ಅಮವಾಸ್ಯೆ ಕತ್ತಲಿನಲ್ಲೂ ಬೆಳಕು ಕಾಣಲಿದ್ದಾರೆ ಈ ರಾಶಿಯವರು
ಸೆಪ್ಟೆಂಬರ್ 14ರಂದು ಭಾದ್ರಪದ ಅಮವಾಸ್ಯೆ ಆಚರಿಸಲಾಗುವುದು. ಈ ಸಮಯದಲ್ಲಿ ಸಧ್ಯ, ಬುಧಾದಿತ್ಯ ಯೋಗ ಮತ್ತು ಪೂರ್ವ ಫಲ್ಗುಣಿ ನಕ್ಷತ್ರ ಯೋಗವು ರೂಪುಗೊಳ್ಳುತ್ತಿದೆ. ಇದ್ರಿಂದ ಕೆಲ ರಾಶಿಗಳ ಭಾಗ್ಯದ ಬಾಗಿಲು ತೆರೆಯಲಿದೆ.

ಭಾದ್ರಪದ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಭಾದ್ರಪದ ಅಮವಾಸ್ಯೆ ಎಂದು ಆಚರಣೆ ಮಾಡಲಾಗುತ್ತದೆ. ಇದನ್ನು ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ತುಳುನಾಡಿನಲ್ಲಿ ಇದಕ್ಕೆ ಅವನಿ ಅಮವಾಸ್ಯೆ ಎಂದು ಹೆಸರಿದೆ. ಇದನ್ನು ಭದಿ ಅಮವಾಸ್ಯೆ ಎಂದೂ ಕರೆಯಲಾಗುತ್ತದೆ. ಕೆಲವರು ಈ ದಿನ ಉಪವಾಸ ಮಾಡಿದ್ರೆ ಮತ್ತೆ ಕೆಲವೆಡೆ ಹಿರಿಯರ ಪೂಜೆ ನಡೆಯುತ್ತದೆ. ಹಿರಿಯರ ಆತ್ಮಕ್ಕೆ ಶಾಂತಿಕೋರಿ ಗಂಗಾ ನದಿಯಲ್ಲಿ ಸ್ನಾನ ಮಾಡುವವರಿದ್ದಾರೆ.
ಈ ಬಾರಿ ಸೆಪ್ಟೆಂಬರ್ 14ರಂದು ಭಾದ್ರಪದ (Bhadrapada) ಅಮವಾಸ್ಯೆ ಆಚರಣೆ ಮಾಡಲಾಗ್ತಿದೆ. ಈ ದಿನ ಯೋಗಗಳ ಅದ್ಭುತ ಸಂಯೋಜನೆಯಾಗಿದ್ದು, ಕೆಲ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಭಾದ್ರಪದ ಅಮವಾಸ್ಯೆ (Amavasya ) ಯಂದು ಯಾವ ರಾಶಿಗೆ ಲಾಭವಾಗಲಿದೆ ಎಂಬ ವಿವರ ಇಲ್ಲಿದೆ.
ವೇದವ್ಯಾಸರು ಮಹಿಳೆಯರಿಗೆ ಬಿಗ್ ಸ್ಕ್ರೀನಲ್ಲಿ ಮಹಾಭಾರತ ತೋರಿಸಿದ್ರಾ!
ಈ ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ :
ವೃಷಭ ರಾಶಿ : ವೃಷಭ ರಾಶಿಯವರಿಗೆ ಭಾದ್ರಪದ ಅಮಾವಾಸ್ಯೆಯ ದಿನದಂದು ಆರ್ಥಿಕ (Economic) ಲಾಭ ಸಿಗಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಈ ದಿನ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಂಪತ್ತು ವೃದ್ಧಿಸುತ್ತದೆ. ಹಣದ ಒಳಹರಿವಿನ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಪೂರ್ವಜರ ಆಶೀರ್ವಾದ ಈ ರಾಶಿಯವರಿಗೆ ಸಿಗುವ ಕಾರಣ ಅವರ ವ್ಯಾಪಾರದಲ್ಲಿ ವೃದ್ಧಿಯಾಗಲಿದೆ.
ತುಲಾ ರಾಶಿ : ಭಾದ್ರಪದ ಅಮವಾಸ್ಯೆ ತುಲಾ ರಾಶಿಯವರಿಗೆ ಶುಭ ಫಲ ನೀಡಲಿದೆ. ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶ ಪ್ರಬಲವಾಗಿದೆ. ಉನ್ನತ ಸ್ಥಾನದ ಜೊತೆ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ಕೋರ್ಟ್, ಕಚೇರಿ ವಿಷಯಗಳಲ್ಲಿ ಸಮಾಧಾನ ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲಿರುವ ಈ ರಾಶಿಯವರು ಉತ್ತಮ ಸ್ಥಾನ ಗಳಿಸಲಿದ್ದಾರೆ. ಈ ದಿನ ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಲು ಮರೆಯಬೇಡಿ. ಇದು ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಬಲಪಡಿಸುವ ಮೂಲಕ ನಿಮಗೆ ಎಂದೂ ಹಣದ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ.
ಮನೆ ಹೀಗಿದ್ರೆ ಜೇಬು ಖಾಲಿ ಆಗೋದು ಫಿಕ್ಸ್,ಇಲ್ಲಿವೆ ಕೆಲವು ಸಲಹೆ
ವೃಶ್ಚಿಕ ರಾಶಿ : ಭಾದ್ರಪದ ಅಮಾವಾಸ್ಯೆಯಂದು ಸಂಭವಿಸುವ ಶುಭ ಕಾಕತಾಳೀಯವು ವೃಶ್ಚಿಕ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ಈ ರಾಶಿಯವರ ಕಠಿಣ ಪರಿಶ್ರಮಕ್ಕೆ ಈಗ ಉತ್ತಮ ಫಲಿತಾಂಶ ಸಿಗಲಿದೆ. ವೃತ್ತಿಜೀವನದಲ್ಲಿ ಪ್ರಗತಿ ಕಾಣಲು ಒಳ್ಳೆಯ ಅವಕಾಶ ಸಿಗಲಿದೆ. ಈ ರಾಶಿಯವರು ಬಯಸಿದ ಉದ್ಯೋಗ ಲಭಿಸಲಿದೆ. ವೃಶ್ಚಿಕ ರಾಶಿಯವರಿಗೆ ಈ ದಿನ ವ್ಯಾಪಾರದಲ್ಲಿ ವೃದ್ಧಿಯಾಗುವುದಲ್ಲದೆ ಹಣದ ಮೂಲಗಳ ಬಾಗಿಲು ತೆರೆದುಕೊಳ್ಳಲಿದೆ.
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಈ ಬಾರಿಯ ಭಾದ್ರಪದ ಅಮವಾಸ್ಯೆ ಕತ್ತಲನ್ನು ಕಳೆದು ಬೆಳಕು ನೀಡಲಿದೆ. ಸಂಸಾರದಲ್ಲಿ ಸಂತಸದ ವಾತಾವರಣ ಮನೆ ಮಾಡಲಿದೆ. ಕುಟುಂಬ ಸದಸ್ಯರ ಬೆಂಬಲ ನಿಮಗೆ ಸಿಗಲಿದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗ ಕ್ಷೇತ್ರಗಳಲ್ಲಿ ಜನರು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುವ ಸಂಭವ ಹೆಚ್ಚಿದೆ. ಹಾಗೇ ಇದು ನಿಮಗೆ ಹೊಸ ಜವಾಬ್ದಾರಿ ನೀಡಲು ಕಾರಣವಾಗಬಹುದು. ಹೊಸ ಕೆಲಸ, ಜವಾಬ್ದಾರಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ವ್ಯಾಪಾರಸ್ಥರಿಗೆ ಹೊಸ ಒಪ್ಪಂದ ದೀರ್ಘಾವಧಿಯಲ್ಲಿ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ಹೂಡಿಕೆ ಮಾಡಲು ಬಯಸಿದ್ರೆ ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕಾಗುತ್ತದೆ.
ಭಾದ್ರಪದ ಅಮವಾಸ್ಯೆ ದಿನ ಏನು ಮಾಡಬೇಕು? :
• ಅಮವಾಸ್ಯೆ ದಿನ ಬೇಗ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು.
• ಶಿವನಿಗೆ ಗಂಗಾಜಲದಲ್ಲಿ ಅಭಿಷೇಕ ಮಾಡಬೇಕು.
• ಮಧ್ಯಾಹ್ನದ ಸಮಯದಲ್ಲಿ ಪಿತೃಗಳ ಆತ್ಮಕ್ಕೆ ಶಾಂತಿಕೋರಲು ಶ್ರಾದ್ಧ ಮಾಡಬಹುದು.
• ಪಿತೃದೋಷ ಮುಕ್ತಿ ಹಾಗೂ ಕಾಲದೋಷವಿದ್ದಲ್ಲಿ ಅದ್ರ ಮುಕ್ತಿಗೆ ನೀವು ಪೂಜೆ ಮಾಡಬೇಕಾಗುತ್ತದೆ.
• ಅಮವಾಸ್ಯೆಯಂದು ದಾನ ಮಾಡುವುದು ಪವಿತ್ರ ಕೆಲಸವಾಗಿದೆ.
• ಸಾಧ್ಯವಾದ್ರೆ ಪುಣ್ಯ ನದಿಯಲ್ಲಿ ಸ್ನಾನ ಮಾಡಿ.