ನಾಲಿಗೆ ಮೇಲೆ ಮಚ್ಚೆ ಇದ್ರೆ ಹೇಳಿದ್ದೆಲ್ಲ ನಿಜವಾಗುತ್ತಾ?
ಮಚ್ಚೆಗಳಿಗೆ ಸಾಮುದ್ರಿಕಾ ಶಾಸ್ತ್ರದಲ್ಲಿ ಬಹಳ ಮಹತ್ವ ಇದೆ. ಮಚ್ಚೆಗಳ ಆಧಾರದ ಮೇಲೆ ಸಾಮುದ್ರಿಕಾ ಶಾಸ್ತ್ರವು ವ್ಯಕ್ತಿಯ ಸ್ವಭಾವ, ಭವಿಷ್ಯ ಎಲ್ಲವನ್ನೂ ಹೇಳುತ್ತದೆ. ಸಾಮಾನ್ಯವಾಗಿ ನಾಲಿಗೆ ಮೇಲೆ ಮಚ್ಚೆ ಇದ್ದರೆ ಮಾತಾಡಿದ್ದೆಲ್ಲ ನಿಜವಾಗುತ್ತದೆ ಎನ್ನಲಾಗುತ್ತದೆ. ಇದು ನಿಜಾನಾ?
ಯಾರಾದರೂ ಮತ್ತೊಬ್ಬರ ಬಗ್ಗೆ ಏನಾದರೂ ಹೇಳಿದಾಗ-'ಬೇಕಿದ್ರೆ ಬರ್ದಿಟ್ಕೋ, ನಾ ಹೇಳ್ದಂಗೇ ಆಗುತ್ತೆ, ಏಕಂದ್ರೆ ನನ್ನ ನಾಲ್ಗೆಲಿ ಮಚ್ಚೆ ಇದೆ' ಎನ್ನೋದನ್ನು ನೀವು ಕೇಳಿರಬಹುದು. ನಾಲಿಗೆಯಲ್ಲಿ ಮಚ್ಚೆ ಇರೋರು ಹೇಳಿದ್ದೆಲ್ಲ ಆಗತ್ತಾ?
ಸಾಮುದ್ರಿಕ್ಷಾಸ್ತ್ರದಲ್ಲಿ, ದೇಹದ ಭಾಗಗಳ ವಿನ್ಯಾಸ ಮತ್ತು ಇರುವ ಮಚ್ಚೆಗಳ ಸ್ಥಿತಿಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಹೇಳಲಾಗುತ್ತದೆ. ದೇಹದ ಮೇಲಿನ ಕೆಲವು ಮಚ್ಚೆಗಳು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಸಾಮುದ್ರಿಕಾ ಶಾಸ್ತ್ರದಲ್ಲಿ, ಮಚ್ಚೆಗಳ ಸ್ಥಾನವು ಶುಭ ಅಥವಾ ಅಶುಭ ಚಿಹ್ನೆಗಳೊಂದಿಗೆ ಸಂಬಂಧ ಹೊಂದಿದೆ. ನಾಲಿಗೆಯಲ್ಲಿರುವ ಮಚ್ಚೆ ಬಗ್ಗೆ ಸಾಮುದ್ರಿಕಾ ಶಾಸ್ತ್ರ ಏನು ಹೇಳುತ್ತದೆ? ನಿಜವಾಗಿಯೂ ನಾಲಿಗೆಯಲ್ಲಿ ಮಚ್ಚೆ ಇರುವವರು ಹೇಳಿದ್ದೆಲ್ಲ ನಿಜವಾಗುತ್ತಾ?.
ನಾಲಿಗೆಯಲ್ಲಿ ಮಚ್ಚೆ
ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ನಾಲಿಗೆಯ ಕೆಳಭಾಗದಲ್ಲಿ ಮಚ್ಚೆ ಇದ್ದರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ನಾಲಿಗೆಯ ಕೆಳ ಭಾಗದಲ್ಲಿ ಮಚ್ಚೆ ಇರುವವರು ಕಲಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ. ಅದೇ ಸಮಯದಲ್ಲಿ, ಅಂತಹ ಜನರು ಆಹಾರ ಮತ್ತು ಪಾನೀಯವನ್ನು ತುಂಬಾ ಇಷ್ಟ ಪಡುತ್ತಾರೆ. ಅಧ್ಯಾತ್ಮದತ್ತ ಒಲವು ಇರುವುದರಿಂದ ಇಂತಹವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.
ನಾಲಿಗೆಯ ಮೇಲೆ ಮಚ್ಚೆ ಇರುವುದು
ನಾಲಿಗೆಯ ಮೇಲ್ಭಾಗದಲ್ಲಿ ಮಚ್ಚೆ ಇರುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನಾಲಿಗೆಯ ಮೇಲೆ ಮಚ್ಚೆ ಇರುವುದು ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಒಬ್ಬ ವ್ಯಕ್ತಿಯು ತನ್ನ ನಾಲಿಗೆಯಲ್ಲಿ ಇದ್ದಕ್ಕಿದ್ದಂತೆ ಮಚ್ಚೆಯನ್ನು ಹೊಂದಿದರೆ, ಶೀಘ್ರದಲ್ಲೇ ಅವನು ಕೆಲವು ದೊಡ್ಡ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಿ. ಆದರೆ, ಈಗಾಗಲೇ ನಾಲಿಗೆಯ ಮೇಲೆ ಮಚ್ಚೆ ಇದ್ದರೆ, ಅಂತಹ ಜನರು ಸಂಭಾಷಣೆಯಲ್ಲಿ ಉತ್ತಮರು ಮತ್ತು ರಾಜತಾಂತ್ರಿಕರೂ ಆಗಿರುತ್ತಾರೆ. ಈ ಜನರು ಧಾರ್ಮಿಕ ಸ್ವಭಾವದವರೂ ಕೂಡಾ. ಅಂತಹವರು ತುಂಬಾ ಆಹಾರಪ್ರಿಯರೂ ಆಗಿರುತ್ತಾರೆ ಎಂದು ಹೇಳಲಾಗುತ್ತದೆ.
ಬುಧ ಪ್ರದೋಷ ವ್ರತ ಕತೆ ಕೇಳಿದ್ದೀರಾ? ಈ ವ್ರತ ಆಚರಣೆಯಿಂದ 1000 ಗೋದಾನ ಫಲ ಸಿದ್ಧಿ
ನಾಲಿಗೆಯ ಮುಂಭಾಗದಲ್ಲಿ ಮಚ್ಚೆ
ನಾಲಿಗೆಯ ತುದಿಯಲ್ಲಿ, ಅಂದರೆ ಮುಂಭಾಗದಲ್ಲಿ ಮಚ್ಚೆ ಇರುವ ಜನರು ರಾಜತಾಂತ್ರಿಕ ಸಿದ್ಧಾಂತವನ್ನು ಹೊಂದಿರುತ್ತಾರೆ. ಅಂತಹ ಜನರು ಆಹಾರ ಮತ್ತು ಪಾನೀಯವನ್ನು ಸಹ ತುಂಬಾ ಇಷ್ಟಪಡುತ್ತಾರೆ.
ನಾಲಿಗೆಯ ಬಲಭಾಗದಲ್ಲಿ ಮಚ್ಚೆ
ನಾಲಿಗೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ, ಅಂತಹ ಜನರು ತುಂಬಾ ಮಾತನಾಡುತ್ತಾರೆ. ಅವರೊಂದಿಗೆ ಮಾತನಾಡುವುದು ತುಂಬಾ ಸಂತೋಷ ಕೊಡುತ್ತದೆ.
Lunar Eclipse: ಯಾವ ರಾಶಿಗೆ ಗ್ರಹಣ ಬಾಧೆ ಹೆಚ್ಚು? ಕೈಗೊಳ್ಳಬೇಕಾದ ಪರಿಹಾರವೇನು?
ಹೆಣ್ಣಿನ ನಾಲಿಗೆಯ ಮೇಲೆ ಮಚ್ಚೆ ಇದ್ದರೆ
ಮಹಿಳೆಯ ನಾಲಿಗೆಯಲ್ಲಿ ಮಚ್ಚೆ ಇದ್ದರೆ ಅಂತಹ ಮಹಿಳೆಯರು ಸಂಗೀತ ಪ್ರೇಮಿಗಳು. ಅವರ ಮನಸ್ಸು ಶಾಂತವಾಗುತ್ತದೆ. ಮತ್ತು ಅವರ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ.
ಇಷ್ಟೆಲ್ಲವನ್ನೂ ಸಾಮುದ್ರಿಕಾ ಶಾಸ್ತ್ರ ಹೇಳಿದ್ದರೂ, ನಾಲಿಗೆಯಲ್ಲಿ ಮಚ್ಚೆ ಇದ್ದವರು ಹೇಳಿದ್ದೆಲ್ಲ ನಿಜವಾಗುತ್ತದೆ ಎಂದು ಎಲ್ಲಿಯೂ ಹೇಳಲಾಗಿಲ್ಲ. ಈ ನಂಬಿಕೆ ಎಲ್ಲಿಂದ ಆರಂಭವಾಯಿತೆಂಬುದಕ್ಕೆ ಪುರಾವೆ ಇಲ್ಲ.