದು. ಇನ್ನೂ ಸಿಂಪಲ್ಲಾಗಿ ಹೇಳಬೇಕೆಂದರೆ ಅವರ ಎಲ್ಲ ರಹಸ್ಯಗಳು ಸ್ವತಃ ಅವರ ದೇಹದ (Body) ಈ ಮೂರು ಭಾಗಗಳಿಂದ (Parts) ತಿಳಿಯುತ್ತದೆ. ನೀವು ಸಹ ಮಹಿಳೆಯರನ್ನು ನೋಡಿದಾಗ ಅವರ ಸ್ವಭಾವದ ಬಗ್ಗೆ ಈ ಮೂಲಕ ತಿಳಿಯಬಹುದಾಗಿದೆ. ಹಾಗಾದರೆ ಮಹಿಳೆಯ ಯಾವ ಅಂಗಗಳಿಂದ ಯಾವ ಯಾವ ವಿಷಯಗಳು ತಿಳಿಯುತ್ತದೆ ಎಂಬುದರ ಬಗ್ಗೆ ನೋಡೋಣ ಬನ್ನಿ...
ಇದನ್ನು ಓದಿ: ನಿಕಟ ಸಂಬಂಧದಲ್ಲಿ ಜಗಳಗಳಾಗ್ತಿದ್ರೆ ಈ ಗ್ರಹಗಳೇ ಕಾರಣ.. ನೀವೇನು ಮಾಡಬೇಕು?
ತುಟಿ (Lip)
ಮಹಿಳೆಯ ಮೊಗದಲ್ಲಿ ಅತ್ಯಂತ ಆಕರ್ಷಕ ಭಾಗವೆಂದರೆ ಅವಳ ತುಟಿಗಳು. ಹೀಗಾಗಿ ಯಾವುದೇ ಮಹಿಳೆಯ ತುಟಿಗಳನ್ನು ನೀವು ಗಮನಿಸಿದರೆ ಅವಳ ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು. ಕೆಂಪು (Red), ತೆಳುವಾದ, ನಯವಾದ ಮತ್ತು ಉತ್ತಮ ಆಕಾರದ ತುಟಿಗಳನ್ನು ಹೊಂದಿರುವ ಮಹಿಳೆಯರು ತಮ್ಮ ಸ್ವಭಾವದಿಂದ ಅತ್ಯಂತ ಮಾದಕವಾಗಿ (Sexy) ಇರುತ್ತಾರೆ. ಅಲ್ಲದೆ, ಪತಿಯ (Husband) ಪ್ರೀತಿಯನ್ನು (Love) ಸಹ ಇವರು ಪಡೆಯಲಿದ್ದಾರೆ. ಅಂತಹ ಮಹಿಳೆಯರ ವೈವಾಹಿಕ ಜೀವನವು (Marriage Life) ತುಂಬಾ ಸಂತೋಷಕರವಾಗಿರುತ್ತದೆ. ಲೈಂಗಿಕ ಜೀವನವು (Sex Life) ಸಹ ಅಷ್ಟೇ ಉತ್ತಮವಾಗಿರುತ್ತದೆ. ಆದರೆ, ಮಹಿಳೆಯರ ಕೆಳಗಿನ ತುಟಿಗಳು ದಪ್ಪ ಮತ್ತು ಕಪ್ಪಗಿದ್ದರೆ ಗಂಡನಿಗೆ ಕೆಡುಕಾಗುವ ಸಾಧ್ಯತೆಗಳು ಹೆಚ್ಚಿದ್ದು, ಅದರ ಬಗ್ಗೆ ಪರಿಹಾರೋಪಾಯಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.
ಗಲ್ಲದ ಮೇಲೆ ಡಿಂಪಲ್ (Dimple on the chin)
ಗಲ್ಲದ ಮೇಲೆ ಡಿಂಪಲ್‌ಗಳನ್ನು ಹೊಂದಿರುವ ಮಹಿಳೆಯರು ಇದ್ದರೆ ಅವರು ತುಂಬಾ ಸುಖಿಗಳು. ಅಲ್ಲದೆ, ಇವರು ಬಹಳ ಸಂತೋಷವಾಗಿರಲು ಇಷ್ಟಪಡುವುದಲ್ಲದೆ, ಸ್ವಭಾವದಲ್ಲಿ ನಿಷ್ಠಾವಂತರಾಗಿರುತ್ತಾರೆ. ಹೀಗಾಗಿ ಇವರನ್ನು ಯಾರೇ ಸಹ ನಂಬಬಹುದಾಗಿದೆ. ಇವರು ಒಮ್ಮೆ ನಿಷ್ಠೆ (Loyal) ತೋರಿದರೆಂದರೆ ಅದರ ಬಗ್ಗೆ ಅನುಮಾನ ಪಡುವ ಪ್ರಶ್ನೆಯೇ ಉದ್ಭವಿಸದು. ಮಹಿಳೆಯರು ಸ್ವಭಾವತಃ ಸಾಕಷ್ಟು ದಯಾಳುಗಳಾಗಿದ್ದರೂ ದುಂಡಗಿನ ಗಲ್ಲವನ್ನು ಹೊಂದಿರುವ ಮಹಿಳೆಯರನ್ನು ಸಾಕಷ್ಟು ಅದೃಷ್ಟಶಾಲಿ (Lucky) ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಉದ್ದನೆಯ ಗಲ್ಲಗಳನ್ನು ಹೊಂದಿರುವ ಮಹಿಳೆಯರು ಬೇಗನೆ ಲೌಕಿಕ ಸುಖಭೋಗಗಳಿಗೆ ಆಕರ್ಷಿತರಾಗುತ್ತಾರೆ. ಕೆಲವೊಮ್ಮೆ ಇವರನ್ನು ಚಾರಿತ್ರ್ಯಹೀನ ಮಹಿಳೆಯರ ಸಾಲಿನಲ್ಲಿ ಸಹ ಪರಿಗಣಿಸಲಾಗುತ್ತದೆ.
ಇದನ್ನು ಓದಿ: ಈ ಗ್ರಹಗಳು ಅಪಾಯಕಾರಿ, ಬಚಾವಾಗಲು ಹೀಗೆ ಮಾಡಿ
ಹುಬ್ಬುಗಳು (Eyebrows)
ಬಿಲ್ಲಿನ ಆಕಾರದ ಹುಬ್ಬುಗಳನ್ನು ಹೊಂದಿರುವ ಮಹಿಳೆಯರನ್ನು ಸುಂದರ (Pretty) ಮತ್ತು ಚಾರಿತ್ರ್ಯವಂತ ಮಹಿಳೆಯರ ಸಾಲಿಗೆ ಸೇರ್ಪಡೆಗೊಳ್ಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ನೇರವಾದ, ಉದ್ದ ಮತ್ತು ದಪ್ಪವಾದ ಹುಬ್ಬುಗಳಿದ್ದರೆ, ಇಲ್ಲವೇ ಅರ್ಧಕ್ಕೆ ಗೆರೆ ಬಂದಿರುವ ಹುಬ್ಬುಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ.