Asianet Suvarna News Asianet Suvarna News

ಕನಸಿನ ಉದ್ಯೋಗ ಆಕರ್ಷಿಸಲು Feng Shui tips

ಚೈನೀಸ್ ವಾಸ್ತುಶಾಸ್ತ್ರವಾದ ಫೆಂಗ್ ಶುಯ್‌ನಲ್ಲಿ ನಿಮ್ಮ ಕನಸಿನ ಉದ್ಯೋಗವನ್ನು ಆಕರ್ಷಿಸಲು ನೀವೇನು ಮಾಡಬೇಕು ಎಂದು ಹೇಳಲಾಗಿದೆ. ಫೆಂಗ್ ಶುಯ್‍ನ ಟಾಪ್ ಟಿಪ್ಸ್ ಇಲ್ಲಿವೆ. 

top Feng Shui tips to attract your dream job skr
Author
Bangalore, First Published Jun 15, 2022, 12:36 PM IST

ಎಲ್ಲರಿಗೂ ಡ್ರೀಂ ಜಾಬ್(Dream job) ಎಂದಿರುತ್ತದೆ. ಆದರೆ, ಬದುಕಿನ ಅನಿವಾರ್ಯತೆಗಳು ಸಿಕ್ಕಿದ ಕೆಲಸ ಒಪ್ಪಿಕೊಂಡು ಮಾಡುವಂತೆ ಮಾಡುತ್ತವೆ. ಹೀಗಾಗಿ, ಹೆಚ್ಚಿನವರು ತಮ್ಮಳತೆಯದಲ್ಲದ ಶೂಗಳಲ್ಲಿ ಕಾಲು ತುರುಕಿಸಿದಂತೆ ಇಷ್ಟವಿಲ್ಲದ ಕೆಲಸದಲ್ಲಿ ತೊಡಗಿ ಒದ್ದಾಡುತ್ತಾರೆ. ಕೌಶಲ್ಯ(skill)ವಿರುವುದೇ ಬೇರೆ, ಕೆಲಸದ ಅಗತ್ಯವೇ ಬೇರೆ ಎಂಬಂತಾದರೆ ವೃತ್ತಿ ಜೀವನ(career)ವೇ ಸಾಕಪ್ಪಾ ಎನಿಸಿಬಿಡುತ್ತದೆ. ಹೀಗಾಗಿ, ಕನಸಿನ ವೃತ್ತಿ ಎಟುಕಿಸಿಕೊಳ್ಳುವುದು ತುಂಬಾ ಮುಖ್ಯ. ಆ ವ್ಯಕ್ತಿ ಜೀವನವನ್ನು ಚೆನ್ನಾಗಿ ಆಸ್ವಾದಿಸಲು ಸಾಧ್ಯವಾಗುವುದರ ಜೊತೆಗೆ, ವೃತ್ತಿಗೂ ಸಂಪೂರ್ಣ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತದೆ. 

ಹೀಗೆ ಕನಸಿನ ಉದ್ಯೋಗಕ್ಕಾಗಿ ನಿರಂತರ ಪ್ರಯತ್ನ ಹಾಕುವ ಜೊತೆಗೆ ಫೆಂಗ್ ಶುಯ್‌(Feng Shui)ನಲ್ಲಿ ಹೇಳಿದ ಈ ಮಾರ್ಗಗಳನ್ನು ಅನುಸರಿಸಿ. 

ಬಾಗು ವಾ
ಮೊದಲು ಫೆಂಗ್ ಶುಯ್ ಬಾಗು ವಾ(Ba gua) ಪಡೆಯಿರಿ. ಇದು ನಿಮ್ಮ ಪರಿಸರದ ಶಕ್ತಿಯನ್ನು ವ್ಯವಸ್ಥಿತವಾಗಿ ಮೌಲ್ಯಮಾಪನ ಮಾಡುವ ಮೋಟಿಫ್ ನಕ್ಷೆಯಾಗಿದೆ. ಇದು ಕೇಂದ್ರದ ಸುತ್ತಲೂ 8 ಮೂಲೆಗಳನ್ನು ಹೊಂದಿರುತ್ತದೆ. ಇವೆಲ್ಲವೂ ನಮ್ಮ ಜೀವನದ ವಿವಿಧ ಅಂಶಗಳೊಂದಿಗೆ ಸಂಪರ್ಕ ಹೊಂದಿರುತ್ತವೆ. ಪ್ರತಿಯೊಂದು ಗುವಾ (ಪ್ರದೇಶ) ಹಲವಾರು ಪದರಗಳನ್ನು ಹೊಂದಿರುತ್ತವೆ ಮತ್ತು ಅವೆಲ್ಲವೂ ವಿಭಿನ್ನ ಅರ್ಥಗಳನ್ನು ಹೊಂದಿರುತ್ತವೆ. ಬಾ ಗುವಾ ತರುವಾಗ ಮಧ್ಯದಲ್ಲಿ ಕನ್ನಡಿ ಇರುವಂಥದ್ದನ್ನು ನೋಡಿ. ನೀವು ಮೆಚ್ಚುವ ವೃತ್ತಿಜೀವನದ ಗ್ರಾಫ್‌ಗಳನ್ನು ಹೊಂದಿರುವ ಜನರು ಮತ್ತು ವೃತ್ತಿಪರರ ಚಿತ್ರಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳನ್ನು ನಿಮ್ಮ ಬಾ ಗುವಾದ ಉತ್ತರ ಪ್ರದೇಶದಲ್ಲಿ ಪ್ರದರ್ಶಿಸಿ.

ರೆಸ್ಯೂಮ್‌ನಲ್ಲಿ ಅಡ್ಡ ಗೆರೆ(horizontal lines) ಬೇಡ
ಅಡ್ಡ ಗೆರೆಗಳು ಸಕಾರಾತ್ಮಕ ಶಕ್ತಿಯ ಹರಿವನ್ನು ಮುರಿಯುತ್ತವೆ. ಹಾಗಾಗಿ ನಿಮ್ಮ ರೆಸ್ಯೂಮ್‌ನಲ್ಲಿ ಸಮತಲವಾಗಿರುವ ರೇಖೆಗಳನ್ನು ಎಳೆಯುವುದನ್ನು ತಪ್ಪಿಸಿ. ಹೀಗೆ ಗೆರೆಗಳನ್ನು ಹಾಕಿದರೆ ಕಂಪನಿಯಿಂದ ಕರೆ ಬರದೆ ಇರಬಹುದು. ಅಥವಾ ಅವರು ಕರೆಗೆ ಉತ್ತರಿಸಲು ತಡ ಮಾಡಬಹುದು. 

ಕೇತು ದೋಷದಿಂದ ಬೇಸತ್ತಿದ್ದೀರಾ? ಕೇತುವನ್ನು ಸಂತೋಷಪಡಿಸಲು ಇಲ್ಲಿವೆ ಮಾರ್ಗಗಳು..

ಕೆಂಪು ವಸ್ತು
ನಿಮ್ಮ ಕೆಲಸ ಮಾಡುವ ಸ್ಥಳದ ಉತ್ತರ ಭಾಗದಲ್ಲಿ ಕೆಂಪು ವಸ್ತು(Red thing)ವನ್ನು ಇರಿಸಿ. ಅದು ರೇಷ್ಮೆ ಸ್ಕಾರ್ಫ್ ಆಗಿರಬಹುದು, ಕಲಾಕೃತಿಯ ತುಣುಕು ಆಗಿರಬಹುದು, ಪುರಾತನವಾದ ಏನಾದರೂ ಆಗಿರಬಹುದು, ನೀವು ಮಹತ್ವದ್ದೆಂದೆಣಿಸುವ ಯಾವುದಾದರೂ ಆಗಿರಬಹುದು.

ನಿಮ್ಮ ಕನಸಿನ ಕೆಲಸಕ್ಕೆ ಬೇಕಾದಂತೆ ರೆಡಿಯಾಗಿ
ನಿಮಗೆ ಬೇಕಾದ ಸ್ಥಾನಕ್ಕೆ ಸರಿಯಾಗಿ ಪ್ರತಿ ದಿನ ಬಟ್ಟೆ ಧರಿಸಿ. ನೀವು ಎಂಟ್ರಿ ಲೆವೆಲ್ ಜಾಬ್‌ನಲ್ಲಿದ್ದರೂ, ಮ್ಯಾನೇಜರ್ ಮಟ್ಟಕ್ಕೆ ರೆಡಿಯಾದರೆ, ಅಥವಾ ನೀವು ಸೇರಬೇಕೆಂದೆಣಿಸುವ ಕಂಪನಿಯ ಭಾಗವಾಗಿರುವಂತೆ ಪ್ರತಿ ದಿನ ರೆಡಿಯಾಗಬೇಕು. ಆ ಸಂಸ್ಥೆಯಲ್ಲಿ ಬಯಸುವ ಉಡುಗೆ ಧರಿಸಬೇಕು. ನಿಮ್ಮ ಈ ನಡೆ ಬಹಳ ಧನಾತ್ಮಕ ಪರಿಣಾಮ ಬೀರುತ್ತದೆ. ಒಂದು ವೇಳೆ ಸಂದರ್ಶನಕ್ಕೆ ನಿಮ್ಮ ಕನಸಿನ ಸಂಸ್ಥೆಯಿಂದ ಕರೆ ಬಂದರೆ ಆಗಲೂ ಅಲ್ಲಿಯ ಭಾಗವಾಗಿರುವಂತೆಯೇ ರೆಡಿಯಾಗಿ ಹೋಗಿ. 

ಕಂಚಿನ ಫೆಂಗ್ ಶೂಯಿ ಡ್ರ್ಯಾಗನ್‌(bronze Feng Shui dragon)
ಫೆಂಗ್ ಶುಯ್ ಪ್ರಕಾರ ಡ್ರ್ಯಾಗನ್ ವೃತ್ತಿಜೀವನದಲ್ಲಿ ಅದೃಷ್ಟದ ಸಂಕೇತವಾಗಿದೆ ಮತ್ತು ಇದು ಸಮೃದ್ಧಿಯನ್ನು ಆಕರ್ಷಿಸುತ್ತದೆ. ನಿಮ್ಮ ಜೀವನಕ್ಕೆ ಆರ್ಥಿಕ ಸಮೃದ್ಧಿಯನ್ನು ತರಲು ಸಹಾಯ ಮಾಡುವುದರಿಂದ ಅದನ್ನು ನಮ್ಮ ಕಾರ್ಯಸ್ಥಳಕ್ಕೆ ಸೇರಿಸಿ. ಅದೃಷ್ಟವನ್ನು ಆಕರ್ಷಿಸುವ ಅತೀಂದ್ರಿಯ ಶಕ್ತಿಯನ್ನು ಡ್ರ್ಯಾಗನ್ ಹೊಂದಿದೆ. ಹೀಗಾಗಿ, ಕಂಚಿನ ಡ್ರ್ಯಾಗನ್ ತಂದು ನೀವು ಕೆಲಸ ಮಾಡುವ ಸ್ಥಳದಲ್ಲಿರಿಸಿ. 

ಮಿಥುನ ರಾಶಿಯಲ್ಲಿ ಸೂರ್ಯ ಸಂಕ್ರಮಣ: ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ?

ಬೆಳಕು(light)
ನಿಮ್ಮ ವೃತ್ತಿಪರ ಜೀವನದಲ್ಲಿ ನಿಮಗೆ ಉತ್ತೇಜನ ಬೇಕಾದರೆ, ದೀಪವನ್ನು ಪಡೆಯಿರಿ ಮತ್ತು ಅದನ್ನು ನಿಮ್ಮ ಮನೆಯ ಅಧ್ಯಯನ ಅಥವಾ ವರ್ಕ್ ಸ್ಟೇಶನ್ನಿನ ದಕ್ಷಿಣ(south) ಭಾಗದಲ್ಲಿ ಇರಿಸಿ. ಮತ್ತು ನೀವು ಕೆಂಪು ದೀಪವನ್ನು ಖರೀದಿಸಿದರೆ, ಅದು ಪ್ರಚಾರವನ್ನು ಪಡೆಯುವಲ್ಲಿ ನಿಮಗೆ ಸಹಾಯ ಮಾಡಬಹುದು.
 

Follow Us:
Download App:
  • android
  • ios