ಆಗಸ್ಟ್ 15 ನನ್ನ ಬರ್ತ್ ಡೇ ಅಂತಾ ಬರೀ ದಿನಾಂಕವನ್ನು ನಾವು ಹೇಳ್ತೇವೆ. ಹಿಂದೂ ಕ್ಯಾಲೆಂಡರ್ ನಲ್ಲಿರುವ ತಿಥಿಯನ್ನು ಮರೆತು ಬಿಡ್ತೇವೆ. ಆದ್ರೆ ನಮ್ಮ ಭವಿಷ್ಯಕ್ಕೆ ನಾವು ಹುಟ್ಟಿದ ತಿಥಿ ಕೂಡ ಮುಖ್ಯ. ಇಂದು ಯಾವ ತಿಥಿಯಲ್ಲಿ ಜನಿಸಿದವರ ಸ್ವಭಾವ ಹೇಗಿರುತ್ತೆ ಅನ್ನೋದನ್ನು ತಿಳಿಯೋಣ. 

ಬಹುತೇಕ ಎಲ್ಲರೂ ಹುಟ್ಟಿದ ದಿನಾಂಕ (Date Of Birth)ವನ್ನು ನೆನಪಿಟ್ಟುಕೊಂಡಿರ್ತಾರೆ. ಅದೇ ದಿನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ತಾರೆ. ಆದ್ರೆ ಹುಟ್ಟಿದ ತಿಥಿ ಅವರಿಗೆ ನೆನಪಿರೋದಿಲ್ಲ. ಅದ್ರ ಬಗ್ಗೆ ಮಹತ್ವ ನೀಡಲು ಹೋಗೋದಿಲ್ಲ. ಜ್ಯೋತಿಷ್ಯ (Astrology ) ಶಾಸ್ತ್ರದ ಪ್ರಕಾರ, ಹುಟ್ಟಿದ ತಿಥಿ ಕೂಡ ಮಹತ್ವ ಪಡೆಯುತ್ತದೆ. ನೀವು ಯಾವ ತಿಥಿಯಲ್ಲಿ ಹುಟ್ಟಿದ್ದಿರಿ ಎಂಬುದರ ಮೇಲೆ ನಿಮ್ಮ ಸ್ವಭಾವವನ್ನು ಹೇಳಬಹುದು. ಹಿಂದೂ ಕ್ಯಾಲೆಂಡರ್‌ನಲ್ಲಿ ತಿಂಗಳ 30 ದಿನವನ್ನು ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷವೆಂದು ವಿಂಗಡಿಸಲಾಗಿದೆ. ಇವು 15-15 ದಿನವಿರುತ್ತದೆ. ಕೃಷ್ಣ ಪಕ್ಷದ 15 ನೇ ತಿಥಿ ಮತ್ತು ಶುಕ್ಲ ಪಕ್ಷದ 15 ನೇ ತಿಥಿಯನ್ನು ಅಮವಾಸ್ಯೆ ಅಥವಾ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಇಂದು ನಾವು ಯಾವ ತಿಥಿಯಲ್ಲಿ ಜನಿಸಿದವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ಹೇಳ್ತೇವೆ. 

ಪಾಡ್ಯ : ಪಾಡ್ಯ ತಿಥಿಯಂದು ಜನಿಸಿದವರು ಕುಟುಂಬದ ಜೊತೆ ಸಾಗುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತಮ್ಮ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿರುತ್ತಾರೆ. ಬಿಕ್ಕಟ್ಟಿನ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಅವರ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿರುತ್ತದೆ. 

ಬಿದಿಗೆ : ಬಿದಿಗೆ ತಿಥಿಯಂದು ಜನಿಸಿದವರು ಉದಾರ ಹೃದಯವನ್ನು ಹೊಂದಿರುತ್ತಾರೆ. ಜನರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧವಾಗಿರ್ತಾರೆ. ಸದ್ಗುಣ ಮತ್ತು ದಾನಶೀಲರು. 

ತದಿಗೆ : ತದಿಗೆ ತಿಥಿಯಂದು ಜನಿಸಿದವರಲ್ಲಿ ದೈಹಿಕ ಶಕ್ತಿ ಹೆಚ್ಚಿರುತ್ತದೆ. ಬುದ್ದಿವಂತಿಗೆ ಜೊತೆ ಬಲಿಷ್ಠತೆ ಇರುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುತ್ತಿರುತ್ತಾರೆ. ವೃತ್ತಿಯಲ್ಲಿ ಯಶಸ್ಸು ಪಡೆಯುತ್ತಾರೆ. ಐಷಾರಾಮಿ ಹೆಸರಿನಲ್ಲಿ ಅಮಲಿನ ಪದಾರ್ಥದ ಚಟಕ್ಕೆ ಬೀಳುವ ಸಾಧ್ಯತೆಯಿರುತ್ತದೆ.

ಕನಸಿನ ಉದ್ಯೋಗ ಆಕರ್ಷಿಸಲು FENG SHUI TIPS

ಚೌತಿ : ಚೌತಿ ತಿಥಿಯಂದು ಜನಿಸಿದವರು ಜಗಳವಾಡುವುದು ಹೆಚ್ಚು. ಹಾಗಾಗಿ ಯಾವುದೇ ವಿವಾದಕ್ಕೆ ಸಿಲುಕದಂತೆ ಎಚ್ಚರ ವಹಿಸಬೇಕು. ಸೈನ್ಯದಲ್ಲಿ ಸೇರಲು ಇವರು ಪ್ರಯತ್ನಿಸಬೇಕು.

ಪಂಚಮೀ : ಪಂಚಮಿಯಂದು ಜನಿಸಿದವರು ದೈಹಿಕವಾಗಿ ತುಂಬಾ ಸದೃಢರಾಗಿರುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ಸದಾ ಜಾಗೃತರಾಗಿರುತ್ತಾರೆ. ಕುಟುಂಬದಲ್ಲಿ ಸುಖವಿರುತ್ತದೆ. ವೃತ್ತಿಜೀವನದಲ್ಲಿ ಕಠಿಣ ತಪಸ್ಸು ಅಗತ್ಯ.

ಷಷ್ಠಿ : ಈ ತಿಥಿಯಲ್ಲಿ ಜನಿಸಿದವರಿಗೆ ಸತ್ಯ ಹೆಚ್ಚು ಪ್ರಿಯವಾಗಿರುತ್ತದೆ. ಅವರು ಎಂದೂ ಸುಳ್ಳು ಹೇಳಲು ಬಯಸುವುದಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡುವಲ್ಲಿ ಹಿಂದೆ ಸರಿಯುವುದಿಲ್ಲ. ಸತತ ಪ್ರಯತ್ನದಿಂದಾಗಿ ಅವರು ತಮ್ಮ ಜೀವನದಲ್ಲಿ ಯಶಸ್ವಿಯಾಗುತ್ತಾರೆ.

ಸಪ್ತಮಿ:  ಸಪ್ತಮಿಯಂದು ಜನಿಸಿದವರು ಬಹಳ ಬೇಗ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಇದು ಕೆಟ್ಟ ನಡವಳಿಕೆಯನ್ನು ಇಷ್ಟಪಡುವುದಿಲ್ಲ. ಅವರು ಧಾರ್ಮಿಕ ಸ್ವಭಾವದವರಾಗಿರುತ್ತಾರೆ. ಹಣಕಾಸು ಸಂಬಂಧಿತ ಕೆಲಸದಲ್ಲಿ ಪ್ರವೀಣರಾಗಿರುತ್ತಾರೆ.

ಅಷ್ಟಮಿ : ಅಷ್ಟಮಿಯಂದು ಜನಿಸಿದವರು ಸಂತೋಷವಾಗಿರುತ್ತಾರೆ. ಚಂಚಲ ಮನಸ್ಸಿನಿಂದಾಗಿ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲಕ್ಕೊಳಗಾಗುತ್ತಾರೆ.

ನವಮಿ : ನವಮಿಯಂದು ಜನಿಸಿದವರು ತಮ್ಮ ಮಾತಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬೇಡವೆಂದರೂ ಬಾಯಿಂದ ಕಹಿ ಮಾತುಗಳು ಬರುತ್ತವೆ. ಆದ್ದರಿಂದ ಕಟುವಾದ ಸತ್ಯವನ್ನು ಮಾತನಾಡದಂತೆ ನೋಡಿಕೊಳ್ಳಿ.

ದಶಮಿ : ದಶಮಿ ತಿಥಿಯಂದು ಜನಿಸಿದ ವ್ಯಕ್ತಿ ದೇವರಲ್ಲಿ ಅಚಲ ನಂಬಿಕೆ ಹೊಂದಿರುತ್ತಾನೆ. ಕವನ ಕೇಳಲು ಮತ್ತು ಬರೆಯಲು ಆಸಕ್ತಿಯಿರುತ್ತದೆ. ಆಯುಧಗಳನ್ನು ಇಟ್ಟುಕೊಳ್ಳುವ ಬಯಕೆಯನ್ನು ಹೊಂದಿರುತ್ತಾರೆ. 

ಏಕಾದಶಿ: ಏಕಾದಶಿ ತಿಥಿಯಂದು ಜನಿಸಿದವರು ಶುದ್ಧ ಹೃದಯವನ್ನು ಹೊಂದಿರುತ್ತಾರೆ. ಈ ಜನರು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸ್ವಲ್ಪವೂ ವಿಳಂಬ ಮಾಡುವುದಿಲ್ಲ.

ದ್ವಾದಶಿ : ದ್ವಾದಶಿ ತಿಥಿಯಂದು ಜನಿಸಿದವರು ಕೃಷಿಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಕೃಷಿಯನ್ನೇ ಆಶ್ರಯಿಸಬೇಕೆಂದೇನಿಲ್ಲ, ಆಗಾಗ್ಗೆ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಅವರು ಮಾಡ್ತಾರೆ. ಇವರ ಮನೆಯಲ್ಲಿ ಸದಾ ನೆಮ್ಮದಿಯಿರುತ್ತದೆ.

ತ್ರಯೋದಶಿ:  ತ್ರಯೋದಶಿ ದಿನಾಂಕದಂದು ಜನಿಸಿದ ವ್ಯಕ್ತಿ ಅಲಂಕಾರವನ್ನು ಇಷ್ಟಪಡುವುದಿಲ್ಲ. ಸರಳ ಜೀವಿಯಾಗಿರ್ತಾರೆ. ತುಂಬಾ ಶ್ರೀಮಂತನಾಗಿದ್ದರೂ, ಸಾಮಾನ್ಯ ಮನುಷ್ಯನಂತೆ ಜೀವನ ನಡೆಸುತ್ತಾನೆ. 

ಚತುರ್ದಶಿ : ಚತುರ್ದಶಿಯಂದು ಜನಿಸಿದವರು ಹೃದಯವಂತರು. ಕೆಲವೊಮ್ಮೆ ಕ್ರೂರ ರೀತಿಯಲ್ಲಿ ವರ್ತಿಸುತ್ತಾರೆ. ಹಾಗಾಗಿ ಚತುದರ್ಶಿಯಂದು ಜನಿಸಿದ ಜನರು ವಿನಮ್ರರಾಗಿರಲು ಪ್ರಯತ್ನಿಸಬೇಕು.

Yadgir; ಕಾರ ಹುಣ್ಣಿಮೆ ಸಡಗರವೋ ಸಡಗರ!

ಹುಣ್ಣಿಮೆ : ಹುಣ್ಣಿಮೆಯಂದು ಜನಿಸಿದವರು ಒಳ್ಳೆಯ ಸಹವಾಸವನ್ನು ಇಷ್ಟಪಡುತ್ತಾರೆ. ಹೃದಯ ಸಂತೋಷ ಮತ್ತು ಪ್ರೀತಿಯಿಂದ ತುಂಬಿದೆ. ಈ ಜನರು ಕೆಲವೊಮ್ಮೆ ಸೋಮಾರಿಯಾಗ್ತಾರೆ.

ಅಮವಾಸ್ಯೆ : ಅಮಾವಾಸ್ಯೆಯಂದು ಜನಿಸಿದವರು ತಮ್ಮ ತಂದೆ-ತಾಯಿ ಮತ್ತು ಹಿರಿಯರನ್ನು ಗೌರವಿಸುತ್ತಾರೆ. ಯಾವುದೇ ಗುರಿಯನ್ನು ಹೊಂದಿದ್ದರೂ ಅದನ್ನು ಸಾಧಿಸಲು ಶ್ರಮಿಸುತ್ತಾರೆ.